ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav g20-india-2023

ಜೋಧ್‌ಪುರದಲ್ಲಿ ಜರುಗಿದ ಮೊದಲ ಜಿ20 ಉದ್ಯೋಗ ಕಾರ್ಯ ತಂಡ ಸಭೆಯನ್ನು ಉದ್ದೇಶಿಸಿ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಭಾಷಣ ಮಾಡಿದರು


ಎಲ್ಲಾ ಜನರಿಗೆ ಯೋಗ್ಯವಾದ ಕೆಲಸ ಮತ್ತು ಅಂತರ್ಗತ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವಂತಹ ಅರ್ಥಪೂರ್ಣ ಪ್ರಗತಿಯನ್ನು ಸಾಧಿಸಲು ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಕರೆ ನೀಡಿದರು

Posted On: 03 FEB 2023 1:01PM by PIB Bengaluru

ಜೋಧ್‌ ಪುರದಲ್ಲಿ ಇಂದು ಜರುಗಿದ ಜಿ20 ಉದ್ಯೋಗ ಕಾರ್ಯ ತಂಡದ ಸಭೆಯಲ್ಲಿ, ಎಲ್ಲಾ ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತವನ್ನು ಕೋರಿ ಮತ್ತು ಉದ್ದೇಶಕ್ಕಾಗಿ ಅವರ ತೋರುವ ಸಮರ್ಪಣಾಭಾವದ ಸೇವೆಗಾಗಿ ಅವರನ್ನು ಶ್ಲಾಘಿಸುತ್ತಾ, ಎಲ್ಲಾ ಜನರಿಗೆ ಯೋಗ್ಯವಾದ ಕೆಲಸ ಮತ್ತು ಅಂತರ್ಗತ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವಂತಹ ಅರ್ಥಪೂರ್ಣ ಪ್ರಗತಿಯನ್ನು ಸಾಧಿಸಲು ಅಂತರರಾಷ್ಟ್ರೀಯ ಸಮುದಾಯದ ಸದಸ್ಯರು ಹೆಚ್ಚಿನದನ್ನು ರಚಿಸುವಲ್ಲಿ  ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಕರೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಮತ್ತು ಜೋಧ್‌ಪುರದ ಸಂಸದರಾಗಿ, ಜಿ20 ಉದ್ಯೋಗ ವರ್ಕಿಂಗ್ ಗ್ರೂಪ್‌ನ ಮೊದಲ ಸಭೆಗಾಗಿ  ಭವ್ಯವಾದ ಮತ್ತು ಐತಿಹಾಸಿಕವಾಗಿ ಮಹತ್ವದ ಜೋಧ್‌ಪುರ ನಗರಕ್ಕೆ ಆಗಮಿಸಿದ ಪ್ರತಿಯೊಬ್ಬ ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತವನ್ನು ನೀಡಲು ನನಗೆ ತುಂಬಾ ಸಂತೋಷವಾಯಿತು ಎಂದು ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಹೇಳಿದರು. ಈ ಕಾರ್ಯಕ್ರಮವನ್ನು ಜೋಧ್‌ ಪುರಕ್ಕೆ ಕರೆತಂದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರಿಗೆ ಹಾಗೂ ಉಳಿದ ಸಂಘಟನಾ ತಂಡಕ್ಕೆ ಕೇಂದ್ರ ಸಚಿವರು ಕೃತಜ್ಞತೆ ಸಲ್ಲಿಸಿದರು. ಕಾರ್ಮಿಕ ಮತ್ತು ಉದ್ಯೋಗ ಕ್ಷೇತ್ರದ ನಾಯಕರು ಮತ್ತು ತಜ್ಞರು ಇಂತಹ ಮಹತ್ವದ ಕೂಟವನ್ನು ಆಯೋಜಿಸಲು ಈ ನಗರವನ್ನು ಆಯ್ಕೆ ಮಾಡಿದ್ದಕ್ಕಾಗಿ ನಗರವು ಇಂದು ಗೌರವಾನ್ವಿತವಾಗಿದೆ ಮತ್ತು ಈ ಸಭೆಯ ಚರ್ಚೆಗಳು ಮತ್ತು ಫಲಿತಾಂಶಗಳು ಜಾಗತಿಕವಾಗಿ ಉದ್ಯೋಗದ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಭೆಯ ಸಹ-ಅಧ್ಯಕ್ಷರು, ಇಂಡೋನೇಷ್ಯಾ ಮತ್ತು ಬ್ರೆಜಿಲ್‌ ನ ನಮ್ಮ ಗೌರವಾನ್ವಿತ ಸಹೋದ್ಯೋಗಿಗಳು, ಅವರ ಅಮೂಲ್ಯ ಕೊಡುಗೆಗಳು ಮತ್ತು ಬೆಂಬಲದ ಮಾತುಗಳಿಗಾಗಿ ಕೃತಜ್ಞರಾಗಿರುತ್ತೇನೆ. ಈ ಸಭೆಯನ್ನು ಯಶಸ್ವಿಗೊಳಿಸುವಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ನಾಯಕತ್ವವು ನಿರ್ಣಾಯಕವಾಗಿದೆ ಎಂದು ಶ್ರೀ ಶೇಖಾವತ್ ಅವರು ಹೇಳಿದರು.

ವಿವಿಧ ರಾಷ್ಟ್ರಗಳು ಮತ್ತು ಅದರ ಜನರ ಸಮೃದ್ಧಿ ಮತ್ತು ಯೋಗಕ್ಷೇಮಕ್ಕೆ ಬಹಳ ಮುಖ್ಯವಾದ ಉದ್ಯೋಗದ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವಲ್ಲಿ ಈ ಮಹತ್ವದ ಕಾರ್ಯಕ್ರಮದ ಆತಿಥೇಯ ರಾಷ್ಟ್ರವಾಗಿ, ಜಿ20 ಅನ್ನು ಮುನ್ನಡೆಸುವ ಅವಕಾಶವನ್ನು ಹೊಂದಿರುವ ಭಾರತವು , ಬಹಳಷ್ಟು ಗೌರವವನ್ನು ಹೊಂದಿದೆ ಎಂದು ಶ್ರೀ ಶೇಖಾವತ್ ಅವರು ಹೇಳಿದರು. ಜಿ20 ಆರಂಭದಿಂದಲೂ ನಮ್ಮ ಸಕ್ರಿಯ ಭಾಗವಹಿಸುವಿಕೆ ಜಾಗತಿಕ ಸಹಕಾರಕ್ಕೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಮತ್ತು ಎಲ್ಲರಿಗೂ ಹೆಚ್ಚು ಸಮೃದ್ಧ ಜಗತ್ತನ್ನು ರಚಿಸುವ ನಿಟ್ಟಿನಲ್ಲಿ ನಮ್ಮ ಸಮಾನವಾದ ಗುರಿಯಾಗಿದೆ ಎಂದು ಸಚಿವರು ಹೇಳಿದರು.

ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಭಾರತವು ಉದ್ಯೋಗದ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ಅಂತರ್ಗತ ಬೆಳವಣಿಗೆಗೆ ಚಾಲನೆ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ವಿಶ್ವಾಸವನ್ನಿಟ್ಟಿದೆ. ನಮ್ಮ ದೃಢವಾದ ಪ್ರಜಾಪ್ರಭುತ್ವ ಮತ್ತು ನಮ್ಮ ವೈವಿಧ್ಯತೆಯು ವಿಶಾಲ ವ್ಯಾಪ್ತಿಯ ಚಿಂತನೆಗಳು ಮತ್ತು ಆಲೋಚನೆಗಳನ್ನು ಒಟ್ಟುಗೂಡಿಸಲು ನಮಗೆ ಅನನ್ಯ ದೃಷ್ಟಿಕೋನ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಕೇಂದ್ರ ಸಚಿವ ಶ್ರೀ ಶೇಖಾವತ್ ಅವರು ಹೇಳಿದರು.

ಭಾರತದ ಜಿ20 ಅಧ್ಯಕ್ಷತೆಯ ಸಂಕಲ್ಪ ವಿಷಯವಾದ "ವಸುಧೈವ ಕುಟುಂಬಕಂ" ಅಥವಾ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಬಹಳ ಅನನ್ಯ ಸಂದೇಶವಾಗಿದೆ. ನಮ್ಮ ಆರ್ಥಿಕತೆಗಳು ಮತ್ತು ನಮ್ಮ ಜನರ ಪರಸ್ಪರ ಸಂಬಂಧವನ್ನು ಚರ್ಚಿಸಲು ನಾವು ಇಂದು ಒಟ್ಟಿಗೆ ಸೇರುವುದರಿಂದ ವಿಶೇಷವಾಗಿ ಸೂಕ್ತವಾಗಿದೆ. ಇದು ನಮ್ಮ ಹಂಚಿಕೊಂಡ ಮಾನವೀಯತೆಯ ಸಿದ್ದಾಂತಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುವ ಪ್ರಾಮುಖ್ಯತೆ ನೀಡುತ್ತದೆ. ಇಂದು ನಾವು ಎದುರಿಸುತ್ತಿರುವ ಕಾರ್ಮಿಕ ಮತ್ತು ಉದ್ಯೋಗದ ಸವಾಲುಗಳಿಗೆ ಎಲ್ಲರನ್ನೂ ಒಳಗೊಳ್ಳುವ, ಸಮರ್ಥನೀಯ ಮತ್ತು ಸಮಾನವಾಗಿರುವ ಪರಿಹಾರಗಳು ಇರಬೇಕು ಎಂದು ಕೇಂದ್ರ ಸಚಿವರು ಹೇಳಿದರು.  

ಜಾಗತಿಕ ಕಾರ್ಮಿಕ ಮಾರುಕಟ್ಟೆ ಎದುರಿಸುತ್ತಿರುವ ಸವಾಲುಗಳು ಸಂಕೀರ್ಣ ಮತ್ತು ದೂರಗಾಮಿಯಾಗಿದ್ದು, ಸಹಕಾರ ಮತ್ತು ಸಹಯೋಗದ ಮೂಲಕ ಮಾತ್ರ ನಾವು ಅರ್ಥಪೂರ್ಣ ಪರಿಹಾರಗಳನ್ನು ಕಂಡುಕೊಳ್ಳಲು ಬಯಸಬಹುದು. ಪ್ರಪಂಚದಾದ್ಯಂತ ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯ ಪ್ರಸ್ತುತ ಪರಿಸ್ಥಿತಿಯು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪ್ರಭಾವಿತವಾಗಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಕುಸಿತದ ಪರಿಣಾಮವಾಗಿ ಅನೇಕ ದೇಶಗಳು ನಿರುದ್ಯೋಗ ಕ್ಷೇತ್ರದಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿವೆ. ವಿಶೇಷವಾಗಿ ಅನೇಕ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ತೀವ್ರವಾಗಿ ಹಾನಿಗೊಳಗಾಗಿವೆ, ಇದು ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಆದಾಯದ ಅಸಮಾನತೆ ಹೆಚ್ಚಾಗಿದೆ ಮತ್ತು ಬಡತನದಲ್ಲಿ ವಾಸಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಅನೇಕ ದೇಶಗಳಲ್ಲಿ, ಸರ್ಕಾರಗಳು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಹೆಚ್ಚು ಹಣವನ್ನು ಖರ್ಚು ಮಾಡಲು ಸಾಧ್ಯವಾಗೆ ಇರುವ ಮತ್ತು  ಇತರ ಅಗತ್ಯ ಕಾರ್ಯಕ್ರಮಗಳು ಹಾಗೂ ಸೇವೆಗಳಿಗೆ ಹಣವನ್ನು ವ್ಯಯಿಸುವುದನ್ನು ಬಿಟ್ಟುಬಿಡಬೇಕಾದ ಪರಿಸ್ಥಿತಿ ಬಂದಿದೆ. ಇದು ಸಾಮಾಜಿಕ ಭದ್ರತಾ ವ್ಯವಸ್ಥೆಗಳ ಮೇಲೆ ಒತ್ತಡವನ್ನುಂಟು ಮಾಡಿದೆ. ಕಾರ್ಮಿಕರಿಗೆ ಆರ್ಥಿಕ ಉತ್ತೇಜನ ಮತ್ತು ಬೆಂಬಲವನ್ನು ಒದಗಿಸುವ ವಿಷಯದಲ್ಲಿ ಅನೇಕ ದೇಶಗಳು ಪ್ರಯತ್ನಗಳನ್ನು ಮಾಡಿದೆ, ಆದರೆ ಉದ್ಯೋಗದ ಪರಿಸ್ಥಿತಿ ಮತ್ತು ಸಾಮಾಜಿಕ ಭದ್ರತೆ ಇನ್ನೂ ಸವಾಲುಗಳನ್ನು ಎದುರಿಸುತ್ತಿದೆ  ಎಂದು ಕೇಂದ್ರ ಸಚಿವ ಶ್ರೀ ಶೇಖಾವತ್ ಅವರು ಹೇಳಿದರು

ಸಾಂಕ್ರಾಮಿಕ ರೋಗದ ಆರ್ಥಿಕ ಹೊಡೆತವನ್ನು ತಗ್ಗಿಸಲು, ಭಾರತ ಸರ್ಕಾರವು ತಕ್ಷಣದ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದರು.

ವಿಶ್ವದ ಅತಿದೊಡ್ಡ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಭಾರತವು ಸಾಂಕ್ರಾಮಿಕ ಸಮಯದಲ್ಲಿ 800 ಮಿಲಿಯನ್ ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಿದೆ ಮತ್ತು ಇಲ್ಲಿಯವರೆಗೆ ಮುಂದುವರೆದಿದೆ.  ಅಲ್ಲದೆ, ವಿಶ್ವದ ಅತಿದೊಡ್ಡ ಸರ್ಕಾರ ಅನುದಾನಿತ ಆರೋಗ್ಯ ಭರವಸೆ ಯೋಜನೆಯಾದ ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮೂಲಕ, ಭಾರತವು 500 ಮಿಲಿಯನ್ ಜನರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ ಎಂದು ಸಚಿವರು ಹೇಳಿದರು.

ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆಯು ರೂ. 228 ಶತಕೋಟಿ ಆರ್ಥಿಕ ಸಹಾಯದೊಂದಿಗೆ, ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ಒದಗಿಸುವುದರ ಜೊತೆಗೆ ಉದ್ಯೋಗವನ್ನು ಸೃಷ್ಟಿಸಲು ಉದ್ಯೋಗದಾತರನ್ನು ಉತ್ತೇಜಿಸುತ್ತಿದೆ. ಈ ಯೋಜನೆಯ ಪ್ರಕಾರ, ಎರಡು ವರ್ಷಗಳ ಕಾಲ 1000 ಉದ್ಯೋಗಿಗಳು ಇರುವ ಸಂಸ್ಥೆಯಲ್ಲಿ, ಉದ್ಯೋಗಿಗಳ ಕೊಡುಗೆಯಾಗಿ ಸರ್ಕಾರವು 12%  ಮತ್ತು 12%ರಷ್ಟು ಉದ್ಯೋಗದಾತರ ಕೊಡುಗೆಯನ್ನು ಅಂದರೆ ವೇತನದ 24% ಅನ್ನು ಇ.ಪಿ.ಎಫ್‌.ಗೆ ಪಾವತಿಸುತ್ತಿದೆ. ಎರಡು ವರ್ಷಗಳಿಂದ 1000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸಂಸ್ಥೆಗಳಲ್ಲಿ ಹೊಸ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಇಪಿಎಫ್ ಕೊಡುಗೆಯಾಗಿ ನೌಕರರ ಪಾಲನ್ನು ಸರ್ಕಾರವು ವೇತನದ ರೀತಿಯಲ್ಲಿ 12%ರಷ್ಟು ಪಾವತಿಸಿದೆ ಎಂದು ಕೇಂದ್ರ ಸಚಿವ ಶ್ರೀ ಶೇಖಾವತ್ ಅವರು ಹೇಳಿದರು

ಸುಮಾರು 3.2 ಮಿಲಿಯನ್ ಬೀದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಸಹಾಯ ಮಾಡಲು ಮೇಲಾಧಾರ ರಹಿತ ಸಾಲವನ್ನು ಒದಗಿಸಲಾಗಿದೆ. ಕ್ರಮವಾಗಿ 277 ದಶಲಕ್ಷ ಮತ್ತು 131 ದಶಲಕ್ಷ ಫಲಾನುಭವಿಗಳಿಗೆ ಸೇವೆ ಸಲ್ಲಿಸುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇ.ಪಿ.ಎಫ್‌.ಒ.) ಮತ್ತು ನೌಕರರ ರಾಜ್ಯ ವಿಮಾ ನಿಗಮ (ಇ.ಎಸ್‌.ಐ.ಸಿ.) – ಎಂಬ ಸಮಗ್ರ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಭಾರತ ಹೊಂದಿದೆ ಎಂದು ಸಚಿವರು ಹೇಳಿದರು.

ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಕೊಡುಗೆಯೊಂದಿಗೆ ವೃದ್ಧಾಪ್ಯ ವೇತನವನ್ನು ಒದಗಿಸುವ ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ.  ಹೊರ ಗುತ್ತಿಗೆ ಆಧಾರದ (ಗಿಗಾ ಎಕಾನಮಿ)ಮತ್ತು ಉದಯೋನ್ಮುಖ, ಯುವ, ಸ್ಟಾರ್ಟ ಅಪ್ ( ಪ್ಲಾಟ್‌ಫಾರ್ಮ್ ಎಕಾನಮಿ) ಕೆಲಸಗಾರರು ಸೇರಿದಂತೆ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ರಚಿಸಲು ಇ-ಶ್ರಮ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ 400 ಕ್ಕೂ ಹೆಚ್ಚು ಉದ್ಯೋಗಗಳಲ್ಲಿ 290 ದಶಲಕ್ಷಕ್ಕಿಂತಲೂ ಹೆಚ್ಚು ಕಾರ್ಮಿಕರು ಈ ಜಾಲತಾಣದಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.

ಸ್ಟ್ಯಾಂಡಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಕೌಶಲ್ಯ ಕ್ಷೇತ್ರದಲ್ಲಿ ಸರ್ಕಾರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಮತ್ತು ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರಿಗೆ ಉದ್ಯೋಗ ಸೇವೆಗಳನ್ನು ಒದಗಿಸಲು ರಾಷ್ಟ್ರೀಯ ವೃತ್ತಿ ಸೇವೆ (ಎನ್‌.ಸಿ.ಎಸ್.) ಯೋಜನೆಯನ್ನು ಜಾರಿಗೊಳಿಸಿದೆ. ಇಲ್ಲಿಯವರೆಗೆ ರಾಷ್ಟ್ರೀಯ ವೃತ್ತಿ ಸೇವೆಯ ಅಡಿಯಲ್ಲಿ 10 ದಶಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ರೂಪಿಸಿ ಸಜ್ಜುಗೊಳಿಸಲಾಗಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ.  ರಾಷ್ಟ್ರೀಯ ವೃತ್ತಿ ಸೇವೆ (ಎನ್‌.ಸಿ.ಎಸ್.) ಜಾಲತಾಣದಲ್ಲಿ ನೋಂದಾಯಿತ ಉದ್ಯೋಗಾಕಾಂಕ್ಷಿಗಳಿಗೆ ಮೈಕ್ರೋಸಾಫ್ಟ್ ಮತ್ತು ಟಿಸಿಎಸ್ ಸಂಸ್ಥೆಗಳಿಂದ ಉಚಿತ ತರಬೇತಿ ಕಾರ್ಯಕ್ರಮವನ್ನು ಸಹ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ನಾವು ನಮ್ಮ ಚರ್ಚೆಗಳನ್ನು ಪ್ರಾರಂಭಿಸಿದಾಗ, ನಾವು ಕೇವಲ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಲು ಇಲ್ಲಿಗೆ ಬಂದಿದ್ದೇವೆ ಎಂದು ಭಾವಿಸಬಾರದು,  ಪ್ರಪಂಚದಾದ್ಯಂತದ ಜನರ ಜೀವನವನ್ನು ಸುಧಾರಿಸುವ ಪರಿಹಾರಗಳನ್ನು ಹುಡುಕಲು ಇಲ್ಲಿಗೆ ಬಂದಿದ್ದೇವೆ ಎಂದು ಎಲ್ಲರಿಗೂ ಇನ್ನೊಮ್ಮೆ ನೆನಪಿಸಲು ಬಯಸುತ್ತೇವೆ. ಈ ವಿಷಯಗಳ ಬಗ್ಗೆ ನಾವು ಕೆಲವು ಪ್ರತಿಭಾವಂತ ಮತ್ತು ಕ್ಷೇತ್ರದ ಜ್ಞಾನವುಳ್ಳ ತಜ್ಞರನ್ನು ಒಟ್ಟುಗೂಡಿಸಿದ್ದೇವೆ ಮತ್ತು ನಮ್ಮ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಬಹಳ ಮುಖ್ಯವಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ಒಟ್ಟಾಗಿ ಶ್ರಮಿಸಿದಲ್ಲಿ ನಿಜವಾದ ಪ್ರಗತಿಯನ್ನು ಸಾಧಿಸಬಹುದು ಎಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ಸಚಿವ ಶ್ರೀ ಶೇಖಾವತ್ ಅವರು ಹೇಳಿದರು.

ಉದ್ಘಾಟನಾ ಅಧಿವೇಶನದ ನಂತರ ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಮೊದಲ ಉದ್ಯೋಗ ಕಾರ್ಯ ತಂಡದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

 

*******(Release ID: 1896025) Visitor Counter : 139