ಹಣಕಾಸು ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ 2023 ರ ಫೆಬ್ರವರಿ 22 ರಿಂದ 25 ರವರೆಗೆ ಪ್ರಥಮ ಜಿ 20 ಹಣಕಾಸು ಸಚಿವರುಗಳು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಗಳ ಮತ್ತು 2 ನೇ ಜಿ 20 ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಉಪ ಮುಖ್ಯಸ್ಥರ ಸಭೆ

Posted On: 19 FEB 2023 2:21PM by PIB Bengaluru

ಜಿ 20 ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಜಿ 20 ಹಣಕಾಸು ಸಚಿವರುಗಳು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ (ಎಫ್ಎಂಸಿಬಿಜಿ) ಸಭೆ 2023ರ ಫೆಬ್ರವರಿ 24-25 ರಂದು ಕರ್ನಾಟಕದ ಬೆಂಗಳೂರಿನಲ್ಲಿ ನಿಗದಿಯಾಗಿದೆ. ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಗವರ್ನರ್ ಡಾ.ಶಕ್ತಿಕಾಂತ್ ದಾಸ್ ಈ ಸಭೆಯ ಜಂಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿ 20 ಎಫ್.ಎಂಸಿಬಿಜಿ ಸಭೆಗೆ ಮುನ್ನ 2023ರ ಫೆಬ್ರವರಿ 22 ರಂದು ಜಿ 20 ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಉಪ ಮುಖ್ಯಸ್ಥರ (ಎಫ್.ಸಿ.ಬಿ.ಡಿ) ಸಭೆ ನಡೆಯಲಿದ್ದು, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಅಜಯ್ ಸೇಠ್ ಮತ್ತು ಆರ್.ಬಿ.ಐ ಉಪ ಗವರ್ನರ್ ಡಾ.ಮೈಕೆಲ್ ಡಿ ಪಾತ್ರಾ ಅವರು ಜಂಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಜಿ 20 ಎಫ್.ಸಿ.ಬಿ.ಡಿ ಸಭೆಯನ್ನು ಉದ್ಘಾಟಿಸಲಿದ್ದಾರೆ.

ಜಿ 20 ಭಾರತದ ಅಧ್ಯಕ್ಷತೆಯಲ್ಲಿ ಪ್ರಥಮ ಜಿ 0 2ಎಫ್.ಎಂಸಿಬಿಜಿ ಸಭೆಯಲ್ಲಿ ಹಣಕಾಸು ಸಚಿವರು ಮತ್ತು ಜಿ 20 ಸದಸ್ಯ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಗಳು, ಆಹ್ವಾನಿತ ಸದಸ್ಯರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಒಟ್ಟಾರೆ 72 ನಿಯೋಗಗಳು ಭಾಗವಹಿಸಲಿವೆ.

ಕೆಲವು ಪ್ರಮುಖ ಜಾಗತಿಕ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಾಯೋಗಿಕ ಮತ್ತು ಅರ್ಥಪೂರ್ಣ ವಿಧಾನಗಳ ಬಗ್ಗೆ ಸಚಿವರು ಮತ್ತು ಗೌರ್ನರ್ ಗಳ ನಡುವೆ ಅರ್ಥಪೂರ್ಣ ವಿಚಾರ ವಿನಿಮಯವನ್ನು ಉತ್ತೇಜಿಸುವ ರೀತಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಸಭೆಯ ಕಾರ್ಯಸೂಚಿಯನ್ನು ರೂಪಿಸಲಾಗಿದೆ.

ಫೆಬ್ರವರಿ 24 ಮತ್ತು 25 ರಂದು ಈ ಸಭೆ ಮೂರು ಅಧಿವೇಶನಗಳಲ್ಲಿ ನಡೆಯಲಿದ್ದು, ಇದರಲ್ಲಿ 21 ನೇ ಶತಮಾನದ ಹಂಚಿಕೆಯ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಬಲಪಡಿಸುವುದು, ಚೇತರಿಕೆ, ಅಂತರ್ಗತ ಮತ್ತು ಸುಸ್ಥಿರ 'ನಾಳೆಯ ನಗರಗಳಿಗೆ' ಹಣಕಾಸು ಒದಗಿಸುವುದು, ಹಣಪೂರಣ ಮತ್ತು ಉತ್ಪಾದಕತೆಯ ಲಾಭಗಳನ್ನು ಹೆಚ್ಚಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನ್ನು ಬಳಸಿಕೊಳ್ಳುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ. ಈ ಅಧಿವೇಶನಗಳು ಜಾಗತಿಕ ಆರ್ಥಿಕತೆ, ಜಾಗತಿಕ ಆರೋಗ್ಯ ಮತ್ತು ಅಂತಾರಾಷ್ಟ್ರೀಯ ತೆರಿಗೆಗೆ ಸಂಬಂಧಿಸಿದ ವಿಷಯಗಳನ್ನು ಸಹ ಒಳಗೊಂಡಿರುತ್ತವೆ.

ಜಿ 20 ಎಫ್.ಎಂಸಿಬಿಜಿ ಸಭೆಯಲ್ಲಿನ ಚರ್ಚೆಗಳು 2023 ರಲ್ಲಿ ಜಿ 20 ಹಣಕಾಸು ಟ್ರ್ಯಾಕ್ ನ ವಿವಿಧ ಕಾರ್ಯವಾಹಿನಿಗಳಿಗೆ ಸ್ಪಷ್ಟ ನಿರ್ದೇಶನವನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ.

ಈ ಸಭೆಗಳ ವೇಳೆ, ಭೇಟಿ ನೀಡುವ ಸಚಿವರು, ಗೌರ್ನರ್ ಗಳು, ಉಪ ಮುಖ್ಯಸ್ಥರು ಮತ್ತು ಇತರ ಪ್ರತಿನಿಧಿಗಳಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕ್ರಿಪ್ಟೋ ಸ್ವತ್ತುಗಳ ನೀತಿ ದೃಷ್ಟಿಕೋನಗಳು ಮತ್ತು ಗಡಿಯಾಚೆಗಿನ ಪಾವತಿಗಳಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆಗಳ ಪಾತ್ರದಂತಹ ವಿಷಯಗಳ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನೂ ಯೋಜಿಸಲಾಗಿದೆ.

ಹಣಕಾಸು ಸಚಿವರುಗಳು, ಕೇಂದ್ರ ಬ್ಯಾಂಕ್ ಗವರ್ನರ್ ಗಳು ಮತ್ತು ಅವರ ನಿಯೋಗಗಳಿಗಾಗಿ ರಾತ್ರಿ ಭೋಜ್ ಪರ್ ಸಂವಾದ್ (ರಾತ್ರಿ ಊಟ ವೇಳೆ ಸಂವಾದ) ಮತ್ತು ವಿಶೇಷವಾಗಿ ರೂಪಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು, ಇದು ಭಾರತದ ವೈವಿಧ್ಯಮಯ ಪಾಕಪದ್ಧತಿ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ.

ವಾಕ್ ದಿ ಟಾಕ್ : ಪಾಲಿಸಿ ಇನ್ ಆಕ್ಷನ್ ಎಂಬ ವಿಶೇಷ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಸಚಿವರು ಮತ್ತು ರಾಜ್ಯಪಾಲರು ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಭೇಟಿ ನೀಡಲಿದ್ದು, ಜಿ 20 ಸದಸ್ಯ ರಾಷ್ಟ್ರಗಳು ಎದುರಿಸುತ್ತಿರುವ ಕೆಲವು ಸವಾಲುಗಳಿಗೆ ಅಗ್ಗದ ಮತ್ತು ಪ್ರಮಾಣಾತ್ಮಕ ಪರಿಹಾರಗಳಿಗಾಗಿ ಶ್ರಮಿಸುತ್ತಿರುವ ಟೆಕ್-ನಾವೀನ್ಯದಾರರು ಮತ್ತು ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಸಚಿವರುಗಳು, ಗೌರ್ನರ್ ಗಳು, ಉಪ ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಸ್ವಾಗತಕ್ಕಾಗಿ, ನಾವು ವೈವಿಧ್ಯಮಯ ಕಲೆ ಮತ್ತು ಕರಕುಶಲತೆಯೊಂದಿಗೆ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಗೆ ಹೆಸರುವಾಸಿಯಾಗಿರುವ ಕರ್ನಾಟಕದಾದ್ಯಂತ ಭಾರತದ ಶ್ರೀಮಂತ ಸಾಂಸ್ಕೃತಿಕ ದೀರ್ಘಾನುಭವವನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ.  ಪ್ರದರ್ಶನವು ಕರ್ನಾಟಕದ ಸಾಂಸ್ಕೃತಿಕ ನೀತಿ ಮತ್ತು ಪರಂಪರೆಯ ಕಲಾತ್ಮಕತೆ ಮತ್ತು ವೈಭವವನ್ನು ಪ್ರತಿಬಿಂಬಿಸುತ್ತದೆ.
ಫೆಬ್ರವರಿ 26 ರಂದು ಪ್ರತಿನಿಧಿಗಳಿಗೆ ಕರ್ನಾಟಕದ ಸುಂದರವಾದ ನೈಸರ್ಗಿಕ ಭೂರಮೆಯನ್ನು ಆನಂದಿಸಲು ಅವಕಾಶವನ್ನು ಕಲ್ಪಿಸಲು ವಿಹಾರದ ಆಯ್ಕೆಗಳನ್ನು ಒದಗಿಸಲಾಗಿದೆ.

*****


(Release ID: 1900572) Visitor Counter : 330