ಇಂಧನ ಸಚಿವಾಲಯ

​​​​​​​2023 ರ ಫೆಬ್ರವರಿ 5 ರಿಂದ 7 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಇಂಧನ ಪರಿವರ್ತನೆ ಕಾರ್ಯಗುಂಪಿನ ಸಭೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರೀ ಆರ್.ಕೆ. ಸಿಂಗ್


ಇಂಧನ ಪರಿವರ್ತನೆ ಸಾಧಿಸುವಲ್ಲಿ ಇಟಿಡಬ್ಲ್ಯೂಜಿ ಗಮನಹರಿಸಿದೆ, ಸಮುದಾಯಗಳ ಇಂಧನದ ಅಗತ್ಯಗಳಿಗೆ ಧಕ್ಕೆಯಾಗದಂತೆ ಸಮಯಕ್ಕೆ ಸರಿಯಾಗಿ ಮತ್ತು ಕೈಗೆಟುವ ರೀತಿಯಲ್ಲಿ ದೇಶಗಳ ನಡುವೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು, ತಂತ್ರಜ್ಞಾನದ ಅಂತರವನ್ನು ಪರಿಹರಿಸಲು ಮತ್ತು ಹಣ ಒದಗಿಸಲು ಒತ್ತು ನೀಡುತ್ತದೆ : ಶ್ರೀ ಆರ್.ಕೆ. ಸಿಂಗ್

Posted On: 02 FEB 2023 5:27PM by PIB Bengaluru

1.   ಭಾರತ ಆಯೋಜಿಸಿರುವ ಸಭೆಯಲ್ಲಿ ಐರೋಪ್ಯ ಒಕ್ಕೂಟ ಸೇರಿ 19 ದೇಶಗಳಿಂದ 150 ಕ್ಕೂ ಹೆಚ್ಚು ಮತ್ತು 9 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ

2.   ಜಿ20 ಭಾರತದ ಅಧ್ಯಕ್ಷತೆಯಲ್ಲಿ ಹಂಚಿಕೆ, ಸಹಭಾಗಿತ್ವ ಮತ್ತು ಎಲ್ಲರಿಗೂ ಸುಸ್ಥಿರ ಭವಿಷ್ಯ ನಿರ್ಮಿಸಲು ಸದಸ್ಯ ರಾಷ್ಟ್ರಗಳ ನಡುವೆ ನಂಬಿಕೆಯ ಪ್ರಜ್ಞೆಯನ್ನು ಮೂಡಿಸಲಿದೆ.

2023 ರ ಫೆಬ್ರವರಿ 5 ರಿಂದ 7 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಇಂಧನ ಪರಿವರ್ತನೆ ಕಾರ್ಯಗುಂಪಿನ ಸಭೆ ಕುರಿತು ಕೇಂದ್ರ ನವ ಮತ್ತು ನವೀಕೃತ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಭಾರತ ಮೊದಲ ಬಾರಿಗೆ ಈ ವರ್ಷ ಜಿ20 ಶೃಂಗ ಸಭೆ ಆಯೋಜಿಸುತ್ತಿದ್ದು, ಇದು ಅಂತರರಾಷ್ಟ್ರೀಯ ಸಹಕಾರದ ಪ್ರಮುಖ ವೇದಿಕೆಯಾಗಿದೆ. ಜಾಗತಿಕ ಜಿಡಿಪಿಗೆ ಜಿ20 ಸದಸ್ಯ ರಾಷ್ಟ್ರಗಳು ಸುಮಾರು 85% ರಷ್ಟು, ಜಾಗತಿಕ ವ್ಯಾಪಾರದಲ್ಲಿ 75% ರಷ್ಟು ಮತ್ತು ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಹೊಂದಿವೆ. ಈ ಸಭೆ ಜಾಗತಿಕ ವಾಸ್ತುಶಿಲ್ಪವನ್ನು ಬಲಗೊಳಿಸುವ ಮತ್ತು ಎಲ್ಲಾ ಪ್ರಮುಖ ಅಂತರರಾಷ್ಟ್ರೀಯ ಆರ್ಥಿಕ ವಿಷಯಗಳ ಆಡಳಿತಕ್ಕೆ ಸ್ಪಷ್ಟ ಸ್ವರೂಪ ನೀಡಲಿದೆ.   

ಇಂಧನ ಪರಿವರ್ತನೆ ಕಾರ್ಯಗುಂಪಿನ [ಇಟಿಡಬ್ಲ್ಯೂಜಿ] ಆದ್ಯತಾ ವಲಯಗಳು (i) ಇಂಧನ ಪರಿವರ್ತನೆ ಮೂಲಕ ತಂತ್ರಜ್ಞಾನದ ಅಂತರವನ್ನು ತಗ್ಗಿಸುವುದು, (ii) ಇಂಧನ ಪರಿವರ್ತನೆಗೆ ಕಡಿಮೆ ವೆಚ್ಚದ ಹಣಕಾಸು (iii) ಇಂಧನ ಭದ್ರತೆ ಮತ್ತು ಪೂರೈಕೆ ಸರಪಳಿಯಲ್ಲಿ ವೈವಿಧ್ಯತೆ (iv) ಇಂಧನ ಮಿತವ್ಯಯ, ಕೈಗಾರಿಕೆಗಳಲ್ಲಿ ಕಡಿಮೆ ಇಂಗಾಲ ಪರಿವರ್ತನೆ ಮತ್ತು ಜವಾಬ್ದಾರಿಯುತ ಬಳಕೆ (v) ಭವಿಷ್ಯಕ್ಕಾಗಿ ಇಂಧನ [3ಎಫ್] ಮತ್ತು (vi) ಶುದ್ಧ ಇಂಧನಕ್ಕೆ ಸಾರ್ವತ್ರಿಕ ಪ್ರವೇಶ ಮತ್ತು ಎಲ್ಲವನ್ನೊಳಗೊಂಡ ಇಂಧನ ಪರಿವರ್ತನೆ ಮಾರ್ಗಗಳು.    

ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ಶ್ರೀ ಆರ್.ಕೆ. ಸಿಂಗ್, ಇಂಧನ ಪರಿವರ್ತನೆ ಕಾರ್ಯಗುಂಪಿನಿಂದ ಇಂಧನ ಪರಿವರ್ತನೆ ಸಾಧಿಸುವತ್ತ ಗಮನಹರಿಸಲಾಗಿದೆ. ಸಮುದಾಯಗಳ ಇಂಧನದ ಅಗತ್ಯಗಳಿಗೆ ಧಕ್ಕೆಯಾಗದಂತೆ ಸಮಯಕ್ಕೆ ಸರಿಯಾಗಿ ಮತ್ತು ಕೈಗೆಟುವ ರೀತಿಯಲ್ಲಿ ದೇಶಗಳ ನಡುವೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು, ತಂತ್ರಜ್ಞಾನದ ಅಂತರವನ್ನು ಪರಿಹರಿಸಲು ಮತ್ತು ಹಣ ಒದಗಿಸಲು ಒತ್ತು ನೀಡಲಿವೆ ಎಂದರು.   

ಚರ್ಚೆಯ ನಿರೀಕ್ಷಿತ ಫಲಿತಾಂಶಗಳು ಆರ್.ಡಿ20 ವೇದಿಕೆ [ಸಂಶೋಧನೆ ಮತ್ತು ಅಭಿವೃದ್ಧಿ]ಯಡಿ ಸಹಕಾರ ಉಪಕ್ರಮಗಳನ್ನು ಮುನ್ನಡೆಸುವ ಒಪ್ಪಂದವನ್ನು ಇದು ಒಳಗೊಂಡಿದೆ, ಸಂಕಿರ್ಣದಾಯಕ ತಂತ್ರಜ್ಞಾವನ್ನು ಅಭಿವೃದ್ಧಿಪಡಿಸಲು ಕಡಿಮೆ ವೆಚ್ಚದ ಅಂತರರಾಷ್ಟ್ರೀಯ ಹಣಕಾಸು ಸೌಲಭ್ಯದ ಮಾರ್ಗವನ್ನು ರೂಪಿಸಲು ಮಾರ್ಗಸೂಚಿ, ಇಂಧನ ಭದ್ರತೆ ಮತ್ತು ಹೊಸ ಇಂಧನ ಮೂಲಗಳ ವೈವಿಧ್ಯಮಯ ಪೂರೈಕೆ ಸರಪಳಿಗಳನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಪ್ರಯತ್ನಗಳ ಘೋಷಣೆ, 2030 ರ ವೇಳೆಗೆ ಇಂಧನ ದಕ್ಷತೆಯ ಜಾಗತಿಕ ದರವನ್ನು ದ್ವಿಗುಣಗೊಳಿಸುವ ಮಾರ್ಗಸೂಚಿ,  ಜೈವಿಕ ಇಂಧನ ಸಹಕಾರವನ್ನು ವೃದ್ಧಿಸುವ ಮತ್ತು ಉತ್ತೇಜಿಸುವ ವಲಯದಲ್ಲಿ ಕ್ರಿಯಾ ಯೋಜನೆ ಮತ್ತು ಕೈಗೆಟುಕುವ ಮತ್ತು ಎಲ್ಲವನ್ನೊಳಗೊಂಡ ಇಂಧನ ಪರಿವರ್ತನೆಯಲ್ಲಿ ಜಾಗತಿಕ ಉತ್ತಮ ಅಭ್ಯಾಸಗಳ ಕುರಿತು ಶಿಫಾರಸ್ಸು ಮಾಡುವ ಅಂಶಗಳನ್ನು ಇದು ಒಳಗೊಂಡಿದೆ.

ಮೊದಲ ಇಟಿಡಬ್ಲ್ಯೂಜಿಯಡಿ ಇಂಗಾಲ ಸೆರೆ ಹಿಡಿಯುವ, ಬಳಕೆ ಮತ್ತು ಸಂಗ್ರಹ [ಸಿಸಿಯುಎಸ್] ಕುರಿತು ಉನ್ನತ ಮಟ್ಟದ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ನಿವ್ವಳ – ಶೂನ್ಯ ಗುರಿಗಳನ್ನು ಸಾಧಿಸಲು ಪ್ರಮುಖವೆಂದು ಪರಿಗಣಿಸಲಾದ ಇಂಗಾಲ ಸೆರೆಹಿಡಿಯುವ, ಬಳಕೆ ಮತ್ತು ಸಂಗ್ರಹಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದರ ಮೇಲೆ ವಿಚಾರ ಸಂಕಿರಣ ಕೇಂದ್ರೀಕರಿಸಲಾಗುತ್ತದೆ.   

ಇಂಧನ ಪರಿವರ್ತನೆ ಸಚಿವರ ಸಭೆ [ಇಟಿಎಂಎಂ] ಯೋಜಿತ ಮತ್ತು ಹೊಂದಿಕೆಯಾಗುವ ಕಾರ್ಯಸೂಚಿಯನ್ನು ಒಳಗೊಂಡಿದ್ದು, ಕ್ರಿಯಾ ವಲಯವನ್ನು ಗುರುತಿಸಲಾಗಿದೆ. ಇಟಿಡಬ್ಲ್ಯೂಜಿ [4] ಕಾರ್ಯಗುಂಪಿನ ಸಭೆಗಳನ್ನು ನಡೆಸಲಿದೆ. ಈ ಕೆಳಕಂಡಂತೆ ಸಭೆಗಳನ್ನು ಆಯೋಜಿಸಲಾಗುತ್ತಿದೆ.

1ನೇ ಇಟಿಡಬ್ಲ್ಯೂಜಿ ಸಭೆ – ಬೆಂಗಳೂರು, ಫೆಬ್ರವರಿ 5-7, 2023

2ನೇ ಇಟಿಡಬ್ಲ್ಯೂಜಿ ಸಭೆ – ಗಾಂಧಿನಗರ, ಏಪ್ರಿಲ್ 2-4, 2023

3 ಇಟಿಡಬ್ಲ್ಯೂಜಿ ಸಭೆ – ಮುಂಬೈ, ಮೇ, 15-17, 2023

4 ಇಟಿಡಬ್ಲ್ಯೂಜಿ ಸಭೆ – ಗೋವಾ, ಜುಲೈ 19-20, 2023

ಇಟಿಎಂಎಂ – ಗೋವಾ, ಜುಲೈ 22, 2023 

ಭಾರತ ಆಯೋಜಿಸಿರುವ ಸಭೆಯಲ್ಲಿ ಐರೋಪ್ಯ ಒಕ್ಕೂಟ ಸೇರಿ 19 ದೇಶಗಳಿಂದ 150 ಕ್ಕೂ ಹೆಚ್ಚು ಮತ್ತು 9 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ. ಇದರ ಜೊತೆಗೆ ಅಂತರರಾಷ್ಟ್ರೀಯ ಸಂಘಟನೆಗಳು ಮತ್ತು ಪ್ರಾದೇಶಿಕ ಸಂಘಟನೆಗಳು ಮತ್ತು ಜ್ಞಾನಾಧಾರಿತ ವಲಯದ ಪಾಲುದಾರರು ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.  

ಜಿ20 ಭಾರತದ ಅಧ್ಯಕ್ಷತೆಯಲ್ಲಿ ಹಂಚಿಕೆ, ಸಹಭಾಗಿತ್ವ ಮತ್ತು ಎಲ್ಲರಿಗೂ ಸುಸ್ಥಿರ ಭವಿಷ್ಯ ನಿರ್ಮಿಸಲು ಸದಸ್ಯ ರಾಷ್ಟ್ರಗಳ ನಡುವೆ ನಂಬಿಕೆಯ ಪ್ರಜ್ಞೆಯನ್ನು ಮೂಡಿಸಲಿದೆ.


(Release ID: 1895770) Visitor Counter : 329
Click Here for Related Photos

******



(Release ID: 1895884) Visitor Counter : 188