ಜಲ ಶಕ್ತಿ ಸಚಿವಾಲಯ
ಭಾರತದ ರಾಷ್ಟ್ರಪತಿಯವರು ಸ್ವಚ್ಛ ಸುಜಲ ಶಕ್ತಿ ಸಮ್ಮಾನ್ 2023 ಅನ್ನು ಮಾರ್ಚ್ 4, 2023 ರಂದು ಪ್ರದಾನ ಮಾಡಲಿದ್ದಾರೆ
"ಕುಡಿಯುವ ನೀರಿಗೆ ಮೂಲ ಸುಸ್ಥಿರತೆ" ಎಂಬ ವಿಷಯದೊಂದಿಗೆ "ಜಲ ಶಕ್ತಿ ಅಭಿಯಾನ: ಮಳೆನೀರು ಸಂಗ್ರಹಿಸಿ"- 2023 ಇದಕ್ಕೆ ಭಾರತದ ರಾಷ್ಟ್ರಪತಿಯವರು ಚಾಲನೆ ನೀಡಲಿದ್ದಾರೆ
Posted On:
03 MAR 2023 5:05PM by PIB Bengaluru
ಕೇಂದ್ರ ಜಲಶಕ್ತಿ ಸಚಿವಾಲಯವು ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023 ಮೂಲಕ ಸಚಿವಾಲಯದ ವಿವಿಧ ಪ್ರಮುಖ ಕಾರ್ಯಕ್ರಮಗಳ ಅಡಿಯಲ್ಲಿ ಅಸಾಧಾರಣ ಕೊಡುಗೆ ನೀಡಿದ ಮಹಿಳೆಯರನ್ನು ಅಭಿನಂದಿಸಿ ಗೌರವಿಸುವ ಮೂಲಕ ಮಹಿಳಾ ನಾಯಕತ್ವವನ್ನು ಆಚರಿಸಲು ನಿರ್ಧರಿಸಿದೆ. ಸ್ವಚ್ಛ ಭಾರತ್ ಮಿಷನ್ - ಗ್ರಾಮೀಣ, ಜಲ ಜೀವನ್ ಮಿಷನ್ ಮತ್ತು ರಾಷ್ಟ್ರೀಯ ಜಲ ಮಿಷನ್ ಯೋಜನೆಗಳ ವಿವಿಧ ವಿಭಾಗಗಳ ಅಡಿಯಲ್ಲಿ ಒಟ್ಟು 18 ಸಾಧಕರಿಗೆ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ನೀಡಲಿದ್ದಾರೆ. ಪ್ರಶಸ್ತಿ ಪ್ರದಾನದ ಜೊತೆಗೆ, ರಾಷ್ಟ್ರಪತಿಯವರು ಜಲ ಶಕ್ತಿ ಅಭಿಯಾನ – ಮಳೆನೀರು ಸಂಗ್ರಹಿಸಿ ಅಭಿಯಾನ 2023, ಜಲ ಶಕ್ತಿ ಸೆ ನಾರಿ ಶಕ್ತಿ ಕುರಿತ ವೀಡಿಯೊ ಮತ್ತು ಸ್ಮರಣಾರ್ಥ ಅಂಚೆಚೀಟಿಯನ್ನು ಸಹ ಬಿಡುಗಡೆ ಗೊಳಿಸಲಿದ್ದಾರೆ. ಸ್ವಚ್ಛ ಭಾರತ್ ಮಿಷನ್ - ಗ್ರಾಮೀಣ, ಜಲ ಜೀವನ್ ಮಿಷನ್ ಮತ್ತು ರಾಷ್ಟ್ರೀಯ ಜಲ ಮಿಷನ್ ಯೋಜನೆಗಳು ಮತ್ತು ಮೂಲ ಸುಸ್ಥಿರತೆ ಮತ್ತು ಸ್ನಾನ ಮತ್ತು ಮನೆಬಳಕೆಯ ನೀರು(ಗ್ರೇವಾಟರ್) ನಿರ್ವಹಣೆಯ ಮೇಲಿನ ಪ್ರಮಾಣಿತ ಕಾರ್ಯಾಚರಣೆಯ ವಿಧಾನ ಕುರಿತು ವಿಷಯಾಧಾರಿತ ಸಂಕಲನವಾದ ‘ಸ್ವಚ್ಛ ಸುಜಲ್ ಶಕ್ತಿ ಕಿ ಅಭಿವ್ಯಕ್ತಿ’ ಅನ್ನು ಕೂಡಾ ಬಿಡುಗಡೆ ಮಾಡುತ್ತಾರೆ.
ತಳಮಟ್ಟದಿಂದ ಮಹಿಳಾ ಸಾಧಕರನ್ನು ಮುಂಚೂಣಿಗೆ ತರಲು ಮತ್ತು ರಾಷ್ಟ್ರೀಯ ನಾಯಕತ್ವದೊಂದಿಗೆ ಅವರನ್ನು ಸಂಪರ್ಕಿಸುವ ಗುರಿಯನ್ನು ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023 ಹೊಂದಿದೆ, ಅವರು ತಮ್ಮ ಸಾಧನೆಯ ಹಾದಿಯ ಅನುಭವಗಳನ್ನು ಹಂಚಿಕೊಳ್ಳಬಹುದು ಮತ್ತು ಆ ಮೂಲಕ ಇತರರನ್ನು ಪ್ರೇರೇಪಿಸಬಹುದು. ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಪ್ಲಸ್ ಮಾಡೆಲ್ ಮಾಡುವುದು; ಗೋಬರ್ಧನ್ / ಜೈವಿಕ ವಿಘಟನೀಯ ತ್ಯಾಜ್ಯ ಮತ್ತು/ಅಥವಾ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ; & ಮನೆಬಳಕೆ ನೀರಿನ ಪುನರ್ಬಳಕೆ(ಗ್ರೇವಾಟರ್) ನಿರ್ವಹಣೆ ಮತ್ತು/ಅಥವಾ ಕೆಸರು ನಿರ್ವಹಣೆ ಮುಂತಾದವುಗಳನ್ನು ಸ್ವಚ್ಛ ಭಾರತ್ ಮಿಷನ್ – ಗ್ರಾಮೀಣ ಯೋಜನೆಯಡಿಯಲ್ಲಿನ ವಿಭಾಗಗಳು ನಿರ್ವಹಿಸಲಿವೆ. ಜಲ ಜೀವನ್ ಮಿಷನ್ ಅಡಿಯಲ್ಲಿ, ಕೊಳವೆ ನೀರು ಪೂರೈಕೆಯ ವಿಭಾಗದಲ್ಲಿ ಮಹಿಳಾ ಜೀವನ ವ್ಯವಸ್ಥೆ ಬದಲಾವಣೆ ಮಾಡುವವರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ರಾಷ್ಟ್ರೀಯ ಜಲ ಮಿಷನ್ ಯೋಜನೆ ಅಡಿಯಲ್ಲಿ, ಜಲ ಶಕ್ತಿ ಅಭಿಯಾನ – ಮಳೆನೀರು ಸಂಗ್ರಹ ಮತ್ತು ಜಲ ಯೋಧರು(ವಾಟರ್ ವಾರಿಯರ್ಸ್) ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಗ್ರಾಮ/ಜಿ.ಪಂ./ ಬ್ಲಾಕ್/ ಜಿಲ್ಲೆ/ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಂದ ಮಹಿಳಾ ಪ್ರತಿನಿಧಿಗಳು, ಸರಪಂಚರು, ಸ್ವಚ್ಛ ಸೇವಾಗ್ರಹಿಗಳು, ಜಲವಾಹಿನಿಗಳು, ಜಲ ಯೋಧರು ಇತ್ಯಾದಿಗಳಿಗೆ ಅವರ ಆದರ್ಶಪ್ರಾಯ ಸಾಧನೆ-ಕೊಡುಗೆಗಾಗಿ ಪ್ರಶಸ್ತಿಗಳನ್ನು ನೀಡಲಾಗುವುದು. ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ ಜಲ ಕ್ಷೇತ್ರದಲ್ಲಿ ಮಹಿಳಾ ಸಾಧಕರು/ ನಾಯಕರ ಅಸಾಧಾರಣ ಕೊಡುಗೆಯನ್ನು ನೀಡಿದವರನ್ನು ಕೂಡಾ ಗೌರವಿಸಲಾಗುವುದು.
ವಿವಿಧ ವಿಭಾಗಗಳ ಅಡಿಯಲ್ಲಿ ರಾಷ್ಟ್ರಪತಿಯವರು 18 ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ
ಮಹಿಳಾ ಸಬಲೀಕರಣದಲ್ಲಿ ನೀರಿನ ಮಹತ್ವದ ಪಾತ್ರವನ್ನು "ಜಲ್ ಶಕ್ತಿ ಸೆ ನಾರಿ ಶಕ್ತಿ" ಎಂಬ ವಿಷಯದೊಂದಿಗೆ ಜಲಶಕ್ತಿ ಅಭಿಯಾನ: ಮಳೆನೀರು ಸಂಗ್ರಹ-2023 ಯೋಜನೆಯನ್ನು ಪರಿಚಯಿಸಲಾಗುವುದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬವು ನಳ್ಳಿ ನೀರಿನ ಸಂಪರ್ಕವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು 15 ಆಗಸ್ಟ್, 2019 ರಂದು ಜಲ ಜೀವನ್ ಮಿಷನ್ ಯೋಜನೆಯನ್ನು ಪ್ರಾರಂಭಿಸಿದರು
ಇಂದು, ಶುದ್ಧ ಕುಡಿಯುವ ನೀರಿನ ಪೂರೈಕೆಯೊಂದಿಗೆ ಗ್ರಾಮೀಣ ಜನತೆಯ ಜೀವನವನ್ನು ಬದಲಾಯಿಸುವ ಹಂತ ತಲುಪಿದ ಜಲ ಜೀವನ್ ಮಿಷನ್ ಅಡಿಯಲ್ಲಿ ನಿರಂತರ ಪ್ರಯತ್ನಗಳೊಂದಿಗೆ, 11 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ನಳ್ಳಿಗಳ ಮೂಲಕ ನೀರನ್ನು ಪಡೆಯುತ್ತಿದ್ದಾರೆ.
2014 ರಲ್ಲಿ ಪ್ರಧಾನಮಂತ್ರಿಯವರು ಪ್ರಾರಂಭಿಸಿದ ಸ್ವಚ್ಛ ಭಾರತ್ ಮಿಷನ್ – ಗ್ರಾಮೀಣ ಮೂಲಕ, ಕೇವಲ 5 ವರ್ಷಗಳ ನಂತರ ಎಲ್ಲಾ ಹಳ್ಳಿಗಳು ತಮ್ಮನ್ನು ತಾವು ಬಯಲು ಶೌಚ ಮುಕ್ತವೆಂದು ಘೋಷಿಸಲು ಸಾದ್ಯವಾಗಿದೆ. ಭಾರತದಲ್ಲಿ ಗ್ರಾಮೀಣ ನೈರ್ಮಲ್ಯ ಕೂಡಾ ಸಂಪೂರ್ಣವಾಗಿ ಸಾಧ್ಯವಾಗಿದೆ.
ಮಹಿಳಾ ಸಾಧಕರನ್ನು ತಳಮಟ್ಟದಿಂದ ಮುಂಚೂಣಿಗೆ ತರಲು ಮತ್ತು ನೀರು-ಸುರಕ್ಷಿತ ಭವಿಷ್ಯದತ್ತ ಕೆಲಸ ಮಾಡಲು ಇತರರನ್ನು ಪ್ರೇರೇಪಿಸುವ ಗುರಿಯನ್ನು ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ ಹೊಂದಿದೆ.
|
ಜಲ ಶಕ್ತಿ ಅಭಿಯಾನದ ಸರಣಿಯಲ್ಲಿ 4 ನೇ "ಕುಡಿಯುವ ನೀರಿನ ಮೂಲ ಸುಸ್ಥಿರತೆ" ಎಂಬ ವಿಷಯದೊಂದಿಗೆ "ಜಲ ಶಕ್ತಿ ಅಭಿಯಾನ: ಮಳೆನೀರು ಸಂಗ್ರಹ"-2023 ಅನ್ನು ರಾಷ್ಟ್ರಪತಿಯವರು ಪ್ರಾರಂಭಿಸಲಿದ್ದಾರೆ. ಕುಡಿಯುವ ನೀರಿನ ಮೂಲ ಸುಸ್ಥಿರತೆಗೆ ಆದ್ಯತೆ ನೀಡುವುದು ಇದರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಜಲ ಮಿಷನ್, ಜಲಶಕ್ತಿ ಸಚಿವಾಲಯವು "ಜನ್ ಭಾಗೀದಾರಿ" ಮೂಲಕ ಸಕ್ರಿಯ ಸಮುದಾಯದ ತೊಡಗಿಸಿಕೊಳ್ಳುವಿಕೆಯ ಮೂಲಕ ನೀರಿನ-ಸುರಕ್ಷಿತ ಭವಿಷ್ಯವನ್ನು ಸಾಧಿಸಲು ಈ ಯೋಜನೆಯು ಪ್ರಯತ್ನಿಸುತ್ತದೆ. ಮಹಿಳೆಯರಿಗಿಂತ ನೀರಿನ ಮೌಲ್ಯವನ್ನು ಯಾರೂ ಚೆನ್ನಾಗಿ ಅರ್ಥಮಾಡಿಕೊಳ್ಳುವುದಿಲ್ಲ, ನೀರಿನ ಸಂರಕ್ಷಣೆಯನ್ನು ಮಹಿಳೆಯರಿಗೆ ಹಸ್ತಾಂತರಿಸಿದರೆ, ಅವರು ಊಹಿಸಲಾಗದ ಧನಾತ್ಮಕ ಫಲಿತಾಂಶಗಳನ್ನು ಖಚಿತಪಡಿಸುತ್ತಾರೆ. ಆದ್ದರಿಂದ ರಾಷ್ಟ್ರೀಯ ಜಲ ಮಿಷನ್‌ನ ಧ್ಯೇಯವಾಕ್ಯವೆಂದರೆ "ಜೀವನಕ್ಕಾಗಿ ನೀರನ್ನು ಗೌರವಿಸಿ" ಎಂಬುದಾಗಿ ಆಯ್ಕೆಮಾಡಲಾಗಿದೆ. ಮಹಿಳೆಯರ ಸಬಲೀಕರಣದಲ್ಲಿ ನೀರು ವಹಿಸುವ ಮಹತ್ವದ ಪಾತ್ರವನ್ನು "ಜಲ್ ಶಕ್ತಿ ಸೆ ನಾರಿ ಶಕ್ತಿ" ಎಂಬ ವಿಷಯದೊಂದಿಗೆ ಜೋಡಿಸಿಕೊಂಡು “ಜಲಶಕ್ತಿ ಅಭಿಯಾನ: ಮಳೆನೀರು ಸಂಗ್ರಹ"-2023 ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ
ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ಶ್ರೀ ದೇವುಸಿನ್ಹ್ ಜೆಸಿಂಗ್‌ಭಾಯ್ ಚೌಹಾಣ್, ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಖಾತೆಯ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಕೇಂದ್ರ ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಶ್ರೀ ಬಿಶ್ವೇಶ್ವರ ತುಡು ಮತ್ತು ವಿವಿಧ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳು, ಅಭಿವೃದ್ಧಿ ಪಾಲುದಾರರು, ವಾಶ್ ಕಾರ್ಯಕರ್ತರು, ಸಿ.ಎಸ್.ಒ., ವಾಶ್ ವಲಯ ಮುಂತಾದ ಕ್ಷೇತ್ರಗಳ ಮಹಿಳಾ ಪ್ರತಿನಿಧಿಗಳು ಮತ್ತು ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಹಿನ್ನೆಲೆಗಾಗಿ ಇಲ್ಲಿ ಕ್ಲಿಕ್ ಮಾಡಿ
****
(Release ID: 1904078)
Visitor Counter : 166