ಹಣಕಾಸು ಸಚಿವಾಲಯ
ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯಕ್ರಮವು ಆರ್&ಡಿ ಮತ್ತು ಸಾಗಣಿಕೆ ಸವಾಲುಗಳನ್ನು ಜಯಿಸುವ ಮೂಲಕ ತನ್ನ ಗುರಿಗಳನ್ನು ಪೂರೈಸುತ್ತದೆ ಎಂದು ಆರ್ಥಿಕ ಸಮೀಕ್ಷೆ 2022-23 ಹೇಳುತ್ತದೆ
ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯಕ್ರಮದಡಿಯಲ್ಲಿ, 6 ಜನವರಿ 2023 ರಂತೆ 220 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಪ್ರಮಾಣಗಳನ್ನು ನೀಡಲಾಗಿದೆ
97 ಪ್ರತಿಶತದಷ್ಟು ಅರ್ಹ ಫಲಾನುಭವಿಗಳು ಕೋವಿಡ್-19 ಲಸಿಕೆಯ ಕನಿಷ್ಠ ಒಂದು ಪ್ರಮಾಣವನ್ನು ಸ್ವೀಕರಿಸಿದ್ದಾರೆ
90 ಪ್ರತಿಶತದಷ್ಟು ಅರ್ಹ ಫಲಾನುಭವಿಗಳು ಎರಡು ಪ್ರಮಾಣವನ್ನು ಸ್ವೀಕರಿಸಿದ್ದಾರೆ
ಸಂಪೂರ್ಣ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಉಪಯುಕ್ತತೆಗಳೊಂದಿಗೆ ಕೊ-ವಿನ್ ವೇದಿಕೆಯು ಈ ಅಂತ್ಯದಿಂದ ಆ ಅಂತ್ಯದ ವರೆಗೆ ಪರಿಹಾರವನ್ನು ಒದಗಿಸುತ್ತದೆ
ಕೊ-ವಿನ್ ವೇದಿಕೆಯು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಕಾಲಿಕ ಸ್ಟಾಕ್ ಟ್ರ್ಯಾಕಿಂಗ್ ಅನ್ನು ಒದಗಿಸುತ್ತದೆ; ಕೋವಿಡ್-19 ಲಸಿಕೆಗಳ ತ್ಯಾಜ್ಯವನ್ನು ಪ್ಲಗ್ ಮಾಡಲು ಕೂಡಾ ಸಹಾಯ ಮಾಡುತ್ತದೆ
Posted On:
31 JAN 2023 1:29PM by PIB Bengaluru
ಭಾರತದ ರಾಷ್ಟ್ರೀಯ ಕೋವಿಡ್ -19 ಲಸಿಕೆ ಕಾರ್ಯಕ್ರಮದ ಯಶಸ್ಸಿನ ಕಥೆಯನ್ನು ವಿವರಿಸುತ್ತಾ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆರ್ಥಿಕ ಸಮೀಕ್ಷೆ 2022-23 ಇದರಲ್ಲಿ, 6 ಜನವರಿ 2023 ರಂತೆ ಭಾರತವು ದೇಶಾದ್ಯಂತ 220 ಕೋಟಿ ಕ್ಕಿಂತ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳನ್ನು ನೀಡಿದೆ ಎಂದು ಹೇಳಿದೆ. 97 ಪ್ರತಿಶತದಷ್ಟು ಅರ್ಹ ಫಲಾನುಭವಿಗಳು ಈಗಾಗಲೇ ಕನಿಷ್ಠ ಒಂದು ಡೋಸ್ ಕೋವಿಡ್ -19 ಲಸಿಕೆಯನ್ನು ಪಡೆದಿದ್ದಾರೆ ಮತ್ತು ಸುಮಾರು 90 ಪ್ರತಿಶತದಷ್ಟು ಅರ್ಹ ಫಲಾನುಭವಿಗಳು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. 12-14 ವರ್ಷ ವಯಸ್ಸಿನವರಿಗೆ 16 ಮಾರ್ಚ್ 2022 ರಂದು ಲಸಿಕೆಯನ್ನು ನೀಡಲು ಪ್ರಾರಂಭಿಸಲಾಯಿತು, ನಂತರ 18-59 ವರ್ಷ ವಯಸ್ಸಿನವರಿಗೆ ಮುನ್ನೆಚ್ಚರಿಕೆಯ ಪ್ರಮಾಣವನ್ನು 10 ಏಪ್ರಿಲ್ 2022 ರಿಂದ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅಲ್ಲದೆ, 22.4 ಕೋಟಿ ಮುನ್ನೆಚ್ಚರಿಕೆಯ ಡೋಸ್‌ಗಳನ್ನು ಈ ತನಕ ನಿರ್ವಹಿಸಲಾಗಿದೆ ಎಂದು ಸಮೀಕ್ಷೆ ಹೇಳುತ್ತದೆ
ಭಾರತದ ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯಕ್ರಮವು ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವಾಗಿದೆ, ಇದು 16 ಜನವರಿ 2021 ರಂದು ಆರಂಭದಲ್ಲಿ ದೇಶದ ವಯಸ್ಕ ಜನಸಂಖ್ಯೆಯನ್ನು ಆಧ್ಯತೆ ಮೇಲೆ ಕಡಿಮೆ ಸಮಯದಲ್ಲಿ ಆವರಿಸುವ ಗುರಿಯೊಂದಿಗೆ ಪ್ರಾರಂಭವಾಯಿತು, 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವ್ಯಕ್ತಿಗಳನ್ನು ಸೇರಿಸಲು ಮತ್ತು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವ್ಯಕ್ತಿಗಳಿಗೆ ಮುನ್ನೆಚ್ಚರಿಕೆಯ ಪ್ರಮಾಣವಾಗಿ ಕಾರ್ಯಕ್ರಮವನ್ನು ಆನಂತರ ವಿಸ್ತರಿಸಲಾಗಿದೆ.
ಕೋವಿಡ್-19 ಲಸಿಕೆಗಳ ಸಂಶೋಧನೆ ಮತ್ತು ಪರಿಚಯವು - ಹೊಸ ಕೋವಿಡ್ ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿ, 2.6 ಲಕ್ಷಕ್ಕೂ ಹೆಚ್ಚು ವ್ಯಾಕ್ಸಿನೇಟರ್ಗಳು ಮತ್ತು 4.8 ಲಕ್ಷ ಇತರ ಲಸಿಕೆ ತಂಡದ ಸದಸ್ಯರ ತರಬೇತಿ, ಲಭ್ಯವಿರುವ ಲಸಿಕೆಗಳ ಅತ್ಯುತ್ತಮ ಬಳಕೆ, ತಲುಪಲು ಕಷ್ಟಕರವಾದ ಜನಸಂಖ್ಯೆ ಮತ್ತು ಅಗತ್ಯದಂತಹ ಅನೇಕ ಸವಾಲುಗಳನ್ನು ಎದುರಿಸಿತು. ಲಸಿಕಾ ಕಾರ್ಯಕ್ರಮವನ್ನು ಹೆಚ್ಚಿಸುವುದರ ಜೊತೆಗೆ ಎಲ್ಲಾ ಅಗತ್ಯ ಆರೋಗ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳಲು. ಹೆಚ್ಚುವರಿಯಾಗಿ, 29,000 ಕೋಲ್ಡ್ ಚೈನ್ ಪಾಯಿಂಟ್ ಗಳಲ್ಲಿ ಲಸಿಕೆಗಳ ಸಂಗ್ರಹಣೆ ಮತ್ತು ವಿಕೇಂದ್ರೀಕೃತ ವಿತರಣೆ, ಕೋಲ್ಡ್ ಚೈನ್ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಫಲಾನುಭವಿಗಳನ್ನು ನೋಂದಾಯಿಸಲು ಮತ್ತು ಲಸಿಕೆ ಸೇವೆಯ ವಿತರಣೆಗಾಗಿ ಐಟಿ ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸುವಂತಹ ಸಾಗಾಣಿಕೆ ಸವಾಲುಗಳನ್ನು ಸಹ ಗುರುತಿಸಿ ಪರಿಹರಿಸಲಾಯಿತು. ಕಾರ್ಯಕ್ರಮವು ಯೋಚಿಸಿದಂತೆ ಈ ಸವಾಲುಗಳನ್ನು ಜಯಿಸಲು ಮತ್ತು ಕಡಿಮೆ ಸಮಯದ ಚೌಕಟ್ಟಿನೊಳಗೆ ತನ್ನ ಗುರಿಗಳನ್ನು ಸಾಧಿಸಲು ಸಾಧ್ಯವಾಯಿತು.
ಕೊ-ವಿನ್: ಲಸಿಕೆಯ ಯಶಸ್ವಿ ಡಿಜಿಟಲ್ ಕಥೆ
ಕೊ-ವಿನ್ ನ ದೃಢವಾದ ಡಿಜಿಟಲ್ ಮೂಲಸೌಕರ್ಯದಿಂದಾಗಿ ಪ್ರಸ್ತುತ 220 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಡೋಸ್ ಗಳ ನಿರ್ವಹಣೆ ಸುಲಭ ಸಾಧ್ಯವಾಗಿದೆ ಎಂದು ಆರ್ಥಿಕ ಸಮೀಕ್ಷೆಯು ಹೇಳುತ್ತದೆ. ಇದು ಡಿಜಿಟಲ್ ಚೌಕಟ್ಟಿನ ಈ ವಿಶಾಲವಾದ ವ್ಯವಸ್ಥೆಯಡಿ ಜೀವನ ಮತ್ತು ಜೀವನೋಪಾಯ ಎರಡನ್ನೂ ಸುರಕ್ಷಿತವಾಗಿರಿಸುವುದನ್ನು ಮುಂದುವರಿಸುವಾಗ, ತ್ವರಿತ ಮತ್ತು ಬಾಳಿಕೆ ಬರುವ ಆರ್ಥಿಕ ಚೇತರಿಕೆಯನ್ನು ತ್ವರಿತವಾಗಿ ನೋಂದಾಯಿಸಲು ಭಾರತಕ್ಕೆ ಸಾಧ್ಯವಾಯಿತು. ನಿರಂತರವಾಗಿ ತನ್ನ ವ್ಯಾಪ್ತಿಯನ್ನು ಸುಧಾರಿಸುವ ಸರ್ಕಾರದ ಪಾಲಿಗೆ ಉತ್ತಮ ನಿರ್ವಹಣಾ ವ್ಯವಸ್ಥೆಯ ಸೇರ್ಪಡೆ ಪ್ರಬಲ ಶಕ್ತಿಯಾಗಿದೆ. ಜನವರಿ 2021 ರಿಂದ ಸೆಪ್ಟೆಂಬರ್ 2022 ರ ನಡುವೆ ಒಟ್ಟು 104 ಕೋಟಿ ಕೊ-ವಿನ್ ಫಲಾನುಭವಿಗಳಲ್ಲಿ 84.7 ಕೋಟಿಗೂ ಹೆಚ್ಚು ಕೊ-ವಿನ್ ಫಲಾನುಭವಿಗಳೊಂದಿಗೆ ಆಧಾರ್ ಸಂಖ್ಯೆ ಜೋಡಿಸಲಾಗಿದೆ, ಹಣಕಾಸು ವರ್ಷ15 ರಲ್ಲಿ ಪ್ರಾರಂಭಿಸಲಾದ ಜಾಮ್ ಯೋಜನೆಯ ಸಂಕಲ್ಪ ಈಗ ರಾಷ್ಟ್ರಕ್ಕೆ ಜೀವ ರಕ್ಷಕ ಎಂದು ಸಾಬೀತಾಯಿತು.
ಭಾರತದಲ್ಲಿ ಲಸಿಕೆಗಳು ಮತ್ತು ಲಸಿಕೆಗಳ ಇತಿಹಾಸ ಪುಟವು ನಮ್ಮನ್ನು ಹಿಂದಕ್ಕೆ, ಅಂದರೆ ಸಿಡುಬು ರೋಗಕ್ಕೆ ಲಸಿಕೆಯ ಮೊದಲ ಡೋಸ್ ಅನ್ನು ನೀಡಿದ 1802ರ ಕಾಲಮಾನಕ್ಕೆ ಕರೆದೊಯ್ಯುತ್ತದೆ ಎಂದು ಆರ್ಥಿಕ ಸಮೀಕ್ಷೆಯು ಉಲ್ಲೇಖಿಸುತ್ತದೆ. ಆಗಿನ ಸಮಯದಲ್ಲಿ ಲಸಿಕೆಗಳ ವೈದ್ಯಕೀಯ ಇತಿಹಾಸವನ್ನು ಪತ್ತೆಹಚ್ಚುವುದು ಕಠಿಣ ಕೆಲಸವಾಗಿತ್ತು. ಆದರೆ, ಸಮಕಾಲೀನ ಸನ್ನಿವೇಶದಲ್ಲಿ, ಡಿಜಿಟಲ್ ಯುಗದಲ್ಲಿ ಈಗ ನಾವು ಗಣನೀಯವಾಗಿ ಪ್ರಗತಿ ಹೊಂದಿದ್ದೇವೆ ಮತ್ತು ಹೆಚ್ಚಿನ ವೈದ್ಯಕೀಯ ವಿಜ್ಞಾನ ಹುಡುಕಾಟಗಳು ಕೈಬೆರಳುಗಳ 'ಕ್ಲಿಕ್' ದೂರದಲ್ಲಿದೆ. ಅಲ್ಲದೆ, ಕೋವಿಡ್ ಆಗಮನದ ಮುಂಚೆಯೇ, ಹಲವಾರು ಇತರ ಕಾಯಿಲೆಗಳಿಗೆ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಭಾರತವು ಸಾಮೂಹಿಕ ಲಸಿಕೆಗಾಗಿ ತಂತ್ರವನ್ನು ರೂಪಿಸಿತ್ತು. ವರ್ಷಗಳಲ್ಲಿ, ಸರ್ಕಾರವು "ಅಂತ್ಯೋದಯ"ದ ಮೂಲ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಡಿಜಿಟಲ್ ಆರೋಗ್ಯ ಸೇವೆ ವಿತರಣೆಯ ಮೇಲೆ ಕೇಂದ್ರೀಕರಿಸಿದೆ. ಆದಾಗ್ಯೂ, ಸಾಂಕ್ರಾಮಿಕ ಸಮಯದಲ್ಲಿ ಪ್ರತಿರಕ್ಷೆಯನ್ನು ಸಾಧಿಸಲು ಇದು ಏಕೈಕ ಮಾರ್ಗವಾಗಿದೆ ಎಂದು ಲಸಿಕೆ ಪ್ರಕ್ರಿಯೆಯಲ್ಲಿ ಅಂತ್ಯದಿಂದ ಕೊನೆಯವರೆಗೆ ಡಿಜಿಟಲೀಕರಣದ ಅಗತ್ಯವನ್ನು ಅಳವಡಿಸಲಾಯಿತು. ಅನೇಕ ದೇಶಗಳು ಮೊದಲಿನಿಂದಲೂ ಇಂತಹ ಹಲವು ಮಾದರಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದರೂ, ಭಾರತದಲ್ಲಿ ಮಾತ್ರ ಅತ್ಯುತ್ತಮ ಸ್ಥಿತಿಯಲ್ಲಿತ್ತು. ಸರ್ಕಾರದ ದೃಷ್ಟಿಕೋನದ ಜಾಮ್ ಟ್ರಿನಿಟಿಯ ಗೆ ಧನ್ಯವಾದಗಳು, ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯಕ್ರಮವನ್ನು ಕೊ-ವಿನ್ (ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್ವರ್ಕ್) ಮೂಲಕ ಅನುಷ್ಠಾನಗೊಳಿಸುವಲ್ಲಿ ಯಶಸ್ಸು ಕಂಡು ನಿರ್ಣಾಯಕ ಸವಾಲನ್ನು ಸಮಯಕ್ಕೆ ಅನುಗುಣವಾಗಿ ಸಕಾಲಿಕವಾಗಿ ಪರಿಹರಿಸಲಾಗಿದೆ.
ಭಾರತದ ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯಕ್ರಮದಡಿಯಲ್ಲಿ ಇ-ವಿನ್ (ಎಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್‌ವರ್ಕ್) ವೃದಿಕೆ(ಪ್ಲಾಟ್‌ಫಾರ್ಮ್)ಯ ವಿಸ್ತರಣೆಯಾಗಿ ಅಭಿವೃದ್ಧಿಪಡಿಸಲಾದ ಕೊ-ವಿನ್ ವೇದಿಕೆಯ ಯಶಸ್ಸನ್ನು ಸಮೀಕ್ಷೆ ವಿವರಿಸುತ್ತದೆ. ಸಮಗ್ರ ಕ್ಲೌಡ್-ಆಧಾರಿತ ತಂತ್ರಜ್ಞಾನ ವ್ಯವಸ್ಥೆ ಕೊ-ವಿನ್ ಬಗ್ಗೆ ವಿವರಿಸುತ್ತದೆ. ಭಾರತದಲ್ಲಿ ಕೋವಿಡ್-19 ಲಸಿಕಾ ಯೋಜನೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಕೊ-ವಿನ್ ವ್ಯವಸ್ಥೆಯು ಸಂಪೂರ್ಣ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಉಪಯುಕ್ತತೆಗಳೊಂದಿಗೆ ಅಂತ್ಯದಿಂದ ಅಂತ್ಯದ ಪರಿಹಾರವನ್ನು ಒದಗಿಸಿದೆ. ಮುಕ್ತ ವೇದಿಕೆಯ ಡ್ಯುಯಲ್ ಇಂಟರ್ಫೇಸ್ ನಾಗರಿಕ ಮತ್ತು ನಿರ್ವಾಹಕ-ಕೇಂದ್ರಿತ ಸೇವೆಗಳಾದ್ಯಂತ ಅದನ್ನು ಬಳಸಲು ಸಾಧ್ಯವಾಗುವಂತೆ ಮಾಡಿದೆ. ಲಸಿಕೆಯ ಪೂರೈಕೆ ಸರಪಳಿಗಳಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ವೇದಿಕೆಯು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ (ಸರ್ಕಾರಿ ಮತ್ತು ಖಾಸಗಿ) ಸಕಾಲಿಕ ಯಥಾರ್ಥ(ನೈಜ-ಸಮಯ) ಸ್ಟಾಕ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕೂಡಾ ಒದಗಿಸಿತು. ಇದು ಕೊ-ವಿನ್ ಪೂರ್ವದಲ್ಲಿ ಆಗುತ್ತಿದ್ದಂತಹ ಕೋವಿಡ್-19 ಲಸಿಕೆಗಳ ನಷ್ಟ-ವ್ಯರ್ಥವನ್ನು ಮತ್ತಷ್ಟು ಕಡಿಮೆ ಮಾಡಿತು.
ಈ ಕೊ-ವಿನ್ ವೆಬ್ ವ್ಯವಸ್ಥೆಯು 12 ಪ್ರಾದೇಶಿಕ ಭಾಷೆಗಳಲ್ಲಿ ಬಳಕೆದಾರರು (ನಿರ್ವಾಹಕರು, ಮೇಲ್ವಿಚಾರಕರು ಮತ್ತು ವ್ಯಾಕ್ಸಿನೇಟರ್‌ಗಳು), ಲಸಿಕೆ ಕೇಂದ್ರಗಳು ಮತ್ತು ಫಲಾನುಭವಿಗಳ ನೋಂದಣಿಯನ್ನು ಮೀರಿ, ಡಿಜಿಟಲ್ ಪರಿಶೀಲಿಸಬಹುದಾದ ಪ್ರಮಾಣಪತ್ರಗಳ ವಿತರಣೆಯನ್ನು ಕೂಡಾ ವಿಸ್ತರಿಸಿದೆ ಎಂದು ಸಮೀಕ್ಷೆ ಹೇಳುತ್ತದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸಹಾಯ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳಿಗೆ ಸಮಾನವಾಗಿ ಲಸಿಕೆಯ ಪ್ರಮಾಣಪತ್ರವನ್ನು ವಿನ್ಯಾಸಗೊಳಿಸಲಾಗಿದೆ. ಒಂದೇ ದಾಖಲೆಯಲ್ಲಿ (ಆಧಾರ್) ಇರುವ ನೋಂದಣಿಯ ಹೊರೆಯನ್ನು ಕಡಿಮೆ ಮಾಡಲು, ಸರ್ಕಾರವು 10 ನಮೂನೆಯ ಫೋಟೋ ಗುರುತಿನ ಕಾರ್ಡ್‌ಗಳಲ್ಲಿ [ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಪಿಂಚಣಿ ಪಾಸ್‌ಬುಕ್, ಎನ್‌ಪಿಆರ್ ಸ್ಮಾರ್ಟ್ ಕಾರ್ಡ್, ವೋಟರ್ ಐಡಿ, ಅಂಗವಿಕಲರ ಗುರುತಿನ ಚೀಟಿ, ಭಾವಚಿತ್ರವಿರುವ ಪಡಿತರ ಚೀಟಿ, ವಿದ್ಯಾರ್ಥಿಗಳ ಭಾವಚಿತ್ರವಿರುವ ಗುರುತಿನ ಚೀಟಿ] ಇಂತಹ ಗುರುತಿನ ಚೀಟಿ ವಿಶಿಷ್ಟತೆಯನ್ನು ಬಳಸಿಕೊಂಡು ನೋಂದಣಿಗೆ ಅನುಮತಿ ನೀಡಿದೆ. ಡಿಜಿಟಲ್ ವಿಭಜನೆ ಮತ್ತು ಡಿಜಿಟಲ್ ವ್ಯವಸ್ಥೆಯಿಂದ ಹೊರಗಿಡುವಿಕೆಯ ಸಮಸ್ಯೆಯನ್ನು ನಿಭಾಯಿಸಲು, ಕೇವಲ ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ರಾಷ್ಟ್ರೀಯ ಕೋವಿಡ್ ಸಹಾಯವಾಣಿಯ ಮೂಲಕ ಬಹು ಫಲಾನುಭವಿಗಳನ್ನು (ಆರು ಮಂದಿ ವರೆಗೆ) ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಏರ್ಪಡು ಮಾಡಲು ಅನುಮತಿಸಲಾಗಿದೆ. ವಯಸ್ಸು, ಅಂಗವೈಕಲ್ಯ ಅಥವಾ ಗುರುತಿನ ಕಾರಣದಿಂದ ಕೋವಿಡ್ ಸಮಯದಲ್ಲಿ ಭೌತಿಕ ಸೌಲಭ್ಯಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುವವರು ಹೊರಗುಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿರುವ “ಕಾರ್ಯಸ್ಥಳಗಳ ಕೋವಿಡ್ ಲಸಿಕೆ ಕೇಂದ್ರ” ಮತ್ತು “ಮನೆಸಮೀಪದ ಕೋವಿಡ್ ಲಸಿಕೆ ಕೇಂದ್ರಗಳು " ಮುಂತಾದ ವ್ಯವಸ್ಥೆಗಳನ್ನು ಏರ್ಪಡಿಸುವ ಮೂಲಕ ಜನಸಾಮಾನ್ಯರಿಗೆ ಲಸಿಕೆ ಲಭ್ಯವಾಗುವಂತೆ ಮಾಡಲಾಗಿದೆ.
*****
(Release ID: 1895208)
Visitor Counter : 296