ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಶಾಂಘೈ ಸಹಕಾರ ಸಂಸ್ಥೆಯ ಚಲನಚಿತ್ರೋತ್ಸವದಲ್ಲಿ ಆಯೋಜಿಸಲಾದ 'ರೀಚಿಂಗ್ ಔಟ್ - ಭಾರತ ಮತ್ತು ಶಾಂಘೈ ಸಹಕಾರ ಸಂಸ್ಥೆ' ಕುರಿತು ದುಂಡು ಮೇಜಿನ ಸಭೆ


ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರತಿಭಾ ವಿನಿಮಯವನ್ನು ಉತ್ತೇಜಿಸಲು ಮತ್ತು ಭಾರತದೊಂದಿಗೆ ಸಹ-ಉತ್ಪಾದನಾ ಒಪ್ಪಂದಗಳನ್ನು ಏರ್ಪಡಿಸಲು ಒತ್ತಾಯಿಸಿದವು

Posted On: 29 JAN 2023 12:36PM by PIB Bengaluru

ಮುಂಬೈನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ 'ರೀಚಿಂಗ್ ಔಟ್ - ಭಾರತ ಮತ್ತು ಶಾಂಘೈ ಸಹಕಾರ ಸಂಸ್ಥೆ' ಕುರಿತು ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಯಿತು. ಭಾರತ ಮತ್ತು ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ದೇಶಗಳ ನಡುವಿನ ಸಹಯೋಗದ ಸಂಭಾವ್ಯ ಮಾರ್ಗಗಳನ್ನು ರೂಪಿಸಲು ಕೇಂದ್ರ  ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತೀಯ ಉದ್ಯಮ ಕ್ಷೇತ್ರದ ಮಧ್ಯಸ್ಥಗಾರರು, ಚಲನಚಿತ್ರ ತಯಾರಕರು ಮತ್ತು ಚಲನಚಿತ್ರೋತ್ಸವದ ತೀರ್ಪುಗಾರರ ಸದಸ್ಯರ ನಡುವೆ ಭೇಟಿಯ-ನಿರ್ಧಾರ-ಒಪ್ಪಂದಗಳನ್ನು ಏರ್ಪಡಿಸುವ ಉದ್ದೇಶ ಈ ಅಧಿವೇಶನದ್ದಾಗಿದೆ. ಕೇಂದ್ರ  ವಾರ್ತಾ ಮತ್ತು ಪ್ರಸಾರ ಸಚಿವಾಲಯ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಇನ್ವೆಸ್ಟ್ ಇಂಡಿಯಾದ ಫಿಲ್ಮ್ ಫೆಸಿಲಿಟೇಶನ್ ಆಫೀಸ್ ಆಶ್ರಯದಲ್ಲಿ ಆಯೋಜಿಸಲಾದ ಈ ಅಧಿವೇಶನದ ಅಧ್ಯಕ್ಷತೆಯನ್ನು ಕೇಂದ್ರ  ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನೀರಜಾ ಶೇಖರ್ ಅವರು ವಹಿಸಿದ್ದರು ಮತ್ತು ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಮತ್ತು ವ್ಯವಸ್ಥಾಪಕ ನಿರ್ದೇಶಕರು (ಎನ್.ಎಫ್.ಡಿ.ಸಿ.) ಶ್ರೀ ಪೃಥುಲ್ ಕುಮಾರ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರತಿಭಾ ವಿನಿಮಯವನ್ನು ಉತ್ತೇಜಿಸಲು ಮತ್ತು ಭಾರತದೊಂದಿಗೆ ಸಹ-ನಿರ್ಮಾಣ ಒಪ್ಪಂದಗಳನ್ನು ರೂಪಿಸಲು ಮತ್ತು ಜಂಟಿ ಯೋಜನೆಗಳ ಮೂಲಕ ಅಸ್ತಿತ್ವದಲ್ಲಿರುವ ಭಾರತೀಯ ಚಲನಚಿತ್ರ ಪ್ರೋತ್ಸಾಹದ ಪ್ರಯೋಜನಗಳನ್ನು ಪಡೆದುಕೊಳ್ಳಲು ಅಧಿವೇಶನದಲ್ಲಿ ಒತ್ತಾಯಿಸಲಾಯಿತು. ಭಾರತ ಮತ್ತು ಭಾಗವಹಿಸುವ ಇತರ ದೇಶಗಳಲ್ಲಿ ಚಲನಚಿತ್ರ ಉದ್ಯಮಗಳು ತುಲನಾತ್ಮಕವಾಗಿ ಸದೃಢವಾಗಿರುವ ಕಾರಣದಿಂದಾಗಿ, ಇತರ ರಾಷ್ಟ್ರಗಳ ಚಲನಚಿತ್ರ ಉದ್ಯಮಗಳಿಗೆ ಭಾರತವನ್ನು ಒಂದು ಮಾರುಕಟ್ಟೆ ತಾಣವಾಗಿ ಕಾಣಲು ಸಾಧ್ಯವಿದೆ, ಹಾಗೂ ಆ ದೇಶಗಳ ಚಲನಚಿತ್ರಗಳನ್ನು ಭಾರತದಲ್ಲಿ ಉತ್ತೇಜಿಸಲು ಅಪಾರ ಅವಕಾಶಗಳಿವೆ. ಅದರ ಜೊತೆಗೆ, ಭಾರತೀಯ ಚಲನಚಿತ್ರಗಳು ಈ ಸದಸ್ಯ ದೇಶಗಳಲ್ಲಿ ಚಿತ್ರೀಕರಣಗೊಳ್ಳುವ ನಿಟ್ಟಿನಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸುವ ಸಾಮರ್ಥ್ಯವೂ ಕೂಡಾ ಸದಸ್ಯ ದೇಶಗಳು ಹೊಂದಿವೆ.

ಭಾರತವು ಪ್ರಸ್ತುತ ಚೀನಾ ಮತ್ತು ರಷ್ಯಾದೊಂದಿಗೆ ದ್ವಿಪಕ್ಷೀಯ ಧ್ವನಿ-ದೃಶ್ಯ ಸಹ-ನಿರ್ಮಾಣ ಒಪ್ಪಂದಗಳನ್ನು ಹೊಂದಿದೆ. ಸದಸ್ಯ ರಾಷ್ಟ್ರಗಳಾದ ತಜಕಿಸ್ತಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಟರ್ಕಿಗಳೊಂದಿಗೆ ಸಹ-ಉತ್ಪಾದನಾ ಒಪ್ಪಂದಗಳಿಗೆ ಸಕ್ರಿಯ ಪರಿಗಣನೆ ಪ್ರಕ್ರಿಯೆ ನಡೆಯುತ್ತಿದೆ. ಭಾರತ, ನೇಪಾಳ ಮತ್ತು ಶ್ರೀಲಂಕಾದ ಚಲನಚಿತ್ರ ಉದ್ಯಮಗಳ ನಡುವೆ ಯಾವುದೇ ದ್ವಿಪಕ್ಷೀಯ ಒಪ್ಪಂದಗಳಿಲ್ಲದಿದ್ದರೂ ಕೂಡಾ ಬಹಳ ನಿಕಟ ಸಹಕಾರವಿದೆ. ಕಳೆದ 6 ವರ್ಷಗಳಲ್ಲಿ ಒಂದು ಇಂಡೋ-ಚೈನೀಸ್ ಸಹ-ನಿರ್ಮಾಣ ಮತ್ತು ಒಂದು ಇಂಡೋ-ರಷ್ಯನ್ ಸಹ-ನಿರ್ಮಾಣ ನಡೆದಿದೆ.

ಭಾರತದಲ್ಲಿ ಚಿತ್ರೀಕರಣಕ್ಕಾಗಿ ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ದೇಶಗಳಾದ ಚೀನಾ (5), ಇರಾನ್ (2), ಕಝಾಕಿಸ್ತಾನ್ (1), ನೇಪಾಳ (1), ರಷ್ಯಾ (2), ಶ್ರೀಲಂಕಾ (1) ಮತ್ತು ಟರ್ಕಿ (1) ಗಳ ಚಲನಚಿತ್ರಗಳಿಗೆ ಅನುಮತಿ ನೀಡಲಾಗಿದೆ, ಮತ್ತು ಅನೇಕ ಭಾರತೀಯ ಚಲನಚಿತ್ರಗಳನ್ನು ಬಹುತೇಕ ಎಲ್ಲಾ ಸದಸ್ಯ ರಾಷ್ಟ್ರಗಳಲ್ಲಿ ಚಿತ್ರೀಕರಿಸಲಾಗಿದೆ.

ಭಾರತ ಸರ್ಕಾರ ಘೋಷಿಸಿದ ವಿದೇಶಿ ಉತ್ಪಾದನೆ ಮತ್ತು ಅಧಿಕೃತ ಸಹ-ನಿರ್ಮಾಣಗಳಿಗೆ ಪ್ರೋತ್ಸಾಹದ ವಿಷಯದಲ್ಲಿ ಸಹಕರಿಸುವುದು, ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಒಟ್ಟಾರೆ ಪರಿಸರ ವ್ಯವಸ್ಥೆಯನ್ನು ಸುಧಾರಿಸಲು ಪೂರಕ ಮಾಹಿತಿ  ಹಾಗೂ ಸಲಹೆಗಳನ್ನು ನೀಡುವುದು ಈ ದುಂಡುಮೇಜಿನ ಸಭೆಯ ಮುಖ್ಯ ಉದ್ದೇಶವಾಗಿದೆ.

*****



(Release ID: 1894542) Visitor Counter : 153