ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಭಾರತೀಯ ಆಹಾರ ನಿಗಮವು 3 ನೇ ಇ-ಹರಾಜಿನಲ್ಲಿ ದೇಶದ 620 ಡಿಪೋಗಳ ಮೂಲಕ 11.72 ಎಲ್ಎಂಟಿ (ಲಕ್ಷ ಮೆಟ್ರಿಕ್ ಟನ್) ಗೋಧಿಯನ್ನು ನೀಡುತ್ತದೆ
ಎಫ್ ಸಿಐನಿಂದ 3 ನೇ ಇ-ಹರಾಜು 2023 ರ ಫೆಬ್ರವರಿ 22 ರಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ
Posted On:
18 FEB 2023 10:32AM by PIB Bengaluru
3 ನೇ ಇ-ಹರಾಜಿನಲ್ಲಿ, ದೇಶಾದ್ಯಂತ 620 ಡಿಪೋಗಳಿಂದ ಸುಮಾರು 11.72 ಎಲ್ಎಂಟಿ ಗೋಧಿಯನ್ನು ಭಾರತೀಯ ಆಹಾರ ನಿಗಮ ಒದಗಿಸುತ್ತದೆ.
3 ನೇ ಇ-ಹರಾಜಿನಲ್ಲಿ, 2023 ರ ಫೆಬ್ರವರಿ 17 ರಂದು ರಾತ್ರಿ 10:00 ಗಂಟೆಯೊಳಗೆ ಎಂ ಜಂಕ್ಷನ್ ನ ಇ ಪೋರ್ಟಲ್ ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡ ಬಿಡ್ ದಾರರಿಗೆ 2023 ರ ಫೆಬ್ರವರಿ 22 ರಂದು ಇ-ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಇಎಂಡಿ ಠೇವಣಿ ಮತ್ತು ಅಪ್ಲೋಡ್ ಮಾಡಲು ಕೊನೆಯ ದಿನಾಂಕ 2023 ರ ಫೆಬ್ರವರಿ 21 ಮಧ್ಯಾಹ್ನ 02:30 ರವರೆಗೆ ಇದೆ. ಮೂರನೇ ಇ-ಹರಾಜು 2023 ರ ಫೆಬ್ರವರಿ 22ರಂದು ಬೆಳಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದೆ.
ಭಾರತ ಸರ್ಕಾರವು ದೇಶಾದ್ಯಂತ ಒಎಂಎಸ್ಎಸ್ (ಡಿ) ಯೋಜನೆಯ ಮೂಲಕ ಗೋಧಿಯ ಮಾರಾಟದ ಮೀಸಲು ಬೆಲೆಯನ್ನು ಪರಿಷ್ಕರಿಸಿದೆ. ಈಗ, ಎಫ್ಎಕ್ಯೂ ಗೋಧಿಯ ಮೀಸಲು ಬೆಲೆ ಭಾರತದಾದ್ಯಂತ ಪ್ರತಿ ಕ್ವಿಂಟಾಲ್ ಗೆ 2150 ರೂ. ಮತ್ತು ಯುಆರ್ ಎಸ್ ಗೋಧಿಯ ಮೀಸಲು ಬೆಲೆ ಪ್ರತಿ ಕ್ವಿಂಟಾಲ್ ಗೆ 2125 ರೂ. ಗೋಧಿ ಮತ್ತು ಅಟ್ಟಾ (ಗೋಧಿ ಹಿಟ್ಟು) ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ದೇಶಾದ್ಯಂತ ಗೋಧಿಯನ್ನು ಕಡಿಮೆ ಏಕರೂಪದ ಮೀಸಲು ಬೆಲೆಯಲ್ಲಿ ನೀಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹೊಸ ಮೀಸಲು ಬೆಲೆಗಳು 2023 ರ ಫೆಬ್ರವರಿ 22 ರಂದು ಬುಧವಾರ ದೇಶಾದ್ಯಂತ ನಡೆಯಲಿರುವ ಇ - ಹರಾಜಿನ ಮೂಲಕ ಗೋಧಿಯ ಮೂರನೇ ಮಾರಾಟದಿಂದ ಅನ್ವಯವಾಗುತ್ತವೆ.
ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಅಟ್ಟಾ ಬೆಲೆಯನ್ನು ಎದುರಿಸುವ ಸಲುವಾಗಿ, ಸಚಿವರ ಗುಂಪು ಮಾಡಿದ ಶಿಫಾರಸಿನ ಪ್ರಕಾರ, ಭಾರತೀಯ ಆಹಾರ ನಿಗಮವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ ವಿವಿಧ ಮಾರ್ಗಗಳ ಮೂಲಕ ಕೇಂದ್ರ ಪೂಲ್ ಸ್ಟಾಕ್ (ರಾಜ್ಯಗಳಿಂದ ಸಂಗ್ರಹಿಸಿದ) ನಿಂದ 30 ಎಲ್ಎಂಟಿ ಗೋಧಿ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
1ನೇ ಮತ್ತು 2ನೇ ಹರಾಜಿನಲ್ಲಿ ಒಟ್ಟು 12.98 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟವಾಗಿದ್ದು, ಅದರಲ್ಲಿ 8.96 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಬಿಡ್ ದಾರರು ಈಗಾಗಲೇ ಎತ್ತಿದ್ದಾರೆ.
ದೇಶಾದ್ಯಂತ ಏಕರೂಪದ ಮೀಸಲು ಬೆಲೆಯನ್ನು ಪರಿಷ್ಕರಿಸುವ ಘೋಷಣೆಯು ದೇಶಾದ್ಯಂತದ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಗೋಧಿ ಮತ್ತು ಅಟ್ಟಾ ಬೆಲೆಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
*****
(Release ID: 1900352)
Visitor Counter : 155