ಪ್ರಧಾನ ಮಂತ್ರಿಯವರ ಕಛೇರಿ
ಫ್ರೆಂಚ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಶ್ರೀ ಇಮ್ಯಾನ್ಯುಯೆಲ್ ಬೋನೆ ಅವರಿಂದ ಪ್ರಧಾನಮಂತ್ರಿಯವರ ಭೇಟಿ
Posted On:
05 JAN 2023 8:23PM by PIB Bengaluru
ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಅವರ ರಾಜತಾಂತ್ರಿಕ ಸಲಹೆಗಾರ ಶ್ರೀ ಇಮ್ಯಾನ್ಯುಯೆಲ್ ಬೋನೆ ಅವರು 2023 ರ ಜನವರಿ 5 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ರಕ್ಷಣೆ, ಭದ್ರತೆ ಮತ್ತು ಇಂಡೋ-ಫೆಸಿಫಿಕ್ ಸೇರಿದಂತೆ ವ್ಯೂಹಾತ್ಮಕ ಪಾಲುದಾರಿಕೆಯ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ನಿಕಟ ಸಹಕಾರದ ಬಗ್ಗೆ ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. ಭಾರತದ ಜಿ 20 ಅಧ್ಯಕ್ಷ ಸ್ಥಾನಕ್ಕೆ ಫ್ರಾನ್ಸ್ ನೀಡುತ್ತಿರುವ ಬೆಂಬಲವನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು.
ಶ್ರೀ ಬೋನೆ ಅವರು ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರ ಸ್ನೇಹದ ಸಂದೇಶವನ್ನು ಪ್ರಧಾನಮಂತ್ರಿಯವರಿಗೆ ತಿಳಿಸಿದರು ಮತ್ತು ಎನ್.ಎಸ್.ಎ. ಶ್ರೀ ಅಜಿತ್ ದೋವಲ್ ಅವರೊಂದಿಗಿನ ವ್ಯೂಹಾತ್ಮಕ ಮಾತುಕತೆಯ ಬಗ್ಗೆ ವಿವರಿಸಿದರು.
ಇಂಧನ ಮತ್ತು ಸಂಸ್ಕೃತಿ ಸೇರಿದಂತೆ ಪರಸ್ಪರ ಹಿತಾಸಕ್ತಿ ಮತ್ತು ಸಹಕಾರದ ಇತರ ಕ್ಷೇತ್ರಗಳ ಬಗ್ಗೆಯೂ ಮಾತುಕತೆಗಳು ನಡೆದವು.
ಬಾಲಿಯಲ್ಲಿ ಇತ್ತೀಚೆಗೆ ಅಧ್ಯಕ್ಷ ಮ್ಯಾಕ್ರೋನ್ ಅವರನ್ನು ಭೇಟಿ ಮಾಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಭಾರತಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ತಮ್ಮ ಆಹ್ವಾನವನ್ನು ತಿಳಿಸಿದರು. ಅಧ್ಯಕ್ಷ ಮ್ಯಾಕ್ರೋನ್ ಅವರು ಸಾಧ್ಯವಾದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದಾರೆ ಎಂದು ಶ್ರೀ ಬೋನೆ ಹೇಳಿದರು.
*****
(Release ID: 1889027)
Visitor Counter : 142
Read this release in:
Bengali
,
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam