ಇಂಧನ ಸಚಿವಾಲಯ
azadi ka amrit mahotsav

​​​​​​​“ಕಾರ್ಬನ್ ಕ್ಯಾಪ್ಚರ್ ಬಳಕೆ ಮತ್ತು ಸಂಗ್ರಹಣೆ” ಕುರಿತು ಜಿ20 ಅಂತರಾಷ್ಟ್ರೀಯ ಸೆಮಿನಾರ್ ಅನ್ನು ಎನ್.ಟಿ.ಪಿ.ಸಿ. ಆಯೋಜಿಸಲಿದೆ

Posted On: 04 FEB 2023 11:53AM by PIB Bengaluru

1. "ಶುದ್ಧ ಇಂಧನ ಪರಿವರ್ತನೆ" ಅನ್ನು ಸಾಧಿಸಲು ಕಾರ್ಬನ್ ಕ್ಯಾಪ್ಚರ್ ಬಳಕೆ ಮತ್ತು ಸಂಗ್ರಹಣೆಯ (ಸಿ.ಸಿ.ಯು.ಎಸ್.) ಪ್ರಾಮುಖ್ಯತೆಯನ್ನು ವಿವರಿಸುತ್ತಾ, ನೆಟ್ ಝೀರೋ ಕಡೆಗೆ ಸಾಗಲು ಎಲ್ಲರನ್ನು ಪ್ರೇರೇಪಿಸುತ್ತದೆ

2. ವಿವಿಧ ದೇಶಗಳ ಕೈಗಾರಿಕೆಗಳು, ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

1 ಡಿಸೆಂಬರ್ 2022 ರಿಂದ ಒಂದು ವರ್ಷದ ಅವಧಿಗೆ ಜಿ20 ನ ಅಧ್ಯಕ್ಷ ಸ್ಥಾನವನ್ನು ಭಾರತವು ವಹಿಸಿಕೊಂಡಿದೆ. ಭಾರತದ ಅಧ್ಯಕ್ಷತೆಯಲ್ಲಿ, 1 ನೇ ಇಂಧನ ಪರಿವರ್ತನಾ ಕಾರ್ಯ ತಂಡದ ಸಭೆಯು ಫೆಬ್ರವರಿ 5-7, 2023 ರವರೆಗೆ ನಡೆಯಲಿದೆ.

ಎನ್.ಟಿ.ಪಿ.ಸಿ., ಭಾರತದ ಅತಿದೊಡ್ಡ ಸಂಯೋಜಿತ ಇಂಧನ ಪೂರೈಕಾ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಪರವಾಗಿ, ಕಾರ್ಬನ್ ಕ್ಯಾಪ್ಚರ್, ಯುಟಿಲೈಸೇಶನ್ ಮತ್ತು ಸ್ಟೋರೇಜ್ ಕುರಿತು ಫೆಬ್ರವರಿ 5, 2023 ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್‌ ನಲ್ಲಿ ಅಂತರರಾಷ್ಟ್ರೀಯ ಸೆಮಿನಾರ್ ಅನ್ನು ಆಯೋಜಿಸಿದೆ. ಈ ಅಂತರರಾಷ್ಟ್ರೀಯ ಸೆಮಿನಾರ್‌ನಲ್ಲಿ ವಿವಿಧ ದೇಶಗಳ ಉದ್ಯಮಗಳು, ಉದ್ಯಮಿಗಳು, ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಭಾಗವಹಿಸುವ ಸಾಧ್ಯತೆಯಿದೆ.

"ಶುದ್ಧ ಇಂಧನ ಪರಿವರ್ತನೆ" ಅನ್ನು ಸಾಧಿಸಲು ಕಾರ್ಬನ್ ಕ್ಯಾಪ್ಚರ್ ಬಳಕೆ ಮತ್ತು ಸಂಗ್ರಹಣೆಯ (ಸಿ.ಸಿ.ಯು.ಎಸ್.) ಪ್ರಾಮುಖ್ಯತೆಯನ್ನು ವಿವರಿಸುವ ಈ ಸೆಮಿನಾರ್, ಮುಂಬರುವ ದನಗಳಲ್ಲಿ ನಿವ್ವಳ ಶೂನ್ಯದ ಕಡೆಗೆ ಸಾಗಲು ಎಲ್ಲರನ್ನು ಪ್ರೇರೇಪಿಸುತ್ತದೆ.

*****

 


(Release ID: 1896334) Visitor Counter : 219