ವಾರ್ತಾ ಮತ್ತು ಪ್ರಸಾರ ಸಚಿವಾಲಯ
"ಶಾಂಘೈ ಸಹಕಾರ ಸಂಘ(SCO) ಚಲನಚಿತ್ರೋತ್ಸವ ಪ್ರಿಯದರ್ಶನ್ ಅವರ 'ಅಪ್ಪತ್' ಸಿನಿಮಾ ಪ್ರದರ್ಶನದೊಂದಿಗೆ ಪ್ರಾರಂಭ"
"28 ವರ್ಷಗಳ ನಂತರ ಪ್ರಿಯದರ್ಶನ್ ಮತ್ತು ಊರ್ವಶಿಯವರನ್ನು ಒಂದುಗೂಡಿಸಿದ ಚಿತ್ರ"
ಶಾಂಘೈ ಸಹಕಾರ ಸಂಘ ಚಲನಚಿತ್ರೋತ್ಸವವು ಮುಂದಿನ ಐದು ದಿನಗಳಲ್ಲಿ ಅಸಂಖ್ಯಾತ ವೈವಿಧ್ಯಮಯ ಸಂಸ್ಕೃತಿಗಳು, ಸೌಂದರ್ಯದ ಸಂವೇದನೆಗಳು ಮತ್ತು ಸಂಪೂರ್ಣ ಸಿನಿಮೀಯ ಶ್ರೇಷ್ಠತೆಯ ಸಮ್ಮಿಲನವಾಗಲಿದೆ:ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು
Posted On:
26 JAN 2023 3:06PM by PIB Bengaluru
ಶಾಂಘೈ ಸಹಕಾರ ಸಂಘ ಚಲನಚಿತ್ರೋತ್ಸವವು ನಾಳೆಯಿಂದ ಪ್ರಾರಂಭವಾಗಲಿದ್ದು, ತಮಿಳು ಚಲನಚಿತ್ರ "ಅಪ್ಪತ್" ಮೊದಲಿಗೆ ಪ್ರದರ್ಶನಗೊಳ್ಳಲಿದೆ. ಈ ಚಿತ್ರವನ್ನು ಪದ್ಮ ಪ್ರಶಸ್ತಿ ಪುರಸ್ಕೃತ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಪ್ರಿಯದರ್ಶನ್ ನಿರ್ದೇಶಿಸಿದರೆ, ಜಿಯೋ ಸ್ಟುಡಿಯೋಸ್ ಮತ್ತು ವೈಡ್ ಆಂಗಲ್ ಕ್ರಿಯೇಷನ್ಸ್ ಸಹ ನಿರ್ಮಾಪಕರಾಗಿದ್ದಾರೆ.
ಈ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಊರ್ವಶಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ 700 ನೇ ಚಿತ್ರ ಇದಾಗಿದ್ದು, ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರು 51 ವರ್ಷಗಳಿಂದ ಇದ್ದಾರೆ ಎಂದು ಗುರುತಿಸಲಾಗಿದೆ. ನಿರ್ದೇಶಕ ಪ್ರಿಯದರ್ಶನ್ 1993ರಲ್ಲಿ ನಿರ್ದೇಶಿಸಿದ್ದ 'ಮಿಧುನಂ' ಚಿತ್ರದ ನಂತರ 28 ವರ್ಷಗಳ ನಂತರ ಹಿರಿಯ ನಟಿ ಊರ್ವಶಿಯವರೊಂದಿಗೆ ಮತ್ತೆ ಕೆಲಸ ಮಾಡಿದ್ದಾರೆ.
ಉತ್ಸವವನ್ನು ಉದ್ಘಾಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, “2022-23 ಕ್ಕೆ SCO ನಲ್ಲಿ ಭಾರತದ ಅಧ್ಯಕ್ಷ ಸ್ಥಾನವನ್ನು ಗುರುತಿಸಲು ಚಲನಚಿತ್ರೋತ್ಸವವನ್ನು ಆಯೋಜಿಸಲು ನಮಗೆ ಅಪಾರ ಹೆಮ್ಮೆಯಿದೆ. ಶಾಂಘೈ ಚಲನಚಿತ್ರೋತ್ಸವ ಪ್ರದೇಶದಿಂದ ಪ್ರದೇಶಕ್ಕೆ ಚಲನಚಿತ್ರಗಳ ವೈವಿಧ್ಯತೆ ಮತ್ತು ಚಲನಚಿತ್ರ ತಯಾರಿಕೆಯ ವಿವಿಧ ಶೈಲಿಗಳನ್ನು ತೋರಿಸುವುದು ಈ ಉತ್ಸವ ಆಯೋಜಿಸುವ ಭಾರತದ ಗುರಿಯಾಗಿದೆ. ನಾವು ಸಿನಿಮಾ ಪಾಲುದಾರಿಕೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ, ಕಾರ್ಯಕ್ರಮಗಳ ವಿನಿಮಯವನ್ನು ಹೊಂದಿದ್ದೇವೆ, ಚಲನಚಿತ್ರ ನಿರ್ಮಾಣದಲ್ಲಿ ಯುವ ಪ್ರತಿಭೆಯನ್ನು ಪೋಷಿಸುತ್ತೇವೆ. ಈ ವಿಶಿಷ್ಟ ಪ್ರದೇಶದ ಸಂಸ್ಕೃತಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇವೆ. ಶ್ರೀ ಪ್ರಿಯದರ್ಶನ್ ಅವರ ಅಪ್ಪತ್ ಚಿತ್ರ ವಿಶ್ವ ಮಟ್ಟದಲ್ಲಿ ಪ್ರದರ್ಶನಗೊಳ್ಳುವುದರೊಂದಿಗೆ ಉತ್ಸವವನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಈ ಚಿತ್ರ ಪ್ರೀತಿ ಮತ್ತು ನಮ್ಮ ಸಾಕುಪ್ರಾಣಿಗಳೊಂದಿಗಿನ ನಮ್ಮ ಬಾಂಧವ್ಯದ ಸ್ಪರ್ಶದ ಕಥೆಯಾಗಿದೆ. ಚಲನಚಿತ್ರೋತ್ಸವವು ಅಸಂಖ್ಯಾತ ವೈವಿಧ್ಯಮಯ ಸಂಸ್ಕೃತಿಗಳು, ಸೌಂದರ್ಯದ ಸಂವೇದನೆಗಳು ಮತ್ತು ಸಂಪೂರ್ಣ ಸಿನಿಮೀಯ ಶ್ರೇಷ್ಠತೆಯ ಸಮ್ಮಿಲನವಾಗಿದೆ. ಚಲನಚಿತ್ರೋತ್ಸವ ನಾಳೆ ಜ.27ರಂದು ಪ್ರಾರಂಭವಾಗಿ 5 ದಿನಗಳು ನಡೆಯಲಿವೆ ಎಂದರು.
ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡ ಅಪ್ಪತ್ ನಿರ್ದೇಶಕ ಪ್ರಿಯದರ್ಶನ್, “ಈ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಅಪ್ಪತ್ ಚಿತ್ರವನ್ನು ಆರಂಭಿಕ ಚಿತ್ರವಾಗಿ ಆಯ್ಕೆ ಮಾಡಿರುವುದು ನಮಗೆ ಗೌರವವಾಗಿದೆ. ಈ ಸರಳ ಮತ್ತು ಸುಂದರವಾದ ಕಥೆಯನ್ನು ನನ್ನ ಬಳಿಗೆ ತಂದಿದ್ದಕ್ಕಾಗಿ ನನ್ನ ನಿರ್ಮಾಪಕರಾದ ಜಿಯೋ ಸ್ಟುಡಿಯೋಸ್ ಮತ್ತು ವೈಡ್ ಆಂಗಲ್ ಕ್ರಿಯೇಷನ್ಸ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಚಿತ್ರದಲ್ಲಿ ಸಹಕರಿಸುತ್ತಿರುವುದು ಸಂತೋಷ ತಂದಿದೆ. 700 ಚಿತ್ರಗಳಲ್ಲಿ ನಟಿಸಿರುವ ಊರ್ವಶಿಯವರಂತಹ ಅಸಾಧಾರಣ ಪ್ರತಿಭೆಯೊಂದಿಗೆ ಕೆಲಸ ಮಾಡುತ್ತಿರುವುದು ಅದ್ಭುತವಾಗಿದೆ. ಅಪ್ಪತ್ ನಾನು ಈ ಹಿಂದೆ ಪ್ರಯತ್ನಿಸಿದ್ದಕ್ಕಿಂತ ಭಿನ್ನವಾಗಿದೆ. ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ ಎಂದರು.
ಎಸ್ ಸಿಒ ಫಿಲ್ಮ್ ಫೆಸ್ಟಿವಲ್ ಚಲನಚಿತ್ರ ಪ್ರದರ್ಶನಗಳು ಮತ್ತು ಚರ್ಚೆ-ಸಂವಾದಗಳನ್ನು ಒಳಗೊಂಡಿದ್ದು, ಮುಂಬೈನ ಎರಡು ಸ್ಥಳಗಳಲ್ಲಿ ನಡೆಯುತ್ತವೆ. ಪೆಡ್ಡರ್ ರಸ್ತೆಯಲ್ಲಿರುವ ಫಿಲ್ಮ್ ಡಿವಿಷನ್ ಕಾಂಪ್ಲೆಕ್ಸ್‌ನಲ್ಲಿರುವ 4 ಸಭಾಂಗಣಗಳು ಮತ್ತು ವರ್ಲಿಯಲ್ಲಿರುವ ನೆಹರು ಪ್ಲಾನೆಟೋರಿಯಂ ಬಿಲ್ಡಿಂಗ್‌ನಲ್ಲಿರುವ ಒಂದು ರಾಷ್ಟ್ರೀಯ ಸಿನಿಮಾ ಅಭಿವೃದ್ಧಿ ನಿಗಮ-NFDC ಥಿಯೇಟರ್ ನಲ್ಲಿ ಜರುಗಲಿದೆ. ಶಾಂಘೈ ಸಹಕಾರ ಸಂಘದ ದೇಶಗಳಿಂದ ಚಲನಚಿತ್ರೋತ್ಸವದಲ್ಲಿ ಒಟ್ಟು 57 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಸ್ಪರ್ಧೆಯ ವಿಭಾಗದಲ್ಲಿ, 14 ಚಲನಚಿತ್ರಗಳು ಸ್ಪರ್ಧಿಸುತ್ತಿವೆ, ಅವುಗಳನ್ನು ಪ್ರದರ್ಶಿಸಲಾಗುತ್ತದೆ. ಸ್ಪರ್ಧೆಯೇತರ ವಿಭಾಗವು 43 ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ತೀರ್ಪುಗಾರರ ಮತ್ತು ಸ್ಥಳೀಯ ಪ್ರೇಕ್ಷಕರ ಅನುಕೂಲಕ್ಕಾಗಿ ಚಲನಚಿತ್ರಗಳನ್ನು ಇಂಗ್ಲಿಷ್‌ನಲ್ಲಿ ಡಬ್ ಮಾಡಲಾಗುತ್ತದೆ, ಉಪ ಶೀರ್ಷಿಕೆಯನ್ನು ನೀಡಲಾಗುತ್ತದೆ.
ಪ್ರತಿನಿಧಿ ನೋಂದಣಿಗಳನ್ನು ಆನ್‌ಲೈನ್‌ನಲ್ಲಿ sco.nfdcindia.com ಅಥವಾ ವೈಯಕ್ತಿಕವಾಗಿ ಬಂದು ಉತ್ಸವದ ಸ್ಥಳದಲ್ಲಿ ಉತ್ಸವದಲ್ಲಿ ಭಾಗಿಯಾಗಲು 300 ರೂಪಾಯಿ + ಜಿಎಸ್ ಟಿ ನೀಡಿ ಭಾಗಿಯಾಗಬಹುದು. ಅಥವಾ ದಿನಕ್ಕೆ 100 ರೂಪಾಯಿ ನೀಡಿ ಚಲನಚಿತ್ರೋತ್ಸವ ವೀಕ್ಷಿಸಬಹುದು. ಸೂಕ್ತ ಗುರುತು ಪತ್ರ ನೀಡಿದಲ್ಲಿ ವಿದ್ಯಾರ್ಥಿಗಳಿಗೆ ನೋಂದಣಿ ಉಚಿತವಾಗಿದೆ.
ಎಸ್ ಸಿಒ ಚಲನಚಿತ್ರೋತ್ಸವ:
ಶಾಂಘೈ ಸಹಕಾರ ಸಂಘ ಚಲನಚಿತ್ರೋತ್ಸವವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಾರ್ವಜನಿಕ ವಲಯದ ಸಂಸ್ಥೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು ನಾಳೆಯಿಂದ ಜನವರಿ 31 ರವರೆಗೆ ಆಯೋಜಿಸುತ್ತಿದೆ. ಇದಕ್ಕೆ ಎಸ್ ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್ಸ್ ಸಹಕಾರ ನೀಡುತ್ತಿದೆ. ಎಸ್ ಸಿಒನಲ್ಲಿ ಭಾರತದ ಅಧ್ಯಕ್ಷತೆಯನ್ನು ಗುರುತಿಸಲು ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ.
*****
(Release ID: 1893986)
Visitor Counter : 157