ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದು ಹೈದರಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ 74 ಆರ್. ಆರ್. ಐಪಿಎಸ್ ತಂಡದ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು
ಶ್ರೀ ಅಮಿತ್ ಶಾ ಅವರು ರಾಷ್ಟ್ರದ ಆಂತರಿಕ ಭದ್ರತೆಗಾಗಿ ಸರ್ವೋಚ್ಚ ಬಲಿದಾನ ಮಾಡಿದ 36,000 ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು
ಐಪಿಎಸ್ ನ ಮಹಾನ್ ಸಂಪ್ರದಾಯಕ್ಕೆ ಸೇರಿದ 74 ಆರ್.ಆರ್ ತಂಡದ ಅಧಿಕಾರಿ ತರಬೇತಿದಾರರನ್ನು ಅಮೃತ ಕಾಲದ ತಂಡ ಎಂದು ಕರೆಯಲಾಗುತ್ತದೆ, ತರಬೇತಿಯ ನಂತರ ಈ ತಂಡ ದೇಶದ ಮುಂದೆ ಹೊರಹೊಮ್ಮುವ ಪ್ರತಿಯೊಂದು ಸವಾಲನ್ನು ಎದುರಿಸಲು ಸಮರ್ಥ, ಸಮರ್ಪಿತವಾಗಿ ಸಜ್ಜುಗೊಂಡಿರುತ್ತದೆ
ಅಖಿಲ ಭಾರತ ಸೇವೆಗಳನ್ನು ಪ್ರಾರಂಭಿಸುವಾಗ, ಸರ್ದಾರ್ ಪಟೇಲ್ ಅವರು ಒಕ್ಕೂಟ ಸಂವಿಧಾನದ ಅಡಿಯಲ್ಲಿ ಭಾರತವನ್ನು ಅಖಂಡವಾಗಿ ಉಳಿಸಿಕೊಳ್ಳುವುದು ಅಖಿಲ ಭಾರತ ಸೇವೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದ್ದರು, ತರಬೇತಿ ನಿರತ ಅಧಿಕಾರಿಗಳು ಈ ವಾಕ್ಯವನ್ನು ತಮ್ಮ ಧ್ಯೇಯವಾಗಿಸಿಕೊಳ್ಳಬೇಕು
ಸ್ವಾತಂತ್ರ್ಯಾನಂತರದ 75 ವರ್ಷಗಳತ್ತ ಹಿಂತಿರುಗಿ ನೋಡಿದರೆ, ಇಂದು ಭಾರತದ ಪರಿಸ್ಥಿತಿ ಸ್ಥಳೀಯತೆದಿಂದ ಜಾಗತಿಕ ಮತ್ತು ಹಿಂಸಾತ್ಮಕತೆಯಿಂದ ರೋಮಾಂಚಕವಾಗಿ ಬದಲಾಗಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದ ಸವಾಲುಗಳನ್ನು ಎದುರಿಸಲು 'ಪೊಲೀಸ್ ತಂತ್ರಜ್ಞಾನ ಅಭಿಯಾನ'ವನ್ನು ಸ್ಥಾಪಿಸಿದ್ದಾರೆ, ಇದು ಕಾನ್ಸ್ ಟೇಬಲ್ ನಿಂದ ಹಿಡಿದು ಡಿಜಿಪಿವರೆಗಿನ ಇಡೀ ಪೊಲೀಸ್ ವ್ಯವಸ್ಥೆಯನ್ನು ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಮರ್ಥಗೊಳಿಸುವುದಲ್ಲದೆ ಅವರನ್ನು ತಂತ್ರಜ್ಞಾನ ಪ್ರಿಯರನ್ನಾಗಿ ಮಾಡುತ್ತದೆ
ಜಾಗೃತಿ, ಸನ್ನದ್ಧತೆ ಮತ್ತು ಜಾರಿಯ ಮೂರು ಮಂತ್ರಗಳ ಆಧಾರದ ಮೇಲೆ, ತಂತ್ರಜ್ಞಾನ ಅಭಿಯಾನ ಮುಂದೆ ಸಾಗಲಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ದೇಶಾದ್ಯಂತ ಭಯೋತ್ಪಾದನೆಯ ಘಟನೆಗಳು ಕಡಿಮೆಯಾಗಲು ಮುಖ್ಯ ಕಾರಣ, ಭಯೋತ್ಪಾದನೆಯ ವಿರುದ್ಧ 'ಶೂನ್ಯ ಸಹಿಷ್ಣುತೆ'ಯ ನೀತಿ, ಭಯೋತ್ಪಾದನಾ ನಿಗ್ರಹ ಕಾನೂನುಗಳ ಬಲವಾದ ಚೌಕಟ್ಟು, ಎಲ್ಲಾ ಸಂಸ್ಥೆಗಳ ಸಬಲೀಕರಣ ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿ
ಭಾರತದಲ್ಲಿ ಇಂಟರ್ ಪೋಲ್ ಮಹಾಧಿವೇಶನ ಹಾಗೂ ಭಯೋತ್ಪಾದನೆಗೆ ಹಣ ಸಲ್ಲ ಎಂಬ ಭಯೋತ್ಪಾದನೆ ಮತ್ತು ಹಣಕಾಸು ಕ್ಷೇತ್ರದಲ್ಲಿನ ಭಾರತದ ನಾಯಕತ್ವವು ನಮ್ಮ ಭದ್ರತಾ ಸಂಸ್ಥೆಗಳ ಜಾಗತಿಕ ಸ್ವೀಕಾರವನ್ನು ಸಂಕೇತಿಸುತ್ತದೆ
ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಭೇದ್ಯ ಆಂತರಿಕ ಭದ್ರತೆ ಇಲ್ಲದೆ ಯಾವುದೇ ರಾಷ್ಟ್ರವು ಶ್ರೇಷ್ಠವಾಗಲು ಸಾಧ್ಯವಿಲ್ಲ
ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿಯ ಹೊಸ ಯುಗ ಇಂದು ಪ್ರಾರಂಭವಾಗಿದೆ
ಕೇಂದ್ರ ಸಂಸ್ಥೆಗಳು ಮತ್ತು ದೇಶದ ಎಲ್ಲಾ ರಾಜ್ಯಗಳ ಪೊಲೀಸರು ಒಂದೇ ದಿನದಲ್ಲಿ ಯಶಸ್ವಿ ಕಾರ್ಯಾಚರಣೆಯ ಮೂಲಕ ಪಿಎಫ್ಐನಂತಹ ಸಂಘಟನೆಯನ್ನು ನಿಷೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದು ನಮ್ಮ ಪ್ರಜಾಪ್ರಭುತ್ವದ ಪ್ರಬುದ್ಧತೆ ಮತ್ತು ಶಕ್ತಿಯನ್ನು ತೋರಿಸುತ್ತದೆ
ಭದ್ರತಾ ಸನ್ನಿವೇಶವು ಭೌಗೋಳಿಕತೆಯಿಂದ ವಿಷಯಾಧಾರಿತವಾಗಿ ಬದಲಾಗುತ್ತಿದೆ, ಈಗ ಏಕ ಆಯಾಮದ ಪೊಲೀಸ್ ವ್ಯವಸ್ಥೆ ಬದಲಿಗೆ, ಬಹು ಆಯಾಮದ ಪೊಲೀಸ್ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ
ಪೊಲೀಸ್ ಪಡೆ ಪ್ರವೇಶಾರ್ಹವಾಗಿರಬೇಕು, ಉತ್ತರದಾಯಿ ಮತ್ತು ಸಂಪರ್ಕಿಸುವಂತಿರಬೇಕು
ಸ್ಥಳೀಯ ಭಾಷೆ, ಭೌಗೋಳಿಕತೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡ ನಂತರವೇ ಪೊಲೀಸ್ ಪಡೆಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಬೇಕು
ಸಂವಿಧಾನದ ಆತ್ಮವೆಂದರೆ ನಾಗರಿಕರು ಮತ್ತು ಅವರ ಹಕ್ಕುಗಳಾಗಿದ್ದು, ಪೊಲೀಸ್ ಪಡೆ ಸಂವಿಧಾನ ಮತ್ತು ಕಾನೂನಿನ ಎಲ್ಲಾ ಷರತ್ತುಗಳನ್ನು ವ್ಯಾಖ್ಯಾನಿಸಬೇಕು
Posted On:
11 FEB 2023 4:06PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದು ಹೈದರಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ 74 ಆರ್ ಆರ್ ಐಪಿಎಸ್ ತಂಡದ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಶ್ರೀ ಅಮಿತ್ ಶಾ ಅವರು ಹುತಾತ್ಮರ ಸ್ಮಾರಕದಲ್ಲಿ ರಾಷ್ಟ್ರದ ಆಂತರಿಕ ಭದ್ರತೆಗಾಗಿ ಸರ್ವೋಚ್ಚ ಬಲಿದಾನ ಮಾಡಿದ 36,000 ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು. ಐಪಿಎಸ್ ಪ್ರೊಬೇಷನರಿಗಳ 74 ಆರ್ ಆರ್ ತಂಡದ ನಿರ್ಗಮನ ಪಥ ಸಂಚಲನದಲ್ಲಿ ತೆಲಂಗಾಣ ರಾಜ್ಯಪಾಲರಾದ ಶ್ರೀಮತಿ ತಮಿಳಿಸೈ ಸೌಂದರರಾಜನ್, ಅಕಾಡೆಮಿಯ ನಿರ್ದೇಶಕ ಶ್ರೀ ಎ.ಎಸ್.ರಾಜನ್ ಮತ್ತು ಹಲವಾರು ಗಣ್ಯರು ಭಾಗವಹಿಸಿದ್ದರು.
ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು, ಐಪಿಎಸ್ ನ ಶ್ರೇಷ್ಠ ಸಂಪ್ರದಾಯಕ್ಕೆ ಸೇರುವ ಮೂಲಕ, 74 ಆರ್ ಆರ್ ತಂಡದ ತರಬೇತಿನಿರತ ಅಧಿಕಾರಿಗಳನ್ನು ಅಮೃತ ಕಾಲದ ತಂಡ ಎಂದು ಕರೆಯಲಾಗುವುದು ಎಂದು ಹೇಳಿದರು. ತರಬೇತಿಯ ನಂತರ ಈ ತಂಡ ದೇಶದ ಮುಂದೆ ಹೊರಹೊಮ್ಮುವ ಪ್ರತಿಯೊಂದು ಸವಾಲನ್ನು ಎದುರಿಸಲು ಸಮರ್ಥ, ಸಮರ್ಪಿತ ಮತ್ತು ಸಜ್ಜಾಗಿರುತ್ತದೆ. ನಮ್ಮ ಸ್ವಾತಂತ್ರ್ಯದ 75 ವರ್ಷಗಳ ಪರಾಕಾಷ್ಠೆಯೊಂದಿಗೆ, ಈ ತಂಡ ದೇಶದ ಆಂತರಿಕ ಭದ್ರತೆಯನ್ನು ರಕ್ಷಿಸಲು ಮುನ್ನಡೆಯುತ್ತದೆ, ಇದು ಬಹಳ ಹೆಮ್ಮೆಯ ವಿಷಯವಾಗಿದೆ. ಕಳೆದ ಏಳು ದಶಕಗಳಲ್ಲಿ ದೇಶವು ಭದ್ರತಾ ಕ್ಷೇತ್ರದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದು, ಅನೇಕ ಸವಾಲುಗಳನ್ನು ಎದುರಿಸಿದೆ ಮತ್ತು ಈ ಸವಾಲುಗಳನ್ನು ಎದುರಿಸುವಾಗ, 36,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪರಮೋಚ್ಚ ಬಲಿದಾನ ಮಾಡಿದ್ದಾರೆ ಎಂದು ಅವರು ಹೇಳಿದರು. ಸ್ವಾತಂತ್ರ್ಯಾನಂತರದ 75 ವರ್ಷಗಳತ್ತ ಹಿಂತಿರುಗಿ ನೋಡಿದರೆ, ಇಂದು ಭಾರತದ ಪರಿಸ್ಥಿತಿ ಸ್ಥಳೀಯತೆಯಿಂದ ಜಾಗತಿಕವಾಗಿ ಮತ್ತು ಹಿಂಸಾತ್ಮಕತೆಯಿಂದ ರೋಮಾಂಚಕವಾಗಿ ಬದಲಾಗಿದೆ ಎಂದು ಶ್ರೀ ಶಾ ಹೇಳಿದರು. ಈ ಮಹಾನ್ ರಾಷ್ಟ್ರದ ಸ್ವಾತಂತ್ರ್ಯಾ ನಂತರ, ಅಖಿಲ ಭಾರತ ಸೇವೆಗಳನ್ನು ಪ್ರಾರಂಭಿಸುವಾಗ, ಸರ್ದಾರ್ ಪಟೇಲ್ ಅವರು ಒಕ್ಕೂಟ ಸಂವಿಧಾನದ ಅಡಿಯಲ್ಲಿ ಭಾರತವನ್ನು ಅಖಂಡವಾಗಿ ಉಳಿಸಿಕೊಳ್ಳುವುದು ಅಖಿಲ ಭಾರತೀಯ ಸೇವೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದ್ದರು ಮತ್ತು ತರಬೇತಿ ಪಡೆದ ಅಧಿಕಾರಿಗಳು ಈ ವಾಕ್ಯವನ್ನು ತಮ್ಮ ಧ್ಯೇಯವಾಕ್ಯವನ್ನಾಗಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಕಾಲೇಜನ್ನು ಸ್ಥಾಪಿಸುವ ಸಮಯದಲ್ಲಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ಕಾಲೇಜು ಭಾರತದಲ್ಲಿಯೇ ಮೊಟ್ಟ ಮೊದಲನೆಯದಾಗಿತ್ತು ಮತ್ತು ಈ ಹಿಂದೆ ಈ ರೀತಿಯ ಕಾಲೇಜಿನ ಯಾವುದೇ ಪೂರ್ವನಿದರ್ಶನ ಇರಲಿಲ್ಲ ಆದರೂ ಇದು ಭವಿಷ್ಯದ ಪೀಳಿಗೆಗೆ ಸ್ಪೂರ್ತಿದಾಯಕ ಉದಾಹರಣೆಯಾಗಲಿದೆ ಎಂದು ಶ್ರೀ ಶಾ ಹೇಳಿದರು.
ಕಳೆದ 75 ವರ್ಷಗಳಲ್ಲಿ ಅಕಾಡೆಮಿಗಾಗಿ ದೇಶದ ಮೊದಲ ಕೇಂದ್ರ ಗೃಹ ಸಚಿವರು ನಿಗದಿಪಡಿಸಿದ ಗುರಿಗಳನ್ನು ಉತ್ತಮವಾಗಿ ಸಾಧಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಸ್ತುತ, ನಮ್ಮ ನೆರೆಯ ದೇಶಗಳಾದ ಭೂತಾನ್, ನೇಪಾಳ, ಮಾಲ್ಡೀವ್ಸ್ ಮತ್ತು ಮಾರಿಷಸ್ ನ 41 ಮಹಿಳಾ ಅಧಿಕಾರಿಗಳು ಮತ್ತು 29 ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಒಟ್ಟು 195 ತರಬೇತಿ ನಿರತ ಅಧಿಕಾರಿಗಳು ಅಕಾಡೆಮಿಯಲ್ಲಿ ಮೂಲ ಕೋರ್ಸ್ ತರಬೇತಿ ಪಡೆಯುತ್ತಿದ್ದಾರೆ. ಈ ತಂಡದ ಹೆಚ್ಚಿನ ಪ್ರಶಿಕ್ಷಣಾರ್ಥಿಗಳು ತಾಂತ್ರಿಕ ಕ್ಷೇತ್ರಗಳಲ್ಲಿ ತಮ್ಮ ಮೂಲ ಅರ್ಹತೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದ ಸವಾಲುಗಳನ್ನು ಎದುರಿಸಲು ಮತ್ತು ತಂತ್ರಜ್ಞಾನದ ದೃಷ್ಟಿಕೋನದಿಂದ ಜಾಗತಿಕ ತಾಂತ್ರಿಕ ಸವಾಲುಗಳಿಗೆ ಹೊಂದಿಕೊಳ್ಳಲು ನಮ್ಮ ದೇಶದ ಎಲ್ಲಾ ಪೊಲೀಸ್ ಸಂಸ್ಥೆಗಳನ್ನು ಸಶಕ್ತಗೊಳಿಸಲು 'ಪೊಲೀಸ್ ತಂತ್ರಜ್ಞಾನ ಅಭಿಯಾನ' ಸ್ಥಾಪಿಸಿದ್ದಾರೆ. ಈ ಅಭಿಯಾನ ಕಾನ್ಸ್ ಟೇಬಲ್ ನಿಂದ ಹಿಡಿದು ಡಿಜಿಪಿವರೆಗೆ ಇಡೀ ಪೊಲೀಸ್ ವ್ಯವಸ್ಥೆಯನ್ನು ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಮರ್ಥಗೊಳಿಸುವುದಲ್ಲದೆ, ಅವರನ್ನು ತಂತ್ರಜ್ಞಾನ ಪ್ರಿಯರನ್ನಾಗಿ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು. ಈ ಪೊಲೀಸ್ ತಂತ್ರಜ್ಞಾನ ಅಭಿಯಾನ ನಮ್ಮ ದೇಶದ ಎಲ್ಲಾ ಪೊಲೀಸ್ ಸಂಸ್ಥೆಗಳನ್ನು ತಂತ್ರಜ್ಞಾನದ ದೃಷ್ಟಿಕೋನದಿಂದ ಜಾಗತಿಕ ತಾಂತ್ರಿಕ ಸವಾಲುಗಳೊಂದಿಗೆ ಸಂಯೋಜನೆ ಮಾಡುತ್ತದೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2047 ರಲ್ಲಿ ನಾವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ, ದೇಶವು ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಅಗ್ರಸ್ಥಾನದಲ್ಲಿ ಹೊರಹೊಮ್ಮಬೇಕು ಎಂಬ ಗುರಿಯನ್ನು ದೇಶದ ಜನರಿಗೆ ನಿಗದಿಪಡಿಸಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಗುರಿಯನ್ನು ಪೂರೈಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಜವಾಬ್ದಾರಿ ಮತ್ತು ಕರ್ತವ್ಯ ಎರಡೂ ಆಗಿದೆ. ಇಲ್ಲಿ ಉಪಸ್ಥಿತರಿರುವ ಐಪಿಎಸ್ ತರಬೇತಿ ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ಇದೆ ಏಕೆಂದರೆ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಭೇದ್ಯ ಆಂತರಿಕ ಭದ್ರತೆ ಇಲ್ಲದೆ ಯಾವುದೇ ರಾಷ್ಟ್ರವು ಶ್ರೇಷ್ಠವಾಗಲು ಸಾಧ್ಯವಿಲ್ಲ. ದುರ್ಬಲ ನಾಗರಿಕರ ಹಕ್ಕುಗಳ ರಕ್ಷಣೆ, ಅವನ / ಅವಳ ಬಗ್ಗೆ ವ್ಯವಸ್ಥೆಯ ಸಂವೇದನೆ ಮತ್ತು ಎಲ್ಲಾ ಸವಾಲುಗಳನ್ನು ತಡೆದುಕೊಳ್ಳಬಲ್ಲ ಪೊಲೀಸ್ ವ್ಯವಸ್ಥೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ ಹಾಕಲು ಅತ್ಯಗತ್ಯ ಅಂಶಗಳಾಗಿವೆ ಎಂದು ಶ್ರೀ ಶಾ ಹೇಳಿದರು. 2025ರ ವೇಳೆಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಮತ್ತು 2047 ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಅವರು ಹೇಳಿದರು. ಈ ಗುರಿ ಸಾಧನೆ ಖಂಡಿತ ಸಾಧ್ಯವಿದೆ ಏಕೆಂದರೆ 2014 ರಲ್ಲಿ, ನಾವು ವಿಶ್ವದ ಆರ್ಥಿಕ ಶ್ರೇಯಾಂಕದಲ್ಲಿ 11 ನೇ ಸ್ಥಾನದಲ್ಲಿದ್ದೆವು ಮತ್ತು ಕೇವಲ ಎಂಟು ವರ್ಷಗಳ ಅವಧಿಯಲ್ಲಿ, ನಾವು ಐದನೇ ಸ್ಥಾನವನ್ನು ತಲುಪಲು ಸಾಧ್ಯವಾಯಿತು. ಮೋರ್ಗನ್ ಸ್ಟಾನ್ಲಿ ಅಂದಾಜಿನ ಪ್ರಕಾರ, 2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂದರು.
ನಮ್ಮ ದೇಶದ ಸಂವಿಧಾನ ಮತ್ತು ಅದರ ಸ್ಫೂರ್ತಿಯನ್ನು ಮೈಗೂಡಿಸಿಕೊಂಡ ನಂತರ ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಇಂದು ಉತ್ತೀರ್ಣರಾಗುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಮೂರು ರೀತಿಯ ವ್ಯವಸ್ಥೆಗಳು ಅತ್ಯಗತ್ಯ ಎಂಬುದನ್ನು ಅವರು ಮೆಚ್ಚಲೇಬೇಕು. ಮೊದಲನೆಯದು ಸಂಘಟಿತ ನಾಗರಿಕರು, ಅವರು ಒಮ್ಮೆ ಮತ ಚಲಾಯಿಸಿ ಐದು ವರ್ಷಗಳವರೆಗೆ ಆಡಳಿತ ವ್ಯವಸ್ಥೆಯನ್ನು ಆಯ್ಕೆ ಮಾಡುತ್ತಾರೆ, ಎರಡನೆಯದು ಐದು ವರ್ಷಗಳ ಅವಧಿಗೆ ನಾಗರಿಕರಿಂದ ಆಯ್ಕೆಯಾದ ಸರ್ಕಾರ ಮತ್ತು ಮೂರನೆಯದು 30 ರಿಂದ 35 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸುವ ಆಯ್ದ ಅಧಿಕಾರಶಾಹಿ. ಐದು ವರ್ಷಗಳಿಗೊಮ್ಮೆ ಮತ ಚಲಾಯಿಸುವ ಹಕ್ಕು ನಾಗರಿಕರಿಗಿದೆ, ಐದು ವರ್ಷಗಳ ಕಾಲ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಿದ ತರುವಾಯ ಜನಾದೇಶವನ್ನು ಪಡೆಯಲು ಸಾರ್ವಜನಿಕರ ಬಳಿಗೆ ಹೋಗಬೇಕಾಗುತ್ತದೆ, ಆದರೆ ಅಖಿಲ ಭಾರತ ಸೇವೆಗಳಲ್ಲಿ ಆಯ್ಕೆಯಾದ ಅಧಿಕಾರಿಗಳು 30-35 ವರ್ಷಗಳ ಕಾಲ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಮುಂದಿನ 25 ವರ್ಷಗಳು ದೇಶಕ್ಕೆ ನಿರ್ಣಾಯಕವಾಗಿದ್ದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಲ್ಪಿಸಿಕೊಂಡಿದ್ದ ಶ್ರೇಷ್ಠ ಭಾರತದ ಕನಸನ್ನು ನನಸಾಗಿಸಲು ಅವು ನಮಗೆ ಸಹಾಯ ಮಾಡುತ್ತವೆ ಎಂದು ಶ್ರೀ ಶಾ ಹೇಳಿದರು. ಮುಂದಿನ 25 ವರ್ಷಗಳಲ್ಲಿ, ಈ ಐಪಿಎಸ್ ತಂಡ ದೇಶದ ಆಂತರಿಕ ಭದ್ರತೆಗೆ ಜವಾಬ್ದಾರವಾಗಲಿದೆ ಮತ್ತು ಈ ಜವಾಬ್ದಾರಿಯ ಅರಿವು ಸದಾ ಈ ಅಧಿಕಾರಿಗಳ ಮನಸ್ಸು, ಕರ್ತವ್ಯ ಮತ್ತು ಉತ್ತರದಾಯಿತ್ವವನ್ನು ಪ್ರತಿಬಿಂಬಿಸಬೇಕು ಎಂದು ಅವರು ಹೇಳಿದರು. ಈ 25 ವರ್ಷಗಳು 'ಸಂಕಲ್ಪ ಸೇ ಸಿದ್ಧಿ'ಯ ವರ್ಷಗಳು ಎಂದರು.
ಎಂಟು ವರ್ಷಗಳ ಹಿಂದೆ ದೇಶದ ಆಂತರಿಕ ಭದ್ರತಾ ಸನ್ನಿವೇಶವನ್ನು ನಾವು ಮೌಲ್ಯಮಾಪನ ಮಾಡುವಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಗಳು, ಈಶಾನ್ಯದೊಳಗಿನ ಬಂಡಾಯ ಮತ್ತು ಎಡಪಂಥೀಯ ವಿಧ್ವಂಸಕತೆಯಿಂದ ಬಾಧಿತ ಪ್ರದೇಶಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ ನಮ್ಮ ಮುಂದಿದ್ದ ಮೂರು ಪ್ರಮುಖ ಸವಾಲುಗಳಾಗಿದ್ದವು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈಗ, 8 ವರ್ಷಗಳ ನಂತರ, ಈ ಮೂರು ಸವಾಲುಗಳನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ ಎಂದು ಅವರು ಹೇಳಿದರು. ಈಶಾನ್ಯದ ಅನೇಕ ವಿಧ್ವಂಸಕ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮತ್ತು ರಾಜ್ಯಗಳ ನಡುವಿನ ಗಡಿ ವಿವಾದಗಳನ್ನು ಬಗೆಹರಿಸುವ ಮೂಲಕ 8,000ಕ್ಕೂ ಹೆಚ್ಚು ಕೆಡೆಟ್ ಗಳನ್ನು ಮತ್ತೆ ಮುಖ್ಯವಾಹಿನಿಗೆ ತರಲಾಗಿದೆ, ಇಂದು ಅಭಿವೃದ್ಧಿಯ ಅಲೆ ಪ್ರಾರಂಭವಾಗಿದೆ ಮತ್ತು ಶಾಂತಿ ಸ್ಥಾಪನೆಯೊಂದಿಗೆ ಈಶಾನ್ಯದಲ್ಲಿ ಹೊಸ ಯುಗದ ಉದಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಭದ್ರತಾ ನಿರ್ವಾತವನ್ನು ತುಂಬುವ ಮೂಲಕ ಮತ್ತು ಎಡಪಂಥೀಯ ವಿಧ್ವಂಸಕ ಸಂಘಟನೆಗಳ ಉನ್ನತ ನಾಯಕತ್ವವನ್ನು ಹತ್ತಿಕ್ಕುವ ಮೂಲಕ, 2010 ರಲ್ಲಿ ಎಡಪಂಥೀಯ ವಿಧ್ವಂಸಕತೆ ವಲಯಗಳ ಅಡಿಯಲ್ಲಿದ್ದ 96 ಜಿಲ್ಲೆಗಳ ಸಂಖ್ಯೆ 2021 ರಲ್ಲಿ ಕೇವಲ 46 ಕ್ಕೆ ಇಳಿದಿದೆ. ಪಿಎಫ್ಐ ಅನ್ನು ನಿಷೇಧಿಸುವ ಮೂಲಕ ಭಾರತವು ಜಗತ್ತಿಗೆ ಯಶಸ್ವಿ ಉದಾಹರಣೆಯನ್ನು ತೋರಿಸಿದೆ ಎಂದು ಶ್ರೀ ಶಾ ಹೇಳಿದರು. ಕೇಂದ್ರ ಸಂಸ್ಥೆಗಳು ಮತ್ತು ದೇಶದ ಎಲ್ಲಾ ರಾಜ್ಯಗಳ ಪೊಲೀಸರು ಒಂದೇ ದಿನದಲ್ಲಿ ಯಶಸ್ವಿ ಕಾರ್ಯಾಚರಣೆಯ ಮೂಲಕ ಪಿಎಫ್ಐನಂತಹ ಸಂಘಟನೆಯನ್ನು ನಿಷೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ನಮ್ಮ ಪ್ರಜಾಪ್ರಭುತ್ವದ ಪ್ರಬುದ್ಧತೆ ಮತ್ತು ಶಕ್ತಿಯನ್ನು ತೋರಿಸುತ್ತದೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ದೇಶಾದ್ಯಂತ ಭಯೋತ್ಪಾದನೆಯ ಘಟನೆಗಳು ಕಡಿಮೆಯಾಗಲು ಮುಖ್ಯ ಕಾರಣವೆಂದರೆ ಭಯೋತ್ಪಾದನೆಯ ವಿರುದ್ಧ 'ಶೂನ್ಯ ಸಹಿಷ್ಣುತೆ' ನೀತಿ, ಭಯೋತ್ಪಾದನಾ ನಿಗ್ರಹ ಕಾನೂನುಗಳ ಬಲವಾದ ಚೌಕಟ್ಟು, ಎಲ್ಲಾ ಸಂಸ್ಥೆಗಳ ಸಬಲೀಕರಣ ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿ ಎಂದು ಶ್ರೀ ಅಮಿತ್ ಶಾ ಹೇಳಿದರು. ನಮ್ಮ ಸಂಸ್ಥೆಗಳ ಜಾಗತಿಕ ಭಾಗವಹಿಸುವಿಕೆಯೂ ವಿಸ್ತರಿಸುತ್ತಿದೆ. ಭಾರತದಲ್ಲಿ ಇಂಟರ್ ಪೋಲ್ ಮಹಾಧಿವೇಶನ ಮತ್ತು ಭಯೋತ್ಪಾದನೆಗೆ ಆರ್ಥಿಕ ಬೆಂಬಲ ಸಲ್ಲ ಎಂಬ ಸಮಾವೇಶದಲ್ಲಿನ ಭಯೋತ್ಪಾದನೆ ಹಾಗೂ ಹಣಕಾಸು ಕ್ಷೇತ್ರದಲ್ಲಿ ಭಾರತದ ನಾಯಕತ್ವವು ಜಾಗತಿಕವಾಗಿ ನಮ್ಮ ಭದ್ರತಾ ಸಂಸ್ಥೆಗಳ ಸ್ವೀಕಾರವನ್ನು ಸಂಕೇತಿಸುತ್ತದೆ. ಕಳೆದ 3 ವರ್ಷಗಳಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ, ವಿಧಿವಿಜ್ಞಾನ ಕ್ಷೇತ್ರದಲ್ಲಿ ತಜ್ಞ ಮಾನವ ಸಂಪನ್ಮೂಲ ಮತ್ತು ವ್ಯವಸ್ಥಾಪನಾ ಅಂತರವನ್ನು ತುಂಬಲು ಭಾರತ ಪ್ರಯತ್ನಿಸಿದೆ ಎಂದು ಅವರು ಹೇಳಿದರು. ತರಬೇತಿ ನಿರತ ಅಧಿಕಾರಿಗಳು ಅಕಾಡೆಮಿಯಿಂದ ಕ್ಷೇತ್ರಕ್ಕೆ ತೆರಳಿದಾಗ, ಅವರು ಐಸಿಜೆಎಸ್ ಮತ್ತು ಅಪರಾಧ ನ್ಯಾಯದ ಪ್ರಮುಖ ಆಧಾರ ಸ್ತಂಭಗಳಾದ ಇ-ನ್ಯಾಯಾಲಯಗಳು, ಇ-ಕಾರಾಗೃಹ, ಇ-ವಿಧಿ ವಿಜ್ಞಾನ, ಇ-ಪ್ರಾಸಿಕ್ಯೂಷನ್ ಮತ್ತು ಅಪರಾಧ ಮತ್ತು ಅಪರಾಧ ಪತ್ತೆ ಜಾಲ (ಸಿಸಿಟಿಎನ್) ನೊಂದಿಗೆ ಸಂಬಂಧ ಹೊಂದಿರುತ್ತಾರೆ ಮತ್ತು ಐಸಿಜೆಎಸ್ ನೊಂದಿಗೆ ಪೋಲಿಸಿಂಗ್ ಕೆಲಸವನ್ನು ಸಂಪರ್ಕಿಸಲು ಅನುಕೂಲ ಮಾಡಿಕೊಡುತ್ತಾರೆ. ಪ್ರಸ್ತುತ ಎನ್ಐಎ ದೇಶದ ಎಲ್ಲಾ ರಾಜ್ಯಗಳಲ್ಲಿ ವಿಸ್ತರಿಸುತ್ತಿದೆ ಮತ್ತು ಎನ್ಐಎ ಮತ್ತು ಎನ್.ಸಿ.ಬಿಯ ವಿಸ್ತರಣೆಯು ಅಂತಾರಾಷ್ಟ್ರೀಯ ಮಾದಕವಸ್ತುಗಳು ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಿಗಳನ್ನು ಭೇದಿಸಲು ಬಹಳ ಮುಖ್ಯವಾದ ಹೆಜ್ಜೆಯಾಗಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಯೋತ್ಪಾದನೆ, ಮಾದಕ ದ್ರವ್ಯಗಳು ಮತ್ತು ಆರ್ಥಿಕ ಅಪರಾಧಗಳಂತಹ ಅಪರಾಧಗಳ ರಾಷ್ಟ್ರೀಯ ದತ್ತಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೈಬೆರಳು ಗುರುತಿನ ಡೇಟಾಬೇಸ್ ತಯಾರಿಸಲು ಎನ್.ಎಎಫ್.ಐಎಸ್ (ರಾಷ್ಟ್ರೀಯ ಸ್ವಯಂಚಾಲಿತ ಕೈಬೆರಳು ಗುರುತಿಸುವ ವ್ಯವಸ್ಥೆ) ಅನ್ನು ಸಹ ಪ್ರಾರಂಭಿಸಲಾಗಿದೆ. ಭಾರತ ಸರ್ಕಾರವು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು (ಐ 4 ಸಿ) ಸ್ಥಾಪಿಸಿದೆ ಮತ್ತು ಸೈನಿಕರಿಗೆ ವಸತಿ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಯೋಜನೆಗಳನ್ನು ಪ್ರಾರಂಭಿಸಿದೆ ಮತ್ತು ಅವರು ತಮ್ಮ ಕುಟುಂಬಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದನ್ನು ಖಚಿತಪಡಿಸಿಕೊಳ್ಳಲು ಇತರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ ಎಂದರು.
ಪ್ರಸ್ತುತ ಭದ್ರತಾ ಸನ್ನಿವೇಶವು ಭೌಗೋಳಿಕತೆಯಿಂದ ವಿಷಯಾಧಾರಿತವಾಗಿ ಬದಲಾಗುತ್ತಿದೆ, ಈಗ ಏಕ ಆಯಾಮದ ಪೊಲೀಸ್ ವ್ಯವಸ್ಥೆ ಬದಲಿಗೆ ಬಹು ಆಯಾಮದ ಪೊಲೀಸ್ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈಶಾನ್ಯ ಎಡಪಂಥೀಯ ವಿಧ್ವಂಸಕತೆ, ಕೋಮು ಸೂಕ್ಷ್ಮ ತಾಣಗಳಂತಹ ಭೌಗೋಳಿಕ ಬೆದರಿಕೆಗಳ ಸ್ಥಾನದಲ್ಲಿ, ಈಗ ಸೈಬರ್ ಅಪರಾಧ, ದತ್ತಾಂಶದ ದುರುಪಯೋಗ, ತಪ್ಪು ಮಾಹಿತಿಯಂತಹ ವಿಷಯಾಧಾರಿತ ಬೆದರಿಕೆಗಳು ಹೊರಹೊಮ್ಮುತ್ತಿವೆ, ಅವುಗಳನ್ನು ದೃಢವಾಗಿ ಎದುರಿಸಬೇಕಾಗಿದೆ. ಈ ಮೊದಲು ಭಯೋತ್ಪಾದನೆ, ಉಗ್ರವಾದ ಮತ್ತು ದೈನಂದಿನ ಪೊಲೀಸ್ ವ್ಯವಸ್ಥೆಯ ಸವಾಲುಗಳಾಗಿದ್ದವು, ಆದರೆ ಈಗ ನಾವು ಭಯೋತ್ಪಾದಕ ಹಣಕಾಸು, ಮಾದಕದ್ರವ್ಯ ಭಯೋತ್ಪಾದನೆ, ನಾಲ್ಕನೇ ತಲೆಮಾರಿನ ಮಾಹಿತಿ ಸಮರ ಮುಂತಾದ ಬಹು ಆಯಾಮದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅವುಗಳನ್ನು ಎದುರಿಸಲು ನಮ್ಮ ಪೊಲೀಸ್ ಪಡೆಗಳನ್ನು ಸಜ್ಜುಗೊಳಿಸಬೇಕಾಗಿದೆ. ಸವಾಲುಗಳನ್ನು ಎದುರಿಸಲು ಮತ್ತು ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಅಧಿಕಾರಿಗಳು ಹೊಸ ವಿಧಾನವನ್ನು ರೂಪಿಸಬೇಕಾಗಿದೆ ಎಂದು ಶ್ರೀ ಶಾ ಹೇಳಿದರು. ದೇಶದ ಆರ್ಥಿಕ ಕೇಂದ್ರಗಳ ಭದ್ರತೆ, ಬಡವರ ಮಾನವ ಹಕ್ಕುಗಳ ರಕ್ಷಣೆ, ಸಾಕ್ಷ್ಯಾಧಾರಿತ ತನಿಖೆ, ಸಾಕ್ಷ್ಯಾಧಾರಿತ ವಿಧಿವಿಜ್ಞಾನ ಮತ್ತು ಮಾದಕವಸ್ತುಗಳು, ಸೈಬರ್ ಮತ್ತು ಹಣಕಾಸು ವಂಚನೆಯ ಭಯೋತ್ಪಾದಕ ಸಂಪರ್ಕಗಳನ್ನು ಭೇದಿಸುವತ್ತ ನಮ್ಮ ಗಮನ ಇರಬೇಕು ಎಂದರು.
ಶ್ರೀ ಅಮಿತ್ ಶಾ ಅವರು ಪೊಲೀಸ್ ಪಡೆ ಪ್ರವೇಶಾವಕಾಶ, ಉತ್ತರದಾಯಿತ್ವ ಮತ್ತು ಸಂಪರ್ಕಿಸುವಂತಿರಬೇಕು ಎಂದು ಹೇಳಿದರು. ಪ್ರವೇಶಾವಕಾಶ ಎಂದರೆ ಜ್ಞಾನ, ಕೌಶಲ್ಯಗಳು ಮತ್ತು ವಿಧಾನದ ನಡುವೆ ಸಮತೋಲನವನ್ನು ತರುವುದು. ನಮ್ಮೊಳಗೆ ಹೊಸ ಶಕ್ತಿ ಮತ್ತು ವಿಶ್ವಾಸವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಸಮೀಪಿಸುವ ಮೂಲಕ ನಾವು ಜವಾಬ್ದಾರಿಯುತ ಪೊಲೀಸ್ ವ್ಯವಸ್ಥೆಗೆ ಉದಾಹರಣೆ ನೀಡಬೇಕಾಗಿದೆ. ಸ್ಥಳೀಯ ಭಾಷೆ, ಭೌಗೋಳಿಕತೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡ ನಂತರವೇ ಪೊಲೀಸ್ ಪಡೆ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಸಂವಿಧಾನದ ಆತ್ಮವು ನಾಗರಿಕರು ಮತ್ತು ಅವರ ಹಕ್ಕುಗಳಾಗಿದ್ದು, ಪೊಲೀಸ್ ಪಡೆ ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ಮತ್ತು ಕಾನೂನಿನ ಎಲ್ಲಾ ಷರತ್ತುಗಳನ್ನು ವ್ಯಾಖ್ಯಾನಿಸಬೇಕು ಎಂದು ಅವರು ಹೇಳಿದರು. ತರಬೇತಿ ಪಡೆದ ಅಧಿಕಾರಿ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವ ಮೂಲಕ ಮುಂದುವರಿಯಬೇಕು. ಅಧಿಕಾರಿಗಳು ನಾಗರಿಕರ ವಿಶ್ವಾಸವನ್ನು ಗೆಲ್ಲಬೇಕು ಮತ್ತು ಅವರ ಮಾನವೀಯತೆಯನ್ನು ಉಳಿಸಿಕೊಳ್ಳಬೇಕು. ಒತ್ತಡದ ಸಂದರ್ಭಗಳಲ್ಲಿ ಭೌತಿಕ ನೆಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವುದು, ಕಲ್ಯಾಣ ಕ್ರಮಗಳನ್ನು ಸುಧಾರಿಸುವುದು, ಅವರೊಂದಿಗೆ ಸಂವೇದನಾಶೀಲರಾಗಿರುವುದು, ಪೊಲೀಸ್ ಸಾಮರ್ಥ್ಯ ವರ್ಧನೆಯನ್ನು ಹೆಚ್ಚಿಸುವುದು ಮತ್ತು ಅವರ ವಿಧಾನವು ಜಾಗತಿಕ ಮಾನದಂಡಗಳಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳುವುದು ಈ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಶ್ರೀ ಶಾ ಹೇಳಿದರು.
ತಾವು, ಪೊಲೀಸ್ ತಂತ್ರಜ್ಞಾನ ಅಭಿಯಾನಕ್ಕೆ ಮತ್ತೊಮ್ಮೆ ಒತ್ತು ನೀಡಲು ಬಯಸುವುದಾಗಿ ಹೇಳಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಜಾಗೃತಿ, ಸನ್ನದ್ಧತೆ ಮತ್ತು ಜಾರಿಯ ಮೂರು ಮಂತ್ರಗಳ ಆಧಾರದ ಮೇಲೆ, ತಂತ್ರಜ್ಞಾನ ಅಭಿಯಾನ ಮುಂದೆ ಸಾಗಲಿದೆ ಎಂದು ಹೇಳಿದರು. ಎಲ್ಲಾ ತರಬೇತಿ ಪಡೆದ ಅಧಿಕಾರಿಗಳು ಈ ಕಾರ್ಯಾಚರಣೆಯ ಭಾಗವಾಗುವಂತೆ ಮತ್ತು ಅದನ್ನು ಮತ್ತಷ್ಟು ಬಲಪಡಿಸುವಂತೆ ಅವರು ಮನವಿ ಮಾಡಿದರು. ಪೊಲೀಸ್ ಪಡೆಯ ಮುಖ್ಯಸ್ಥರಾಗಿ, ಅಧಿಕಾರಿಗಳು ಒತ್ತಡಕ್ಕೆ ಮಣಿಯಬಾರದು, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಖ್ಯಾತಿಯಿಂದ ದೂರವಿರಬೇಕು ಮತ್ತು ಅದೇ ವೇಳೆ ಕೆಳಮಟ್ಟದಲ್ಲಿ ಕುಳಿತಿರುವ ವ್ಯಕ್ತಿಯ ಹಕ್ಕುಗಳು ಮತ್ತು ಸಂವೇದನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದರು. ಎಲ್ಲಾ ಅಧಿಕಾರಿಗಳು ಐಪಿಎಸ್ ಆಗಿ ನಿರ್ಗಮಿಸುವುದಲ್ಲದೆ, ಮುಂಬರುವ 25 ವರ್ಷಗಳಲ್ಲಿ ನಮ್ಮ ದೇಶದ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಅಡಿಪಾಯ ಹಾಕುವ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು. ಆಂತರಿಕ ಭದ್ರತೆಯ ದೃಷ್ಟಿಕೋನದಿಂದ 'ಸಂಕಲ್ಪ ಸೆ ಸಿದ್ಧಿ'ಯ 'ಕರ್ತವ್ಯ ಪಥ'ದಲ್ಲಿ 75 ವರ್ಷದಿಂದ 100 ವರ್ಷಗಳವರೆಗಿನ ಪಯಣವನ್ನು ಮುನ್ನಡೆಸುವುದು ತರಬೇತಿ ಪಡೆದ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಶ್ರೇಷ್ಠ ಭಾರತದ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದಲ್ಲಿ ಒಟ್ಟಾಗಿ, ನಮ್ಮ ಗರಿಷ್ಠ ಕೊಡುಗೆಯನ್ನು ನಾವು ಖಚಿತಪಡಿಸಬೇಕು ಮತ್ತು ದೇಶದ ಏಕತೆ ಮತ್ತು ಸಮಗ್ರತೆಗೆ ಸದಾ ಸಮರ್ಪಿತರಾಗಿರಬೇಕು ಎಂದರು.
*****
(Release ID: 1898395)
Visitor Counter : 187