ಕಲ್ಲಿದ್ದಲು ಸಚಿವಾಲಯ
azadi ka amrit mahotsav

900 ಹಳ್ಳಿಗಳ 18 ಲಕ್ಷ ಜನರಿಗೆ ಲಾಭವಾಗಲಿರುವ ಕಲ್ಲಿದ್ದಲು ಗಣಿಯ ನೀರು


ಕಲ್ಲಿದ್ದಲು ಮತ್ತು ಲಿಗ್ನೈಟ್ ಸಾರ್ವಜನಿಕ ವಲಯದ ಘಟಕಗಳಿಂದ ಗ್ರೀನಿಂಗ್ ಡ್ರೈವ್ ಅನ್ನು ಹೆಚ್ಚಿಸಲಾಗುವುದು

Posted On: 13 JAN 2023 12:59PM by PIB Bengaluru

ಕಲ್ಲಿದ್ದಲು ಸಚಿವಾಲಯದ ನಿರ್ದೇಶನದಂತೆ, ಕಲ್ಲಿದ್ದಲು ಮತ್ತು ಲಿಗ್ನೈಟ್ ನ ಸಾರ್ವಜನಿಕ ವಲಯದ ಘಟಕಗಳು ಗಣಿ ನೀರಿನ ಸಂರಕ್ಷಣೆ ಮತ್ತು ದಕ್ಷ ಬಳಕೆಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಿವೆ, ಕುಡಿಯುವ ಬಳಕೆ ಮತ್ತು ನೀರಾವರಿಯಂತಹ ಸಮುದಾಯ ಬಳಕೆಗಳಿಗಾಗಿ ಅದರ ಆವೃತ್ತ ಪ್ರದೇಶಗಳಲ್ಲಿ ನೀರನ್ನು ಪೂರೈಸುವ ಮೂಲಕ ಈ ಬೇಡಿಕೆಯನ್ನು ಪೂರೈಸುತ್ತಿವೆ. ಕಾರ್ಯಾಚರಣಾ ಗಣಿಗಳಿಂದ ಹೊರಬಿಡಲಾಗುವ ಗಣಿಯ ನೀರು ಹಾಗೂ ಕಲ್ಲಿದ್ದಲು ಮತ್ತು ಲಿಗ್ನೈಟ್ ಸಾರ್ವಜನಿಕ ವಲಯದ ಘಟಕಗಳ ಪರಿತ್ಯಕ್ತ ಗಣಿಗಳಲ್ಲಿ ಲಭ್ಯವಿರುವ ನೀರು, ಕಲ್ಲಿದ್ದಲು ಗಣಿಗಾರಿಕಾ ಪ್ರದೇಶಗಳ ಸಮೀಪವಿರುವ ಸುಮಾರು 900 ಹಳ್ಳಿಗಳಲ್ಲಿ ವಾಸಿಸುವ ಸುಮಾರು 18 ಲಕ್ಷ ಜನರಿಗೆ ಪ್ರಯೋಜನಕಾರಿಯಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ, ಕಲ್ಲಿದ್ದಲು ಮತ್ತು ಲಿಗ್ನೈಟ್ ಸಾರ್ವಜನಿಕ ವಲಯದ ಘಟಕಗಳು ಸುಮಾರು 4000 ಲಕ್ಷ ಕಿಲೋ ಲೀ. ಗಣಿ ನೀರನ್ನು ಸಮುದಾಯ ಬಳಕೆಗಾಗಿ ಪೂರೈಸಲು ಯೋಜಿಸಿವೆ. ಅದರಲ್ಲಿ 2788 ಲಕ್ಷ ಕಿಲೋ ಲೀ. ಅನ್ನು ಡಿಸೆಂಬರ್ 2022 ರವರೆಗೆ ಪೂರೈಸಲಾಗಿದೆ. ಇದರಿಂದ, 881 ಲಕ್ಷ ಕಿಲೋ ಲೀ. ನೀರನ್ನು ಕುಡಿಯುವ ಬಳಕೆ ಸೇರಿದಂತೆ ಗೃಹಬಳಕೆಯ ಉದ್ದೇಶಗಳಿಗಾಗಿ ಬಳಸಲಾಗಿದೆ. ಗಣಿ ನೀರಿನ ಫಲಾನುಭವಿಗಳು ಮುಖ್ಯವಾಗಿ ಬುಡಕಟ್ಟು ಜನರು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವವರು. ಈ ಪ್ರಯತ್ನವು ಜಲ ಸಂರಕ್ಷಣಾ ಪ್ರಯತ್ನದಲ್ಲಿ ಸರ್ಕಾರದ ಜಲಶಕ್ತಿ ಅಭಿಯಾನಕ್ಕೆ ಅನುಗುಣವಾಗಿದೆ.

ಡಿಸೆಂಬರ್ '23ಕ್ಕೆ ಕೊನೆಗೊಳ್ಳುವ 2022-23 ಆರ್ಥಿಕ ವರ್ಷದಲ್ಲಿ, ಕೋಲ್ ಇಂಡಿಯಾ ಲಿಮಿಟೆಡ್ (ಸಿ.ಐ.ಎಲ್), ಹಸಿರು ವನಸಿರಿಯನ್ನು 1600 ಹೆಕ್ಟೇರ್ಗೆ ವಿಸ್ತರಿಸುವ ಮೂಲಕ ಈಗಾಗಲೇ ತನ್ನ ವಾರ್ಷಿಕ 1510 ಹೆಕ್ಟೇರ್ ನೆಡುತೋಪಿನ ಗುರಿಯನ್ನು ಪೂರೈಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2022ರ ಡಿಸೆಂಬರ್ ವರೆಗೆ ಸಿ.ಐ.ಎಲ್ 31 ಲಕ್ಷ ಸಸಿಗಳನ್ನು ನೆಟ್ಟಿದೆ.

ಗಣಿ ಗುತ್ತಿಗೆ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 4392 ಹೆಕ್ಟೇರ್ ಗಳಲ್ಲಿ ಹಸಿರೀಕರಣ ಉಪಕ್ರಮಗಳು ವರ್ಷಕ್ಕೆ 2.2 ಎಲ್ ಟಿ ಕಾರ್ಬನ್ ಸಿಂಕ್ ಸಾಮರ್ಥ್ಯವನ್ನು ಸೃಷ್ಟಿಸಿವೆ. ಕಲ್ಲಿದ್ದಲು ಮತ್ತು ಲಿಗ್ನೈಟ್ ಸಾರ್ವಜನಿಕ ವಲಯದ ಘಟಕಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 2022ರವರೆಗೆ ಸುಮಾರು 2230 ಹೆಕ್ಟೇರ್ ಭೂಮಿಯನ್ನು ಪ್ಲಾಂಟೇಶನ್ ಅಡಿಯಲ್ಲಿ, ಸುಮಾರು 360 ಹೆಕ್ಟೇರ್ ಪ್ರದೇಶವನ್ನು ಹುಲ್ಲುಗಾವಲಾಗಿ ಮಾರ್ಪಡಿಸಿವೆ. ಸೀಡ್ ಬಾಲ್ ಪ್ಲಾಂಟೇಶನ್, ಡ್ರೋನ್ ಗಳ ಮೂಲಕ ಬೀಜ ಬಿತ್ತುವುದು ಮತ್ತು ಅದರ ವಿವಿಧ ಗಣಿಗಳಲ್ಲಿ ಮಿಯಾವಾಕಿ ನೆಡುತೋಪುಗಳಂತಹ ಹೊಸ ತಂತ್ರಗಳ ಬಳಕೆ ಜಾರಿಯಲ್ಲಿದೆ. ಗಣಿಗಾರಿಕಾ ಪ್ರದೇಶಗಳು, ಅಧಿಕ ಹೊರೆಯ ಡಂಪ್ ಗಳು ಮತ್ತು ಇತರ ತೊಂದರೆಗೀಡಾದ ಪ್ರದೇಶಗಳನ್ನು ಸಕ್ರಿಯ ಗಣಿಗಾರಿಕಾ ವಲಯಗಳಿಂದ ಬೇರ್ಪಡಿಸಿ ತಕ್ಷಣ ಏಕಕಾಲದಲ್ಲಿ ಮರುಪಡೆಯಲಾಗುತ್ತದೆ. ಈ ಅರಣ್ಯೀಕರಣ ಚಟುವಟಿಕೆಗಳು ಮತ್ತು ಗ್ರೀನ್ ಬೆಲ್ಟ್ ಅಭಿವೃದ್ಧಿ ಕಾರ್ಯಗಳು ವಾತಾವರಣದಲ್ಲಿ ಇಂಗಾಲದ ಕಡಿತವನ್ನು ಸೃಷ್ಟಿಸುತ್ತಿವೆ. ದಟ್ಟವಾದ ಮರಗಳ ವ್ಯಾಪ್ತಿಯು ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಗಣಿಗಾರಿಕಾ ಕಾರ್ಯಾಚರಣೆಗಳ ಸಮಯದಲ್ಲಿ ಹೊರಸೂಸುವ ಗಾಳಿಯಲ್ಲಿ ಹಾರಾಡುವ ಧೂಳಿನ ಕಣಗಳನ್ನು ಇದು ಬಂಧಿಸುತ್ತದೆ.

*****


(Release ID: 1891018) Visitor Counter : 147