ಇಂಧನ ಸಚಿವಾಲಯ

​​​​​​​ಜಿ 20ರ ಭಾರತದ ಅಧ್ಯಕ್ಷತೆಯ  ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಇಂಧನ ಪರಿವರ್ತನೆ ಕಾರ್ಯ ಗುಂಪಿನ ಸಭೆಯಲ್ಲಿ ಎನ್ಟಿಪಿಸಿ 'ಇಂಗಾಲ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ' ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತು.

Posted On: 05 FEB 2023 6:24PM by PIB Bengaluru

 1. ಜಿ 20 ಭಾರತ ಅಧ್ಯಕ್ಷತೆಯ ಅಡಿಯಲ್ಲಿ ಅಯೋಜಿಸಲಾದ "ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (ಸಿಸಿಯುಎಸ್)- ತಂತ್ರಜ್ಞಾನ ಕಂದಕಗಳು ಮತ್ತು ಅಂತರರಾಷ್ಟ್ರೀಯ ಸಹಯೋಗ" ವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

2. ಇಂಧನ ಬಳಸುವಾಗ ಹೊರಸೂಸಲ್ಪಡುವ ಫ್ಲೂ ಗ್ಯಾಸ್ CO2 ನಿಂದ ಮೆಥೆನಾಲ್ ಸಂಶ್ಲೇಷಣೆಗೆ ಸಂಬಂಧಿಸಿದ ಎನ್ ಟಿಪಿಸಿಯ 3D-ಮಾದರಿಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

3. ಈ ಕಾರ್ಯಕ್ರಮವು ಕಡಿಮೆ ಇಂಗಾಲದ ಇಂಧನಗಳ ಸಂಸ್ಕರಣೆ, ಮಾರುಕಟ್ಟೆಗೆ ವಿತರಣೆ, ಮಾರಾಟದಂತಹ ಕಾರ್ಯಗಳನ್ನು ಕೈಗೊಳ್ಳುವ ಕೈಗಾರಿಕೆಗಳಿಗೆ  ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕೆಲಸ ಮಾಡಲು ಮತ್ತು ಜನರು ಹಾಗು  ಭೂಗ್ರಹಕ್ಕೆ  ಅನುಕೂಲವಾಗುವಂತಹ ಭವಿಷ್ಯದ ಹೆಜ್ಜೆಗಳನ್ನು ಇರಿಸಲು ಹೊಸ ಮಾರ್ಗಗಳನ್ನು ತೆರೆಯುವ ಸಾಧ್ಯತೆಯಿದೆ.

4. ಈ ಕಾರ್ಯಕ್ರಮಕ್ಕೆ  ವಿವಿಧ ದೇಶಗಳ 200 ಕ್ಕೂ ಹೆಚ್ಚು ಗಣ್ಯರು, ಭಾಷಣಕಾರರು, ಪ್ಯಾನೆಲಿಸ್ಟ್ ಮತ್ತು ಪ್ರತಿನಿಧಿಗಳಿಗೆ ಸಾಕ್ಷಿಯಾದರು.

ಭಾರತದ ಅತಿದೊಡ್ಡ ಸಮಗ್ರ ವಿದ್ಯುತ್ ಸೌಲಭ್ಯ ವ್ಯವಸ್ಥೆಯಾದ  (ಇಂಟಿಗ್ರೇಟೆಡ್ ಪವರ್ ಯುಟಿಲಿಟಿ) ಎನ್ಟಿಪಿಸಿ ಲಿಮಿಟೆಡ್ ಬೆಂಗಳೂರಿನಲ್ಲಿ ನಡೆದ ಮೊದಲ ಇಂಧನ ಪರಿವರ್ತನೆ ಕಾರ್ಯ ಗುಂಪು (ಇಟಿಡಬ್ಲ್ಯೂಜಿ) ಸಭೆಯಲ್ಲಿ 'ಇಂಗಾಲ ಸೆರೆಹಿಡಿಯುವಿಕೆ ಬಳಕೆ ಮತ್ತು ಸಂಗ್ರಹಣೆ (ಸಿಸಿಯುಎಸ್)' ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.

ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್, ಇಂಧನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್, ಎನ್ ಟಿಪಿಸಿ ಲಿಮಿಟೆಡ್ ನ ಸಿಎಂಡಿ ಶ್ರೀ ಗುರ್ ದೀಪ್ ಸಿಂಗ್, ಎನ್ ಟಿಪಿಸಿ ಲಿಮಿಟೆಡ್ ನ ಯೋಜನಾ ನಿರ್ದೇಶಕ ಶ್ರೀ ಉಜ್ವಲ್ ಕಾಂತಿ ಭಟ್ಟಾಚಾರ್ಯ ಅವರು, ನಿವ್ವಳ ಶೂನ್ಯ ಗುರಿಗೆ ಕಾರಣವಾಗುವ ಶುದ್ಧ ಇಂಧನ ಪರಿವರ್ತನೆಗೆ ಸಿಸಿಯುಎಸ್ ತಂತ್ರಜ್ಞಾನಗಳ ಮಹತ್ವವನ್ನು ಒತ್ತಿ ಹೇಳಿದರು. ಭಾರತವು ಕೈಗೆತ್ತಿಕೊಂಡು ಮುನ್ನಡೆಸುತ್ತಿರುವ ಹಲವಾರು ಪ್ರಮುಖ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಗ್ಗಿಸುವ ಕ್ರಮಗಳು ಮತ್ತು ಪ್ರಮುಖ ಹಸಿರು ಉಪಕ್ರಮಗಳ ಬಗ್ಗೆಯೂ  ಅವರು ಒತ್ತಿ ಹೇಳಿದರು.

ಕೇಂದ್ರ ಇಂಧನ ಮತ್ತು ಹೊಸ ಹಾಗು ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಶ್ರೀ ಆರ್.ಕೆ. ಸಿಂಗ್ ಅವರು 'ಇಂಗಾಲ ಸೆರೆಹಿಡಿಯುವಿಕೆ ಬಳಕೆ ಮತ್ತು ಶೇಖರಣೆ (ಸಿಸಿಯುಎಸ್) ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಎನ್ ಟಿಪಿಸಿ ಕೈಗೊಂಡ ಉಪಕ್ರಮಗಳ ಬಗ್ಗೆ ಚರ್ಚಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ 200 ಕ್ಕೂ ಹೆಚ್ಚು ಗಣ್ಯರು, ಭಾಷಣಕಾರರು, ಪ್ಯಾನೆಲಿಸ್ಟ್ ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು, ಇದರಲ್ಲಿ ಅವರು ಸಿಸಿಯುಎಸ್ ಗೆ ಸಂಬಂಧಿಸಿದ ತಮ್ಮ ಜ್ಞಾನ ಮತ್ತು ಅಧ್ಯಯನಗಳನ್ನು ಹಂಚಿಕೊಂಡರು.

ಜಿ 20 ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ಆಯೋಜಿಸಲಾದ "ಇಂಗಾಲ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (ಸಿಸಿಯುಎಸ್)- ತಂತ್ರಜ್ಞಾನ ಕಂದಕಗಳು ಮತ್ತು ಅಂತರರಾಷ್ಟ್ರೀಯ ಸಹಯೋಗ" ಕುರಿತ ಅಧ್ಯಯನ ವರದಿಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಹೆಚ್ಚುವರಿಯಾಗಿ, ಫ್ಲೂ ಗ್ಯಾಸ್ CO2 ನಿಂದ ಮೆಥೆನಾಲ್ ಸಂಶ್ಲೇಷಣೆಗೆ ಸಂಬಂಧಿಸಿದ  ಎನ್ ಟಿಪಿಸಿಯ ಪ್ರಮುಖ ಯೋಜನೆಯ 3 ಡಿ-ಮಾದರಿಯನ್ನು ಸಹ ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಈ ಸ್ಥಾವರವು ಪಳೆಯುಳಿಕೆ ಆಧಾರಿತ ವಿದ್ಯುತ್ ಸ್ಥಾವರದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಮತ್ತು ಅದನ್ನು ಸೆರೆಹಿಡಿದು ಉಪಯುಕ್ತ ಹೈಡ್ರೋಕಾರ್ಬನ್, ಅಂದರೆ ಮೆಥನಾಲ್ ಆಗಿ ಪರಿವರ್ತಿಸುತ್ತದೆ.

ಈ ಕಾರ್ಯಕ್ರಮವು ಕಡಿಮೆ ಇಂಗಾಲದ ಇಂಧನಗಳ ಸಂಸ್ಕರಣೆ, ಮಾರುಕಟ್ಟೆಗೆ ವಿತರಣೆ, ಮಾರಾಟದಂತಹ ಕಾರ್ಯಗಳನ್ನು ಕೈಗೊಳ್ಳುವ ಕೈಗಾರಿಕೆಗಳಿಗೆ  ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕೆಲಸ ಮಾಡಲು ಮತ್ತು ಜನರು ಹಾಗು  ಭೂಗ್ರಹಕ್ಕೆ  ಅನುಕೂಲವಾಗುವಂತಹ ಭವಿಷ್ಯದ ಹೆಜ್ಜೆಗಳನ್ನು ಇರಿಸಲು ಹೊಸ ಮಾರ್ಗಗಳನ್ನು ತೆರೆಯುವ ಸಾಧ್ಯತೆಯಿದೆ

*****



(Release ID: 1896599) Visitor Counter : 162