ಗೃಹ ವ್ಯವಹಾರಗಳ ಸಚಿವಾಲಯ

ಕರ್ನಾಟಕದ ಹುಬ್ಬಳ್ಳಿಯಲ್ಲಿಂದು ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ 


ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ (ಕೆಎಲ್ಇ) ಕಳೆದ 107 ವರ್ಷಗಳಿಂದ ಶಿಕ್ಷಣದ ಮೂಲಕ ಲಕ್ಷಾಂತರ ಜನರ ಜೀವನವನ್ನು ಬೆಳಗಿಸಿದೆ

ಕೆಎಲ್ಇ ಸೊಸೈಟಿಯು ತನ್ನ ಸ್ಥಾಪನೆಯ ಎಲ್ಲ ಉದ್ದೇಶಗಳನ್ನು ಸಂಯೋಜಿಸುವ ಮತ್ತು ರಕ್ಷಿಸುವ ಮೂಲಕ ಮುಂದೆ ಸಾಗಿದ್ದು, ಕಡುಬಡವರ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ

ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು  ನನಸಾಗಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದಾರೆ

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವದ ಉತ್ಪಾದನಾ ತಾಣವನ್ನಾಗಿ ಮಾಡಲು ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ, ಇದರ ಪರಿಣಾಮವಾಗಿ ಭಾರತವು ಇಂದು ವಿಶ್ವ ಆರ್ಥಿಕತೆಯಲ್ಲಿ 11 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಏರಿದೆ ಮತ್ತು 2027 ರ ವೇಳೆಗೆ 3 ನೇ ಸ್ಥಾನವನ್ನು ತಲುಪುವ ನಿರೀಕ್ಷೆಯಿದೆ

ದೇಶದ ಎಲ್ಲ ಯುವಕರು ಈ ಗುರಿಯನ್ನು ಮುಂದಿಟ್ಟುಕೊಂಡು ಮುಂದೆ ಸಾಗಬೇಕು, ಅವರು ವಿಶ್ವದ ಅತಿದೊಡ್ಡ ತಂತ್ರಜ್ಞರಾಗುತ್ತಿದ್ದರೆ, ಭಾರತವನ್ನು ಸಹ ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಗೆ ಕೊಂಡೊಯ್ಯಲು ಪ್ರಯತ್ನಿಸಬೇಕು

ಯುವಕರು ಸಾಂಪ್ರದಾಯಿಕ ಚಿಂತನೆ ಮತ್ತು ಚೌಕಟ್ಟಿನಿಂದ ಹೊರಬಂದು ಹೊಸ ಆಲೋಚನೆ ಮತ್ತು ಧೈರ್ಯದೊಂದಿಗೆ ಮುನ್ನುಗ್ಗಬೇಕು, ಧೈರ್ಯಶಾಲಿಗಳಿಗೆ ಅದೃಷ್ಟ ಒಲಿಯುತ್ತದೆ

ಒಂದು ವರ್ಷದಲ್ಲಿ ಲಕ್ಷಾಂತರ ಪೇಟೆಂಟ್ ಅರ್ಜಿಗಳ ಸಲ್ಲಿಕೆ, ಭಾರತವು ಇಂದು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಎಷ್ಟು ವೇಗವಾಗಿ ಸಾಗುತ್ತಿದೆ ಎಂಬುದರ ಪ್ರತೀಕವಾಗಿದೆ.

Posted On: 28 JAN 2023 5:52PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಕರ್ನಾಟಕದ ಹುಬ್ಬಳ್ಳಿಯಲ್ಲಿಂದು ನಡೆದ ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಅಮೃತ ಮಹೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು. ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ತಿರುಪತಿಯ ವಿಶ್ವ ಧರ್ಮ ಚೇತನ ಮಂಚ್ ನ ಸ್ವಾಮಿ ಶ್ರೀ ಬ್ರಹ್ಮರ್ಷಿ ಗುರುದೇವ್ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Description: Description: C:\Users\Sarla\Downloads\107A1268.jpeg

ಇಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ ರಾಯ್ ಅವರ ಜನ್ಮದಿನ ಮತ್ತು ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು. ಇಂದು ಸ್ವತಂತ್ರ ಭಾರತದ ಮೊದಲ ಸೇನಾ ಮುಖ್ಯಸ್ಥ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನವೂ ಆಗಿದೆ, ಅವರು ಭಾರತೀಯ ಸೇನೆಗೆ ಅನೇಕ ಗುರಿಗಳನ್ನು ನಿಗದಿಪಡಿಸಿದ್ದಲ್ಲದೆ ತಮ್ಮ ಶೌರ್ಯದಿಂದ ಅವುಗಳನ್ನು ಸಾಧಿಸಿದರು. ಸ್ವಾತಂತ್ರ್ಯಾನಂತರದ 75 ವರ್ಷಗಳ ಈ ಪಯಣದಲ್ಲಿ ಭಾರತವು ನಿರ್ವಿವಾದವಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ ಮತ್ತು ಇಡೀ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದೆ ಎಂದು ಶ್ರೀ ಶಾ ಹೇಳಿದರು. ಕಳೆದ 107 ವರ್ಷಗಳಿಂದ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ (ಕೆಎಲ್ಇ) ಶಿಕ್ಷಣದ ಮೂಲಕ ಲಕ್ಷಾಂತರ ಜನರ ಜೀವನವನ್ನು ಬೆಳಗಿಸಿದೆ ಎಂದರು.

Description: Description: C:\Users\Sarla\Downloads\107A1129.jpeg

1916 ರಲ್ಲಿ ಒಂದು ಸಣ್ಣ ಶಾಲೆಯಿಂದ ಪ್ರಾರಂಭವಾದ ಕೆಎಲ್.ಇ ಸೊಸೈಟಿಯ ಪಯಣ ಇಂದು 294 ಸಂಸ್ಥೆಗಳನ್ನು ತಲುಪಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸುಮಾರು 1,38,000 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ಸೊಸೈಟಿಯನ್ನು 107 ವರ್ಷಗಳ ಕಾಲ ಅತ್ಯಂತ ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಿರುವುದು ಇಡೀ ದೇಶದ ಶಿಕ್ಷಣ ವ್ಯವಸ್ಥೆಗೆ ಒಂದು ಉದಾಹರಣೆಯಾಗಿದೆ. ಇಂದು ಕೆಎಲ್.ಇ ಸೊಸೈಟಿ 4000ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯದ ಮೂಲಸೌಕರ್ಯಗಳೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು. ಇದರಲ್ಲಿ, 1700 ಆರೋಗ್ಯ ಸೌಲಭ್ಯಗಳಿವೆ, ಅಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕೆಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯವು 1947ರಿಂದ ಇಂದಿನವರೆಗೆ ಉಜ್ವಲ ಇತಿಹಾಸವನ್ನು ಹೊಂದಿದೆ ಮತ್ತು ಅದರ ಅನೇಕ ವಿದ್ಯಾರ್ಥಿಗಳು ದೇಶಕ್ಕೆ ಮತ್ತು ಜಗತ್ತಿಗೆ ಅನೇಕ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ ಎಂದು ಶ್ರೀ ಶಾ ಹೇಳಿದರು.

Description: Description: C:\Users\Sarla\Downloads\107A1165.jpeg

ಸುಮಾರು 25 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ 3500 ಆಸನ ಸಾಮರ್ಥ್ಯದ ಒಳ ಕ್ರೀಡಾಂಗಣವನ್ನು ಇಂದು ಉದ್ಘಾಟಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದು ಬ್ಯಾಡ್ಮಿಂಟನ್ ಮತ್ತು ಸ್ಕ್ವಾಷ್ ಗೆ ತಲಾ ಎರಡು ಕೋರ್ಟ್ ಗಳು, ಬ್ಯಾಸ್ಕೆಟ್ ಬಾಲ್ ಮತ್ತು ವಾಲಿಬಾಲ್ ಹಾಗೂ ಟೇಬಲ್ ಟೆನ್ನಿಸ್ ನ ತಲಾ ಒಂದು ಕೋರ್ಟ್ ಸೌಲಭ್ಯಗಳನ್ನು ಹೊಂದಿದೆ. ಬಾಲಕರು ಮತ್ತು ಬಾಲಕಿಯರಿಗಾಗಿ ಎರಡು ಪ್ರತ್ಯೇಕ ವ್ಯಾಯಾಮ ಶಾಲೆಗಳನ್ನು ಸಹ ಮಾಡಲಾಗಿದೆ. ತನ್ನ ವಿದ್ಯಾರ್ಥಿಗಳಲ್ಲಿ ಒಬ್ಬರನ್ನು ಒಲಿಂಪಿಕ್ಸ್ ಗೆ ಕಳುಹಿಸುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೆಎಲ್.ಇ ಸೊಸೈಟಿ ನೀಡಿರುವ ಭರವಸೆಯನ್ನು ಶೀಘ್ರದಲ್ಲೇ ಈಡೇರಿಸುತ್ತದೆ ಎಂದು ಅವರು ಹೇಳಿದರು.

ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಕನಸನ್ನು ನನಸು ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2004 ರಿಂದ 2014 ರವರೆಗೆ ಭಾರತವು ವಿಶ್ವ ಆರ್ಥಿಕ ಶ್ರೇಯಾಂಕದಲ್ಲಿ 11 ನೇ ಸ್ಥಾನದಲ್ಲಿತ್ತು, ಆದರೆ ಶ್ರೀ ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಮಂತ್ರಿಯಾದ ನಂತರ, ಅದು  8 ವರ್ಷಗಳ ಅವಧಿಯಲ್ಲಿ 5 ನೇ ಸ್ಥಾನಕ್ಕೆ ಜಿಗಿದಿದೆ ಎಂದು ಶ್ರೀ ಶಾ ಹೇಳಿದರು. ಇದು ಪ್ರಪಂಚದಾದ್ಯಂತ ನಮ್ಮ ದೇಶದ ವೇಗದ ಪ್ರಗತಿಯನ್ನು ತೋರಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವ ಕನಸನ್ನು ನನಸಾಗಿಸುತ್ತಿದ್ದಾರೆ, ಇದನ್ನು ಸಾಧಿಸಿದ ನಂತರ, ನಿಮ್ಮಂತಹ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನೇಕ ಸಾಧ್ಯತೆಗಳು ಉದ್ಭವಿಸುತ್ತವೆ ಎಂದರು.

Description: Description: C:\Users\Sarla\Downloads\107A1312.jpeg

ಸ್ವಾತಂತ್ರ್ಯಾ ನಂತರದಿಂದ ಇಂದಿನವರೆಗಿನ 75 ವರ್ಷಗಳ ಈ ಪಯಣದಲ್ಲಿ ಭಾರತವು ನಿರ್ವಿವಾದವಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ ಮತ್ತು ಇಡೀ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವದ ಉತ್ಪಾದನಾ ತಾಣವನ್ನಾಗಿ ಮಾಡಲು ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ, ಇದರ ಪರಿಣಾಮವಾಗಿ ಭಾರತವು ಇಂದು ವಿಶ್ವ ಆರ್ಥಿಕತೆಯಲ್ಲಿ 11 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ತಲುಪಿದೆ ಮತ್ತು 2027 ರ ವೇಳೆಗೆ 3 ನೇ ಸ್ಥಾನವನ್ನು ತಲುಪುವ ನಿರೀಕ್ಷೆಯಿದೆ ಎಂದರು. ಪೇಟೆಂಟ್ ಗಳ ನೋಂದಣಿಯು ಯಾವುದೇ ದೇಶದ ಭವಿಷ್ಯವನ್ನು ತೋರಿಸುತ್ತದೆ ಎಂದು ಶ್ರೀ ಶಾ ಹೇಳಿದರು. 2013-14 ರಲ್ಲಿ, ಪೇಟೆಂಟ್ ನೋಂದಣಿಗಾಗಿ 3,000 ಅರ್ಜಿಗಳು ಬರುತ್ತಿದ್ದವು, ಇದು 2021-22 ರಲ್ಲಿ 1.5 ಲಕ್ಷಕ್ಕೆ ಏರಿತು, ಇದು ನಮ್ಮ ಯುವಕರು ಸಂಶೋಧನಾ ಕ್ಷೇತ್ರದಲ್ಲಿ ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. 2013-14ರಲ್ಲಿ ಬಂದಿದ್ದ 3000 ಪೇಟೆಂಟ್ ಅರ್ಜಿಗಳಲ್ಲಿ 211 ಪೇಟೆಂಟ್ ಗಳು ನೋಂದಣಿಯಾಗಿದ್ದವು, ಇದು 2021-22ರಲ್ಲಿ 24,000 ಕ್ಕಿಂತ ಹೆಚ್ಚಾಗಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 4.3 ಕೋಟಿ ಫಲಾನುಭವಿಗಳಿಗೆ 2,66,000 ಕೋಟಿ ರೂ.ಗಳ ಸಾಲ ನೀಡಲಾಗಿದೆ ಎಂದರು. ಡಿಜಿಟಲ್ ಇಂಡಿಯಾ ಅಭಿಯಾನ ದೇಶದ ಯುವಕರಿಗೆ ಹಲವು ಸಾಧ್ಯತೆಗಳನ್ನು ತೆರೆದಿದೆ ಎಂದು ಶ್ರೀ ಶಾ ಹೇಳಿದರು. ಖೇಲೋ ಇಂಡಿಯಾದೊಂದಿಗೆ ಫಿಟ್ ಇಂಡಿಯಾ ಅಭಿಯಾನ ಯುವಜನರಿಗೆ ಕ್ರೀಡಾ ಕ್ಷೇತ್ರದಲ್ಲಿ ಮುನ್ನಡೆಯಲು ಅನೇಕ ಸಾಧ್ಯತೆಗಳನ್ನು ತೆರೆದಿದೆ. ಅನಿಮೇಷನ್ ಮತ್ತು ಗೇಮಿಂಗ್ ಕ್ಷೇತ್ರದಲ್ಲಿ ಹೊಸ ಉಪಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಇದರೊಂದಿಗೆ, ಸೂರ್ಯೋದಯ ಯೋಜನೆಯಡಿ, ದೇಶದ ಯುವಕರಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಡ್ರೋನ್ ಗಳು, ಸಮಿ ಕಂಡಕ್ಟರ್, ಬಾಹ್ಯಾಕಾಶ, ಜೀನೋಮಿಕ್ಸ್, ಔಷಧ ಮತ್ತು ಹಸಿರು ಇಂಧನದಂತಹ ಕ್ಷೇತ್ರಗಳನ್ನು ಪ್ರಧಾನಮಂತ್ರಿ ತೆರೆದಿದ್ದಾರೆ. ದೇಶದ ಯುವಕರು ಸಾಂಪ್ರದಾಯಿಕ ಚಿಂತನೆ ಮತ್ತು ಚೌಕಟ್ಟಿನಿಂದ ಹೊರಬಂದು ಹೊಸದಾಗಿ ಯೋಚಿಸಬೇಕು ಎಂದು ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಯುವಕರಿಗೆ ಅಪಾರ ಅವಕಾಶಗಳನ್ನು ತೆರೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇಂದು ದೇಶದಲ್ಲಿ ಐಐಟಿಗಳ ಸಂಖ್ಯೆ 16 ರಿಂದ 23 ಕ್ಕೆ, ಐಐಎಂಗಳ ಸಂಖ್ಯೆ 13 ರಿಂದ 20 ಕ್ಕೆ, ಐಐಐಟಿಗಳ ಸಂಖ್ಯೆ 9 ರಿಂದ 25 ಕ್ಕೆ, ಏಮ್ಸ್ 7 ರಿಂದ 22 ಕ್ಕೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆ 387 ರಿಂದ 596 ಕ್ಕೆ ಮತ್ತು ವಿಶ್ವವಿದ್ಯಾಲಯಗಳ ಸಂಖ್ಯೆ 723 ರಿಂದ 1,043 ಕ್ಕೆ ಏರಿದೆ. ಇದಲ್ಲದೆ, ಶ್ರೀ ಮೋದಿ ಅವರು ಕಾಲೇಜುಗಳ ಸಂಖ್ಯೆಯನ್ನು 36,000 ದಿಂದ 48,000 ಕ್ಕೆ ಹೆಚ್ಚಿಸಿದ್ದಾರೆ ಎಂದರು. ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಉತ್ತರ ಕರ್ನಾಟಕದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ವಿಧಿವಿಜ್ಞಾನವು ದೇಶದಲ್ಲಿ ಒಂದು ದೊಡ್ಡ ಕ್ಷೇತ್ರವಾಗಲಿದೆ ಮತ್ತು ಈ ಕ್ಷೇತ್ರದಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಪಡೆಯಲು, ನಾವು ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದೇವೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರ ಈ ದೃಷ್ಟಿಕೋನವು ವಿಜ್ಞಾನ ವಿದ್ಯಾರ್ಥಿಗಳಿಗೆ ಸಾಕಷ್ಟು ಸಾಧ್ಯತೆಗಳನ್ನು ತೆರೆಯುತ್ತದೆ ಏಕೆಂದರೆ ಮುಂಬರುವ ದಿನಗಳಲ್ಲಿ ನಾವು 6 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ವಿಧಿವಿಜ್ಞಾನ ಪುರಾವೆಗಳನ್ನು ಕಡ್ಡಾಯಗೊಳಿಸಲಿದ್ದೇವೆ ಆ ಬಳಿಕ, ಕನಿಷ್ಠ 50,000 ವಿಧಿವಿಜ್ಞಾನ ವಿಜ್ಞಾನ ವಿಜ್ಞಾನಿಗಳು ಬೇಕಾಗುತ್ತಾರೆ. ಈ ಸರಣಿಯಲ್ಲಿ, ಗಾಂಧಿನಗರದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಒಂಬತ್ತನೇ ಕ್ಯಾಂಪಸ್ ನ ಆರಂಭ ಇಂದು ಇಲ್ಲಿ ಪ್ರಾರಂಭವಾಗುತ್ತಿದೆ ಎಂದರು.

2022 ರಲ್ಲಿ ಭಾರತವು ಸುಮಾರು 400 ದಶಲಕ್ಷ ಯುಎಸ್ ಡಾಲರ್ ದಾಖಲೆಯ ರಫ್ತು ಸಾಧಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಪ್ರಧಾನಮಂತ್ರಿಯವರು ದೇಶದಲ್ಲಿ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮೊದಲು, ನವೋದ್ಯಮಗಳ ಕ್ಷೇತ್ರದಲ್ಲಿ ಯಾವುದೇ ಉಪಕ್ರಮವನ್ನು ತೆಗೆದುಕೊಳ್ಳಲಾಗಿರಲಿಲ್ಲ, 2014 ರಲ್ಲಿ ದೇಶದಲ್ಲಿ ಕೇವಲ ಮೂರು ಯುನಿಕಾರ್ನ್ ನವೋದ್ಯಮಗಳು ಇದ್ದವು, ಆದರೆ ಇಂದು 70000 ಕ್ಕೂ ಹೆಚ್ಚು ನವೋದ್ಯಮಗಳು ರೂಪುಗೊಂಡಿವೆ, ಅವುಗಳಲ್ಲಿ 75 ಕ್ಕೂ ಹೆಚ್ಚು ಯುನಿಕಾರ್ನ್ ನವೋದ್ಯಮಗಳಾಗಿವೆ, ಶೇ.30ಕ್ಕೂ ಹೆಚ್ಚು ನವೋದ್ಯಮಗಳನ್ನು ಹುಡುಗಿಯರು ಸ್ಥಾಪಿಸಿದ್ದಾರೆ. ಶೇ.45ರಷ್ಟು ನವೋದ್ಯಮಗಳು 2 ಮತ್ತು 3ನೇ ಶ್ರೇಣಿಯ ನಗರಗಳಿಂದ ಬಂದಿವೆ, ಇದು ದೇಶದ ಯುವಜನರು ಉತ್ಸಾಹ ಮತ್ತು ಸಾಮರ್ಥ್ಯದಿಂದ ತುಂಬಿದ್ದಾರೆ ಎಂಬುದನ್ನು ತೋರಿಸುತ್ತದೆ ಮತ್ತು ಅವರು ಎಲ್ಲೇ ಇದ್ದರೂ, ಈಗ ಯಶಸ್ಸನ್ನು ಸಾಧಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

1857 ರಿಂದ 1947 ರವರೆಗೆ 90 ವರ್ಷಗಳ ಸ್ವಾತಂತ್ರ್ಯ ಹೋರಾಟವನ್ನು ಅರ್ಥಮಾಡಿಕೊಳ್ಳಲು, ಓದಲು ಮತ್ತು ಅರಿತುಕೊಳ್ಳಲು ಮತ್ತು  ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಜೀವನದಿಂದ ಸ್ಫೂರ್ತಿ ಪಡೆಯುವ ಮೂಲಕ ನಮ್ಮ ಯುವ ಪೀಳಿಗೆ ಅದನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಲಿ ಎಂದು ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುವ ಪ್ರಸ್ತಾಪವನ್ನು ದೇಶದ ಮುಂದಿಟ್ಟರು ಎಂದರು.   ಸ್ವಾತಂತ್ರ್ಯದ 90 ವರ್ಷಗಳ ಬಗ್ಗೆ ಓದುವಂತೆ ಸಭಿಕರಿಗೆ ಆಗ್ರಹಿಸಿದ ಶ್ರೀ ಶಾ, ಲಕ್ಷಾಂತರ ಜನರು ಮಾಡಿದ ತ್ಯಾಗದಿಂದಾಗಿ ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ, ನಾವೆಲ್ಲರೂ ಅವರಿಗೆ ಋಣಿಯಾಗಿರಬೇಕು ಎಂದು ಹೇಳಿದರು.

ದೇಶಕ್ಕಾಗಿ ಮಡಿಯುವುದು ಪ್ರತಿಯೊಬ್ಬರ ಹಣೆಯಲ್ಲಿ ಬರೆದಿರುವುದಿಲ್ಲ, ಆದರೆ ಪ್ರತಿಯೊಬ್ಬರೂ ದೇಶಕ್ಕಾಗಿ ತಮ್ಮ ಜೀವನ ನಡೆಸುವ ಹಕ್ಕನ್ನು ಹೊಂದಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿ, ನಾವೆಲ್ಲರೂ ನಮ್ಮ ಜೀವನದಲ್ಲಿ ಎಷ್ಟೇ ಯಶಸ್ವಿಯಾದರೂ, ನಮ್ಮ ಗುಡಿ ಶ್ರೇಷ್ಠ ಭಾರತವನ್ನು ರಚಿಸಬೇಕು ಮತ್ತು ಭಾರತವನ್ನು ವಿಶ್ವದಲ್ಲಿ ಮೊದಲ ಸ್ಥಾನಕ್ಕೆ ತರಬೇಕು ಎಂಬ   ಒಂದೇ ಗುರಿ ಆಗಿರಬೇಕು ಎಂದು ಪ್ರತಿಜ್ಞೆ ಮಾಡಬೇಕು. ಇಲ್ಲಿ ಅಧ್ಯಯನ ಮಾಡುವ ತಾಂತ್ರಿಕ ವಿದ್ಯಾರ್ಥಿಗಳು ವಿಶ್ವದ ಅತಿದೊಡ್ಡ ತಂತ್ರಜ್ಞರಾಗಬೇಕು, ಆದರೆ ಅದೇ ವೇಳೆ ಭಾರತವು ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿರಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳಬೇಕು ಎಂದರು.

****



(Release ID: 1894363) Visitor Counter : 126