ಇಂಧನ ಸಚಿವಾಲಯ

ಭಾರತದ ಜಿ-20 ಅಧ್ಯಕ್ಷತೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ "ಶುದ್ಧ ಇಂಧನ ಪರಿವರ್ತನೆ" ಸಾಧಿಸಲು ಸಿಸಿಯುಎಸ್‌ ನ ಪ್ರಾಮುಖ್ಯತೆಯನ್ನು ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ 

Posted On: 05 FEB 2023 5:28PM by PIB Bengaluru
1.     ಶ್ರೀ ಆರ್. ಕೆ. ಸಿಂಗ್ ಅವರು 'ಇಂಗಾಲದ ಹಿಡಿದಿಟ್ಟುಕೊಳ್ಳುವಿಕೆ, ಬಳಕೆ ಮತ್ತು ಶೇಖರಣೆ (ಸಿಸಿಯುಎಸ್)‌ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು.
2.    ಭಾರತದ ಜಿ-20 ಅಧ್ಯಕ್ಷತೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ವಿಚಾರಸಂಕಿರಣ ನಡೆಯುತ್ತಿದೆ.
3.    ವಿಚಾರ ಸಂಕಿರಣವು "ಶುದ್ದ ಇಂಧನ ಪರಿವರ್ತನೆ" ಯನ್ನು ಸಾಧಿಸಲು ಮತ್ತು ನಂತರ ನಿವ್ವಳ ಶೂನ್ಯದ ಕಡೆಗೆ ಚಲಿಸಲು ಸಿಸಿಯುಎಸ್‌ ನ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
4.     ವಿಚಾರ ಸಂಕಿರಣದಲ್ಲಿ ವಿವಿಧ ದೇಶಗಳ ಉದ್ಯಮಗಳು, ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಭಾಗವಹಿಸುತ್ತಿದ್ದಾರೆ. 

ಎನ್‌ ಟಿ ಪಿ ಸಿಯ ಸಿಎಂಡಿ ಶ್ರೀ ಗುರುದೀಪ್ ಸಿಂಗ್ ಅವರು ಎನ್‌ ಟಿ ಪಿ ಸಿ ವಿಂಧ್ಯಾಚಲದಲ್ಲಿ ಸ್ಥಾಪಿಸಲಾದ 10 ಟಿಪಿಡಿ ಇಂಗಾಲದಿಂದ ಮೆಥನಾಲ್ ಪರಿವರ್ತನಾ ಘಟಕದ 3D ಕಾರ್ಯ ಮಾದರಿಯನ್ನು ಕುರಿತು ಕೇಂದ್ರ ಸಚಿವ ಶ್ರೀ ಆರ್‌ ಕೆ ಸಿಂಗ್ ಅವರಿಗೆ ವಿವರಿಸಿದರು.

 'ಇಂಗಾಲದ ಹಿಡಿದಿಟ್ಟುಕೊಳ್ಳುವಿಕೆ, ಬಳಕೆ ಮತ್ತು ಶೇಖರಣೆʼ (ಸಿಸಿಯುಎಸ್)‌ ಕುರಿತ ಅಂತರರಾಷ್ಟ್ರೀಯ ಸೆಮಿನಾರ್‌ ಉದ್ದೇಶಿಸಿ ಕೇಂದ್ರ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್‌ ಅವರು ಮಾತನಾಡಿದರು. ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಭಾರತದ ಜಿ 20 ಅಧ್ಯಕ್ಷತೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎನ್‌ಟಿಪಿಸಿ ಇದನ್ನು ಆಯೋಜಿಸಿದೆ.

ಎನ್‌ ಟಿ ಪಿ ಸಿಯ ಸಿಎಂಡಿ ಶ್ರೀ ಗುರುದೀಪ್ ಸಿಂಗ್ ಅವರು ಎನ್‌ ಟಿ ಪಿ ಸಿ ವಿಂಧ್ಯಾಚಲದಲ್ಲಿ ಸ್ಥಾಪಿಸಲಾದ 10 ಟಿಪಿಡಿ ಇಂಗಾಲದಿಂದ ಮೆಥನಾಲ್ ಪರಿವರ್ತನಾ ಘಟಕದ 3D ಕಾರ್ಯ ಮಾದರಿಯನ್ನು ಕುರಿತು ಕೇಂದ್ರ ಸಚಿವ ಶ್ರೀ ಆರ್‌ ಕೆ ಸಿಂಗ್ ಅವರಿಗೆ ವಿವರಿಸಿದರು.

ನೀತಿ ಆಯೋಗದ ಸದಸ್ಯ ಡಾ ವಿ.ಕೆ. ಸಾರಸ್ವತ್ ಅವರೊಂದಿಗೆ ಸಚಿವ ಶ್ರೀ ಆರ್.ಕೆ. ಸಿಂಗ್ ಅವರು ಎನ್‌ಟಿಪಿಸಿಯ ಸಿಸಿಯುಎಸ್ ಉಪಕ್ರಮಗಳಾದ ಇಂಗಾಲದಿಂದ 4ನೇ ಪೀಳಿಗೆಯ ಎಥೆನಾಲ್, ಯೂರಿಯಾ, ಕಾರ್ಬೊನೇಟೆಡ್ ಅಗ್ರಿಗೇಟ್ ಮುಂತಾದವುಗಳ ಬಗ್ಗೆ ಆಸಕ್ತಿಯಿಂದ ವೀಕ್ಷಿಸಿದರು.

ವಿಚಾರ ಸಂಕಿರಣವು "ಶುದ್ದ ಇಂಧನ ಪರಿವರ್ತನೆ" ಯನ್ನು ಸಾಧಿಸಲು ಮತ್ತು ನಂತರ ನಿವ್ವಳ ಶೂನ್ಯದ ಕಡೆಗೆ ಚಲಿಸಲು ಸಿಸಿಯುಎಸ್‌ ನ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ವಿಚಾರ ಸಂಕಿರಣದಲ್ಲಿ ವಿವಿಧ ದೇಶಗಳ ಉದ್ಯಮಗಳು, ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಭಾಗವಹಿಸುತ್ತಿದ್ದಾರೆ. 

ಶ್ರೀ ಉಜ್ವಲ್ ಕಾಂತಿ ಭಟ್ಟಾಚಾರ್ಯ, ನಿರ್ದೇಶಕರು (ಯೋಜನೆ), ಶ್ರೀ ಶಶಾಂತ್, ಸಿಜಿಎಂ ನೇತ್ರ, ಶ್ರೀ ಹರ್ಜಿತ್ ಸಿಂಗ್, ಸಿಜಿಎಂ (ಸಿಸಿ)ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

******



(Release ID: 1896597) Visitor Counter : 199