ಸಂಪುಟ
azadi ka amrit mahotsav

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸಹಕಾರಕ್ಕಾಗಿ ಭಾರತ ಮತ್ತು ಚಿಲಿ ದೇಶಗಳ ನಡುವೆ ತಿಳಿವಳಿಕಾ ಒಪ್ಪಂದಕ್ಕೆ ಅಂಕಿತ ಹಾಕಲು ಸಚಿವ ಸಂಪುಟದ ಅನುಮೋದನೆ

Posted On: 15 FEB 2023 3:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸಹಕಾರಕ್ಕಾಗಿ ಭಾರತ ಗಣರಾಜ್ಯ ಸರ್ಕಾರ ಮತ್ತು ಚಿಲಿ ಗಣರಾಜ್ಯದ ಸರ್ಕಾರಗಳ ನಡುವೆ ತಿಳಿವಳಿಕಾ ಒಪ್ಪಂದಕ್ಕೆ (ಎಂ.ಓ.ಯು.) ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳುವಳಿಕಾ ಒಡಂಬಡಿಕೆಯು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸಹಕಾರಕ್ಕೆ ಅವಕಾಶ ಕಲ್ಪಿಸುತ್ತದೆ. ಆಧುನಿಕ ಕೃಷಿ ಅಭಿವೃದ್ಧಿಗಾಗಿ ಕೃಷಿ ನೀತಿಗಳು, ಸಾವಯವ ಉತ್ಪನ್ನಗಳ ದ್ವಿಪಕ್ಷೀಯ ವ್ಯಾಪಾರಕ್ಕೆ ಅನುಕೂಲವಾಗುವಂತೆ ಸಾವಯವ ಕೃಷಿ, ಜೊತೆಗೆ ಎರಡೂ ದೇಶಗಳಲ್ಲಿ ಸಾವಯವ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ನೀತಿಗಳ ವಿನಿಮಯವನ್ನು ಉತ್ತೇಜಿಸುವುದು, ಭಾರತೀಯ ಸಂಸ್ಥೆಗಳು ಮತ್ತು ಚಿಲಿಯ ಸಂಸ್ಥೆಗಳಲ್ಲಿ ಕೃಷಿ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಸಹಭಾಗಿತ್ವವನ್ನು ಅನ್ವೇಷಿಸಲು ವಿಜ್ಞಾನ ಮತ್ತು ನಾವೀನ್ಯತೆ ಮತ್ತು ಸಾಮಾನ್ಯ ಸವಾಲುಗಳನ್ನು ಎದುರಿಸಲು ಸಹಕರಿಸುವುದು ಈ ಸಹಕಾರದ ಪ್ರಮುಖ ಕ್ಷೇತ್ರಗಳಾಗಿವೆ.

ಈ ತಿಳುವಳಿಕಾ ಒಡಂಬಡಿಕೆಯ ಅಡಿಯಲ್ಲಿ, ಚಿಲಿ-ಭಾರತ ಕೃಷಿ ಕಾರ್ಯಕಾರಿ ಗುಂಪನ್ನು ರಚಿಸಲಾಗುವುದು.  ಈ ಕೃಷಿ ಕಾರ್ಯಕಾರಿ ಗುಂಪು ಈ ತಿಳಿವಳಿಕಾ ಒಪ್ಪಂದದ ಅನುಷ್ಠಾನದ ಮೇಲ್ವಿಚಾರಣೆ, ಪರಿಶೀಲನೆ ಮತ್ತು ಮೌಲ್ಯಮಾಪನ ಮತ್ತು ನಿಯತಕಾಲಿಕವಾಗಿ ಸಂವಹನ ಮತ್ತು ಸಮನ್ವಯವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.

ಈ ಕೃಷಿ ಕಾರ್ಯಕಾರಿ ಗುಂಪಿನ ಸಭೆಗಳನ್ನು ವರ್ಷಕ್ಕೊಮ್ಮೆ ಪರ್ಯಾಯವಾಗಿ ಚಿಲಿ ಮತ್ತು ಭಾರತದಲ್ಲಿ ನಡೆಸಲಾಗುವುದು. ಈ ತಿಳುವಳಿಕಾ ಒಡಂಬಡಿಕೆಯು ಸಹಿ ಹಾಕಿದ ನಂತರ ಜಾರಿಗೆ ಬರುತ್ತದೆ. ಇದು ಜಾರಿಗೆ ಬಂದ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಈ ಒಡಂಬಡಿಕೆಯು ಜಾರಿಯಲ್ಲಿರುತ್ತದೆ.  ನಂತರ ಅದನ್ನು ಸ್ವಯಂಚಾಲಿತವಾಗಿ 5 ವರ್ಷಗಳ ಅವಧಿಗೆ ನವೀಕರಿಸಲಾಗುವುದು.

****


(Release ID: 1900179) Visitor Counter : 139