ಉಪರಾಷ್ಟ್ರಪತಿಗಳ ಕಾರ್ಯಾಲಯ
ಹೋಳಿ ಹಬ್ಬದ ಅಂಗವಾಗಿ ದೇಶದ ಜನತೆಗೆ ಉಪ ರಾಷ್ಟ್ರಪತಿಗಳಿಂದ ಶುಭಾಶಯ
प्रविष्टि तिथि:
07 MAR 2023 5:11PM by PIB Bengaluru
ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಹೋಳಿ ಹಬ್ಬದ ಅಂಗವಾಗಿ ದೇಶದ ನಾಗರಿಕರಿಗೆ ಶುಭಾಶಯ ತಿಳಿಸಿದ್ದಾರೆ.
ಅವರು ತಮ್ಮ ಸಂದೇಶದಲ್ಲಿ, "ಬಣ್ಣಗಳ ಹಬ್ಬವಾದ ಹೋಳಿಯ ಈ ಸಂತೋಷದ ಸಂದರ್ಭದಲ್ಲಿ ನಾನು ಎಲ್ಲಾ ಭಾರತೀಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಹೋಳಿ ಹಬ್ಬ, ಜೀವನ ಮತ್ತು ಪ್ರಕೃತಿಯ ಔದಾರ್ಯದ ಆಚರಣೆಯಾಗಿದೆ. ಮನುಷ್ಯ ಸಂಬಂಧಗಳನ್ನು ಬಲಪಡಿಸಲು, ಆಗಿರುವ ತಪ್ಪುಗಳನ್ನು ಕ್ಷಮಿಸಿ, ಮರೆತು ಸೌಹಾರ್ದದಿಂದ ಜೀವನದಲ್ಲಿ ಮುಂದುವರಿಯಲು ಮತ್ತು ವಸಂತ ಋತು ತರುವ ಹೊಸ ಆರಂಭವನ್ನು ಸ್ವಾಗತಿಸಲು ಸುಸಮಯವಾಗಿದೆ.
ಹೋಳಿ ಸಂದರ್ಭದ ರೋಮಾಂಚಕ ಬಣ್ಣಗಳು ನಮ್ಮ ಸಾಂಸ್ಕೃತಿಕ ವೈವಿಧ್ಯತೆಯ ಶ್ರೀಮಂತಿಕೆಯನ್ನು ಮತ್ತು ನಮ್ಮ ಜನರಲ್ಲಿ ಸಂತೋಷದ ಸ್ನೇಹಪರತೆಯ ಮನೋಭಾವವನ್ನು ಪ್ರತಿನಿಧಿಸುತ್ತವೆ. ಈ ಶುಭ ಸಂದರ್ಭದಲ್ಲಿ, ನಮ್ಮ ಸಹೋದರತ್ವದ ಬಂಧಗಳನ್ನು ಬಲಪಡಿಸಿ,ಪ್ರಕೃತಿಮಾತೆಯೊಂದಿಗೆ ಬೆಸೆದುಕೊಂಡು ನಮ್ಮನ್ನು ನಾವು ಪುನಃ ಒಪ್ಪಿಸಿಕೊಳ್ಳೋಣ. ಈ ಬಣ್ಣಗಳ ಹಬ್ಬವು ನಮ್ಮ ಜೀವನದಲ್ಲಿ ಸುಖ, ಶಾಂತಿ, ಸಂತೋಷ, ಪ್ರೀತಿ ಮತ್ತು ಸಾಮರಸ್ಯವನ್ನು ತರಲಿ'' ಎಂದು ಆಶಿಸಿ ಬರೆದಿದ್ದಾರೆ.
****
(रिलीज़ आईडी: 1905060)
आगंतुक पटल : 128