ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಮೀನುಗಾರಿಕೆ ಇಲಾಖೆಗೆ 2023-24ರ ಬಜೆಟ್ ನಲ್ಲಿನ ಹಂಚಿಕೆಯು 2022-23ರ ಹಣಕಾಸು ವರ್ಷದ ಬಜೆಟ್ ಗೆ ಹೋಲಿಸಿದರೆ ಒಟ್ಟಾರೆ ಶೇ.38.45ರಷ್ಟು ಹೆಚ್ಚಳವಾಗಿದೆ
ಈ ಹಂಚಿಕೆಯು ಇಲಾಖೆಗೆ ಇದುವರೆಗಿನ ಅತ್ಯಧಿಕ ವಾರ್ಷಿಕ ಆಯವ್ಯಯ ಬೆಂಬಲಗಳಲ್ಲಿ ಒಂದಾಗಿದೆ
Posted On:
05 FEB 2023 6:41PM by PIB Bengaluru
1. ಪ್ರಧಾನಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ (ಪಿಎಂ-ಎಂಕೆಎಸ್ಎಸ್.ವೈ) ಎಂಬ ಹೊಸ ಉಪ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವರು ಘೋಷಿಸಿದ್ದು : ಇದು ಪಿಎಂಎಂಎಸ್.ವೈ ಅಡಿಯಲ್ಲಿ ಕೇಂದ್ರ ವಲಯದ ಉಪ ಯೋಜನೆಯಾಗಿದೆ.
2. ಪಂಚಾಯತ್ ಮಟ್ಟದಲ್ಲಿ ಮೀನುಗಾರಿಕಾ ಸಹಕಾರಿ ಸಂಘಗಳು ಸೇರಿದಂತೆ ಪ್ರಾಥಮಿಕ ಸಹಕಾರ ಸಂಘಗಳ ರಚನೆಗೆ ಬಜೆಟ್ ಭಾಷಣದಲ್ಲಿ ಒತ್ತು ನೀಡಲಾಗಿದೆ.
3. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಮತ್ತು ಪೂರಕ ವಲಯಕ್ಕೆ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಲಾಗಿದೆ.
4. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಕೃಷಿ ವೇಗವರ್ಧಕ ನಿಧಿಯು ಮೀನುಗಾರಿಕೆ ಮೌಲ್ಯ ಸರಪಳಿಯ ಸುತ್ತಲಿನ ನಾವೀನ್ಯತೆಗಳನ್ನು ತೀವ್ರಗೊಳಿಸುತ್ತದೆ.
|
ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ, ಮೀನುಗಾರಿಕೆ ಇಲಾಖೆಗೆ 2022-23ರಲ್ಲಿ ಹಂಚಿಕೆ ಮಾಡಲಾಗಿದ್ದ 1624.18 ಕೋಟಿ ರೂ., ಮತ್ತು 2021-22ರ ಸಾಲಿನ 1360 ಕೋಟಿ ರೂ.ಗಳಿಗೆ ಪ್ರತಿಯಾಗಿ 2023-24ರ ಹಣಕಾಸು ವರ್ಷದಲ್ಲಿ 2248.77 ಕೋಟಿ ರೂ.ಗಳನ್ನು ಹಂಚಿಕೆ ಮಾಡುತ್ತಿವುದಾಗಿ ಘೋಷಿಸಿದ್ದಾರೆ. ಇದು 2022-23ರ ಹಣಕಾಸು ವರ್ಷದ ಬಜೆಟ್ ಗಿಂತ ಒಟ್ಟಾರೆ ಶೇ.38.45 ಹೆಚ್ಚಳವಾಗಿದ್ದು, ಇದು ಇಲಾಖೆಗೆ ಇದುವರೆಗಿನ ಅತ್ಯಧಿಕ ವಾರ್ಷಿಕ ಬಜೆಟ್ ಹಂಚಿಕೆಗಳಲ್ಲಿ ಒಂದಾಗಿದೆ.
ಜೊತೆಗೆ, ಮೀನುಗಾರರು, ಮೀನು ಮಾರಾಟಗಾರರು ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿರುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಗಳಿಕೆ ಮತ್ತು ಆದಾಯವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಪಿಎಂಎಂಎಸ್.ವೈ. ಅಡಿಯಲ್ಲಿ 6,000 ಕೋಟಿ ರೂ.ಗಳ ಹೂಡಿಕೆಯ ಗುರಿಯೊಂದಿಗೆ ಪ್ರಧಾನಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ (ಪಿಎಂ-ಎಂಕೆಎಸ್ಎಸ್.ವೈ): ಎಂಬ ಕೇಂದ್ರ ವಲಯದ ಉಪ ಯೋಜನೆಯನ್ನು ಅವರು ಘೋಷಿಸಿದ್ದಾರೆ. ಪಿಎಂ-ಎಂಕೆಎಸ್ಎಸ್.ವೈ. ಮೀನುಗಾರಿಕಾ ಕ್ಷೇತ್ರದ ಔಪಚಾರಿಕೀಕರಣವನ್ನು ತರಲು ಕೇಂದ್ರೀಕೃತ ಮಧ್ಯಸ್ಥಿಕೆಯನ್ನು ರೂಪಿಸುವ ಮತ್ತು ಇದರಲ್ಲಿ ಡಿಜಿಟಲ್ ಸೇರ್ಪಡೆ, ಬಂಡವಾಳ ಹೂಡಿಕೆ ಮತ್ತು ದುಡಿಯುವ ಬಂಡವಾಳಕ್ಕಾಗಿ ಸಾಂಸ್ಥಿಕ ಹಣಕಾಸು ಲಭ್ಯತೆಯನ್ನು ಸುಗಮಗೊಳಿಸುವ, ಜಲಚರ ಸಾಕಣೆ ಮತ್ತು ಮೀನುಗಾರಿಕೆಯಲ್ಲಿ ಅಪಾಯವನ್ನು ತಗ್ಗಿಸುವ ವ್ಯವಸ್ಥೆ ಮತ್ತು ಸಂಸ್ಥೆಗಳಿಗೆ ಪ್ರೋತ್ಸಾಹ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂಕ್ಷ್ಮ ಉದ್ಯಮಗಳಿಗೆ ಮೌಲ್ಯ-ಸರಪಳಿ ದಕ್ಷತೆಯ ಮೇಲೆ ಕೆಲಸ ಮಾಡಲು ಪ್ರೋತ್ಸಾಹಿಸುವ, ಪೂರೈಕೆ ಸರಪಳಿಗಳನ್ನು ಸ್ಥಾಪಿಸಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳನ್ನು ಉತ್ತೇಜಿಸುವುದರೊಂದಿಗೆ, ಗ್ರಾಹಕರಿಗೆ ಸುರಕ್ಷಿತ ಮೀನು ಉತ್ಪನ್ನಗಳನ್ನು ತಲುಪಿಸುವುದು, ಆ ಮೂಲಕ ದೇಶೀಯ ಮಾರುಕಟ್ಟೆಯ ವಿಸ್ತರಣೆ ಮತ್ತು ಈ ವಲಯದಲ್ಲಿ ಮಹಿಳೆಯರಿಗೆ ಉದ್ಯೋಗಗಳ ಸೃಷ್ಟಿ ಮತ್ತು ನಿರ್ವಹಣೆಗೆ ಪ್ರೋತ್ಸಾಹ ನೀಡುತ್ತದೆ.
ಪಂಚಾಯತ್ ಮಟ್ಟದಲ್ಲಿ ಮೀನುಗಾರಿಕೆ ಸಹಕಾರ ಸಂಘಗಳು ಸೇರಿದಂತೆ ಪ್ರಾಥಮಿಕ ಸಹಕಾರ ಸಂಘಗಳ ರಚನೆಗೆ ಬಜೆಟ್ ಭಾಷಣದಲ್ಲಿ ಒತ್ತು ನೀಡಲಾಗಿದೆ. ತಳಮಟ್ಟದಲ್ಲಿ ಸಹಕಾರ ಸಂಘಗಳ ರಚನೆಯು ಈ ವಲಯವನ್ನು ಔಪಚಾರಿಕಗೊಳಿಸುತ್ತದೆ ಮತ್ತು ಮೀನು ಉತ್ಪಾದನೆ ಮತ್ತು ಅದರ ಕೊಯ್ಲಿನ ನಂತರದ ಚಟುವಟಿಕೆಗಳನ್ನು ಸಂಘಟಿತ ರೀತಿಯಲ್ಲಿ ಕೈಗೊಳ್ಳಲು ಮೀನುಗಾರರು ಮತ್ತು ಮೀನು ಕೃಷಿಕರನ್ನು ಸಶಕ್ತಗೊಳಿಸುತ್ತದೆ. ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ಸಹಕಾರ ಸಚಿವಾಲಯಕ್ಕೆ ಮಾಡಲಾಗಿರುವ 900 ಕೋಟಿ ರೂ.ಗಳ ಹಂಚಿಕೆ, ಸಾಲಗಳು, ಟಿಡಿಎಸ್ ಮಿತಿಗಳು ಮತ್ತು ನಗದು ಠೇವಣಿಗಳಿಗೆ ಹೆಚ್ಚಿನ ಮಿತಿಗಳು ಮತ್ತು ರಾಷ್ಟ್ರೀಯ ಸಹಕಾರಿ ದತ್ತಾಂಶ ನಿರ್ಮಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಈ ವಲಯದಲ್ಲಿನ ಸಹಕಾರಿಗಳಿಗೆ ಕಾರ್ಯಾಚರಣೆ ಮತ್ತು ಹಣಕಾಸು ಲಭ್ಯತೆ ಮತ್ತು ಈ ವಲಯವು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೇಲಿನವುಗಳ ಜೊತೆಗೆ, ರಾಷ್ಟ್ರೀಯ ಸಹಕಾರಿ ರಫ್ತು ಸಂಘ, ಸಾವಯವ ಉತ್ಪನ್ನಗಳ ರಾಷ್ಟ್ರೀಯ ಸಹಕಾರ ಸಂಘ ಮತ್ತು ರಾಷ್ಟ್ರೀಯ ಮಟ್ಟದ ಬಹು-ರಾಜ್ಯ ಬೀಜ ಸಹಕಾರ ಸಂಘಗಳ ಸ್ಥಾಪನೆಯು ಬೀಜ ಮತ್ತು ಮಾರುಕಟ್ಟೆ ಕ್ಷೇತ್ರಗಳಲ್ಲಿ ಮೀನುಗಾರಿಕೆಯನ್ನು ಬೆಂಬಲಿಸುವ ನಿರೀಕ್ಷೆಯಿದೆ.
ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಮತ್ತು ಸಂಬಂಧಿತ ವಲಯಕ್ಕೆ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಲಾಗಿದೆ. ಇದು ಮೀನುಗಾರಿಕೆ ಕ್ಷೇತ್ರಕ್ಕೆ ಸಾಂಸ್ಥಿಕ ಹಣಕಾಸಿನ ಹರಿವನ್ನು ಗಣನೀಯವಾಗಿ ಸುಧಾರಿಸುತ್ತದೆ. ಸೀಗಡಿ ಆಹಾರಕ್ಕೆ ಅಗತ್ಯವಾದ ಕೆಲವು ಒಳಹರಿವುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ಘೋಷಣೆಯು ಆಮದು ವೆಚ್ಚ ಮತ್ತು ಉತ್ಪಾದನಾ ವೆಚ್ಚವನ್ನು ತಗ್ಗಿಸುತ್ತದೆ, ಇದರ ಪರಿಣಾಮವಾಗಿ ಜಲಚರ ಸಾಕಣೆ ರಫ್ತು ಹೆಚ್ಚಿಸುತ್ತದೆ ಮತ್ತು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೀನಿನ ಊಟದ ಮೇಲಿನ ಮೂಲ ಸೀಮಾ ಸುಂಕವನ್ನು ಶೇ.15 ರಿಂದ ಶೇ.5 ಕ್ಕೆ, ಕ್ರಿಲ್ ಊಟದ ಮೇಲೆ ಶೇ.15 ರಿಂದ ಶೇ.5 ಕ್ಕೆ, ಆಲ್ಗಲ್ ಪ್ರೈಮ್ (ಹಿಟ್ಟು) ಮೇಲೆ ಶೇ.30 ರಿಂದ ಶೇ.15 ಕ್ಕೆ, ಮೀನಿನ ಲಿಪಿಡ್ ಎಣ್ಣೆಯ ಮೇಲೆ ಶೇ.30 ರಿಂದ ಶೇ. 15 ಕ್ಕೆ ಮತ್ತು ಖನಿಜ ಮತ್ತು ಜೀವಸತ್ವ ಪೂರ್ವ ಮಿಶ್ರಣದ ಮೇಲೆ ಶೇ.15 ರಿಂದ ಶೇ.5 ಕ್ಕೆ ಇಳಿಸುವ ನಿರೀಕ್ಷೆಯಿದೆ. ಭಾರತೀಯ ಸೀಗಡಿಗಳ ರಫ್ತು ಸ್ಪರ್ಧಾತ್ಮಕತೆಯನ್ನು ಗಣನೀಯವಾಗಿ ಸುಧಾರಿಸುವುದು ಸೇರಿದಂತೆ ದೇಶೀಯ ಆಹಾರವನ್ನು ಉತ್ತೇಜಿಸುತ್ತದೆ.
ಕೃತಕ ಬುದ್ಧಿಮತ್ತೆಗಾಗಿ ಭಾರತದಲ್ಲಿ 3 ಉತ್ಕೃಷ್ಟತಾ ಕೇಂದ್ರಗಳ ಘೋಷಣೆಯು ಭಾರತದಲ್ಲಿ ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ ಮತ್ತು ಇದು ಮೀನು ಮಾರುಕಟ್ಟೆ ವ್ಯವಸ್ಥೆಗಳಲ್ಲಿ ಸುಧಾರಣೆಗೆ ಮತ್ತು ಪತ್ತೆಹಚ್ಚುವಿಕೆ ಮತ್ತು ಗುಣಮಟ್ಟಕ್ಕಾಗಿ ಬ್ಲಾಕ್-ಚೈನ್ ಆಧಾರಿತ ಪರಿಹಾರವನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ಮೌಲ್ಯ ಸಾಕ್ಷಾತ್ಕಾರವನ್ನು ಹೆಚ್ಚಿಸಲು ಹೆಚ್ಚಿನ ಅವಕಾಶವನ್ನು ನೀಡುತ್ತದೆ.
ಉದ್ದೇಶಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಕೃಷಿ ವೇಗವರ್ಧಕ ನಿಧಿಯು ಮೀನುಗಾರಿಕೆ ಮೌಲ್ಯ ಸರಪಳಿಯ ಸುತ್ತಲಿನ ನಾವೀನ್ಯತೆಗಳನ್ನು ತೀವ್ರಗೊಳಿಸುತ್ತದೆ. ಒಟ್ಟಾರೆಯಾಗಿ, 2023-24 ರ ಬಜೆಟ್ ಸಾಂಸ್ಥಿಕ ಸಾಲದ ವರ್ಧಿತ ಹರಿವು, ಅಪಾಯ ತಗ್ಗಿಸುವ ಸಾಧನಗಳನ್ನು ಹೆಚ್ಚಿಸಿ, ದೇಶೀಯ ಮತ್ತು ರಫ್ತು ಮಾರುಕಟ್ಟೆಗಳ ವಿಸ್ತರಣೆ ಮತ್ತು ಆಳಗೊಳಿಸುವಿಕೆಗೆ ಪ್ರೋತ್ಸಾಹ ಮತ್ತು ನಾವೀನ್ಯತೆಗಳ ವೇಗವರ್ಧನೆಯ ಮೂಲಕ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರದಲ್ಲಿ ತ್ವರಿತ ಬೆಳವಣಿಗೆಯ ಹೊಸ ಹಂತವನ್ನು ರೂಪಿಸಲು ಸಹಾಯ ಮಾಡುತ್ತದೆ.
ಭಾರತವು ವಿವಿಧ ಗಡಿಗಳಲ್ಲಿ ಮುನ್ನಡೆಯುತ್ತಿರುವಾಗ ಮತ್ತು ವಿವಿಧ ವಲಯಗಳಲ್ಲಿ ಜಾಗತಿಕ ವೇದಿಕೆಯಲ್ಲಿ ತನ್ನ ಇರುವಿಕೆ ಸಾಬೀತು ಮಾಡುತ್ತಿರುವಾಗ, ಭಾರತೀಯ ಮೀನುಗಾರಿಕಾ ಕ್ಷೇತ್ರವು ಅತ್ಯಂತ ಆರೋಗ್ಯಕರ ವೇಗದಲ್ಲಿ ಬೆಳೆಯುತ್ತಿದೆ. ಭಾರತವು ಈಗಾಗಲೇ 3 ನೇ ಅತಿದೊಡ್ಡ ಮೀನು ಉತ್ಪಾದಕ, 2 ನೇ ಅತಿದೊಡ್ಡ ಜಲಚರ ಉತ್ಪಾದಕ ಮತ್ತು ಮೀನು ಮತ್ತು ಮೀನುಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡುವ 4 ನೇ ಅತಿದೊಡ್ಡ ದೇಶವಾಗಿದೆ. ಇದು 2021-22ರ ಹಣಕಾಸು ವರ್ಷದಲ್ಲಿ ಶೇಕಡಾ 10.34 ರಷ್ಟು ಎರಡು-ಅಂಕಿಯ ವಾರ್ಷಿಕ ವೃದ್ಧಿ ದರವನ್ನು ಸಾಧಿಸಿದೆ ಮತ್ತು ದಾಖಲೆಯ 162.48 ಲಕ್ಷ ಟನ್ ಮೀನು ಉತ್ಪಾದನೆಯನ್ನು ತಲುಪಿದೆ. ಈ ವಲಯವು 28 ದಶಲಕ್ಷಕ್ಕೂ ಹೆಚ್ಚು ಜನರಿಗೆ ಅದರಲ್ಲೂ ಹೆಚ್ಚಾಗಿ ವಂಚಿತ ಮತ್ತು ದುರ್ಬಲ ಸಮುದಾಯಗಳಿಗೆ ಸುಸ್ಥಿರ ಜೀವನೋಪಾಯವನ್ನು ಒದಗಿಸುತ್ತದೆ ಮತ್ತು ಬಡವರು ಹಾಗೂ ದುರ್ಬಲರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಲ್ಲಿ ಸುಸ್ಥಿರ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಾಲ್ಕು ವರ್ಷಗಳ ಹಿಂದೆ, 2019 ರ ಫೆಬ್ರವರಿ 5 ರಂದು ಹಿಂದಿನ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಮೀನುಗಾರಿಕೆ ಇಲಾಖೆಯನ್ನು ಪ್ರತ್ಯೇಕಿಸಿ ರಚಿಸುವ ಮೂಲಕ ಮೀನುಗಾರಿಕೆ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ನೀಡಲಾಯಿತು. ಅದೇ ವೇಳೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್.ವೈ), ಮೀನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್ಐಡಿಎಫ್) ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಎಂಬ ಹಲವಾರು ದೂರದೃಷ್ಟಿಯ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಒಟ್ಟು 27500 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಪ್ರಾರಂಭಿಸಲಾಯಿತು. ಈ ವಲಯವು ಈಗ ಅಮೃತ ಕಾಲದ ಸಮಯದಲ್ಲಿ ಹೊಸ ಎತ್ತರವನ್ನು ಸಾಧಿಸಲು ಸಜ್ಜಾಗಿದೆ.
*****
(Release ID: 1896603)
Visitor Counter : 261