ವಿಶೇಷ ಸೇವೆ ಮತ್ತು ನುಡಿಚಿತ್ರ
ಮಾರ್ಚ್ 10-11, 2023 ರಂದು ಕೊಚ್ಚಿಯಲ್ಲಿ ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಕುರಿತು ದಕ್ಷಿಣ ವಲಯದ ಪ್ರಾದೇಶಿಕ ಕಾರ್ಯಾಗಾರ.
Posted On:
09 MAR 2023 4:06PM by PIB Bengaluru
ಮಾರ್ಚ್ 10,11, 2023 ರಂದು ಕೊಚ್ಚಿಯ ಲಿ ಮೆರಿಡಿಯನ್ ನಲ್ಲಿ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರ (DPIIT) ಉತ್ತೇಜನ ಇಲಾಖೆಯಿಂದ ದಕ್ಷಿಣ ವಲಯಕ್ಕಾಗಿ ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (NMP) ಕುರಿತು ಪ್ರಾದೇಶಿಕ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಾಗಾರದಲ್ಲಿ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಸರ್ಕಾರಗಳ ಪ್ರತಿನಿಧಿಗಳು ಸಹ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಾಗಾರದ ಮೊದಲ ದಿನ ಮೂಲಸೌಕರ್ಯ ಮತ್ತು ಸಾಮಾಜಿಕ ವಲಯದ ಯೋಜನೆ, ಸಮಗ್ರ ವಿಧಾನದೊಂದಿಗೆ ಪ್ರಧಾನಮಂತ್ರಿ ಗತಿ ಶಕ್ತಿಯ ಅಳವಡಿಕೆಯ ಪ್ರಾತ್ಯಕ್ಷಿಕೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಉತ್ತಮ ಅಭ್ಯಾಸಗಳ ಪ್ರದರ್ಶನವಿರುತ್ತದೆ. ನಂತರ ಸಾಗಾಣೆ ವಿವಿಧ ಘಟಕಗಳನ್ನು ಪ್ರದರ್ಶಿಸಲು ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ (ಯುಲಿಪ್) ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತದೆ..
ಕಾರ್ಯಾಗಾರದ 2 ನೇ ದಿನ ಸುಸ್ಥಿರ ನಗರಗಳ ರಚನೆಗೆ ರಾಜ್ಯ ಸಾಗಾಣೆ ನೀತಿಗಳ ರಚನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಕುರಿತು ಚರ್ಚೆಗಳೂ ಸೇರಿದಂತೆ ರಾಷ್ಟ್ರೀಯ ಸಾಗಾಣೆ ನೀತಿ ಮತ್ತು ಸಮಗ್ರ ಸಾಗಾಣೆ ಕ್ರಿಯಾ ಯೋಜನೆಯ ಪ್ರಮುಖ ಲಕ್ಷಣಗಳ ಪ್ರಸ್ತುತಿಯನ್ನು ಒಳಗೊಂಡಿರುತ್ತದೆ. ದಿನಪೂರ್ತಿ ನಡೆಯುವ ಕಾರ್ಯಕ್ರಮ ಬಂದರು ಸಂಪರ್ಕ ಮತ್ತು ಕರಾವಳಿ ಯೋಜನೆಗಳನ್ನು ಅಧ್ಯಯನ ಮಾಡಲು ಕೊಚ್ಚಿ ಬಂದರಿಗೆ ಭೇಟಿ ನೀಡುವುದನ್ನು ಒಳಗೊಂಡಿರುತ್ತದೆ.
ದೇಶಾದ್ಯಂತ ಆಯೋಜಿಸಲಾದ ಐದು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಕೊಚ್ಚಿಯಲ್ಲಿನ ಪ್ರಾದೇಶಿಕ ಕಾರ್ಯಾಗಾರವು ಎರಡನೆಯದ್ದಾಗಿದೆ. ಫೆಬ್ರವರಿ 20, 2023 ರಲ್ಲಿ ಮೊದಲ ಪ್ರಾದೇಶಿಕ ಕಾರ್ಯಾಗಾರವನ್ನು ಗೋವಾದಲ್ಲಿ ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (NMP) ಯ ಎಲ್ಲಾ ಪಾಲುದಾರರೊಂದಿಗೆ ಸಹಯೋಗವನ್ನು ಸಾಧಿಸುವ ಮೂಲಕ ಇವುಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವದಲ್ಲಿ DPIIT ಆಯೋಜಿಸುತ್ತಿದೆ. ಸಮಗ್ರ ಯೋಜನೆಗಾಗಿ ರಾಜ್ಯ ತಾಂತ್ರಿಕ ಬೆಂಬಲ ಘಟಕಗಳ (TSU) ಸಾಂಸ್ಥಿಕ ಕಾರ್ಯವಿಧಾನವನ್ನು ಬಲಪಡಿಸುವತ್ತ ಪ್ರಾದೇಶಿಕ ಕಾರ್ಯಾಗಾರಗಳು ಗಮನಹರಿಸುತ್ತಿವೆ. ಪ್ರಧಾನಮಂತ್ರಿ ಗತಿಶಕ್ತಿ ಎನ್‌ಎಂಪಿಯ ಅಳವಡಿಕೆ ಮತ್ತು ಅನುಷ್ಠಾನದಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳು ಮತ್ತು ಸಮಸ್ಯೆಗಳನ್ನು ಗುರುತಿಸುವುದು ಮತ್ತು ಜಿಲ್ಲಾ ಮಟ್ಟದಲ್ಲಿ ಯೋಜನೆಗಾಗಿ ಪ್ರಧಾನಮಂತ್ರಿ ಗತಿಶಕ್ತಿಯನ್ನು ಅಳವಡಿಸಿಕೊಳ್ಳಲು ಮಾರ್ಗಸೂಚಿಗಳ ಕುರಿತು ಚರ್ಚೆಗಳು ಸಹ ಪ್ರಮುಖವಾಗಿ ಗಮನಹರಿಸುವಂಥ ಕ್ಷೇತ್ರಗಳಾಗಿವೆ.
ಪ್ರಧಾನಮಂತ್ರಿ ಗತಿಶಕ್ತಿ NMP ಯ ಸಮಗ್ರ ಯೋಜನೆ ಮತ್ತು ಯೋಜನಾ ಅನುಷ್ಠಾನಕ್ಕಾಗಿ ಎಲ್ಲಾ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಶಕ್ತ ಕಾರ್ಯದರ್ಶಿಗಳ (EGoS) ತಂಡ, ನೆಟ್‌ವರ್ಕ್ ಯೋಜನಾ ತಂಡ (NPG), ಮತ್ತು ತಾಂತ್ರಿಕ ಬೆಂಬಲ ಘಟಕ (TSU) ಅನ್ನು ರಚಿಸಿವೆ.
****
(Release ID: 1905530)
Visitor Counter : 121