ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಜಿ20 ಪ್ರಮುಖ ಕಾರ್ಯಕ್ರಮವಾದ ಮೊದಲ ಅಂತರರಾಷ್ಟ್ರೀಯ ಡಿಜಿಟಲ್ ಕೌಶಲ್ಯ ಕುರಿತ ಸಮ್ಮೇಳನ ಉದ್ಘಾಟಿಸಿದ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ


ವ್ಯಕ್ತಿಗಳ ಸಾಮರ್ಥ್ಯ ಮತ್ತು ಉದ್ಯೋಗಾರ್ಹತೆಯನ್ನು ಕಾಪಾಡಿಕೊಳ್ಳಲು ಮತ್ತು ವಿಸ್ತರಿಸಲು ಡಿಜಿಟಲ್ ಕೌಶಲ್ಯ, ಉನ್ನತ ಕೌಶಲ್ಯ ಮತ್ತು ಮರು ಕೌಶಲ್ಯ ನಿರ್ಣಾಯಕ : ಶ್ರೀ ಅಲ್ಕೇಶ್ ಕುಮಾರ್ ಶರ್ಮಾ

ರೊಬೊಟಿಕ್ಸ್, ದತ್ತಾಂಶ ವಿಶ್ಲೇಷಣೆ, ಬ್ಲಾಕ್ ಚೈನ್, ಮಾಹಿತಿ ವ್ಯವಸ್ಥೆ ಭದ್ರತೆ, ವಿಎಲ್ಎಸ್ಐ, ಸೈಬರ್ ವಿಧಿವಿಜ್ಞಾನ ಮತ್ತಿತರ ವೈವಿಧ್ಯಮ ಕೋರ್ಸ್ ಗಳು: ಎನ್ಐಇಎಲ್ಐಟಿನ ವರ್ಚುವಲ್ ಅಕಾಡೆಮಿ ಮೂಲಕ ಜಾರಿ

ಎನ್ಐಇಎಲ್ಐಟಿ ವಿವಿಧ ಎನ್ಎಸ್ ಕ್ಯೂಎಫ್ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ವಲಯದಲ್ಲಿ ರಾಷ್ಟ್ರೀಯ ಅರ್ಹತಾ ಚೌಕಟ್ಟಿನಡಿ 96 ಅರ್ಹತೆಗಳನ್ನು ಜೋಡಿಸಿದೆ

Posted On: 11 FEB 2023 3:46PM by PIB Bengaluru

ತ್ವರಿತವಾಗಿ ಬದಲಾವಣೆಯಾಗುತ್ತಿರುವ ಅರ್ಥ ವ್ಯವಸ್ಥೆಯಡಿ ಉದ್ಯೋಗ ವಲಯದಲ್ಲಿ ಭಾಗವಹಿಸಲು ಮತ್ತು ವ್ಯಕ್ತಿಗಳ ಸಾಮರ್ಥ್ಯವನ್ನು ವಿಸ್ತರಿಸಲು ಮತ್ತು ಉದ್ಯೋಗಾರ್ಹತೆಯನ್ನು ಕಾಪಾಡಿಕೊಳ್ಳಲು ಮತ್ತು ವಿಸ್ತರಣೆಗಾಗಿ ಡಿಜಿಟಲ್ ಕೌಶಲ್ಯ, ಉನ್ನತ ಕೌಶಲ್ಯ ಮತ್ತು ಮರು ಕೌಶಲ್ಯ ನಿರ್ಣಾಯಕವಾಗಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ [ಮೆರಿಟ್ ವೈ] ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಹೇಳಿದ್ದಾರೆ. ಜಿ20 ಪ್ರಮುಖ ಕಾರ್ಯಕ್ರಮವಾದ ಮೊದಲ ಅಂತರರಾಷ್ಟ್ರೀಯ ಸಂಪರ್ಕ, ವಿದ್ಯುನ್ಮಾನ ಮತ್ತು ಡಿಜಿಟಲ್ ತಂತ್ರಜ್ಞಾನ –ನೈಸ್–ಡಿಟಿ 2023 ಮತ್ತು ಡಿಜಿಟಲ್ ಕೌಶಲ್ಯ ಕುರಿತ ಸಮ್ಮೇಳವನ್ನು ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಡಿಜಿಟಲ್ ಕೌಶಲ್ಯ ಸಂಸ್ಥೆ [ಎನ್ಐಇಎಲ್ಐಟಿ] ಆಯೋಜಿಸಿತ್ತು. ಎನ್ ಸಿವಿಇಟಿ ಅಧ್ಯಕ್ಷ ಡಾ. ನಿರ್ಮಲ್ ಜೀತ್ ಸಿಂಗ್ ಕಲ್ಸಿ, ಮೆರಿಟ್ ವೈ ನ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭುವನೇಶ್ ಕುಮಾರ್, ಎಐ ನಿರ್ದೇಶಕ, ಯುನೆಸ್ಕೋ ಎಸ್ಎಚ್ಎಸ್, ಡಾ. ಎಂ. ಸ್ಕ್ವೀಸಿಯಾರಿನಿ, ಎನ್ಐಇಎಲ್ಐಟಿ ಮಹಾ ನಿರ್ದೇಶಕ ಡಾ. ಮದನ್ ಮೋಹನ್ ತ್ರಿಪಾಠಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.  

ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಅವರು ಮೊದಲ ಅಂತರರಾಷ್ಟ್ರೀಯ ಸಂಪರ್ಕ, ವಿದ್ಯುನ್ಮಾನ ಮತ್ತು ಡಿಜಿಟಲ್ ತಂತ್ರಜ್ಞಾನ ಸಮ್ಮೇಳನ ಉದ್ಘಾಟಿಸಿದರು

ಸಮಾವೇಶದ ತಮ್ಮ ಉದ್ಘಾಟನಾ ಭಾಷಣದಲ್ಲಿ ಮೆರಿಟ್ ವೈ ಕಾರ್ಯದರ್ಶಿ ಅವರು, ಡಿಜಿಟಲ್ ಆರ್ಥಿಕತೆಯನ್ನು ಮುನ್ನಡೆಸಲು ಭವಿಷ್ಯದ ಸನ್ನದ್ಧ ಕಾರ್ಯಪಡೆ ಮತ್ತು ಡಿಜಿಟಲ್ ವಲಯದಲ್ಲಿ ಸಜ್ಜಾಗಿರುವ [ನಾಗರಿಕರು] ಜನ ಸಮೂಹ, ಎರಡೂ ಅಗತ್ಯವಾದ ಪ್ರಮುಖ ಕ್ಷೇತ್ರಗಳಾಗಿವೆ ಎಂದರು. ಎನ್ಐಇಎಲ್ಐಟಿನಿಂದ ಆಗಿರುವ ನೋಂದಣಿಯನ್ನು ಶ್ಲಾಘಿಸಿದ ಅವರು, ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯ ವಲಯದಲ್ಲಿ ಮಹತ್ವದ ಪ್ರಗತಿಯಾಗುತ್ತಿದೆ. ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯನ್ನು ಸಾಧಿಸುವ ಗುರಿ ಹಿನ್ನೆಲೆಯಲ್ಲಿ ಎನ್ಐಇಎಲ್ಐಟಿ ಮೂಲಕ ಉನ್ನತ ಮಟ್ಟದ ತರಬೇತಿ ಮತ್ತು ಕೌಶಲ್ಯ ಕಾರ್ಯಕ್ರಮಗಳು ಮಾನವ ಸಂಪನ್ಮೂಲವನ್ನು ಸೃಜಿಸಲು ಮಹತ್ವದ ಹೆಜ್ಜೆ ಇಟ್ಟಂತಾಗಿದೆ. ಈ ದೇಶದ ಕಟ್ಟಕಡೆಯಲ್ಲಿ ವಾಸವಾಗಿರುವವರೊಂದಿಗೆ ಸಂಪರ್ಕ ಸಾಧಿಸಲು ಹೆಚ್ಚಿನ ಡಿಜಿಟಲ್ ಸಂಪರ್ಕದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಎನ್ಐಇಎಲ್ಐಟಿ ಕಳೆದ 8 ವರ್ಷಗಳಲ್ಲಿ 8 ದಶಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, ಇದಕ್ಕಾಗಿ ಅವರು ಅಭಿನಂದನೆ ಸಲ್ಲಿಸಿದರು.

ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಅವರು ಮೊದಲ ಅಂತರರಾಷ್ಟ್ರೀಯ ಸಂಪರ್ಕ, ವಿದ್ಯುನ್ಮಾನ ಮತ್ತು ಡಿಜಿಟಲ್ ತಂತ್ರಜ್ಞಾನ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು

ಡಿಜಿಟಲ್ ತಂತ್ರಜ್ಞಾನ ಕುರಿತ ಮೊದಲ ಅಂತರರಾಷ್ಟ್ರೀಯ ಪತ್ರಿಕೆ ಮತ್ತು ಅಬ್ಸ್ಟ್ರಾಕ್ಟ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ಮೊದಲ ಬಾರಿಗೆ ಡಿಜಿಟಲ್ ತಂತ್ರಜ್ಞಾನ ಕುರಿತ ಪತ್ರಿಕೆ ಹೊರ ತಂದಿರುವ ಹಿನ್ನೆಲೆಯಲ್ಲಿ ಗಣ್ಯರು ಎನ್ಐಇಎಲ್ಐಟಿಗೆ ಅಭಿನಂದನೆ ಸಲ್ಲಿಸಿದರು.

ಮೊದಲ ಅಂತರರಾಷ್ಟ್ರೀಯ ಸಂಪರ್ಕ, ವಿದ್ಯುನ್ಮಾನ ಮತ್ತು ಡಿಜಿಟಲ್ ತಂತ್ರಜ್ಞಾನ ಸಮ್ಮೇಳನ ಉದ್ದೇಶಿಸಿ ಡಾ. ನಿರ್ಮಲ್ ಜೀತ್ ಸಿಂಗ್ ಕಲ್ಸಿ ಮಾತನಾಡಿದರು

ಎನ್ ಸಿವಿಇಟಿ ಅಧ್ಯಕ್ಷ ಡಾ. ಡಾ. ನಿರ್ಮಲ್ ಜೀಗ್ ಸಿಂಗ್ ಕಲ್ಸಿ ಮಾತನಾಡಿ, ಡಿಜಿಟಲ್ ಕೌಶಲ್ಯ ಮತ್ತು ತಂತ್ರಜ್ಞಾನದಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮತ್ತು ಪ್ರತಿಕೃತಿ ಮಾದರಿಯನ್ನು ರಚಿಸುವಂತೆ ಒತ್ತು ನೀಡಿದರು. ಎನ್ಐಇಎಲ್ಐಟಿ ಯಾನ ಶ್ಲಾಘನೀಯವಾಗಿದ್ದು, ಡಿಪ್ಲೊಮಾ, ಯುಜಿ, ಪಿಜಿ ಮತ್ತು ಪದವಿ ಹಂತದವರೆಗೆ ಕೌಶಲ್ಯ ಮತ್ತು ಸಾಮರ್ಥ್ಯ ನಿರ್ಮಾಣದ ಪ್ರಮಾಣಪತ್ರಗಳನ್ನು ನೀಡುತ್ತಿದೆ ಎಂದರು.

ಮೆರಿಟ್ ವೈ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭುವನೇಶ್ ಕುಮಾರ್ ಮಾತನಾಡಿ, ಎನ್ಐಇಎಲ್ಐಟಿ ಪ್ರಯತ್ನಗಳಿಗೆ ಮೆಚ್ಚುಗೆ ಸೂಚಿಸಿದರು ಮತ್ತು ಮೊದಲ ಅಂತರರಾಷ್ಟ್ರೀಯ ಡಿಜಿಟಲ್ ಕೌಶಲ್ಯ ನೈಸ್-ಡಿಟಿ23ಯನ್ನು ಎನ್ಐಇಎಲ್ಐಟಿ ಆಯೋಜಿಸಿದ್ದು, ಇದು ಪಾಲುದಾರಿಕೆ ವಲದಯಲ್ಲಿ ಗಟ್ಟಿಯಾದ ಅಡಿಪಾಯ ಮತ್ತು ವೇದಿಕೆಯನ್ನು ಒದಗಿಸಲಿದೆ ಹಾಗೂ ಪಾಲುದಾರರಿಗೆ ಜ್ಞಾನ ಹಂಚಿಕೆ ಮಾಡಲಿದೆ ಎಂದರು. ಭವಿಷ್ಯದ ಕೌಶಲ್ಯಕ್ಕಾಗಿ ಪ್ರಮುಖ ಕೋರ್ಸ್ ಗಳನ್ನು ಅಧ್ಯಯನ ಮಾಡುವಂತೆ ಮಹತ್ವಾಕಾಂಕ್ಷೆ ಹೊಂದಿರುವ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಎನ್ಐಇಎಲ್ಐಟಿಯ ಜಿ20 ಕಾರ್ಯಕ್ರಮದಲ್ಲಿ ಈ ಸಮ್ಮೇಳನ ಮಹತ್ವದ್ದಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಮೆರಿಟ್ ವೈ ಆಯೋಜಿಸುತ್ತಿರುವ ಜಿ20 ಕಾರ್ಯಕ್ರಮದ ಭಾಗವಾಗಿದೆ ಎಂದರು.

ಮೊದಲ ಅಂತರರಾಷ್ಟ್ರೀಯ ಸಂಪರ್ಕ, ವಿದ್ಯುನ್ಮಾನ ಮತ್ತು ಡಿಜಿಟಲ್ ತಂತ್ರಜ್ಞಾನ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಡಾ. ಎಂ. ಸ್ಕ್ವೀಸಿಯಾರಿನಿ

ಯುನೆಸ್ಕೋದ ಎಸ್ಎಚ್ಎಸ್ ಎಐ ನಿರ್ದೇಶಕರಾದ ಡಾ. ಎಂ. ಸ್ಕ್ವೀಸಿಯಾರಿನಿ ಮಾತನಾಡಿ, “ನಾವು ಡಿಜಿಟಲ್ ಯುಗದಲ್ಲಿ ಬದುಕಬೇಕು, ಕೆಲಸ ಮಾಡಬೇಕು ಮತ್ತು ಅಭಿವೃದ್ಧಿ ಹೊಂದಬೇಕು. ಶಿಕ್ಷಣ, ಕೈಗಾರಿಕೆ, ಕಾರ್ಮಿಕರು, ಕೌಶಲ್ಯ, ಎಲ್ಲರನ್ನೊಳಗೊಂಡ ನೀತಿಗಳು, ಎಲ್ಲರಿಗೂ ಡಿಜಿಟಲ್ ಕೌಶಲ್ಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು” ಎಂದರು. ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ ಹೊಂದಲು, ಅಗತ್ಯವಾದ ಕೌಶಲ್ಯಗಳ ತಿಳಿವಳಿಕೆ, ಅಂತರವನ್ನು ನಿರ್ಣಯಿಸಲು, ಡಿಜಿಟಲ್ ಕೌಶಲ್ಯಗಳನ್ನು ನಿರ್ಮಿಸಲು ಇದು ನೆರವಾಗುತ್ತದೆ ಎಂದರು.

ಡಿಜಿಟಲ್ ತಂತ್ರಜ್ಞಾನ ಕುರಿತ ಮೊದಲ ಅಂತರರಾಷ್ಟ್ರೀಯ ಸಮ್ಮೇಳನದ ಮೊದಲ ದಿನದಂದು ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಷನ್ ಅಧ್ಯಕ್ಷ ಪ್ರೊ. ಕೆ.ಕೆ. ಅಗರ್ವಾಲ್ ಮುಖ್ಯ ಅತಿಥಿಯಾಗಿದ್ದರು. ತಮ್ಮ ಭಾಷಣದಲ್ಲಿ ಅವರು, ತಂತ್ರಜ್ಞಾನದೊಂದಿಗೆ ಸೂಕ್ತ ಸಮತೋಲನ ಸಾಧಿಸುವುದು ನಮ್ಮ ಜೀವನ ಮತ್ತು ಸಮಾಜದ ಮೇಲೆ ಅದರ ನಕಾರಾತ್ಮಕ ವರ್ತನೆಯನ್ನು ಹತೋಟಿಗೆ ತರುವುದು ಅಗತ್ಯವಾಗಿದೆ ಎಂದು ಹೇಳಿದರು. ಜ್ಞಾನ ಮತ್ತು ತಂತ್ರಜ್ಞಾನ ಒಟ್ಟಿಗೆ ಸೇರಿದರೆ ಗುಣಮಟ್ಟದ ಕಲಿಕೆಗೆ ಎಲ್ಲವನ್ನೊಳಗೊಂಡ ವೇದಿಕೆಯನ್ನು ಸೃಜಿಸಲಿದೆ ಎಂದು ಹೇಳಿದರು.

ಮೊದಲ ದಿನದ ಉದ್ಘಾಟನಾ ಅಧಿವೇಶನದಲ್ಲಿ ತಾಂತ್ರಿಕ ವಿಷಯಗಳು ಮತ್ತು ಲೇಖಕರು ಸಂಶೋಧನಾ ಕಾಗದಗಳನ್ನು ಸಲ್ಲಿಸಿದರು. ಎರಡನೇ ದಿನದಂದು ಪರಸ್ಪರ ಮಾನ್ಯತೆಯ ಕೌಶಲ್ಯಗಳ ಚೌಕಟ್ಟು, ಎಲ್ಲರಿಗೂ ಡಿಜಿಟಲ್ ಕೌಶಲ್ಯಗಳು ಮತ್ತು ಅತ್ಯಾಧುನಿಕ ಮತ್ತು ಬೆಳವಣಿಗೆಯಾಗುತ್ತಿರುವ ಕೌಶಲ್ಯಗಳ ಕುರಿತು ಸಂವಾದ ಗೋಷ್ಠಿಗಳು ನಡೆಯಲಿವೆ.

ಎನ್ಐಇಎಲ್ಐಟಿ ಮಹಾ ನಿರ್ದೇಶಕ ಡಾ. ಮದನ್ ಮೋಹನ್ ತ್ರಿಪಾಠಿ ಮಾತನಾಡಿ, “ಡಿಜಿಟಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಕೌಶಲ್ಯ ಕುರಿತ ಸಮ್ಮೇಳನದಲ್ಲಿ ಎರಡು ದಿನಗಳ ಕಾಲ ಜಗತ್ತಿನಾದ್ಯಂತ ಸಂಶೋಧಕರಿಂದ ವಿಶೇಷ ಜ್ಞಾನ ಹಂಚಿಕೆಗೆ ಸಹಕಾರಿಯಾಗಲಿದೆ ಮತ್ತು ಕೈಗಾರಿಕಾ ವಲಯದ ಬೇಡಿಕೆಗಳಿಗೆ ಅನುಗುಣವಾಗಿ ಕೌಶಲ್ಯ ಮಾನವ ಶಕ್ತಿ ಸೃಜನೆಯಾಗಲಿದ್ದು, ಜಿ20 ಅಧ್ಯಕ್ಷತೆ ಹೊಂದಿರುವ ಈ ಸಂದರ್ಭದಲ್ಲಿ ಉದ್ಯಮ ವಲಯದ ಬೇಡಿಕೆಗೆ ಅನುಗುಣವಾಗಿ ನುರಿತ ಮಾನವ ಶಕ್ತಿಯಲ್ಲಿನ ಅಂತರವನ್ನು ಇದು ನೀಗಿಸಲಿದೆ. ನೈಸ್ –ಡಿಟಿ23 ಪುಸ್ತಕ ಸರಣಿಯ ಸಂರ್ಪಕ ಮತ್ತು ವ್ಯವಸ್ಥೆಯಲ್ಲಿನ ಉಪನ್ಯಾಸದ ಟಿಪ್ಪಣಿಗಳು ದೊರೆಯಲಿದೆ. ಆಯ್ದ ಪ್ರಬಂಧಗಳನ್ನು ಸ್ವೀಕರಿಸಿದಕ್ಕೆ ಅವರು ಮೆಚ್ಚುಗೆ ಮತ್ತು ಧನ್ಯವಾಗಳನ್ನು ಸಲ್ಲಿಸಿದರು. ಎನ್ಐಇಎಲ್ಐಟಿ ಇತಿಹಾಸದಲ್ಲಿ ಇದು ಮೊದಲ ಆವೃತ್ತಿಯ ಅಂತರರಾಷ್ಟ್ರೀಯ ಸಮ್ಮೇಳನವಾಗಿದೆ ಮತ್ತು ಬಲ ವರ್ಧನೆ ಮತ್ತು ಕೌಶಲ್ಯ ಕ್ಷೇತ್ರದಲ್ಲಿ ಅದರ ಪ್ರಮುಖ ಸಾಮರ್ಥ್ಯದ ಜೊತೆಗೆ ಎನ್ಐಇಎಲ್ಐಟಿಯ ಶೈಕ್ಷಣಿಕ ಆಯಾಮವನ್ನು ಇದು ಚಿತ್ರಿಸುತ್ತದೆ ಎಂದರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಂತದಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಕೌಶಲ್ಯ ವಲಯದಲ್ಲಿ ಈ ಅಂತರರಾಷ್ಟ್ರೀಯ ಸಮ್ಮೇಳನ ಪಾಲುದಾರರಲ್ಲಿ ಸಹಭಾಗಿತ್ವವನ್ನು ಇದು ಬಿತ್ತಲಿದೆ. ಸಂವಾದಗೋಷ್ಠಿ ಸಮಯದಲ್ಲಿ ಭಾರತ ಮತ್ತು ವಿದೇಶಗಳ ಖ್ಯಾತ ಸಂವಾದಕರು ಪ್ರಸ್ತುತಪಡಿಸಿದ ಒಳನೋಟಗಳು, ಭಾರತವನ್ನು ವಿಶ್ವದ ಕೌಶಲ್ಯ ವಲಯದ ಸಂಪನ್ಮೂಲವನ್ನು ನಿರ್ಮಿಸುವ ಸಾಧನೆಗೆ ಕೊಡುಗೆ ನೀಡುವ ಮೂಲಕ ಅಲ್ಲಿ ಭವಿಷ್ಯದ ಜಾಗತಿಕ ಕಾರ್ಯಪಡೆಯನ್ನು ಸಜ್ಜುಗೊಳಿಸಲು ನೀಲನಕ್ಷೆ ರಚಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಸಮ್ಮೇಳನದಲ್ಲಿ 60 ಲೇಖಕರು ಕೃತಕ ಬುದ್ದಿಮತ್ತೆ, ಮಿಷಿನ್ ಲರ್ನಿಂಗ್, ಬಿಗ್ ಡಾಟಾ, ದತ್ತಾಂಶ ವಿಶ್ಲೇಷಣೆ, ಸೈಬರ್ ಭದ್ರತೆ ಮತ್ತು ವಿಧಿ ವಿಜ್ಞಾನ, ಸಂಪರ್ಕ ಮತ್ತು ಮೊಬೈಲ್ ಭದ್ರತೆ, ಅಡ್ವಾನ್ಸ್ ಕಂಪ್ಯೂಟಿಂಗ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ವಿಎಲ್ಎಸ್ಐ ಮತ್ತು ಸೆಮಿಕಂಡಕ್ಟರ್ಸ್, ವಿದ್ಯುನ್ಮಾನ ವ್ಯವಸ್ಥೆ, ಐಒಟಿ, ಎಡ್ಜ್ ಎಐ. ದಿವ್ಯಾಂಗರಿಗೆ ಸಹಾಯ ಮಾಡುವ [ವಿಶೇಷ ಚೇತನರು] ತಂತ್ರಜ್ಞಾನ, ಬ್ಲಾಕ್ ಚೈನ್ ಮತ್ತು ಸಾಪ್ಟ್ ವೇರ್ ಟೆಕ್ನಾಲಜಿ, ಭವಿಷ್ಯದ ಡಿಜಿಟಲ್ ತಂತ್ರಜ್ಞಾನ/ಜೈವಿಕ ತಂತ್ರಜ್ಞಾನ, ಜಾಗತಿಕ ಭವಿಷ್ಯದ ಕಾರ್ಯಪಡೆಯನ್ನು ಸನ್ನದ್ಧಗೊಳಿಸಲು ಡಿಜಿಟಲ್ ಕೌಶಲ್ಯದ ಕಾರ್ಯತಂತ್ರ ಕುರಿತ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.

ಎರಡು ದಿನಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕ್ಯಾಲಿಕಟ್ ಎನ್ಐಇಎಲ್ಐಟಿ ಕಾರ್ಯನಿರ್ವಾಹಕ ನಿರ್ದೇಶಕ  ಡಾ. ಎಂ.ಪಿ. ಪಿಳ್ಳೈ, ಗ್ವಾಲಿಯರ್ ನ ಎಬಿವಿ-ಐಐಐಟಿಎಂ ನ ನಿರ್ದೇಶಕ ಪ್ರೊ.ಎಸ್.ಎನ್. ಸಿಂಗ್, ಮೇಲ್ಬರ್ನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ರಾಜ್ ಕುಮಾರ್ ಭುಯ್ಯ, ಯುಎಇ ತವಾನ್ಝುಮ್  ಸಲಹಾ ಮಂಡಳಿಯ ಕಾರ್ಯಕಾರಿ ನಿರ್ದೇಶಕರಾದ ಡಾ. ಯೆಹ್ಯಾ ಅಲ್ ಮರ್ಜೂಖಿ, ಎಫ್.ಸಿ.ಸಿ.ಐ ಅಧ್ಯಕ್ಷ ಡಾ. ಡೆನ್ನಿಸ್ ಹು, ತೈವಾನ್ ನ ಡಾ. ಯಮ್ನುಮ್ ಜಯಂತ್ ಸಿಂಗ್ ಅವರು ತಮ್ಮ ಒಳನೋಟವನ್ನು ಪ್ರಸ್ತುತಪಡಿಸಿದರು. ಕೌಶಲ್ಯ+ಜ್ಞಾನ+ತಂತ್ರಜ್ಞಾನದ ಸಂಯೋಜನೆಯ ಬಗ್ಗೆ ಪ್ರತಿಪಾದಿಸಿದರು.

ಎನ್ಐಇಎಲ್ಐಟಿ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ [ಮೆರಿಟ್ ವೈ] ಸಚಿವಾಲಯದ ಸ್ವಾಯತ್ತ ವೈಜ್ಞಾನಿಕ ಸಂಸ್ಥೆ ಮತ್ತು ಭಾರತದಾದ್ಯಂತ ಯುವ ಸಮೂಹದಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯಾಭಿವೃದ್ದಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎನ್ಐಇಎಲ್ಐಟಿ ಹಲವಾರು ಹೊಸ ಕ್ಯಾಂಪಸ್ ಗಳನ್ನು ಒಳಗೊಂಡಿದ್ದು, ಇದು ಸಂಸ್ಥೆಗೆ ಗರಿ ಮೂಡಿಸಿದಂತಾಗಿದೆ ಮತ್ತು ವರ್ಚುವಲ್ ಅಕಾಡೆಮಿ ಆರಂಭಿಸುವ ಮೂಲಕ ಇದನ್ನು ಮತ್ತಷ್ಟು ಉನ್ನತೀಕರಣಗೊಳಿಸಲಾಗಿದೆ. ಎನ್ಐಇಎಲ್ಐಟಿ ಪ್ಯಾನ್ ಇಂಡಿಯಾದ ಭಾಗವಾಗಿದ್ದು, 47 ಸ್ವಂತ ಕೇಂದ್ರಗಳನ್ನು ಹೊಂದಿವೆ ಮತ್ತು ಸುಮಾರು 5000 ತರಬೇತುದಾರರು/ಸೌಲಭ್ಯ ಪಾಲುದಾರರನ್ನು ಇದು ಒಳಗೊಂಡಿದೆ.

ಸಮಾಜವನ್ನು ಸಬಲೀಕರಣಗೊಳಿಸಲು ಎನ್ಐಇಎಲ್ಐಟಿ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾದ ಸಂಪರ್ಕ ವಲಯದಲ್ಲಿ ತರಬೇತಿ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದೆ. ಎನ್ಐಇಎಲ್ಐಟಿ ಬ್ಲಾಕ್ ಚೈನ್, ರೊಬೊಟಿಕ್ಸ್, ಕೃತಕ ಬುದ್ದಿಮತ್ತೆ, ಮೊಬೈಲ್ ಅಪ್ಲಕೇಶನ್ ಡವಲಪ್ಮೆಂಟ್, ಕ್ಲೌಡ್ ಕಂಪ್ಯೂಟಿಂಗ್, ಐಒಟಿ, ಇ-ತ್ಯಾಜ್ಯ, ಸೈಬರ್ ಭದ್ರತೆ, ಮೊಬೈಲ್ ಹ್ಯಾಂಡ್ ಸೆಟ್ ವಿನ್ಯಾಸ ಮತ್ತಿತರ ವಲಯಗಳಲ್ಲಿ ತರಬೇತಿ ಮೂಲಕ ಆಂತರಿಕ ಸಾಮರ್ಥ್ಯ ಹೆಚ್ಚಿಸಿ ತರಬೇತುದಾರರಿಗೆ ತರಬೇತಿ ನೀಡುವ ಕಾರ್ಯದಲ್ಲಿ ನಿರತವಾಗಿದೆ. ಇದಲ್ಲದೇ ಎನ್ಐಇಎಲ್ಐಟಿ ಐಬಿಎಂ, ಮೈಕ್ರೋಸಾಫ್ಟ್ ಮತ್ತಿತರ ಸಂಸ್ಥೆಗಳ ಜೊತೆ ಸಹಭಾಗಿತ್ವ ಹೊಂದಿದೆ. ನಗರ ಮತ್ತು ಗ್ರಾಮೀಣ ಭಾರತದಲ್ಲಿ ಯುವ ಸಮೂಹವನ್ನು ವಿಶೇಷವಾಗಿ ಸಬಲೀಕರಣಗೊಳಿಸುವ ಮತ್ತು ಕೌಶಲ್ಯ ವಲಯದ ಕಾರ್ಯತಂತ್ರದ ಜವಾಬ್ದಾರಿಯನ್ನು ಇದು ನಿಭಾಯಿಸುತ್ತಿದೆ.

*****


(Release ID: 1898400) Visitor Counter : 143