ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಭಾರತೀಯ ಆಹಾರ ನಿಗಮದ ಎರಡನೇ ಇ-ಹರಾಜಿನಲ್ಲಿ 3.85 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರೂ.901 ಕೋಟಿಗೆ ಮಾರಾಟವಾಗಿದೆ


ಹೆಚ್ಚುತ್ತಿರುವ ಗೋಧಿ ಮತ್ತುಗೋಧಿ ಹಿಟ್ಟಿನ ಬೆಲೆಗಳನ್ನು ನಿಯಂತ್ರಿಸಲು, ಇ-ಹರಾಜು ಪ್ರತಿ ಬುಧವಾರ ಮಾರ್ಚ್ 2023 ರ 2 ನೇ ವಾರದವರೆಗೆ ಮುಂದುವರಿಯುತ್ತದೆ

Posted On: 16 FEB 2023 10:38AM by PIB Bengaluru

15.02.2023 ರಂದು ಭಾರತೀಯ ಆಹಾರ ನಿಗಮ (ಎಫ್ಸಿಐ) ಆಯೋಜಿಸಿದ್ದ ಎರಡನೇ ಇ-ಹರಾಜಿನಲ್ಲಿ 1060 ಕ್ಕೂ ಹೆಚ್ಚು ಬಿಡ್ ದಾರರು ಭಾಗವಹಿಸಿದ್ದು  3.85 ಎಲ್ಎಂಟಿ ಗೋಧಿಯನ್ನು ಮಾರಾಟ ಮಾಡಲಾಗಿದೆ.  ನಿಗಮವು 15.25 ಎಲ್ಎಂಟಿ ಗೋಧಿಯನ್ನು ಹರಾಜಿಗೆ ಇಟ್ಟಿತ್ತು. 

ಎರಡನೇ ಇ-ಹರಾಜಿನಲ್ಲಿ 100 ರಿಂದ 499 ಮೆಟ್ರಿಕ್ ಟನ್ ವರೆಗೆ ಗರಿಷ್ಠ ಬೇಡಿಕೆಯಿತ್ತು ಮತ್ತು ನಂತರ 500-1000 ಮೆಟ್ರಿಕ್ ಟನ್ , 50-100  ಮೆಟ್ರಿಕ್ ಟನ್ ಬೇಡಿಕೆಯಿತ್ತು, ಇದು ಸಣ್ಣ ಮತ್ತು ಮಧ್ಯಮ ಹಿಟ್ಟಿನ ಗಿರಣಿಗಾರರು ಮತ್ತು ವ್ಯಾಪಾರಸ್ಥರು ಹರಾಜಿನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಸೂಚಿಸುತ್ತದೆ. 
ಕೇವಲ 5 ಬಿಡ್ ದಾರರು  ಗರಿಷ್ಠ 3000 ಎಂಟಿ ಏಕಕಾಲದಲ್ಲಿ ಬಿಡ್ ಮಾಡಿದ್ದಾರೆ. 
 
ಭಾರತೀಯ ಆಹಾರ ನಿಗಮವು ಪ್ರತಿ ಕ್ವಿಂಟಾಲ್ಗೆ ಸರಾಸರಿ ರೂ.2338.01 ದರವನ್ನು ಪಡೆಯಿತು ನಿಗಮವು ಎರಡನೇ . 2ನೇ ಇ-ಹರಾಜಿನಲ್ಲಿ ರೂ. 901ಕೋಟಿಯನ್ನು ಗಳಿಸಿತು 
ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಿಸಲು ಮಂತ್ರಿ ಮಂಡಳಿಯ ಶಿಫಾರಸಿನ ಆಧಾರದ ಮೇಲೆ ಇ-ಹರಾಜು ಮೂಲಕ ಗೋಧಿಯನ್ನು ಮಾರಾಟ ಮಾಡಲಾಗುತ್ತಿದೆ.  ಹರಾಜು ಮಾರಾಟವು ದೇಶದಾದ್ಯಂತ ಮಾರ್ಚ್ 2023 ರ 2 ನೇ ವಾರದವರೆಗೆ ಪ್ರತಿ ಬುಧವಾರ ನಡೆಯಲಿದೆ.
 
ಭಾರತ ಸರ್ಕಾರವು 3 ಎಲ್.ಎಂ.ಟಿ ಗೋಧಿಯನ್ನು ಕೇಂದ್ರೀಯ ಭಂಡಾರ್, ಎನ್ ಸಿಸಿಎಫ್  ಮತ್ತು ಎನ್ಎಎಫ್ ಇ ಡಿಯಂತಹ ಸರ್ಕಾರಿ ಉದ್ದಿಮೆಗಳು, ಸಹಕಾರ ಸಂಸ್ಥೆಗಳು, ಫೆಡರೇಶನ್ಗಳಿಗೆ  ಇ-ಹರಾಜು ಇಲ್ಲದೆ ಮಾರಾಟಕ್ಕಾಗಿ ಹಂಚಿಕೆ ಮಾಡಿದೆ. ಈ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ  ನೀಡಲಾಗುವ ಗೋಧಿಯನ್ನು ರೂ.23.50/ ಕೆಜಿ ಮತ್ತು ಗೋಧಿ ಹಿಟ್ಟು  ರೂ.29.50/ಕೆಜಿ ಮೀರದಂತೆ ಇರುವ  ರಿಯಾಯಿತಿ ದರವನ್ನು ಸರ್ಕಾರವು ಈ ಯೋಜನೆಯಡಿಯಲ್ಲಿ  ಗೋಧಿಗೆ ರೂ 21.50/ಕೆಜಿ  ಗೋಧಿ ಹಿಟ್ಟಿಗೆ ರೂ. 27.50/ ಕೆಜಿ ಮೀರದಂತೆ ಪರಿಷ್ಕರಿಸಿದೆ. 

ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಸಿಸಿಎಫ್) 8 ರಾಜ್ಯಗಳಲ್ಲಿ ಮೇಲಿನ ಯೋಜನೆಯಡಿಯಲ್ಲಿ 68000 ಮೆಟ್ರಿಕ್ ಟನ್ ಗೋಧಿ ದಾಸ್ತಾನನ್ನು ಪಡೆಯಲು ಅನುಮತಿಸಲಾಗಿದೆ. ಈ ಯೋಜನೆಯಡಿಯಲ್ಲಿ ದೇಶಾದ್ಯಂತ ಗೋಧಿ ಹಿಟ್ಟಿನ ಬೆಲೆಯನ್ನು ತಗ್ಗಿಸಲು 1 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಎನ್ಎಎಫ್ಇಡಿ ಗೆ ಮತ್ತು 1.32 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಕೇಂದ್ರೀಯ ಭಂಡಾರ್ ಗೆ ನೀಡಲಾಗಿದೆ ಮತ್ತು ಎಫ್ಸಿಐನಿಂದ ದಾಸ್ತಾನನ್ನು ಪಡೆದುಕೊಂಡ ನಂತರ ಈ ಸಹಕಾರ ಸಂಸ್ಥೆಗಳಿಂದ ಗೋಧಿ ಹಿಟ್ಟಿನ ಮಾರಾಟ ಮಾಡಲಾಗುತ್ತಿದೆ.

ಒಎಂಎಸ್ ಎಸ್ ಡಿ (ಡಿ) ಅಡಿಯಲ್ಲಿ ಮಾರಾಟಕ್ಕೆ ಮೀಸಲಿಟ್ಟ 30 ಎಲ್ ಎಂ ಟಿಗಳಲ್ಲಿ 25 ಎಲ್ ಎಂ ಟಿ ಗೋಧಿಯನ್ನು ಒಎಂಎಸ್ ಎಸ್ ಡಿ (ಡಿ) ಯೋಜನೆಯ ಮೂಲಕ ಮಾರುಕಟ್ಟೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ ವಿವಿಧ ಮಾರ್ಗಗಳ ಮೂಲಕ ಮಾಡುವ ವಿತರಣೆಯು ಗೋಧಿ ಮತ್ತು ಗೋಧಿ ಹಿಟ್ಟಿನ  ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆಹಾರ ಆರ್ಥಿಕತೆಯಲ್ಲಿ ಸ್ಥಿರವಾದ ಬೆಲೆ ಏರಿಕೆ ನಿಯಂತ್ರಣವು ಸಾಮಾನ್ಯ ಜನರಿಗೆ ಹೊರೆಯಾಗದಂತೆ ಪರಿಹಾರ ನೀಡುವ ಯೋಜನೆಯ ಉದ್ದೇಶವನ್ನು ಈಡೇರಿಸುತ್ತದೆ.

*****



(Release ID: 1899920) Visitor Counter : 125