ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಫೆಬ್ರವರಿ 6 ರಿಂದ 8 ರವರೆಗೆ ಗುವಾಹಟಿಯಲ್ಲಿ ಯುವ ವ್ಯವಹಾರಗಳ ಇಲಾಖೆಯಿಂದ ಯುವ20 ಶೃಂಗದ ಆರಂಭಿಕ ಸಭೆ ಆಯೋಜನೆ


ವೈ 20 ಅಡಿ ನಾಳೆಗಾಗಿ ಉತ್ತಮ ಆಲೋಚನೆಗಳ ಬಗ್ಗೆ ದೇಶದ ಯುವ ಸಮೂಹವನ್ನು ಸಂಪರ್ಕಿಸಲು ಭಾರತದಾದ್ಯಂತ ಚರ್ಚೆಗಳನ್ನು ಆಯೋಜಿಸಲಾಗುವುದು : ಯುವ ವ್ಯವಹಾರಗಳ ಕಾರ್ಯದರ್ಶಿ  

Posted On: 03 FEB 2023 4:03PM by PIB Bengaluru

ಜಿ20 ಅಧ್ಯಕ್ಷತೆಯ ಚೌಕಟ್ಟಿನಲ್ಲಿ ಯುವ ವ್ಯವಹಾರಗಳ ಇಲಾಖೆಗೆ ಯುವ20 ಶೃಂಗ – 2023 ಆಯೋಜಿಸುವ ಜವಾಬ್ದಾರಿ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಯುವ ವ್ಯವಹಾರಗಳ ಇಲಾಖೆ ಅಸ್ಸಾಂನ ಗುವಾಹಟಿಯಲ್ಲಿ 2023 ರ ಫೆಬ್ರವರಿ 6 ರಿಂದ 8 ರ ವರೆಗೆ ಯುವ 20 ಪ್ರಾರಂಭಿಕ ಸಭೆಯನ್ನು ಆಯೋಜಿಸಿದೆ. 2023 ಫೆಬ್ರವರಿ 8 ರಂದು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಂಪುಟ ದರ್ಜೆ ಸಚಿವರು ಸಮಾರೋಪ ಸಮಾರಂಭದಲ್ಲಿ ಶ್ವೇತಪತ್ರ ಬಿಡುಗಡೆ ಮಾಡಲಿದ್ದಾರೆ.

ಭಾರತ 2022 ರ ಡಿಸೆಂಬರ್ 1 ರಿಂದ 2023 ರ ನವೆಂಬರ್ 30 ರ ವರೆಗೆ ಜಿ20 ಅಧ್ಯಕ್ಷತೆಯನ್ನು ಒಂದು ವರ್ಷಗಳ ಕಾಲ ವಹಿಸಿಕೊಂಡಿದೆ. ಭಾರತದ ಅಧ್ಯಕ್ಷತೆಯ ವಿಷಯ ತನ್ನ ನಾಗರಿಕ ವ್ಯವಸ್ಥೆಯ ಮೌಲ್ಯವಾದ “ವಸುದೇವಕುಟುಂಬಕಂ” ನಲ್ಲಿ ಪ್ರತಿಷ್ಠಾಪಿಸಲ್ಪಟಿದೆ. ಆದ್ದರಿಂದ ನಮ್ಮ ವಿಷಯ “ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ” ಆಗಿದೆ.

ಜಿ20 ಗುಂಪಿನ ಅಧಿಕೃತ ಕಾರ್ಯಕ್ರಮಗಳಲ್ಲಿ ಯುವ20 ಕೂಡ ಒಂದು. ಯುವ20 [ವೈ20] ನಲ್ಲಿ ನಿಯೋಜನೆಗೊಂಡಿರುವ ಗುಂಪು ಉತ್ತಮ ನಾಳೆಯ ಆಲೋಚನೆಗಳ ಬಗ್ಗೆ ರಾಷ್ಟ್ರದ ಯುವ ಸಮೂಹದ ಜೊತೆ ಸಮಾಲೋಚಿಸುತ್ತದೆ ಮತ್ತು ಕ್ರಿಯೆಗಾಗಿ ಕಾರ್ಯಸೂಚಿಯ ಕರಡು ರಚಿಸುತ್ತದೆ, ದೇಶಾದ್ಯಂತ ಚರ್ಚೆಗಳನ್ನು ಆಯೋಜಿಸುತ್ತದೆ. ಜಿ20 ಕುರಿತು ಯುವ ಜನಾಂಗ ತಮ್ಮ ಆಲೋಚನೆಗಳು ಮತ್ತು ದೃಷ್ಟಿಕೋನದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೈ20 ವೇದಿಕೆಯನ್ನು ಒದಗಿಸಲಾಗಿದೆ.

ನವದೆಹಲಿಯಲ್ಲಿಂದು ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಯುವ ವ್ಯವಹಾರಗಳ ಕಾರ್ಯದಶ್ರೀ ಶ್ರೀಮತಿ ಮೀತಾ ರಾಜೀವ್ ಲೋಚನ್, ಉತ್ತಮ ನಾಳೆಗಾಗಿ ಕುರಿತ ಆಲೊಚನೆಗಳ ಬಗ್ಗೆ ರಾಷ್ಟ್ರದ ಯುವ ಸಮೂಹವನ್ನು ಸಂಪರ್ಕಿಸಲು ಭಾರತದದಾದ್ಯಂತ ಚರ್ಚೆಗಳನ್ನು ಆಯೋಜಿಸಲಾಗುವುದು. ಜಿ20 ಗುಂಪಿನ ದೇಶಗಳ ಆದ್ಯತೆಗಳ ಬಗ್ಗೆ ತಮ್ಮ ದೃಷ್ಟಿಕೋನಗಳು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸಲು ಯುವ ಜನಾಂಗಕ್ಕೆ ವೇದಿಕೆ ಒದಗಿಸಲು ವೈ20 ಆಶಿಸುತ್ತದೆ ಎಂದರು. ಭಾರತ ವಿಶ್ವದ ಅತ್ಯಂತ ಕಿರಿ ವಯಸ್ಸಿನ ಜನಸಂಖ್ಯೆ ಹೊಂದಿದೆ ಮತ್ತು ಯುವಸಮೂಹ ರಾಷ್ಟ್ರದ ಶಕ್ತಿ. ಯುವ ಜನಾಂಗ ನಾವೀನ್ಯತೆಯನ್ನು ಹೊಂದಿದ್ದು, ರಚನಾತ್ಮಕ ಆಲೋಚನೆಗಳನ್ನು ವ್ಯಕ್ತಪಡಿಸಲು ಯುವ ವ್ಯವಹಾರಗಳ ಇಲಾಖೆಯು ವೇದಿಕೆ ಒದಗಿಸುತ್ತಿದೆ ಎಂದು ಅವರು ಹೇಳಿದರು.

ವೈ20 ಶೃಂಗಸಭೆ -2023 ರಡಿ ಮುಂದಿನ 8 ತಿಂಗಳ ಕಾಲ ಐದು ವೈ20 ವಿಷಯಗಳ ಕುರಿತ ಸಮಾಲೋಚನೆಯಲ್ಲಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ವೃತ್ತಿಪರ ಸಂಘ ಸಂಸ್ಥೆಗಳು ಭಾಗವಹಿಸಲಿದ್ದು, ಇದು ಅಂತಿಮ ಯುವ20 ಶೃಂಗಸಭೆಗೂ ಮುನ್ನ ರಾಜ್ಯಗಳಲ್ಲಿ ಮುಂಚಿತವಾಗಿ ನಡೆಯಲಿದೆ. ಉತ್ತಮ ಆಡಳಿತ ಮತ್ತು ಪ್ರಜಾಪ್ರಭುತ್ವಕ್ಕಾಗಿ ಯುವಸಮೂಹದ ದೃಷ್ಟಿಕೋನವನ್ನು ಹಂಚಿಕೊಳ್ಳುವ ಮತ್ತು ಕೌಶಲ್ಯವನ್ನು ಸುಧಾರಿಸಲು ತಂತ್ರಜ್ಞಾನ ಬಳಕೆಯ ಚಟುವಟಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ವೈ20ಯ ಐದು ವಿಷಯಗಳೆಂದರೆ:

1.  ಭವಿಷ್ಯದ ಕೆಲಸ; ಕೈಗಾರಿಕೆ 4.0, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯಗಳು

2.  ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ತಗ್ಗಿಸುವಿಕೆ; ಸುಸ್ಥಿರ ಜೀವನ ಮಾರ್ಗ ರೂಪಿಸುವುದು

3.  ಶಾಂತಿ ಸ್ಥಾಪನೆ ಮತ್ತು ಸಮನ್ವಯ; ಯುದ್ಧವಿಲ್ಲದ ಯುಗಕ್ಕೆ ನಾಂದಿ ಹಾಡುವುದು

4.  ಭವಿಷ್ಯದ ಹಂಚಿಕೆ: ಪ್ರಜಾತಂತ್ರ ವ್ಯವಸ್ಥೆ ಮತ್ತು ಆಡಳಿತದಲ್ಲಿ ಯುವ ಸಮೂಹ

5.  ಆರೋಗ್ಯ, ಯೋಗಕ್ಷೇಮ ಮತ್ತು ಕ್ರೀಡೆಗಳು: ಯುವ ಸಮೂಹಕ್ಕಾಗಿ ಕಾರ್ಯಸೂಚಿ

ಐಐಟಿ ಗುವಾಹತಿ ಹಸಿರು ಜಲಜನಕ ಉತ್ಪಾದನೆಯಂತಹ ಮುಂಚೂಣಿ ತಂತ್ರಜ್ಞಾನಗಳಿಗೆ ಪ್ರಮುಖ ಸಂಶೋಧನಾ ಕೇಂದ್ರವಾಗಿದೆ: ಕೆಲವು ತಂತ್ರಜ್ಞಾನಗಳು ಉದ್ಯಮ ವಲಯಕ್ಕೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿವೆ. ಫೆಬ್ರವರಿ 7 ರಂದು ಐಐಟಿ ಗುವಾಹಟಿಯಲ್ಲಿ ಭವಿಷ್ಯದ ಕೆಲಸ, 21 ನೇ ಶತಮಾನದ ಕೌಶಲ್ಯಗಳು, ಹವಾಮಾನ ಬದಲಾವಣೆ, ಸುಸ್ಥಿರ ಜೀವನ ಮಾರ್ಗ ರೂಪಿಸುವ, ಶಾಂತಿ ಸ್ಥಾಪನೆ ಮತ್ತು ಸಮನ್ವಯ ಕುರಿತ ಪ್ರಮುಖ ಸಂವಾದ ಗೋಷ್ಠಿಗಳು ನಡೆಯಲಿವೆ.

ಸಂಬಂಧಪಟ್ಟ ಸಂಕರ್ಪ ಕೊಂಡಿಗಳು;

https://www.pib.gov.in/PressReleseDetailm.aspx?PRID=1889239
http://Click here for complete details

http://Click here for complete details

*****



(Release ID: 1896188) Visitor Counter : 161