ಸಂಸ್ಕೃತಿ ಸಚಿವಾಲಯ
azadi ka amrit mahotsav g20-india-2023

ಮಧ್ಯಪ್ರದೇಶದ ಖಜುರಾಹೊ ಮಹಾರಾಜ ಛಾತ್ರಸಾಲ್ ಸಮ್ಮೇಳನ ಕೇಂದ್ರದಲ್ಲಿ ನಡೆದ ಸಂಸ್ಕೃತಿ ಕುರಿತ ಜಿ20 ಕಾರ್ಯತಂಡದ [ಸಿಡಬ್ಲ್ಯುಜಿ] ಉದ್ಘಾಟನಾ ಸಮಾರಂಭ


ಸುಸ್ಥಿರ ಮತ್ತು ಎಲ್ಲವನ್ನೊಳಗೊಂಡ ಅಭಿವೃದ್ಧಿ ಮಾರ್ಗಗಳನ್ನು ರಚಿಸಲು ನಮ್ಮ ದೇಶಗಳು ಮತ್ತು ಸಮುದಾಯಗಳ ನಡುವೆ ಬಾಂಧವ್ಯ ರೂಪಿಸಲು ಸಂಸ್ಕೃತಿ ವೇದಿಕೆಯಾಗಿದೆ: ಡಾ. ವೀರೇಂದ್ರ ಕುಮಾರ್  

ಜಿ20 ರಲ್ಲಿನ ಸಂಸ್ಕೃತಿ ಕುರಿತ ಕಾರ್ಯತಂಡ ದೇಶಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಈ ಗುಂಪು ಮಾನವ ಪ್ರಯತ್ನ ಹಾಗೂ ಮಾನವೀಯತೆಯನ್ನು ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡುತ್ತದೆ: ಶ್ರೀಮತಿ ಮೀನಾಕ್ಷಿ ಲೇಖಿ

Posted On: 23 FEB 2023 2:14PM by PIB Bengaluru

 ಮಧ್ಯಪ್ರದೇಶದ ಖಜುರಾಹೊ ಮಹಾರಾಜ ಚಾತ್ರಸಾಲ್ ಸಮ್ಮೇಳನ ಕೇಂದ್ರ [ಎಂಸಿಸಿಸಿ]ದಲ್ಲಿ ಸಂಸ್ಕೃತಿ ಕುರಿತ ಜಿ20 ಕಾರ್ಯತಂಡದ ಮೊದಲ ಉದ್ಘಾಟನಾ ಅಧಿವೇಶನ ನಡೆಯಿತು. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್ ಹಾಗೂ ಸಂಸ್ಕೃತಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.  

ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಡಾ. ವೀರೇಂದ್ರ ಕುಮಾರ್, ಸುಸ್ಥಿರ ಮತ್ತು ಎಲ್ಲವನ್ನೊಳಗೊಂಡ ಅಭಿವೃದ್ಧಿ ಮಾರ್ಗಗಳನ್ನು ರಚಿಸಲು ನಮ್ಮ ದೇಶಗಳು ಮತ್ತು ಸಮುದಾಯಗಳ ನಡುವೆ ಬಾಂಧವ್ಯ ರೂಪಿಸಲು ಸಂಸ್ಕೃತಿಯು ವೇದಿಕೆಯಾಗಿದೆ ಎಂದರು. ಸಂಸ್ಕೃತಿ ಕುರಿತು ಸಂವಾದ ನಡೆಸುತ್ತಿರುವುದು ಜಿ20 ರ  ಪ್ರಮುಖ ಕಾರ್ಯ ಸೂಚಿಯಾಗಿದೆ ಮತ್ತು ಸಂಸ್ಕೃತಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು, ಸಾಮಾಜಿಕ ಒಗ್ಗಟ್ಟು ಮತ್ತು ಪರಿಸರ ರಕ್ಷಣೆಗೆ ಶಕ್ತಿಯುತ ಸಾಧನವಾಗಿದೆ. ಇದು ಸಂಸ್ಕೃತಿಯನ್ನು ದಾಟಿ ತಿಳುವಳಿಕೆ ಮತ್ತು ಸಹಕಾರವನ್ನು ಬೆಳೆಸಲು ಸಹಾಯ ಮಾಡುತ್ತದೆ. ಇಂದು ಜಗತ್ತಿನ ಸಂಕಿರ್ಣದಾಯಕ ಸವಾಲುಗಳನ್ನು ಎದುರಿಸಲು ಸಂಸ್ಕೃತಿ ಅಗತ್ಯವಾಗಿದೆ ಎಂದರು.

 

ಭಾರತದ ಜಿ20 ಸಂಸ್ಕೃತಿ ಹಾದಿಯನ್ನು “ಜೀವನಕ್ಕಾಗಿ ಸಂಸ್ಕೃತಿ” ಎಂಬ ಚಿಂತನೆಯ ಮೇಲೆ ನಿರ್ಮಿಸಲಾಗಿದ್ದು, ಸುಸ್ಥಿರ ಜೀವನದ ಅಭಿಯಾನವನ್ನು ಇದು ಒಳಗೊಂಡಿದೆ. ಈ ಕಲ್ಪನೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಸುಸ್ಥಿರ ಜೀವನಪದ್ಧತಿಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಪರಿಸರ ಸ್ನೇಹಿ ಕೃಷಿ, ನೀರು ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆ ವಿಧಾನಗಳು ಇದಕ್ಕೆ ಉದಾಹರಣೆಯಾಗಿವೆ.  “ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವು ಸುಸ್ಥಿರ, ಸಮಗ್ರ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಜಗತ್ತಿನ ಎಲ್ಲರಿಗೂ ನ್ಯಾಯಯುತ ಮತ್ತು ಸಮಾನ ಬೆಳವಣಿಗೆಗೆ ಶ್ರಮಿಸುವ ಪ್ರಬಲ ಸಂದೇಶವನ್ನು ನೀಡುತ್ತವೆ ಎಂದರು.

 

ಶ್ರೀಮತಿ ಮೀನಾಕ್ಷಿ ಲೇಖಿ ಮಾತನಾಡಿ, ಜಿ20 ರಲ್ಲಿನ ಸಂಸ್ಕೃತಿ ಕುರಿತ ಕಾರ್ಯತಂಡ ದೇಶಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಈ ಗುಂಪು ಮಾನವ ಪ್ರಯತ್ನ ಹಾಗೂ ಮಾನವೀಯತೆಯನ್ನು ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡುತ್ತವೆ. ಏಕೆಂದರೆ ಸಂಸ್ಕೃತಿ ನಮ್ಮೆಲ್ಲರನ್ನು ಸಂಪರ್ಕಿಸುತ್ತದೆ ಎಂದರು. ಪ್ರಸ್ತುತ ಸಮಯದಲ್ಲಿ ಲಿಂಗ ಸಂಬಂಧಿಸಿದ ಹಕ್ಕುಗಳು, ಮಹಿಳಾ ಸಮಾನತೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಹರಪ್ಪನ್ ಯುಗಕ್ಕೆ ಸೇರಿದ ಹುಡುಗಿಯ ನೃತ್ಯದ ಕಂಚಿನ ಪ್ರತಿಮೆ ಲಿಂಗ ಸಮಾನತೆ ಏನೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದರು. ನಮ್ಮ ದೇಶದಲ್ಲಿ ಸಹಸ್ರಾರು ವರ್ಷಗಳ ಹಿಂದೆಯೇ ಲಿಂಗ ಸಮಾನತೆಯಲ್ಲಿ ಮಹಿಳೆಯರಿಗೆ ಮಾನ್ಯತೆ ನೀಡಿದ್ದಲ್ಲದೇ ದೇವತೆಗಳಂತೆ ಅವರನ್ನು ಶಕ್ತಿಯ ಪ್ರತಿರೂಪವಾಗಿ ಪೂಜಿಸಲಾಗುತ್ತಿತ್ತು ಎಂದು ವಿವರಿಸಿದರು. ಭಾರತೀಯ ಸಂಸ್ಕೃತಿಕ ಒಳನೋಟವನ್ನು ನೀಡಿದ ಸಚಿವರು ಭಾರತದ ಮಂತ್ರ ಸದಾ ಕಾಲ ಮಹಿಳಾ ಸಮಾನತೆ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆ ಪರವಾಗಿದ್ದು, ಈ ವಿಚಾರಗಳು ಇಂದು ಜಗತ್ತಿನ ಮುಂದಿವೆ ಎಂದರು.  

ಜಿ20 ಕಾರ್ಯತಂಡ ನಿಧಿಯನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಸದುದ್ದೇಶಪೂರ್ವಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇವು ಮಾನವೀಯ ನಿಧಿಗಳು ಮತ್ತು ಈ ನಿಧಿಗಳು ಆರ್ಥಿಕ ದೃಷ್ಟಿಯಿಂದ ಮುಖ್ಯವಷ್ಟೇ ಅಲ್ಲದೇ ಇವು ದೇಶದ ಸಂಸ್ಕೃತಿಯ ಮಂತ್ರವನ್ನು ಸಂಪರ್ಕಿಸುತ್ತವೆ. ಅದರಂತೆ ಜಿ20 ದೇಶಗಳು ಚರ್ಚೆಗಳನ್ನು ಮೀರಿ ಸಾಗಲು ಮತ್ತು ದೇಶದಿಂದ ಪ್ರಾಚೀನತೆಯನ್ನು ವಾಪಸ್ ಪಡೆಯಲು ಅನಕೂಲವಾಗುವಂತೆ ಕ್ರಿಯಾ ಯೋಜನೆ ರೂಪಿಸಲು ಇದು ಸಕಾಲ ಎಂದರು.

ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸಾಂಸ್ಕೃತಿಕ ತಾಣಗಳನ್ನು ಮುಚ್ಚಿದ ಕಾರಣದಿಂದ ಸಾಂಸ್ಕೃತಿಕ ವಲಯ ಸವಾಲುಗಳನ್ನು ಎದುರಿಸುವಂತಾಯಿತು. ಹವಾಮಾನ ಬದಲಾವಣೆಯು ಈ ವಲಯದ ದುರ್ಬಲತೆಯನ್ನು ಹೆಚ್ಚಿಸಿದ್ದರೂ ಈಗ ಒಟ್ಟಾಗಿ ಕೆಲಸ ಮಾಡಲು ಮತ್ತು ನಮ್ಮ ಹಂಚಿಕೆಯ ಪರಂಪರೆಯನ್ನು ರಕ್ಷಿಸುವ ತುರ್ತು ಅವಶ್ಯಕತೆಯಿದೆ. ಸಂಸ್ಕೃತಿ ವಿಶೇಷವಾಗಿ ದುರ್ಬಲ ವಲಯಕ್ಕೆ ಸೇರ್ಪಡೆಗೊಳ್ಳಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜಿ20 ರಲ್ಲಿ ಅದರ ಸೇರ್ಪಡೆ ಈ ವಲಯದ ಅನೇಕ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ ಎಂದು ಕಾರ್ಯದರ್ಶಿ ಅವರು ಹೇಳಿದರು.

“ಪರಿಹರಿಸುವ [ಜೋಡಣೆ]: ನಿಧಿಗಳ ವಾಪಸ್ಸಾತಿ, ಆಯ್ದ ಉದಾಹರಣೆಗಳ ಮೂಲಕ ಸಾಂಸ್ಕೃತಿಕ ಆಸ್ತಿಯನ್ನು ವಾಪಸ್ ಪಡೆಯಲು ಚೈತನ್ಯ ಅಗತ್ಯವಾಗಿದೆ ಮತ್ತು ಮತ್ತೆ ಈ ವಲಯದಲ್ಲಿ ಭಾರತದ ಭವಿಷ್ಯವನ್ನು ಯಶಸ್ವಿಯಾಗಿ ಪಡೆಯುವ ಉದ್ದೇಶದ ಪ್ರದರ್ಶನವನ್ನು ಮಧ್ಯ ಪ್ರದೇಶದ ಖಜುರಾಹೊವಿನ ಮಹಾರಾಜ ಛಾತ್ರಸಾಲ್ ಸಮ್ಮೇಳನ ಕೇಂದ್ರದಲ್ಲಿ ಫೆಬ್ರವರಿ 22 ರಂದು ಉದ್ಘಾಟಿಸಲಾಯಿತು. ಸಾಂಸ್ಕೃತಿಕ ನಿಧಿಯನ್ನು ವಾಪಸ್ ಪಡೆಯಲು ಎದುರಾಗಿರುವ ಸವಾಲುಗಳು ಮತ್ತು ವಿವಿಧ ಅಂಶಗಳನ್ನು ಹಾಲೋಗ್ರಾಮ್ ಸೇರಿದಂತೆ ಇತ್ತೀಚಿನ ತಂತ್ರಜ್ಞಾನದ ಸಹಾಯದಿಂದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವರಾಹ, ನೃತ್ಯ, ಗಣೇಶ ಅಮೀನ್ ಆಧಾರ ಸ್ತಂಭ, ಟೆರಾಕೋಟಾ ಯಕ್ಷ, ಮಾನವ ಶಾಸ್ತ್ರೀಯ ವ್ಯಕ್ತಿ, ಖಜುರಾಹೋದ ಹಣ್ಣು ಗಿಣಿ ಸೇರಿದಂತೆ 26 ಅಮೂಲ್ಯವಾದ ಭೌತಿಕ ಪ್ರಾಚೀನ ವಸ್ತುಗಳು ಪ್ರದರ್ಶನದಲ್ಲಿವೆ.   

ಜಿ20 ಮೊದಲ ಕಾರ್ಯತಂಡ [ಸಿಡಬ್ಲ್ಯುಜಿ] ಸಭೆ ನಾಲ್ಕು ಕಾರ್ಯಗುಂಪು ಅಧಿವೇಶನಗಳನ್ನು ಹೊಂದಿವೆ ಮತ್ತು ಇದರಲ್ಲಿ ಜಿ20 ಸದಸ್ಯ ರಾಷ್ಟ್ರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಂಸ್ಕೃತಿ  ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದಾರೆ. ಫೆಬ್ರವರಿ 25 ರ ವರೆಗೆ ನಡೆಯುವ ಸಭೆಗಳ ಸಂದರ್ಭಗಳಲ್ಲಿ ಖಜರಾಹೋ ನೈತ್ಯ, ಸಾಂಸ್ಕೃತಿಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

***(Release ID: 1901912) Visitor Counter : 116