ಪ್ರಧಾನ ಮಂತ್ರಿಯವರ ಕಛೇರಿ

ಭಾರತಕ್ಕೆ ಜರ್ಮನಿಯ ಚಾನ್ಸಲರ್ ಭೇಟಿಯ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೀಡಿದ ಪತ್ರಿಕಾ ಹೇಳಿಕೆಯ ಅನುವಾದ 

Posted On: 25 FEB 2023 2:24PM by PIB Bengaluru

ಗೌರವಾನ್ವಿತ ಚಾನ್ಸಲರ್ ಒಲಾಫ್ ಶಾಲ್ಜ್  ಅವರೇ, 

ಉಭಯ ದೇಶಗಳ ಪ್ರತಿನಿಧಿಗಳೇ.

ಮಾಧ್ಯಮ ಪಾಲುದಾರರೇ 

ಗುಟೆನ್ ಟ್ಯಾಗ್‌..!

ಶುಭಾಶಯಗಳು..! 

ನಾನು ನಮ್ಮಮಿತ್ರ ಚಾನ್ಸಲರ್ ಶೋಲ್ಜ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಆಹ್ವಾನಿಸುತ್ತೇನೆ. ಚಾನ್ಸಲರ್ ಶೋಲ್ಜ್ ಹಲವು ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು 2012ರಲ್ಲಿ ಭಾರತಕ್ಕೆ ಮೊದಲು ಭೇಟಿ ನೀಡಿದ್ದಾಗ ಹ್ಯಾಂಬರ್ಗ್ ನ ಮೇಯರ್‌ ಒಬ್ಬರ ಮೊದಲ ಭೇಟಿಯಾಗಿತ್ತು. ಹಾಗಾಗಿ ಅವರು ಭಾರತ-ಜರ್ಮನಿಯ ಸಂಬಂಧಗಳ ಸಾಮರ್ಥ್ಯವನ್ನು ಬಹಳ ಹಿಂದೆಯೇ ಅರ್ಥೈಸಿಕೊಂಡಿದ್ದಾರೆ.  

ಕಳೆದ ವರ್ಷ ನಾವು ಮೂರು ಸಭೆಗಳನ್ನು ನಡೆಸಿದ್ದೆವು. ಪ್ರತಿ ಬಾರಿಯ ಭೇಟಿಯಲ್ಲೂ ಅವರ ದೂರದೃಷ್ಟಿ ಮತ್ತು ಮುನ್ನೋಟ ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವೇಗ ಮತ್ತು ಶಕ್ತಿಯನ್ನು ನೀಡಿವೆ.  ಇಂದಿನ ಸಭೆಯಲ್ಲೂ ಸಹ ನಾವು ಪ್ರಮುಖ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ಸವಿವರವಾಗಿ ಚರ್ಚೆ ನಡೆಸಿದೆವು. 

ಮಿತ್ರರೇ,

ಭಾರತ ಮತ್ತು ಜರ್ಮನಿಯ ನಡುವಿನ ಬಲಿಷ್ಠ ಸಂಬಂಧ ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಪರಸ್ಪರರ ಹಿತಾಸಕ್ತಿಗಳ ಆಳವಾದ ಅರ್ಥೈಸುವಿಕೆ ಆಧಾರದ ಮೇಲೆ ನಿಂತಿದೆ. ಉಭಯ ದೇಶಗಳ ನಡುವೆ ಸುದೀರ್ಘ ಸಾಂಸ್ಕೃತಿಕ ಮತ್ತು ಆರ್ಥಿಕ ವಿನಿಮಯದ ಇತಿಹಾಸವೂ ಇದೆ. ವಿಶ್ವದ ಎರಡು ಬೃಹತ್ ಪ್ರಜಾಪ್ರಭುತ್ವ ಆರ್ಥಿಕತೆಗಳ ನಡುವೆ ಹೆಚ್ಚುತ್ತಿರುವ ಸಹಕಾರದಿಂದಾಗಿ ಉಭಯ ದೇಶಗಳ ಜನರಿಗೆ ಮಾತ್ರವೇ ಅನುಕೂಲಕರವಾಗಿಲ್ಲ, ಜತೆಗೆ ಇಂದಿನ ಆತಂಕದಿಂದ ಕೂಡಿದ ಜಗತ್ತಿಗೆ ಸಕಾರಾತ್ಮಕ ಸಂದೇಶವನ್ನೂ ಸಹ ರವಾನಿಸುತ್ತದೆ.  

ಯುರೋಪ್‌ ನಲ್ಲಿ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿರುವ ಜರ್ಮನಿ, ಭಾರತಕ್ಕೆ ಹೂಡಿಕೆಯ ಪ್ರಮುಖ ಮೂಲವೂ ಅಗಿದೆ. ಇಂದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮ ನಿರ್ಭರ ಭಾರತ’ ಅಭಿಯಾನಗಳಿಂದಾಗಿ ಭಾರತದಲ್ಲಿ ಎಲ್ಲ ವಲಯಗಳಲ್ಲೂ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ಅವಕಾಶಗಳಲ್ಲಿ ಜರ್ಮನಿ ತೋರುತ್ತಿರುವ ಆಸಕ್ತಿ ನಮಗೆ ಉತ್ತೇಜನಕಾರಿಯಾಗಿವೆ. 

ಚಾನ್ಸಲರ್ ಶೋಲ್ಜ್ ಅವರೊಂದಿಗೆ ಆಗಮಿಸಿರುವ ವಾಣಿಜ್ಯ ನಿಯೋಗ ಇಂದು ಭಾರತೀಯ ವಾಣಿಜ್ಯೋದ್ಯಮಗಳೊಂದಿಗೆ ಯಶಸ್ಸಿ ಸಭೆ ನಡೆಸಿದೆ ಮತ್ತು ಕೆಲವು ಪ್ರಮುಖ ಮತ್ತು ಒಳ್ಳೆಯ ಒಡಂಬಡಿಕೆಗಳಿಗೆ ಸಹಿ ಹಾಕಿದೆ. ಅಲ್ಲದೆ, ಡಿಜಿಟಲ್ ಪರಿವರ್ತನೆ, ಹಣಕಾಸು ತಂತ್ರಜ್ಞಾನ(ಫಿನ್ ಟೆಕ್ ) ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಮತ್ತು ಪೂರೈಕೆ ಸರಪಳಿ ವೈವಿಧ್ಯಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಭಯ ದೇಶಗಳ ಉದ್ಯಮದ ನಾಯಕರಿಂದ ಉಪಯುಕ್ತ ಚಿಂತನೆಗಳು ಮತ್ತು ಸಲಹೆಗಳು ಕೇಳಿಬಂದವು. 

ಮಿತ್ರರೇ,

ತೃತೀಯ ರಾಷ್ಟ್ರಗಳ ಅಭಿವೃದ್ಧಿಗಾಗಿ ತ್ರಿಪಕ್ಷೀಯ ಅಭಿವೃದ್ಧಿ ಸಹಕಾರದಡಿ ಭಾರತ ಮತ್ತು ಜರ್ಮನಿ ಪರಸ್ಪರ ಸಹಕಾರ ವೃದ್ಧಿಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ, ನಮ್ಮ ನಡುವೆ ಜನರ- ಜನರ ನಡುವಿನ ಸಂಬಂಧಗಳು ಬಲವರ್ಧನೆಗೊಂಡಿವೆ. ಮತ್ತು ಕಳೆದ ವರ್ಷ ಡಿಸೆಂಬರ್ ನಲ್ಲಿ ಸಹಿ ಹಾಕಲಾದ ವಲಸೆ ಮತ್ತು ಸಂಚಾರ ಸಹಭಾಗಿತ್ವ ಒಪ್ಪಂದದಿಂದಾಗಿ ಈ ಸಂಬಂಧಗಳು ಮತ್ತಷ್ಟು ಬಲವರ್ಧನೆಗೊಂಡಿವೆ. 

ಬದಲಾಗುತ್ತಿರುವ ಕಾಲದ ಅಗತ್ಯತೆಗಳಿಗೆ ಅನುಗುಣವಾಗಿ ನಾವು ನಮ್ಮ ಸಂಬಂಧಗಳಿಗೆ ಹೊಸ ಮತ್ತು ಆಧುನಿಕ ಅಂಶಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ. ಕಳೆದ ವರ್ಷ ನನ್ನ ಜರ್ಮನಿಯ ಪ್ರವಾಸದ ವೇಳೆ, ನಾವು ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ ಘೋಷಿಸಿದ್ದೆವು. ಆ ಮೂಲಕ ನಾವು ನಮ್ಮ ಸಹಕಾರ ಸಂಬಂಧವನ್ನು ಹವಾಮಾನ ಕ್ರಿಯೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ವಲಯಕ್ಕೂ ವಿಸ್ತರಿಸುತ್ತಿದ್ದೇವೆ. ಅಲ್ಲದೆ, ನವೀಕರಿಸಬಹುದಾದ ಇಂಧ, ಹಸಿರು ಹೈಡ್ರೋಜನ್ ಮತ್ತು ಜೈವಿಕ ಇಂಧನ ವಲಯಗಳಲ್ಲಿ ಜೊತೆಗೂಡಿ ಕೆಲಸ ಮಾಡಲು ನಾವು ನಿರ್ಧರಿಸಿದ್ದೇವೆ. 

ಮಿತ್ರರೇ,

ಭದ್ರತೆ ಮತ್ತು ರಕ್ಷಣಾ ಸಹಕಾರ ನಮ್ಮ ಕಾರ್ಯತಂತ್ರ ಪಾಲುದಾರಿಕೆಯ ಪ್ರಮುಖ ಆಧಾರದ ಸ್ತಂಭವಾಗಲಿದೆ. ಇನ್ನೂ ಈ ವಲಯದಲ್ಲಿ ಬಳಕೆಯಾಗದಿರುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಲ್ಲೂ ನಾವು ಒಗ್ಗೂಡಿ ಪ್ರಯತ್ನಗಳನ್ನು ನಡೆಸುತ್ತೇವೆ. ಭಯೋತ್ಪಾದನೆ ಮತ್ತು ಪ್ರತ್ಯೇಕವಾದದ ವಿರುದ್ಧದ  ಹೋರಾಟದಲ್ಲಿ, ಭಾರತ ಮತ್ತು ಜರ್ಮನಿ ನಡುವೆ ಸಕ್ರಿಯ ಸಹಕಾರವಿದೆ. ಅಲ್ಲದೆ, ಉಭಯ ದೇಶಗಳೂ ಸಹ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ಅಗತ್ಯ ಸಮಗ್ರ ಕ್ರಮ ಕೈಗೊಳ್ಳಲು ಒಪ್ಪಿಗೆ ನೀಡಿವೆ.  

ಮಿತ್ರರೇ,

ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್ ಬಿಕ್ಕಟ್ಟಿನ ಪರಿಣಾಮಗಳು ಇಡೀ ಪ್ರಪಂಚದ ಮೇಲಾಗಿವೆ. ಇವು ವಿಶೇಷವಾಗಿ ಅಭಿವೃದ್ಧಿ ಶೀಲ ರಾಷ್ಟ್ರಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿವೆ. ಈ ಬಗ್ಗೆ ನಾವು ನಮ್ಮ ಸಮಾನ ಆತಂಕವನ್ನು ಹಂಚಿಕೊಂಡಿದ್ದೇವೆ. ಈ ಸಮಸ್ಯೆಗಳು ಜಂಟಿ ಪ್ರಯತ್ನಗಳ ಮೂಲಕ ಬಗೆಹರಿಯುತ್ತವೆ ಎಂಬುದನ್ನು ನಾವು ಒಪ್ಪುತ್ತೇವೆ. ಭಾರತದ ಜಿ-20 ಅಧ್ಯಕ್ಷತೆಯ ವೇಳೆ ಈ ನಿಟ್ಟಿನಲ್ಲಿ ನಾವು ಒತ್ತಡ ಹಾಕುತ್ತಿದ್ದೇವೆ. 

ಉಕ್ರೇನ್ ನಲ್ಲಿನ ಬೆಳೆವಣಿಗೆಗಳು ಆರಂಭವಾದ ಕೂಡಲೇ, ಭಾರತ ಮಾತುಕತೆ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಬಹುದೆಂದು ಪ್ರತಿಪಾದಿಸಿದ್ದೆವು. ಯಾವುದೇ ಶಾಂತಿ ಪ್ರಕ್ರಿಯೆ ಭಾರತ ತನ್ನ ಕೊಡುಗೆ ನೀಡಲು ಸಿದ್ಧವಿದೆ. ಅಗತ್ಯಬಿದ್ದರೆ ಜಾಗತಿಕ ವಾಸ್ತವತೆಗಳನ್ನು ಬಿಂಬಿಸುವಂತೆ ಉತ್ತಮ ರೀತಿಯಲ್ಲಿ ಬಹು ಹಂತದ ಸಂಸ್ಥೆಗಳನ್ನು ಸುಧಾರಿಸಲು ಸಹ ನಾವು ಒಪ್ಪಿದ್ದೇವೆ. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಲು ಜಿ-4ರಲ್ಲಿ ನಮ್ಮ ಸಕ್ರೀಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ. 

ಗೌರವಾನ್ವಿತರೇ,

ನನ್ನೆಲ್ಲಾ ದೇಶವಾಸಿಗಳ ಪರವಾಗಿ ನಾವು ಮತ್ತೊಮ್ಮೆ ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಈ ವರ್ಷದ ಸೆಪ್ಟಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ನಿಮ್ಮನ್ನು ಸ್ವಾಗತಿಸುವ ಅವಕಾಶವೂ ನಮಗಿದೆ. ಭಾರತದ ಈ ಭೇಟಿಗಾಗಿ ಮತ್ತು ಇಂದಿನ ಈ ನಮ್ಮ ಉಪಯುಕ್ತ ಸಮಾಲೋಚನೆಗಾಗಿ ನಾನು ನಿಮಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. 

ಘೋಷಣೆ: ಇದು ಪ್ರಧಾನಮಂತ್ರಿಗಳ ಹೇಳಿಕೆಯ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.  


****



(Release ID: 1902798) Visitor Counter : 126