ರಾಷ್ಟ್ರಪತಿಗಳ ಕಾರ್ಯಾಲಯ

​​​​​​​ಭೋಪಾಲ್ ನಲ್ಲಿ 7 ನೇ ಅಂತರರಾಷ್ಟ್ರೀಯ ಧರ್ಮ-ಧಮ್ಮ ಸಮ್ಮೇಳನ ಉದ್ಘಾಟಿಸಿದ ಭಾರತದ ರಾಷ್ಟ್ರಪತಿಯವರು

Posted On: 03 MAR 2023 2:12PM by PIB Bengaluru

ಇಂಡಿಯಾ ಫೌಂಡೇಷನ್ ಮತ್ತು ಸಾಂಚಿ ವಿಶ್ವವಿದ್ಯಾಲಯದ ಬೌದ್ಧ ಮತ್ತು ಭಾರತೀಯ ಅಧ್ಯಯನದ ಸಹಯೋಗದಲ್ಲಿ ಭೋಪಾಲ್ ನಲ್ಲಿಂದು [ಮಾರ್ಚ್ 3, 2023] ಆಯೋಜಿಸಿದ್ದ 7 ನೇ ಅಂತರಾಷ್ಟ್ರಿಯ ಧರ್ಮ-ಧಮ್ಮ ಸಮ್ಮೇಳವನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಭಾರತದ ಆಧ್ಯಾತ್ಮಿಕತೆಯ ದೊಡ್ಡ ಆಲದ ಮರ ಭಾರತದಲ್ಲಿ ತನ್ನ ಬೇರುಗಳನ್ನು ಹೊಂದಿದೆ ಮತ್ತು ಅದರ ಬಳ್ಳಿಗಳು ಪ್ರಪಂಚದಾದ್ಯಂತ ಹರಡಿವೆ ಎಂದರು.

ವಿದ್ವಾಂಸರಿಗೆ ತತ್ವ ಶಾಸ್ತ್ರದ ವಿಭಿನ್ನ ಶಾಲೆಗಳಿವೆ. ಪ್ರಪಂಚದ ಆನುಭಾವಿಗಳು ಒಂದೇ ಭಾಷೆ ಮಾತನಾಡುತ್ತಾರೆ. ಸಾಕ್ಷಾತ್ಕಾರಗೊಂಡ ಆತ್ಮಗಳು ಮತ್ತು ಸಹಾನುಭೂತಿಯುಳ್ಳವರು, ಶಿಕ್ಷಕರು ಅಥವಾ ಗುರುಗಳಾಗಲು ನಿರ್ಧರಿಸಿದಾಗ ಅವರ ಉನ್ನತ ಸಂಪ್ರದಾಯಗಳು ಅಸ್ಥಿತ್ವಕ್ಕೆ ಬಂದವು. ಇಂತಹ ಹಲವಾರು ರಿವಾಜುಗಳು ಭಾರತದಲ್ಲಿ ಹುಟ್ಟಿಕೊಂಡಿವೆ ಮತ್ತು ಪ್ರಪಂಚದಾದ್ಯಂತ ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ಹೇಳಿದರು.  

ಧರ್ಮ-ಧಮ್ಮದ ಪರಿಕಲ್ಪನೆಯು ಭಾರತೀಯ ಪ್ರಜ್ಞೆಯ ಮೂಲ ಧ್ವನಿಯಾಗಿದೆ. ನಮ್ಮ ಸಂಪ್ರದಾಯದಲ್ಲಿ ಹೇಳುತ್ತಾರೆ “ಧಾರ್ಯತೆ ಅನೆನ್ ಇತಿ ಧರ್ಮಃ” – ಇದು ಧರ್ಮವನ್ನು ಬೆಂಬಲಿಸುತ್ತದೆ. ಇಡೀ ಮನುಕುಲ ಧರ್ಮದ ಅಡಿಪಾಯದ ಮೇಲೆ ನಿಂತಿದೆ. ಸ್ನೇಹ, ಸಹಾನುಭೂತಿ, ಅಹಿಂಸಾ ಮನೋಭಾವನೆಯಿಂದ, ಮಮಕಾರ ಮತ್ತು ದ್ವೇಷದಿಂದ ಮುಕ್ತವಾದ ವ್ಯಕ್ತಿಗಳು ಹಾಗೂ ಸಮಾಜದ ಪ್ರಗತಿಯು ಪೂರ್ವ ಮಾನವತಾವಾದದ ಪ್ರಮುಖ ಸಂದೇಶವಾಗಿದೆ. ನೈತಿಕತೆಯನ್ನು ಆಧರಿಸಿದ ವೈಯಕ್ತಿಕ ನಡವಳಿಕೆ ಮತ್ತು ಸಾಮಾಜಿಕ ಕ್ರಮ ಮಾನವತಾವಾದದ ಹಿಂದಿನ ಪ್ರಾಯೋಗಿಕ ರೂಪವಾಗಿದೆ. ನೈತಿಕತೆಯ ಆಧಾರದ ಮೇಲೆ ಇಂತಹ ವ್ಯವಸ್ಥೆಯನ್ನು ಸಂರಕ್ಷಿಸುವುದು ಮತ್ತು ಬಲಪಡಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೆಂದು ಪರಿಗಣಿಸಲಾಗಿದೆ. ಪೂರ್ವ ಮಾನವತಾವಾದವು ಬ್ರಹ್ಮಾಂಡವನ್ನು ನೈತಿಕತೆಯ ತಳಹದಿಯಾಗಿ ನೋಡುತ್ತದೆಯೇ ಹೊರತು ಭೌತಿಕ ಯುದ್ಧ ಭೂಮಿಯಾಗಿ ಅಲ್ಲ. ಈ ನೈತಿಕ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಉಳಿಸಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಯು ಕ್ರಿಯೆ ಆಧಾರಿತವಾಗಿರಬೇಕು ಹಾಗೂ ಹಣೆ ಬರಹವನ್ನು ಅವಲಂಬಿಸಿರಬಾರದು ಎಂದರು. ಕುರುಡು ಪ್ರಚೋದನೆಗಳು ವೈಯಕ್ತಿಕ ಜಗಳಗಳಿಗೆ ಮತ್ತು ದೇಶಗಳ ನಡುವಿನ ಯುದ್ಧಗಳಿಗೆ ಕಾರಣವಾಗುತ್ತವೆ ಎಂದು ಪೂರ್ವ ಮಾನವೀಯತೆಯು ನಂಬುತ್ತದೆ. ಜಾಗತಿಕ ವೇದಿಕೆಗಳಲ್ಲಿ ಭಾರತ “ವಸುದೈವ ಕುಟುಂಬಕಂ”, ಇಡೀ ಜಗತ್ತು ಒಂದು ಕುಟುಂಬ ಎಂದು ಘೋಷಿಸಿದಾಗ ಪೂರ್ವ ಮಾನವತಾವಾದದ ಬದ್ಧತೆಯನ್ನು ಪ್ರಕಟಿಸಿದಂತಾಗಿದೆ ಎಂದರು.

ಅನಾದಿ ಕಾಲದಿಂದಲೂ ನಮ್ಮ ದೇಶದ ಸಂಪ್ರದಾಯ, ಸಾಮಾಜಿಕ ವ್ಯವಸ್ಥೆ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಧರ್ಮ ಕೇಂದ್ರ ಸ್ಥಾನವನ್ನು ಆವರಿಸಿಕೊಂಡಿರುವುದು  ಹೆಮ್ಮೆಯ ವಿಷಯವಾಗಿದೆ ಎಂದು ರಾಷ್ಟ್ರಪತಿ ಅವರು ಹೇಳಿದರು. ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಧರ್ಮ-ಧಮ್ಮ ಆಳವಾದ ಪರಿಣಾಮ ಬೀರಿದ್ದು, ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದನ್ನು ನಾವು ಸ್ವಾತಂತ್ರ್ಯ ಪಡೆದ ನಂತರ ಅಳವಡಿಸಿಕೊಂಡಿದ್ದೇವೆ. ನಮ್ಮ ರಾಷ್ಟ್ರೀಯ ಲಾಂಛನ ಸಾರನಾಥದ ಅಶೋಕ ಸ್ತಂಭದಿಂದ ಬಂದಿದೆ. ನಮ್ಮ ರಾಷ್ಟ್ರಧ್ವಜದಲ್ಲಿ ಧರ್ಮದ ಚಕ್ರ ಅಲಂಕರಿಸಿದೆ. ತಮ್ಮ ಮೌಲ್ಯಗಳು ಮತ್ತು ಕ್ರಿಯೆಗಳ ಮೂಲಕ ಮಹಾತ್ಮಾ ಗಾಂಧೀಜಿ ಅವರು ಬುದ್ಧನ ಅಹಿಂಸೆ ಮತ್ತು ಸಹಾನುಭೂತಿಯ ಸಂದೇಶವನ್ನು ಎಲ್ಲೆಡೆ ಪಸರಿಸಿದರು.

ಮಾನವನ ಯಾತನೆಯ ಕಾರಣವನ್ನು ಅರಿತುಕೊಳ್ಳುವುದು ಮತ್ತು ಆ ದುಃಖವನ್ನು ತೊಡೆದುಹಾಕುವ ಮಾರ್ಗವನ್ನು ತೋರಿಸುವುದು ಪೂರ್ವ ಮಾನವತಾವಾದದ ಲಕ್ಷಣವಾಗಿದ್ದು, ಇದು ಇಂದಿನ ಯುಗದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ರಾಷ್ಟ್ರಪತಿ ಅವರು ಹೇಳಿದರು. ನಮ್ಮ ಧರ್ಮ-ಧಮ್ಮದ ಸಂಪ್ರದಾಯವೆಂದರೆ ನಮ್ಮ ಬದುಕಿನ ಭಾಗವಾಗಿರುವ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದಾಗಿದೆ. ಇದು ಪೂರ್ವ ಮಾನವೀಯತೆಯ ಪ್ರಜ್ಞೆಯೂ ಆಗಿದೆ ಎಂದು ಹೇಳಿದರು.

Please Click here to see the President's Speech - 

*****(Release ID: 1903937) Visitor Counter : 157