ಸಂಪುಟ
azadi ka amrit mahotsav

1944ರ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಮಾವೇಶದ (ಚಿಕಾಗೋ ಸಮಾವೇಶ) ತಿದ್ದುಪಡಿಗಳಿಗೆ ಸಂಬಂಧಿಸಿದ ಅನುಚ್ಛೇದ 3 ಬಿಐಎಸ್, ಅನುಚ್ಛೇದ 50 (ಎ) ಮತ್ತು ಅನುಚ್ಛೇದ 56, ಈ ಮೂರೂ ಶಿಷ್ಟಾಚಾರಗಳ ದೃಢೀಕರಣಕ್ಕೆ ಸಂಪುಟದ ಅನುಮೋದನೆ.

Posted On: 22 FEB 2023 12:44PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 1944ರ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಮಾವೇಶದ (ಚಿಕಾಗೋ ಸಮಾವೇಶ) ತಿದ್ದುಪಡಿಗಳಿಗೆ ಸಂಬಂಧಿಸಿದ ಅನುಚ್ಛೇದ 3 ಬಿಐಎಸ್, ಅನುಚ್ಛೇದ 50 (ಎ) ಮತ್ತು ಅನುಚ್ಛೇದ 56ರ ಕುರಿತಾದ ಮೂರು ಶಿಷ್ಟಾಚಾರಗಳ ದೃಢೀಕರಣಕ್ಕೆ ತನ್ನ ಅನುಮೋದನೆಯನ್ನು ನೀಡಿದೆ.

ಚಿಕಾಗೋ ಸಮಾವೇಶದ ಅನುಚ್ಛೇದಗಳು ಎಲ್ಲಾ ಒಪ್ಪಂದ ರಾಷ್ಟ್ರಗಳ ಸವಲತ್ತುಗಳು ಮತ್ತು ಬಾಧ್ಯತೆಗಳನ್ನು ಸ್ಥಾಪಿಸಿ ಅಂತರರಾಷ್ಟ್ರೀಯ ವಾಯು ಸಾರಿಗೆಯನ್ನು ನಿಯಂತ್ರಿಸುವ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಾನದಂಡಗಳು ಮತ್ತು ಶಿಫಾರಿತ ನಡೆವಳಿಕೆಗಳ (ಎಸ್ಎಆರ್ ಪಿ) ಅಳವಡಿಕೆಯನ್ನು ಪ್ರೋತ್ಸಾಹಿಸುತ್ತವೆ.

ಕಳೆದ 78 ವರ್ಷಗಳಲ್ಲಿ, ಚಿಕಾಗೋ ಸಮಾವೇಶವು ಕೆಲವು ತಿದ್ದುಪಡಿಗಳಿಗೆ ಒಳಗಾಗಿದೆ. ಭಾರತವು ಕಾಲಕಾಲಕ್ಕೆ ಅಂತಹ ತಿದ್ದುಪಡಿಗಳನ್ನು ಅನುಮೋದಿಸುತ್ತಿದೆ. ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಮಾವೇಶವಾದ "ಚಿಕಾಗೋ ಕನ್ವೆನ್ಷನ್, 1944ರಲ್ಲಿನ" ತಿದ್ದುಪಡಿಗಳಿಗೆ ಸಂಬಂಧಿಸಿದ ಈ ಕೆಳಗಿನ ಮೂರು ಪ್ರೋಟೋಕಾಲ್ ಗಳಿಗೆ ದೃಢೀಕರಣವನ್ನು ಅನುಮೋದಿಸಲಾಗಿದೆ:

i. ಹಾರಾಟದ ಸಮಯದಲ್ಲಿ ಸದಸ್ಯ ರಾಷ್ಟ್ರಗಳು ನಾಗರಿಕ ವಿಮಾನಗಳಲ್ಲಿ ಶಸ್ತ್ರಾಸ್ತ್ರಗಳ ಬಳಕೆಯನ್ನು ತಡೆಯುವ ಸಲುವಾಗಿ 1944ರ ಚಿಕಾಗೊ ಕನ್ವೆನ್ಷನ್ ಗೆ ಅನುಚ್ಛೇದ 3 ಬಿಐಎಸ್ ಅನ್ನು ಸೇರಿಸುವ ಪ್ರೋಟೋಕಾಲ್ (ಮೇ, 1984ರಲ್ಲಿ ಸಹಿ ಹಾಕಿದ ಪ್ರೋಟೋಕಾಲ್);
ii. ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಬಲವನ್ನು 36 ರಿಂದ 40 ಕ್ಕೆ ಹೆಚ್ಚಿಸಲು 1944ರ ಚಿಕಾಗೊ ಸಮಾವೇಶದ ಅನುಚ್ಛೇದ 50 (ಎ)ಅನ್ನು ತಿದ್ದುಪಡಿ ಮಾಡುವ ಪ್ರೋಟೋಕಾಲ್ (ಅಕ್ಟೋಬರ್, 2016ರಲ್ಲಿ ಸಹಿ ಹಾಕಿದ ಪ್ರೋಟೋಕಾಲ್); ಮತ್ತು
iii. ವಾಯು ಸಂಚರಣಾ ಆಯೋಗದ ಬಲವನ್ನು 18 ರಿಂದ 21 ಕ್ಕೆ ಹೆಚ್ಚಿಸಲು 1944ರ ಚಿಕಾಗೊ ಸಮಾವೇಶದ 56ನೇ ವಿಧಿಯನ್ನು ತಿದ್ದುಪಡಿ ಮಾಡುವ ಪ್ರೋಟೋಕಾಲ್ (ಅಕ್ಟೋಬರ್, 2016ರಲ್ಲಿ ಸಹಿ ಹಾಕಿದ ಪ್ರೋಟೋಕಾಲ್).

ಈ ಅನುಮೋದನೆಯು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಕುರಿತಾದ ಒಡಂಬಡಿಕೆಯಲ್ಲಿ ಪ್ರತಿಪಾದಿಸಲಾದ ತತ್ವಗಳಿಗೆ ಭಾರತದ ಬದ್ಧತೆಯನ್ನು ಸೂಚಿಸುತ್ತದೆ. ಈ ಅನುಮೋದನೆಯು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಭಾರತವು ಹೆಚ್ಚು ಉಪಯೋಗವಾಗಲು ಉತ್ತಮ ಅವಕಾಶಗಳು ಮತ್ತು ಅನುಕೂಲಗಳನ್ನು ಒದಗಿಸುತ್ತದೆ.

*****
 


(Release ID: 1901383) Visitor Counter : 146