ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

"ಸ್ಟಾರ್ಟ್ಅಪ್ ಇಂಡಿಯಾ ಇನ್ನೋವೇಶನ್ ವೀಕ್" ಇಂದು ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳು-2022ರ ವಿಜೇತರಿಗೆ ಸನ್ಮಾನ, ಪ್ರಶಸ್ತಿ ಪ್ರದಾನದೊಂದಿಗೆ ಮುಕ್ತಾಯಗೊಂಡಿತು


ಉದ್ಯಮಶೀಲತಾ ಮನೋಭಾವವನ್ನು ಆಚರಿಸಲು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ನಡೆದವು

Posted On: 16 JAN 2023 5:38PM by PIB Bengaluru

ರಾಷ್ಟ್ರೀಯ ನವೋದ್ಯಮ ದಿನವಾದ ಇಂದು ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳು-2022ರ ವಿಜೇತರನ್ನು ಸನ್ಮಾನಿಸುವ ಮೂಲಕ "ಸ್ಟಾರ್ಟ್ಅಪ್ ಇಂಡಿಯಾ ಇನ್ನೋವೇಶನ್ ವೀಕ್" ಮುಕ್ತಾಯಗೊಂಡಿತು. ನವದೆಹಲಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಶ್ರೀ ಸೋಮ್ ಪ್ರಕಾಶ್ ಅವರ ಉಪಸ್ಥಿತಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳು-2022 ಭಾರತದ ಅಭಿವೃದ್ಧಿಯ ಕಥೆಯನ್ನು ಉಜ್ವಲಿಸುವಲ್ಲಿ, ಆರ್ಥಿಕ ಲಾಭಗಳ ವಿಷಯದಲ್ಲಿ ಮಾತ್ರವಲ್ಲದೆ ಸಮಾಜಿಕ ಪ್ರಭಾವಶಾಲಿ ಪರಿಣಾಮಕ್ಕಾಗಿ ಅಸಾಧಾರಣ ಸಾಮರ್ಥ್ಯಗಳನ್ನು ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನವೋದ್ಯಮಗಳು ಮತ್ತು ಸಶಕ್ತರನ್ನು ಗುರುತಿಸುತ್ತದೆ.

ರಾಷ್ಟ್ರದ ಉದ್ಯಮಶೀಲತಾ ಮನೋಭಾವವನ್ನು ಆಚರಿಸಲು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ನಡೆದವು. ಗುಜರಾತ್ ಸರ್ಕಾರದ ಸ್ಟಾರ್ಟ್ಅಪ್ ಸೆಲ್ ಮತ್ತು ಇಂಟರ್ ನ್ಯಾಷನಲ್ ಆಟೋಮೊಬೈಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಐ.ಎ.ಸಿ.ಇ.) ಸ್ಟಾರ್ಟ್ಅಪ್ ಇಂಡಿಯಾದ ಸಹಭಾಗಿತ್ವದಲ್ಲಿ ಇಂದು ಗಾಂಧಿನಗರದಲ್ಲಿ ನವೋದ್ಯಮಿಗಳು, ಅವುಗಳ ಪೋಷಕರು, ಹೂಡಿಕೆದಾರರು ಮತ್ತು ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವವರಿಗಾಗಿ ಒಂದು ದಿನದ ಭೌತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಇನಿಶಿಯೇಟಿವ್, ಸೀಡ್ ಫಂಡ್ ಸ್ಕೀಮ್, ಸ್ಟಾರ್ಟ್ಅಪ್ ಇಕೋಸಿಸ್ಟಮ್ ನ ಮುಂದಿನ ಹಾದಿಯ ಬಗ್ಗೆ ಬೆಚ್ಚನೆಯ ಮಾತುಕತೆ, ಉದ್ಯಮ ಸಂವೇದನೆ, ವಿದ್ಯಾರ್ಥಿ ಉದ್ಯಮಿಗಳು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಮಾರ್ಗದರ್ಶಕ ಸಂಪರ್ಕಗಳು ಮತ್ತು ಭಾಗವಹಿಸುವ ನವೋದ್ಯಮಿಗಳಿಗೆ ಅಣಕು ಪಿಚಿಂಗ್ ಸೆಷನ್ ನಡೆಯಿತು. ಈ ಕಾರ್ಯಕ್ರಮವು 150 ಕ್ಕೂ ಹೆಚ್ಚು ಉದ್ಯಮಿಗಳು, ಮಾರ್ಗದರ್ಶಕರು, ನವೋದ್ಯಮಿಗಳ ಪೋಷಕರು ಮತ್ತು ಇತರ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವವರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಸ್ಟಾರ್ಟ್ಅಪ್ ಇಂಡಿಯಾ ಉದ್ಯಮ ಕೇಂದ್ರಿತ ವೆಬಿನಾರ್ ಗಳ 7 ದಿನಗಳ ಸರಣಿಯಲ್ಲಿ - ಶತಕೋಟಿ ಡಾಲರ್ ಕನಸನ್ನು ನನಸು ಮಾಡುವ ಪರಿ - ಎಂಬ ವಿಷಯದ ಬಗ್ಗೆ ಈ ಸರಣಿಯ ಅಂತಿಮ ವೆಬಿನಾರ್ ಅನ್ನು ಆಯೋಜಿಸಿತ್ತು. ನವೋದ್ಯಮ ಧನಸಹಾಯದ ವಿಷಯದಲ್ಲಿ ಬೃಹತ್ ಲಿಂಗ ಭೇದವನ್ನು ಪರಿಹರಿಸಲು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಲಿಂಗ ಸಮಾನತೆಯನ್ನು ಹೆಚ್ಚಿಸುವತ್ತ ವೆಬಿನಾರ್ ನಲ್ಲಿ ಗಮನ ಹರಿಸಲಾಗಿದೆ. ವೆಬಿನಾರ್ ಅನ್ನು ಈ ಲಿಂಕ್ ನಲ್ಲಿ ವೀಕ್ಷಿಸಬಹುದು: https://www.youtube.com/watch?v=n37-J_DcPv0.

ಬೆಂಗಳೂರು, ರೈಸನ್, ಗುರುಗ್ರಾಮ್, ಇಂದೋರ್, ಭೋಪಾಲ್, ಗಾಂಧಿನಗರ, ಗಾಜಿಯಾಬಾದ್, ಮೊಹಾಲಿ, ದೆಹಲಿ, ಭುವನೇಶ್ವರ, ಜಲಗಾಂವ್, ನಾಗ್ಪುರ, ಕೊಟ್ಟಾಯಂ, ಇಂಫಾಲ್, ಕೋಲ್ಕತಾ ಮತ್ತು ಇನ್ನೂ ಅನೇಕ ನಗರಗಳಲ್ಲಿ ಆಫ್ ಲೈನ್ ಮತ್ತು ಆನ್ ಲೈನ್ ಕಾರ್ಯಕ್ರಮಗಳನ್ನು ಆಯೋಜಿಸಲು ವಿವಿಧ ಕೇಂದ್ರಗಳು ಸ್ಟಾರ್ಟ್ಅಪ್ ಇಂಡಿಯಾದೊಂದಿಗೆ ಕೈ ಜೋಡಿಸಿದ್ದವು. ಸಾಮರ್ಥ್ಯ ವರ್ಧನಾ ಕಾರ್ಯಾಗಾರ, ತಜ್ಞರ ಸಮಿತಿ ಚರ್ಚೆ, ರಾಜ್ಯಮಟ್ಟದ ಸ್ಪರ್ಧೆಗಳು ಮತ್ತು ಸವಾಲುಗಳು, ನವೋದ್ಯಮ ಪ್ರದರ್ಶನ, ನವೋದ್ಯಮ ಶೃಂಗಸಭೆ, ದುಂಡುಮೇಜಿನ ಸಭೆಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 

*****
 



(Release ID: 1891697) Visitor Counter : 129