ಇಂಧನ ಸಚಿವಾಲಯ
azadi ka amrit mahotsav

​​​​​​​ಎನ್‌ ಟಿ ಪಿ ಸಿ ಗ್ರೀನ್ ಎನರ್ಜಿ ಲಿಮಿಟೆಡ್ ಮತ್ತು ಎಚ್‌ ಪಿ ಸಿ ಎಲ್ ನವೀಕರಿಸಬಹುದಾದ ಇಂಧನ ವ್ಯವಹಾರ ಮತ್ತು ಎಚ್‌ ಪಿ ಸಿ ಎಲ್ ಸಂಸ್ಕರಣಾಗಾರಗಳು ಮತ್ತು ಇತರ ವ್ಯಾಪಾರ ಘಟಕಗಳಿಗೆ ಹಸಿರು ವಿದ್ಯುತ್‌ ಗಾಗಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಮಾಡಿವೆ

प्रविष्टि तिथि: 04 JAN 2023 7:58PM by PIB Bengaluru
1. ಎನ್‌ ಜಿ ಇ ಎಲ್ ಮತ್ತು ಎಚ್‌ ಪಿ ಸಿ ಎಲ್ ನಡುವಿನ ತಿಳುವಳಿಕೆ ಒಪ್ಪಂದವು ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಯೋಗ ಮತ್ತು ಸಹಕಾರದ ಮೊದಲ ಹೆಜ್ಜೆಯಾಗಿದೆ.  ಇದು ಎಚ್‌ ಪಿ ಸಿ ಎಲ್ ತನ್ನ ಶುದ್ಧ ಇಂಧನ ಬದ್ಧತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

https://static.pib.gov.in/WriteReadData/userfiles/image/image002E5LC.jpg

https://static.pib.gov.in/WriteReadData/userfiles/image/image0030KB2.jpg

ಎನ್‌ ಜಿ ಇ ಎಲ್ ಹಣಕಾಸು ಮುಖ್ಯಸ್ಥ ಶ್ರೀ ನೀರಜ್ ಶರ್ಮಾ ಮತ್ತು ಎಚ್‌ ಪಿ ಸಿ ಎಲ್‌ ಜೈವಿಕ ಮತ್ತು ನವೀಕರಿಸಬಹುದಾದ ಇಂಧನಗಳ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಶುವೇಂದು ಗುಪ್ತಾ ಅವರು ನವೀಕರಿಸಬಹುದಾದ ಇಂಧನ ವ್ಯವಹಾರ ಮತ್ತು ಎಚ್‌ ಪಿ ಸಿ ಎಲ್ ಸಂಸ್ಕರಣಾಗಾರಗಳು ಮತ್ತು ಇತರ ವ್ಯಾಪಾರ ಘಟಕಗಳಿಗೆ ಹಸಿರು ವಿದ್ಯುತ್‌ ಗಾಗಿ ಎಂಒಯುಗೆ ಸಹಿ ಮಾಡಿದರು.

ಎನ್‌ ಟಿ ಪಿ ಸಿ ಗ್ರೀನ್ ಎನರ್ಜಿ ಲಿಮಿಟೆಡ್ (ಎನ್‌ ಜಿ ಇ ಎಲ್‌) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ ಪಿ ಸಿ ಎಲ್) ನವದೆಹಲಿಯಲ್ಲಿ 03-01-2023 ರಂದು ಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಯೋಜನೆಗಳ ಅಭಿವೃದ್ಧಿಗಾಗಿ ಆರ್‌ ಇ ಯಲ್ಲಿ ವ್ಯಾಪಾರ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಎಚ್‌ ಪಿ ಸಿ ಎಲ್ ನ ಅಗತ್ಯತೆಗಳಿಗಾಗಿ 400 ಮೆ.ವ್ಯಾ. ನವೀಕರಿಸಬಹುದಾದ ಇಂಧನವನ್ನು ಪೂರೈಸಲು. ಎನ್‌ ಜಿ ಇ ಎಲ್‌ ನ ಹಣಕಾಸು ವಿಭಾಗದ ಮುಖ್ಯಸ್ಥ ಶ್ರೀ ನೀರಜ್ ಶರ್ಮಾ ಮತ್ತು ಎಚ್‌ಪಿಸಿಎಲ್‌ನ ಜೈವಿಕ ಇಂಧನ ಮತ್ತು ನವೀಕರಿಸಬಹುದಾದ ಇಂಧನಗಳ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಶುವೇಂದು ಗುಪ್ತಾ ಅವರು ಈ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದರು.

ಎನ್‌ಟಿಪಿಸಿಯ ಸಿಎಂಡಿ ಶ್ರೀ ಗುರುದೀಪ್ ಸಿಂಗ್, ಎನ್‌ಟಿಪಿಸಿಯ ವಾಣಿಜ್ಯ ನಿರ್ದೇಶಕ ಶ್ರೀ ಸಿ.ಕೆ ಮೊಂಡೋಲ್, ಎನ್‌ಟಿಪಿಸಿಯ ಹಣಕಾಸು ನಿರ್ದೇಶಕ ಶ್ರೀ ಜೆ ಶ್ರೀನಿವಾಸನ್, ಸಿಇಒ-ಎನ್‌ಜಿಇಎಲ್ ಶ್ರೀ ಮೋಹಿತ್ ಭಾರ್ಗವ, ಸಿ ಎಸ್‌ ಪಿ & ಬಿ ಡಿ, ಎಚ್‌ ಪಿ ಸಿ ಎಲ್ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಡಿ.ಕೆ ಶರ್ಮಾ, ಎಚ್‌ ಪಿ ಸಿ ಎಲ್ ಸಿಜಿಎಂ ಶ್ರೀ ಕುಶಾಲ್ ಬ್ಯಾನರ್ಜಿ ಮತ್ತು ಎನ್‌ ಟಿ ಪಿ ಸಿ  ಆರ್‌ ಇ ಎಲ್‌ ಸಿಜಿಎಂ ಶ್ರೀ ರಾಜೀವ್ ಗುಪ್ತಾ ಅವರ ಉಪಸ್ಥಿತಿಯಲ್ಲಿ ಈ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ತಿಳಿವಳಿಕೆ ಒಪ್ಪಂದವು ಎನ್‌ ಜಿ ಇ ಎಲ್ ಮತ್ತು ಎಚ್‌ ಪಿ ಸಿ ಎಲ್‌ ಗಾಗಿ ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿಯ ಕ್ಷೇತ್ರದಲ್ಲಿ ಸಹಕಯೋಗ ಮತ್ತು ಸಹಕಾರದ ಮೊದಲ ಹೆಜ್ಜೆಯಾಗಿದೆ. ಇದು ಎಚ್‌ ಪಿ ಸಿ ಎಲ್‌ ತನ್ನ ಶುದ್ದ ಇಂಧನ ಬದ್ಧತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

*****


(रिलीज़ आईडी: 1888698) आगंतुक पटल : 189
इस विज्ञप्ति को इन भाषाओं में पढ़ें: English , Urdu , Marathi , Telugu