ಹಣಕಾಸು ಸಚಿವಾಲಯ

ಜಾಗತಿಕ ಪ್ರತಿರೋಧ ವಾತಾವರಣಗಳ ನಡುವೆಯೂ ಭಾರತದ ಬಾಹ್ಯ ವಲಯವು ಶಕ್ತಿಯುತ ಸ್ಥಾನವನ್ನು ಪ್ರದರ್ಶಿಸುತ್ತಿದೆ


ಭಾರತೀಯ ರಫ್ತುಗಳಲ್ಲಿ ತುಲನಾತ್ಮಕ ಪ್ರಯೋಜನಕ್ಕಾಗಿ ವಿವಿಧ ರಫ್ತು ಉತ್ತೇಜನಾ ಕ್ರಮಗಳನ್ನು ಪ್ರಾರಂಭಿಸಲಾಗಿದೆ

ಹಣಕಾಸು ವರ್ಷ'22 ರಲ್ಲಿನ ರಫ್ತಿನ ದಾಖಲೆಯ ಮಟ್ಟಗಳ ಹಿನ್ನೆಲೆಯಲ್ಲಿ ಹಣಕಾಸು ವರ್ಷ'23 ರಲ್ಲಿ ಭಾರತದ ರಫ್ತುಗಳು ಉತ್ತಮ ಸ್ಥಿತಿಯನ್ನು ತೋರಿಸಿವೆ

ಏಪ್ರಿಲ್-ಡಿಸೆಂಬರ್ 2022 ರಲ್ಲಿ ಭಾರತದ ಒಟ್ಟಾರೆ ರಫ್ತು ಕಳೆದ ವರ್ಷ ಇದೇ ಅವಧಿಯ ಡಾಲರ್ ಗಳಲ್ಲಿ 16% ರಷ್ಟು ಧನಾತ್ಮಕ ಬೆಳವಣಿಗೆ ಕಂಡಿದೆ

ಆರ್ಥಿಕ ಚಟುವಟಿಕೆಯ ಪುನಶ್ಚೇತನವು ಭಾರತೀಯ ಆಮದುಗಳಲ್ಲಿ ಹೆಚ್ಚಳಕ್ಕೆ ಕೊಡುಗೆ ನೀಡಿದೆ

ಕರೆಂಟ್ ಎಕೌಂಟ್ ಕೊರತೆಯು ಹಣಕಾಸು ವರ್ಷ'23 ರಲ್ಲಿ ಸುಸ್ಥಿರ ಮಿತಿಗಳಲ್ಲಿ ಇರಬಹುದೆಂದು ನಿರೀಕ್ಷಿಸಲಾಗಿದೆ

ಜಿಡಿಪಿ ಮತ್ತು ಬಾಹ್ಯ ಸಾಲದ ಅನುಪಾತ ಉತ್ತಮ ಮಟ್ಟಗಳಲ್ಲಿವೆ

ಡಿಸೆಂಬರ್'22 ರ ಅಂತ್ಯದ ವೇಳೆಗೆ ವಿದೇಶಿ ಮೀಸಲು 562.7 ಶತಕೋಟಿ ಡಾಲರ್ ನಷ್ಟು ಆಗಿದೆ

Posted On: 31 JAN 2023 1:58PM by PIB Bengaluru

ಬಲವಾದ ಮ್ಯಾಕ್ರೋ ಫಂಡಮೆಂಟಲ್ಸ್ ಮತ್ತು ಬಫರ್‌ಗಳಿಂದಾಗಿ ಜಾಗತಿಕ ಪ್ರತಿರೋಧ ಎದುರಿಸಲು ಸಮರ್ಥವಾಗಿದೆ ಹಾಗೂ ಪ್ರತಿಕೂಲ ವಾತಾವರಣಗಳ ನಡುವೆಯೂ ಭಾರತದ ಬಾಹ್ಯ ವಲಯವು ಶಕ್ತಿಯುತ ಸ್ಥಾನವನ್ನು ಪ್ರದರ್ಶಿಸುತ್ತಿದೆ. ಭಾರತದ ಬಾಹ್ಯ ವಲಯವು ಆಘಾತಗಳು ಮತ್ತು ಅನಿಶ್ಚಿತತೆಗಳಿಂದ ಹೊಡೆತಗಳಿಂದ ಬಹಳಷ್ಟು ಸುಸ್ಥರತೆಯತ್ತ ಸಾಗುತ್ತಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2022-23 ತಿಳಿಸಿದೆ. ಜಾಗತಿಕ ಸರಕುಗಳ ಬೆಲೆಗಳನ್ನು ಸರಾಗಗೊಳಿಸುವಿಕೆ, ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಯ ಚಂಚಲತೆಯನ್ನು ಹೆಚ್ಚಿಸುವುದು, ಬಂಡವಾಳದ ಹರಿವಿನ ಹಿಮ್ಮುಖತೆ, ಬಂಡವಾಳದ ಸವಕಳಿ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಮತ್ತು ವ್ಯಾಪಾರದಲ್ಲಿ ನಿಧಾನಗತಿ ಇವುಗಳ ವ್ಯಾಖ್ಯಾನೆಯಲ್ಲಿ ವಿವಿಧ ಮಾಹಿತಿಗಳು ಪ್ರಕಟವಾಗಿವೆ.  

https://static.pib.gov.in/WriteReadData/userfiles/image/image001Y4AL.jpg

ಭಾರತದ ರಫ್ತುಗಳು ಹಣಕಾಸು ವರ್ಷ 23ರಲ್ಲಿ (ಡಿಸೆಂಬರ್ 2022 ರವರೆಗಿನ ಅವಧಿಯಲ್ಲಿ) ಹಣಕಾಸು ವರ್ಷ 22ರ ದಾಖಲೆ ಮಟ್ಟದ ರಫ್ತುಗಳ ಹಿನ್ನೆಲೆಯಲ್ಲಿ ಉತ್ತಮ ಸ್ಥಿತಿಯನ್ನು ಪ್ರದರ್ಶಿಸಿವೆ ಎಂದು ಆರ್ಥಿಕ ಸಮೀಕ್ಷೆ ತಿಳಿಸುತ್ತದೆ. ಪೆಟ್ರೋಲಿಯಂ ಉತ್ಪನ್ನಗಳು, ರತ್ನಗಳು ಮತ್ತು ಆಭರಣಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಔಷಧಗಳು ಮತ್ತು ಔಷಧೀಯ ವಸ್ತುಗಳು ಪ್ರಮುಖ ರಫ್ತು ವಸ್ತುಗಳಲ್ಲಿ ಸೇರಿವೆ. ನಿಧಾನಗತಿಯ ಜಾಗತಿಕ ಆರ್ಥಿಕತೆಯಲ್ಲಿ, ನಿಧಾನಗೊಂಡಿರುವ ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ನಿರೂಪಿಸಲ್ಪಡುವ ಭಾರತೀಯ ರಫ್ತುಗಳಲ್ಲಿ ಕೂಡಾ ನಿಧಾನಗತಿಯು ಅನಿವಾರ್ಯವಾಗಿದೆ. ಬಾಹ್ಯ ವಲಯದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವಲ್ಲಿ ರಫ್ತು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಸಮೀಕ್ಷೆಯು ಹೇಳುತ್ತದೆ, ಮಧ್ಯಮದಿಂದ ದೀರ್ಘಾವಧಿಯ ದೃಷ್ಟಿಕೋನದಿಂದ, ವಿವಿಧ ರಫ್ತು ಉತ್ತೇಜನಾ ಕ್ರಮಗಳನ್ನು ಪರಿಗಣಿಸಲಾಗುತ್ತಿದೆ ಹಾಗೂ ಅಳವಡಿಸಲಾಗಿದೆ. ಭಾರತೀಯ ರಫ್ತುಗಳನ್ನು ಫಲಪ್ರದವಾಗಿ ಸಾಕಾರಗೊಳಿಸುವಲ್ಲಿ ಈ ಕ್ರಮಗಳು ತುಲನಾತ್ಮಕ ಪ್ರಯೋಜನವನ್ನು ನೀಡುತ್ತಿವೆ.

ಆಂತರಿಕ ಸಾಗಾಟ (ಲಾಜಿಸ್ಟಿಕ್ಸ್) ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಭಾರತೀಯ ರಫ್ತುಗಳನ್ನು ಉತ್ತೇಜಿಸಲು ರೂಪಿಸಿದ ರಾಷ್ಟ್ರೀಯ ಸಾಗಾಟ(ಲಾಜಿಸ್ಟಿಕ್ಸ್) ನೀತಿಯು ದೇಶೀಯ ಸಮಸ್ಯೆ, ವಿರೋಧಾಭಾಸ ಹಾಗೂ ಘರ್ಷಣೆಯನ್ನು ತೆಗೆದುಹಾಕಿ ಸಾಗಾಟವನ್ನು ಸರಾಗಗೊಳಿಸುತ್ತದೆ ಎಂದು ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ. ಯು.ಎ.ಇ. ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಜೊತೆಗಿನ ಇತ್ತೀಚಿನ ಮುಕ್ತ ವ್ಯಾಪಾರ ಒಪ್ಪಂದಗಳು ರಿಯಾಯಿತಿ ಸುಂಕಗಳು ಮತ್ತು ಸುಂಕ-ರಹಿತ, ಅಡೆತಡೆಗಳಿಲ್ಲದ ರಫ್ತುಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಬಾಹ್ಯ ಸಮಸ್ಯೆಗಳನ್ನು ಪರಿಹರಿಸುತ್ತಿವೆ. ಹೀಗಾಗಿ, ಕಾಲಾನಂತರದಲ್ಲಿ ಇಡೀ ಪರಿಸರ ವ್ಯವಸ್ಥೆಯು ರಫ್ತು-ಸ್ನೇಹಿ ರೀತಿಯಲ್ಲಿ ವಿಕಸನಗೊಳ್ಳಲಿದೆ ಎಂದು ವರದಿ ಹೇಳುತ್ತದೆ.

ಹೆಚ್ಚಿದ ಕಚ್ಚಾ ತೈಲ ಬೆಲೆಗಳ ಹೊರತಾಗಿ, ಆರ್ಥಿಕ ಚಟುವಟಿಕೆಯ ಪುನಶ್ಚೇತನವು ಆಮದುಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಆರ್ಥಿಕ ಸಮೀಕ್ಷೆಯು ಹೇಳುತ್ತದೆ. ಪೆಟ್ರೋಲಿಯಂ, ಕಚ್ಚಾ ಮತ್ತು ಉತ್ಪನ್ನಗಳು; ಎಲೆಕ್ಟ್ರಾನಿಕ್ ವಸ್ತುಗಳು; ಕಲ್ಲಿದ್ದಲು, ಕೋಕ್ ಮತ್ತು ಬ್ರಿಕ್ವೆಟ್‌ಗಳು, ಯಂತ್ರೋಪಕರಣಗಳು, ಎಲೆಕ್ಟ್ರಿಕಲ್ ಮತ್ತು ನಾನ್-ಎಲೆಕ್ಟ್ರಿಕಲ್ ಮತ್ತು ಚಿನ್ನ ಇತ್ಯಾದಿ;  ಅಗ್ರ ಆಮದು ವಸ್ತುಗಳಲ್ಲಿ ಸೇರಿವೆ. ಜಾಗತಿಕ ಸರಕುಗಳ ಬೆಲೆಯನ್ನು ಹದಗೊಳಿಸುವಿಕೆಯು ಮುಂದುವರಿದಿದ್ದು ಆಮದುಗಳಿಗೆ ಸಹಾಯ ಮಾಡುತ್ತದೆ ಹಾಗೂ ಚಿನ್ನವಲ್ಲದ, ತೈಲೇತರ ಆಮದುಗಳು ಗಣನೀಯವಾಗಿ ಕಡಿಮೆಯಾಗಲಿಲ್ಲ ಎಂದು ವರದಿ ಹೇಳುತ್ತದೆ

ಹಣಕಾಸು ವರ್ಷ22 ರಲ್ಲಿ ಭಾರತವು 422 ಶತಕೋಟಿ ಡಾಲರ್ ನಷ್ಟು ಮೌಲ್ಯದ ಸರಕು ರಫ್ತುಮಾಡಿದ್ದು, ಇದು ಸಾರ್ವಕಾಲಿಕ ಹೆಚ್ಚಿನ ವಾರ್ಷಿಕ ಸರಕು ರಫ್ತುದಾಖಲೆಯಾಗಿದೆ ಎಂದು ಸಮೀಕ್ಷೆ ಹೇಳುತ್ತದೆ. 2021ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ 305 ಶತಕೋಟಿ ಡಾಲರ್ ನಷ್ಟು ಸರಕು ರಫ್ತು ಆಗಿದ್ದು, 2022ರ ಏಪ್ರಿಲ್-ಡಿಸೆಂಬರ್‌ನಲ್ಲಿ 332 ಶತಕೋಟಿ ಶತಕೋಟಿ ಡಾಲರ್ ನಷ್ಟು ಸರಕು ರಫ್ತು ಆಗಿದೆ. ಹಣಕಾಸು ವರ್ಷ22ರಲ್ಲಿ ಔಷಧಗಳು ಮತ್ತು ಔಷಧೀಯವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಸಾವಯವ ಮತ್ತು ಅಜೈವಿಕ ರಾಸಾಯನಿಕಗಳ ವಲಯದ ರಫ್ತುಗಳಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಹಣಕಾಸು ವರ್ಷ 22ರ ವಿಶ್ವ ಸೇವಾ ಕ್ಷೇತ್ರದ ವ್ಯಾಪಾರದಲ್ಲಿ ಭಾರತವು ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಭಾರತದ ಸೇವಾ ಕ್ಷೇತ್ರದ ರಫ್ತು ಹಣಕಾಸು ವರ್ಷ 22 ರಲ್ಲಿ 254.5 ಶತಕೋಟಿ ಡಾಲರ್ ನಷ್ಟಾಗಿದೆ ಹಾಗೂ ಹಣಕಾಸು ವರ್ಷ 21 ಕ್ಕಿಂತ 23.5 % ರಷ್ಟು ಏರಿಕೆಯನ್ನು ದಾಖಲಿಸಿದೆ.  2022ರ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಹಿಂದಿನ ವರ್ಷದ ಇದೇ ಅವಧಿಗಿಂತ 32.7% ಹೆಚ್ಚು ಏರಿಕೆಯನ್ನು ದಾಖಲಿಸಿದೆ. 2022 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸರಕುಗಳು ಮತ್ತು ಸೇವೆಗಳ ರಫ್ತು ಮೌಲ್ಯವು 568.6 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ, ಇದು 2021ರ ಏಪ್ರಿಲ್-ಡಿಸೆಂಬರ್ ಅವಧಿಗೆ ಹೋಲಿಸಿದರೆ 16%ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.  

ಭಾರತೀಯ ರೂಪಾಯಿಗಳಲ್ಲಿ ಅಂತರಾಷ್ಟ್ರೀಯ ವ್ಯಾಪಾರ ವಹಿವಾಟುಗಳನ್ನು ಉತ್ತೇಜಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಮೀಕ್ಷೆಯು ಉಲ್ಲೇಖಿಸಿದೆ.  ಒಮ್ಮೆ ಈ ಉಪಕ್ರಮಗಳು ಸುವ್ಯವಸ್ಥೆಯನ್ನು ಪಡೆದರೆ, ವಿದೇಶಿ ಹಣ(ಕರೆನ್ಸಿ)ದ ಮೇಲಿನ ಅವಲಂಬನೆಯು ಸಂಭಾವ್ಯವಾಗಿ ಕಡಿಮೆಯಾಗುತ್ತದೆ, ಆರ್ಥಿಕತೆಯು ಬಾಹ್ಯ ಆಘಾತಗಳಿಗೆ ಕಡಿಮೆ ದುರ್ಬಲವಾಗಿರುತ್ತದೆ. ಜುಲೈ 2022 ರಲ್ಲಿ, ಭಾರತದಿಂದ ರಫ್ತಿಗೆ ಒತ್ತು ನೀಡುವ ಮೂಲಕ ಜಾಗತಿಕ ವ್ಯಾಪಾರದ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಅಂತರರಾಷ್ಟ್ರೀಯ ಕರೆನ್ಸಿಯಾಗಿ ಐ.ಎನ್.ಆರ್.ನಲ್ಲಿ ಜಾಗತಿಕ ವ್ಯಾಪಾರ ಸಮುದಾಯದಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಬೆಂಬಲಿಸಲು. ಭಾರತೀಯ ರೂಪಾಯಿಗಳಲ್ಲಿ (ಐ.ಎನ್.ಆರ್) ರಫ್ತು/ಆಮದುಗಳ ಇನ್‌ವಾಯ್ಸ್, ಪಾವತಿ ಮತ್ತು ಇತ್ಯರ್ಥಕ್ಕೆ ಹೆಚ್ಚುವರಿ ವ್ಯವಸ್ಥೆಯನ್ನು ಅನುಮತಿಸುವ ಸುತ್ತೋಲೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿತು. ಈ ಚೌಕಟ್ಟು ಐ.ಎನ್.ಆರ್.ನಲ್ಲಿ ರಫ್ತು ಮತ್ತು ಆಮದುಗಳ ಇನ್‌ವಾಯ್ಸ್ ಮಾಡುವುದು, ವ್ಯಾಪಾರ ಪಾಲುದಾರ ರಾಷ್ಟ್ರಗಳ ಕರೆನ್ಸಿಗಳ ನಡುವಿನ ಮಾರುಕಟ್ಟೆ-ನಿರ್ಧರಿತ ವಿನಿಮಯ ದರಗಳು ಮತ್ತು ಭಾರತದಲ್ಲಿ ಅಧಿಕೃತ ಡೀಲರ್ ಬ್ಯಾಂಕ್‌ಗಳೊಂದಿಗೆ ತೆರೆಯಲಾದ ವಿಶೇಷ ರೂಪಾಯಿ ವೋಸ್ಟ್ರೋ ಖಾತೆಗಳ ಮೂಲಕ ಇತ್ಯರ್ಥವನ್ನು ಒಳಗೊಂಡಿರುತ್ತದೆ. ಇದು ವಿದೇಶಿ ವಿನಿಮಯದ ನಿವ್ವಳ ಬೇಡಿಕೆಯನ್ನು ಬಹುಮಟ್ಟಿಗೆ ತಗ್ಗಿಸಬಹುದು ಹಾಗೂ ಸಾಗರೋತ್ತರ ಗ್ರಾಹಕರಿಂದ(ವಿದೇಶಿಗ್ರಾಹಕರಿಂದ) ಭಾರತೀಯ ರೂಪಾಯಿಗಳಲ್ಲಿ ಮುಂಗಡ ಪಾವತಿಗಳನ್ನು ಪಡೆಯುವಲ್ಲಿ ಭಾರತೀಯ ರಫ್ತುಗಳಿಗೆ ಸಹಾಯ ಮಾಡುವುದರಿಂದ ಈ ಚೌಕಟ್ಟು ಮಹತ್ವದ್ದಾಗಿದೆ. ದೀರ್ಘಾವಧಿಯಲ್ಲಿ ರೂಪಾಯಿ ಮೂಲಕ ವಹಿವಾಟು ಕಾರ್ಯವಿಧಾನವು ಸುವ್ಯವಸ್ಥೆಯನ್ನು ಪಡೆದ ನಂತರ ರೂಪಾಯಿಯಲ್ಲಿ ವಹಿವಾಟುಗಳು ಅಂತರರಾಷ್ಟ್ರೀಯ ಹಣ(ಕರೆನ್ಸಿ)ವಾಗಿ ಹೆಚ್ಚಿನ ಆಕರ್ಷಣೆ ಪಡೆಯಬಹುದು ಎಂದು ಸಮೀಕ್ಷೆಯು ಹೇಳುತ್ತದೆ.

ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ (ಬಿ.ಒ.ಪಿ.) ವಿಷಯದ ಕುರಿತು, ಆರ್ಥಿಕ ಸಮೀಕ್ಷೆಯು ಪರಿಶೀಲನೆಯ ವರ್ಷದಲ್ಲಿ ಒತ್ತಡವನ್ನು ಎದುರಿಸಿದೆ. ಚಾಲ್ತಿ ಖಾತೆ ಕೊರತೆಯ (ಸಿ.ಎ.ಡಿ.) ವಿಸ್ತರಣೆಯಲ್ಲಿ ತೈಲ ಬೆಲೆಗಳ ತೀವ್ರ ಏರಿಕೆಯ ಪರಿಣಾಮವು ಸ್ಪಷ್ಟವಾಗಿ ಕಂಡುಬಂದರೂ, ಇನ್ವಿಸಿಬಲ್ಸ್ (ಸೇವೆಗಳು, ವರ್ಗಾವಣೆ ಮತ್ತು ಆದಾಯ) ಮೇಲಿನ ಹೆಚ್ಚುವರಿ ಒದಗಿಸಿದ ಬೆಂಬಲದ ಹೊರತಾಗಿಯೂ, ಯು.ಎಸ್. ಫೆಡರಲ್ ರಿಸರ್ವ್ ಮತ್ತು ನೀತಿಗಳನ್ನು ಬಿಗಿಗೊಳಿಸುವುದು, ಯು.ಎಸ್. ಡಾಲರ್‌ನ ಬಲವರ್ಧನೆಯು ವಿದೇಶಿ ಬಂಡವಾಳ ಹೂಡಿಕೆ (ಎಫ್.ಪಿ.ಐ.) ಹೊರಹರಿವುಗಳಿಗೆ ಕಾರಣವಾಯಿತು. ಇದರ ಪರಿಣಾಮವಾಗಿ, ಬಂಡವಾಳ ಖಾತೆಯ ಹೆಚ್ಚುವರಿಯು ಸಿ.ಎ.ಡಿ.ಗಿಂತ ಕಡಿಮೆಯಾಗಿ ಬಿ.ಒ.ಪಿ. ಆಧಾರದ ಮೇಲೆ ವಿದೇಶೀ ವಿನಿಮಯ ಮೀಸಲುಗಳ ಬರಿದಾಗುವಿಕೆಗೆ ಕಾರಣವಾಯಿತು. ಕಚ್ಚಾ ತೈಲ ಬೆಲೆಗಳ ನಿರೀಕ್ಷಿತ ಸರಾಗಗೊಳಿಸುವಿಕೆ, ನಿವ್ವಳ ಸೇವೆಗಳ ರಫ್ತುಗಳ ಸ್ಥಿತಿಸ್ಥಾಪಕತ್ವ ಮತ್ತು ಸುಲಲಿತ ಒಳಹರಿವಿನ ರವಾನೆಗಳು ಹಣಕಾಸುವರ್ಷ 23 ರ ಉಳಿದ ಅವಧಿಯಲ್ಲಿ ಕಡಿಮೆ ಸಿ.ಎ.ಡಿ.ಗೆ ಕಾರಣವಾಗುತ್ತದೆ, ಹಾಗೂ ಇದು ಸಮರ್ಥನೀಯ ಮಿತಿಗಳಲ್ಲಿರಲಿದೆ ಎಂದು ಸಮೀಕ್ಷೆಯು ಹೇಳುತ್ತದೆ.

https://static.pib.gov.in/WriteReadData/userfiles/image/image0026W6E.jpg

ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ ಬಾಹ್ಯ ವಲಯದ ಬಲವರ್ಧಿತ ಆಘಾತ ಹೀರಿಕೊಳ್ಳುವ ಶಕ್ತಿ ಸಾಮರ್ಥ್ಯ ಹೊಂದಿರುವುದರಿಂದಾಗಿ ಹಾಗೂ, ಅಪಾರ ವಿದೇಶೀ ವಿನಿಮಯ ಮೀಸಲುಗಳು, ಸುಸ್ಥಿರ ಬಾಹ್ಯ ಸಾಲ ಸೂಚಕಗಳು ಅಥವಾ ಮಾರುಕಟ್ಟೆ-ನಿರ್ಧರಿತ ವಿನಿಮಯ ದರ ಮುಂತಾದ ಕಾರಣಗಳಿಂದಾಗಿ ಜಾಗತಿಕ ಪ್ರತಿರೋಧ ಕಡಿಮೆಗೊಳಿಸಲು ಸಾಧ್ಯವಾಯಿತು. ಡಿಸೆಂಬರ್ 2022 ರ ಅಂತ್ಯದ ವೇಳೆಗೆ 9.3 ತಿಂಗಳ ಆಮದು ನಡೆದಿದ್ದು, ಫಾರೆಕ್ಸ್ ಮೀಸಲು 562.72 ಶತಕೋಟಿ ಡಾಲರ್ ನಷ್ಟಾಗಿದ್ದರೆ, ಜಿಡಿಪಿಗೆ ಬಾಹ್ಯ ಸಾಲದ ಅನುಪಾತವು ಸೆಪ್ಟೆಂಬರ್ 2022 ರ ಅಂತ್ಯದ ವೇಳೆಗೆ 19.2 ರಷ್ಟಾಗಿದ್ದು, ಇದು ಉತ್ತಮ ಹಾಗೂ ಆರಾಮದಾಯಕ ಮಟ್ಟದಲ್ಲಿದೆ.

ಅನೇಕ ಮುನ್ಸೂಚನೆಗಳು ಸೂಚಿಸಿದಂತೆ, ಭಾರತದ ಬಾಹ್ಯ ವಲಯದ ತನ್ನ ವಹಿವಾಟುಗಳ ದೃಷ್ಟಿಕೋನದಲ್ಲಿ, ಜಾಗತಿಕ ಬೆಳವಣಿಗೆಯಲ್ಲಿ ಮುಂಬರುವ ವರ್ಷದಲ್ಲಿ ರಫ್ತುಗಳಲ್ಲಿ ಗಣನೀಯ ಏರಿಕೆ ಹಂತ ಕಾಣಬಹುದು ಎಂದು ಆರ್ಥಿಕ ಸಮೀಕ್ಷೆಯು ಹೇಳುತ್ತದೆ. ಅಂತಹ ಸಂದರ್ಭಗಳಲ್ಲಿ, ಭಾರತವು ಎಫ್.ಟಿ.ಎ.ಗಳ ಮೂಲಕ ತೆಗೆದುಕೊಳ್ಳುತ್ತಿರುವ ಉತ್ಪನ್ನದ ವೈವಿಧ್ಯತೆ ಮತ್ತು ಗುರಿ(ಗಮ್ಯಸ್ಥಾನ)ಯ ವೈವಿಧ್ಯೀಕರಣವು ವ್ಯಾಪಾರ ಅವಕಾಶಗಳನ್ನು ಹೆಚ್ಚಿಸಲು ಉಪಯುಕ್ತವಾಗುತ್ತದೆ. ದುಡಿಯುವ ಕಡಿಮೆ ವಯಸ್ಸಿನವರ ಅಪಾರ ಜನಸಂಖ್ಯೆಯ ಲಾಭದ ಜೊತೆಗೆ ಆರ್ಥಿಕತೆಯ ಅನುಕೂಲಗಳನ್ನು ನೀಡಿದರೆ, ಭಾರತವು ಹಲವಾರು ಉತ್ಪನ್ನಗಳಿಗೆ ಜಾಗತಿಕ ಬೇಡಿಕೆಯನ್ನು ಕಡಿಮೆ ವೆಚ್ಚದಲ್ಲಿ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಜಾಗತಿಕ ಕಚ್ಚಾ ತೈಲ ಬೆಲೆಗಳ ಇತ್ತೀಚಿನ ಇಳಿಕೆಯು ಭಾರತದ ಪಿ.ಒ.ಎಲ್. ಆಮದುಗಳಿಗೆ ಉತ್ತಮವಾಗಿದೆ. 2022 ರ ವೇಳೆಗೆ ಆಂತರಿಕ ಹಣ ರವಾನೆಗಳು ದಾಖಲೆಯ ಮಟ್ಟದಲ್ಲಿತ್ತು ಎಂದು ಅಂದಾಜಿಸಲಾಗಿದ್ದು, ಭಾರತವು ವಿಶ್ವದಲ್ಲೇ ಅಗ್ರ ರವಾನೆ ಸ್ವೀಕರಿಸುವ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ ಹಾಗೂ ಭಾರತದ ಬಾಹ್ಯ ಸಾಲದ ಗಾತ್ರವನ್ನು ವಿವೇಚನೆಯಿಂದ ಇತಿಮಿತಿಯೊಳಗೆ ನಿರ್ವಹಿಸಲಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.

****(Release ID: 1895063) Visitor Counter : 259