ಹಣಕಾಸು ಸಚಿವಾಲಯ

ರೈಲ್ವೆಗಾಗಿ ₹2.40 ಲಕ್ಷ ಕೋಟಿಯ ಅತ್ಯಧಿಕ ಬಂಡವಾಳ ಹೂಡಿಕೆ


100 ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಲಾಗಿದೆ

​​​​​​​ಪರಿಣತ ಸಮಿತಿಯಿಂದ ಪರಿಶೀಲಿಸಬೇಕಾದ ಮೂಲಭೂತ ಸೌಕರ್ಯಗಳ ಸಂತುಲಿತ ಪ್ರಧಾನ ಪಟ್ಟಿ

Posted On: 01 FEB 2023 1:19PM by PIB Bengaluru

ಮೂಲಸೌಕರ್ಯ ಮತ್ತು ಉತ್ಪಾದನಾ ಸಾಮರ್ಥ್ಯದಲ್ಲಿನ ಹೂಡಿಕೆಗಳು ಬೆಳವಣಿಗೆ ಮತ್ತು ಉದ್ಯೋಗದ ಮೇಲೆ ದೊಡ್ಡ ಗುಣಕಗಳಲ್ಲಿ ಪರಿಣಾಮವನ್ನು ಬೀರುತ್ತವೆ. ಕೋವಿಡ್ ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ, ಖಾಸಗಿ ಹೂಡಿಕೆಗಳು ಮತ್ತೆ ವೃದ್ಧಿಯಾಗುತ್ತಿವೆ. ಇಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2023-24ರ ಕೇಂದ್ರ ಬಜೆಟ್ ಭಾಷಣದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ರೈಲ್ವೆಗಳು

ರೈಲ್ವೆಗೆ ₹ 2.40 ಲಕ್ಷ ಕೋಟಿ ಬಂಡವಾಳವನ್ನು ಒದಗಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದರು. ಈ ಅತ್ಯಧಿಕ ವೆಚ್ಚವು 2013-14 ರಲ್ಲಿ ರೈಲ್ವೆ ಮಾಡಿದ ವೆಚ್ಚದ ಸುಮಾರು 9 ಪಟ್ಟಿಗಿಂತ ಹೆಚ್ಚು.

ಸಾಗಾಣಿಕೆ(ಲಾಜಿಸ್ಟಿಕ್ಸ್) ಮತ್ತು ಪ್ರಾದೇಶಿಕ ಸಂಪರ್ಕ

ಬಂದರುಗಳು, ಕಲ್ಲಿದ್ದಲು, ಉಕ್ಕು, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ವಲಯಗಳಿಗೆ ಕೊನೆಯ ಮತ್ತು ಮೊದಲ ಮೈಲಿ ಸಂಪರ್ಕಕ್ಕಾಗಿ ನೂರು ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಲಾಗಿದೆ. ಖಾಸಗಿ ಮೂಲಗಳಿಂದ ₹ 15,000 ಕೋಟಿ ಸೇರಿದಂತೆ ₹ 75,000 ಕೋಟಿ ಹೂಡಿಕೆಯೊಂದಿಗೆ ಆದ್ಯತೆಯ ಮೇಲೆ ಇವುಗಳನ್ನು ತೆಗೆದುಕೊಳ್ಳಲಾಗುವುದು. ಪ್ರಾದೇಶಿಕ ವಾಯು ಸಂಪರ್ಕವನ್ನು ಸುಧಾರಿಸಲು ಐವತ್ತು ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು, ವಾಟರ್ ಏರೋಡ್ರೋಮ್‌ಗಳು ಮತ್ತು ಲ್ಯಾಂಡಿಂಗ್ ಮೈದಾನಗಳನ್ನು ಅತ್ಯಧುನಿಕ ರೀತಿಯಲ್ಲಿ ಪುನರುಜ್ಜೀವಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

ಮೂಸೌಕರ್ಯದ ಸಂತುಲಿತ (ಸಾಮರಸ್ಯ) ಪ್ರಧಾನ ಪಟ್ಟಿ 

 ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮೂಲಸೌಕರ್ಯಗಳ ಸಂತುಲಿತ (ಸಾಮರಸ್ಯ) ಮಾಸ್ಟರ್ ಪಟ್ಟಿಯನ್ನು ಪರಿಣತ ಸಮಿತಿ ಪರಿಶೀಲಿಸುತ್ತದೆ. ಅಮೃತ್ ಕಾಲ್‌ ಗೆ ಸೂಕ್ತವಾದ ವರ್ಗೀಕರಣ ಮತ್ತು ಹಣಕಾಸು ಚೌಕಟ್ಟನ್ನು ಸಮಿತಿಯು ಶಿಫಾರಸು ಮಾಡುತ್ತದೆ ಎಂದು ಕೇಂದ್ರ ಬಜೆಟ್ ನಲ್ಲಿ ಉಲ್ಲೇಖಿಸಿದ್ದಾರೆ.

*****

 

 (Release ID: 1895618) Visitor Counter : 156