ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಾಗಿ ಸಮಗ್ರ ಬದಲಾವಣೆ ತರಲು (ಗೇಮ್ ಚೇಂಜರ್) ತಂತ್ರಜ್ಞಾನಕ್ಕೆ ಒತ್ತು ನೀಡಲು ಉಪರಾಷ್ಟ್ರಪತಿ ಸಲಹೆ


ಆರೋಗ್ಯ ಮೂಲಸೌಕರ್ಯದ ಬೆಳವಣಿಗೆಯು ಆರ್ಥಿಕವಾಗಿ ದುರ್ಬಲರ ಬದುಕನ್ನು ತಟ್ಟುತ್ತದೆ ಎಂದು ಉಪರಾಷ್ಟ್ರಪತಿ

ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ ಕುರಿತ 2ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ದೇಶಿಸಿ ಉಪರಾಷ್ಟ್ರಪತಿ ಭಾಷಣ

Posted On: 10 MAR 2023 3:57PM by PIB Bengaluru

"ಕೆಲವು ದಶಕಗಳ ಹಿಂದೆ ಭಾರತದಲ್ಲಿ ವಿರಳವಾಗಿ ಕಂಡುಬರುವ ಸೌಲಭ್ಯಗಳು ಈಗ ದೇಶದಲ್ಲಿ ವಿಭಾಗೀಯ ಮಟ್ಟದಲ್ಲಿ ಲಭ್ಯವಿವೆ ಮತ್ತು ಅವು ಅತ್ಯುನ್ನತ ಗುಣಮಟ್ಟದವಾಗಿವೆ " ಎಂದು ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನ್ಕರ್ ಹೇಳಿದ್ದಾರೆ. ಅವರು 2023 ರ ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ (ಐ.ಎಸ್.ಎಚ್. ಟಿ.ಎ) ಕುರಿತ 2 ನೇ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡುತ್ತಿದ್ದರು.  ತಂತ್ರಜ್ಞಾನವು ಉತ್ತಮ ಆರೋಗ್ಯ ಮತ್ತು ಸಂತೋಷಕ್ಕೆ ಸಂಬಂಧಿಸಿ ಸಮಗ್ರ ಬದಲಾವಣೆ ತರುವ ಸಾಮರ್ಥ್ಯ ಇರುವ ಕ್ಷೇತ್ರ (ಗೇಮ್ ಚೇಂಜರ್)  ಎಂದು ಬಣ್ಣಿಸಿದ ಶ್ರೀ ಧನ್ಕರ್, ಜನರಿಗೆ ದಕ್ಷ, ಸಮರ್ಪಕ  ಸೇವೆಗಳನ್ನು ಒದಗಿಸಲು ತಂತ್ರಜ್ಞಾನವನ್ನು ಬಳಸುತ್ತಿರುವ ನಿಟ್ಟಿನಲ್ಲಿ ಭಾರತವು ಜಗತ್ತಿಗೆ ಒಂದು ಉದಾಹರಣೆಯನ್ನು ನೀಡಿದೆ ಎಂದರು.

ಎಲ್ಲರಿಗೂ ಗುಣಮಟ್ಟದ ಆರೋಗ್ಯ ರಕ್ಷಣೆಯ 'ಲಭ್ಯತೆ, ಕೈಗೆಟುಕುವಿಕೆ ಮತ್ತು ಪಡೆಯುವಿಕೆ'ಯನ್ನು ಖಾತ್ರಿಪಡಿಸುವ ಐ.ಎಸ್.ಎಚ್.ಟಿ.ಎ ಉದ್ದೇಶವನ್ನು ಉಪರಾಷ್ಟ್ರಪತಿಗಳು ಶ್ಲಾಘಿಸಿದರು. ಆಯುಷ್ಮಾನ್ ಭಾರತ್ 'ವಿಶ್ವದ ಅತಿದೊಡ್ಡ, ಅತ್ಯಂತ ಪಾರದರ್ಶಕ ಮತ್ತು ಪರಿಣಾಮಕಾರಿ ಕಾರ್ಯವಿಧಾನ' ಎಂದು ಕೊಂಡಾಡಿದ ಅವರು, ಇದು 'ಆರ್ಥಿಕವಾಗಿ ದುರ್ಬಲರ' ಜೀವನವನ್ನು ಸರಾಗಗೊಳಿಸುವ, ಸುಲಭಸಾಧ್ಯಗೊಳಿಸುವ ಆರೋಗ್ಯ ಮೂಲಸೌಕರ್ಯ ಮತ್ತು ಸಂಸ್ಥೆಗಳ ಸೃಷ್ಟಿಗೆ ಅನುವು ಮಾಡಿಕೊಟ್ಟಿದೆ ಎಂದೂ ಹೇಳಿದರು. ಜನೌಷಧಿ ಕೇಂದ್ರಗಳು, ಇ-ಸಂಜೀವಿನಿ ಮತ್ತು ಸ್ವಚ್ಛ ಭಾರತ ಅಭಿಯಾನದಂತಹ ಇತರ ಉಪಕ್ರಮಗಳ ಬಗ್ಗೆಯೂ ಗಮನ ಸೆಳೆದ ಶ್ರೀ ಧನ್ಕರ್ ಅವರು ಬಹಳ ವಿಸ್ತಾರ ವ್ಯಾಪ್ತಿಯಲ್ಲಿ ಜನರಿಗೆ ಉತ್ತಮ ಆರೋಗ್ಯ ಲಭಿಸುವಂತೆ ಮಾಡುವಲ್ಲಿ ಈ ಕ್ರಮಗಳು ಬಹಳ ದೊಡ್ಡ ಕೊಡುಗೆ ನೀಡಿವೆ ಎಂದೂ ಹೇಳಿದರು. 

ಕೋವಿಡ್ ಜಾಗತಿಕ ಸಾಂಕ್ರಾಮಿಕ ರೋಗವನ್ನು ಭಾರತ ಯಶಸ್ವಿಯಾಗಿ ನಿಭಾಯಿಸಿರುವುದನ್ನು ಒತ್ತಿಹೇಳಿದ ಉಪರಾಷ್ಟ್ರಪತಿ ಧನ್ಕರ್, ಭಾರತದ ಲಸಿಕೆ ಮೈತ್ರಿ ಉಪಕ್ರಮದ ಬಗ್ಗೆಯೂ ಗಮನ ಸೆಳೆದರು. ಇದು ಜಗತ್ತನ್ನು ಒಂದು ಕುಟುಂಬವಾಗಿ ನೋಡುವ ಭಾರತದ ಹಳೆಯ ನೀತಿ 'ವಸುದೈವ ಕುಟುಂಬಕಂ' ನ ಸ್ಫೂರ್ತಿಯನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ಆರೋಗ್ಯ ಮತ್ತು ಸಂತೋಷದ ವಿಶ್ವ ವ್ಯವಸ್ಥೆಯನ್ನು ನೆಲೆಗೊಳಿಸಲು  ನೆರವಾಗುವುದಕ್ಕಾಗಿ  ಎಲ್ಲಾ ಭಾಗೀದಾರರು,  ಪಾಲುದಾರರು ಮತ್ತು ಜಾಗತಿಕ ನಾಯಕರು ಒಂದೇ ನಂಬಿಕೆ ಮತ್ತು ದೃಢನಿಶ್ಚಯದೊಂದಿಗೆ ಒಗ್ಗೂಡಬೇಕೆಂದು ಅವರು ಆಗ್ರಹಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸಂಶೋಧನಾ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತು ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಸಹಯೋಗದೊಂದಿಗೆ ಇಶ್ತಾ -2023 (ಐ.ಎಸ್.ಎಚ್.ಟಿ.ಎ) ಆಯೋಜಿಸಲಾಗಿತ್ತು. ವಿಚಾರ ಸಂಕಿರಣದ ಸಂದರ್ಭದಲ್ಲಿ  ರಾಜ್ಯ ಮತ್ತು ಕೇಂದ್ರ ಸರ್ಕಾರವು ಜಾರಿಗೆ ತಂದ ಪ್ರಮುಖ ಎಚ್.ಟಿ.ಎ. ಶಿಫಾರಸುಗಳನ್ನು ಪ್ರದರ್ಶಿಸಲು ಮಾರುಕಟ್ಟೆ ಪ್ರದೇಶವನ್ನೂ ವ್ಯವಸ್ಥೆ ಮಾಡಲಾಗಿತ್ತು. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವೀಯ, ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್, ಭಾರತದ ಉಪರಾಷ್ಟ್ರಪತಿಗಳ ಕಾರ್ಯದರ್ಶಿ ಶ್ರೀ ಸುನಿಲ್ ಕುಮಾರ್ ಗುಪ್ತಾ, ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್, ಭಾರತದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ರೊಡೆರಿಕೊ ಒಫ್ರಿನ್ ಮತ್ತು 23 ದೇಶಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಪರಾಷ್ಟ್ರಪತಿಯವರ ಭಾಷಣದ ಪಠ್ಯ ಈ ಕೆಳಗಿದೆ:

Following is the text of the Vice President’s speech:
 

***


(Release ID: 1905658)