ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

​​​​​​​ನವೋದ್ಯಮಗಳಿಗೆ ಬಹು-ಆಯಾಮದ ಬೆಂಬಲವನ್ನು ಒದಗಿಸಲು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದ ದೆಹಲಿಯ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮ (ಎನ್.ಆರ್.ಡಿ.ಸಿ.) ಪ್ರಧಾನ ಕಚೇರಿಯಲ್ಲಿ "ಇನ್ಕ್ಯುಬೇಶನ್ ಸೆಂಟರ್" ಉದ್ಘಾಟಣೆ


ಸಾರ್ವಜನಿಕ ಅನುದಾನಿತ ಸಂಶೋಧನಾ ಸಂಸ್ಥೆಗಳು (ಪಿ.ಎಫ್.ಆರ್.ಐ) ಅಭಿವೃದ್ಧಿಪಡಿಸಿದ ಪ್ರಯೋಗಾಲಯದ ಪ್ರಮಾಣದ ತಂತ್ರಜ್ಞಾನಗಳನ್ನು ಕೈಗಾರಿಕೆಗಳಿಗೆ ಕೊಂಡೊಯ್ಯಲು ತನ್ನ ಸೇವೆಗಳನ್ನು ಒದಗಿಸುತ್ತಿರುವ ಏಕೈಕ ರಾಷ್ಟ್ರೀಯ ಮಟ್ಟದ ಸಾರ್ವಜನಿಕ ವಲಯದ ಘಟಕವಾಗಿ (ಪಿ.ಎಸ್.ಯು.) ಎನ್.ಆರ್.ಡಿ.ಸಿ. ತನ್ನನ್ನು ತಾನು ಪುನರುಜ್ಜೀವನಗೊಳಿಸಿಕೊಂಡಿದೆ ಎಂದು ಸಂತೋಷಪಟ್ಟ ಸಚಿವರು

ಎನ್.ಆರ್.ಡಿ.ಸಿ. ಹಬ್ ಮತ್ತು ಸ್ಪೋಕ್ ಮಾದರಿಯ ಮೂಲಕ ತಂತ್ರಜ್ಞಾನ ವರ್ಗಾವಣೆ ಸೇವೆಗಳನ್ನು, ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಾ ದೇಶಗಳಿಗೆ ಒದಗಿಸುವ ಗುರಿಯನ್ನು ಹೊಂದಿರಬೇಕು: ಡಾ. ಜಿತೇಂದ್ರ ಸಿಂಗ್

1953ರಲ್ಲಿ ಎನ್.ಆರ್.ಡಿ.ಸಿ. ಕೇಂದ್ರ ಕಚೇರಿ ಪ್ರಾರಂಭವಾದಾಗಿನಿಂದ ದೆಹಲಿಯ ಎನ್.ಆರ್.ಡಿ.ಸಿ. ಕೇಂದ್ರ ಕಚೇರಿಗೆ ಭೇಟಿ ನೀಡಿದ ಮೊದಲ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂಬ ಹೆಗ್ಗಳಿಕೆಗೆ ಡಾ. ಜಿತೇಂದ್ರ ಸಿಂಗ್ ಪಾತ್ರರಾಗಿದ್ದಾರೆ: ಅಮಿತ್ ರಸ್ತೋಗಿ

Posted On: 31 DEC 2022 5:59PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಭೂ ವಿಜ್ಞಾನ; ಎಂ.ಒ.ಎಸ್. ಪಿ.ಎಂ.ಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಡಾ. ಜಿತೇಂದ್ರ ಸಿಂಗ್ ಅವರು ದೆಹಲಿಯ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮದಲ್ಲಿ (ಎನ್.ಆರ್.ಡಿ.ಸಿ.) ನವೋದ್ಯಮಗಳಿಗೆ ಬಹು-ಆಯಾಮದ ಬೆಂಬಲವನ್ನು ಒದಗಿಸಲು "ಇನ್ಕ್ಯುಬೇಶನ್ ಸೆಂಟರ್" ಅನ್ನು ಉದ್ಘಾಟಿಸಿದರು.

ಎನ್.ಆರ್.ಡಿ.ಸಿ. ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಕಮೊಡೋರ್ (ನಿವೃತ್ತ) ಅಮಿತ್ ರಸ್ತೋಗಿ ಮತ್ತು ಅವರ ಇಡೀ ತಂಡವು ಡಾ. ಜಿತೇಂದ್ರ ಸಿಂಗ್ ಅವರನ್ನು ಸ್ವಾಗತಿಸಿದರು. ಡಾ. ಜಿತೇಂದ್ರ ಸಿಂಗ್ ಅವರು 1953ರಲ್ಲಿ ಪ್ರಾರಂಭವಾದಾಗಿನಿಂದ ದೆಹಲಿಯ ಎನ್.ಆರ್.ಡಿ.ಸಿ ಪ್ರಧಾನ ಕಚೇರಿಗೆ ಭೇಟಿ ನೀಡುತ್ತಿರುವ ಮೊದಲ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾರೆ ಎಂದು ಗಮನಸೆಳೆದರು.

2015ರ ಆಗಸ್ಟ್ 15ರಂದು ಕೆಂಪುಕೋಟೆಯಿಂದ 'ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ನಂತರ, ಸಾರ್ವಜನಿಕ ಧನಸಹಾಯದ ಸಂಶೋಧನಾ ಸಂಸ್ಥೆಗಳು (ಪಿ.ಎಫ್.ಆರ್.ಐ) ಅಭಿವೃದ್ಧಿಪಡಿಸಿದ ಪ್ರಯೋಗಾಲಯದ ಪ್ರಮಾಣದ ತಂತ್ರಜ್ಞಾನಗಳನ್ನು ಉದ್ಯಮಕ್ಕೆ ಕೊಂಡೊಯ್ಯಲು ತನ್ನ ಸೇವೆಗಳನ್ನು ಒದಗಿಸುತ್ತಿರುವ ಏಕೈಕ ರಾಷ್ಟ್ರಮಟ್ಟದ ಪಿ.ಎಸ್.ಯು. ಆಗಿ ಎನ್.ಆರ್.ಡಿ.ಸಿ. ತನ್ನನ್ನು ತಾನು ಪರಿವರ್ತಿಸಿಕೊಂಡಿದೆ ಎಂಬುದನ್ನು ಗಮನಿಸಿ ಡಾ. ಜಿತೇಂದ್ರ ಸಿಂಗ್ ಸಂತೋಷಪಟ್ಟರು.

ನವೋದ್ಯಮಗಳಿಗೆ ಆಸ್ತಿ (ಐ.ಪಿ.) ಫೈಲಿಂಗ್ ಬೆಂಬಲ, ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿ (ಎನ್.ಆರ್.ಡಿ.ಸಿ. ಎಚ್.ಕ್ಯೂ), ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿ.ಎಸ್.ಐ.ಆರ್.) - ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೊರೇಟರೀಸ್  (ಎನ್.ಎ.ಎಲ್) ಮತ್ತು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿ.ಎಸ್.ಐ.ಆರ್.) - ಇನ್‌ಸ್ಟಿಟ್ಯೂಟ್‌ ಆಫ್‌ ಮಿನರಲ್‌ ಆ್ಯಂಡ್‌ ಮೆಟೀರಿಯಲ್ಸ್‌ ಟೆಕ್ನಾಲಜಿ ಯಲ್ಲಿ (ಐ.ಎಂ.ಎಂ.ಟಿ.) ತನ್ನ ಶಾಖಸಂಪುಟದ (ಇನ್ಕ್ಯುಬೇಟರ್ ಗಳ) ಮೂಲಕ ನವೋದ್ಯಮಗಳನ್ನು ಪೋಷಿಸಲು, ಅವು ಪ್ರಾರಂಭವಾದಾಗಿನಿಂದ ಬೇರೂರುವ ತನಕ ಇನ್ಕ್ಯುಬೇಷನ್ ಬೆಂಬಲ, ತಂತ್ರಜ್ಞಾನ ಅಭಿವೃದ್ಧಿ ನಿಧಿ, ಆರಂಭಿಕ ಹಂತದ ಸ್ಟಾರ್ಟ್ ಅಪ್ ಗಳಿಗೆ ಪ್ರಾರಂಭಿಕ ಹೂಡಿಕೆ (ಸೀಡ್ ಫಂಡಿಂಗ್), ನವೋದ್ಯಮಗಳನ್ನು ಗುರುತಿಸಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯೊಂದಿಗೆ (ಡಿ.ಪಿ.ಐ.ಐ.ಟಿ.) ಸಹಯೋಗ ಮತ್ತು ಅಂತಿಮವಾಗಿ ನವೋದ್ಯಮಗಳ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೊಂದಿಗೆ (ಐ.ಒ.ಸಿ.ಎಲ್.) ಸಹಯೋಗದಂತಹ ವಿವಿಧ ಚಟುವಟಿಕೆಗಳ ಮೂಲಕ ನಿಗಮವು ನವೋದ್ಯಮಗಳಿಗೆ ಬೆಂಬಲವನ್ನು ಒದಗಿಸುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಗಮನಸೆಳೆದರು.

ಡಾ. ಜಿತೇಂದ್ರ ಸಿಂಗ್ ಅವರು ರಾಷ್ಟ್ರೀಯ ಮಟ್ಟದ ಸೌಲಭ್ಯವನ್ನು ಸ್ಥಾಪಿಸಲು ಆರೋಗ್ಯಕರ ವಿಧಾನವನ್ನು ತೆಗೆದುಕೊಂಡು, ದೇಶದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಸ್ಟಾರ್ಟ್-ಅಪ್ ಗಳ ಪರಿಸರ ವ್ಯವಸ್ಥೆಯ ಎಲ್ಲಾ ಅಗತ್ಯಗಳಿಗೆ ಒನ್-ಸ್ಟಾಪ್ ಪರಿಹಾರವನ್ನು ಒದಗಿಸುವಂತೆ ಎನ್.ಆರ್.ಡಿ.ಸಿ. ತಂಡವನ್ನು ಒತ್ತಾಯಿಸಿದರು. ತಂತ್ರಜ್ಞಾನ ಸನ್ನದ್ಧತೆಯ ಮಟ್ಟಗಳ ಮೌಲ್ಯಮಾಪನ, ಬೌದ್ಧಿಕ ಆಸ್ತಿ ವಿನಿಮಯ, ವಿನ್ಯಾಸ ಚಿಕಿತ್ಸಾಲಯ, ಮಾದರಿ ಶಾಖಸಂಪುಟ ಸೌಲಭ್ಯ ಮುಂತಾದ ಸೌಲಭ್ಯಗಳನ್ನು ಇದು ಹೊಂದಿರಬೇಕು ಎಂದು ಅವರು ಹೇಳಿದರು. ಭಾರತೀಯ ತಂತ್ರಜ್ಞಾನಗಳಿಗೆ ವಿಶ್ವ ಮಾರುಕಟ್ಟೆಯನ್ನು ಹುಡುಕುವ ಸಲುವಾಗಿ, ಎನ್.ಆರ್.ಡಿ.ಸಿ ಹಬ್ ಮತ್ತು ಸ್ಪೋಕ್ ಮಾದರಿಯ ಮೂಲಕ ತಂತ್ರಜ್ಞಾನ ವರ್ಗಾವಣೆ ಸೇವೆಗಳನ್ನು, ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಾದ ದೇಶಗಳಿಗೆ ಒದಗಿಸುವ ಗುರಿಯನ್ನು ಹೊಂದಿರಬೇಕು ಎಂದು ಸಚಿವರು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು, ಡಿ.ಎಸ್.ಐ.ಆರ್.ನ ಅಡಿಯಲ್ಲಿ ಪಿ.ಎಸ್.ಯು.ವಾಗಿ, ಎನ್.ಆರ್.ಡಿ.ಸಿ.ಯು. ತನ್ನ ತಂತ್ರಜ್ಞಾನ ಮೌಲ್ಯಮಾಪನ, ಬೇಸಿಕ್ ಎಂಜಿನಿಯರಿಂಗ್, ಮಾರುಕಟ್ಟೆ ಸಮೀಕ್ಷೆಗಳು, ಇತ್ಯಾದಿಗಳಂತಹ ವಿವಿಧ ಮೌಲ್ಯವರ್ಧಕ ಚಟುವಟಿಕೆಗಳ ಮೂಲಕ ಐ.ಪಿ.ಆರ್.ಅನ್ನು ಭದ್ರಪಡಿಸುವ ಮತ್ತು ಭಾಷಾಂತರಿಸುವತ್ತ ಗಮನ ಹರಿಸಿದೆ ಮತ್ತು ಭಾರತವನ್ನು ನಿಜವಾಗಿಯೂ "ಆತ್ಮನಿರ್ಭರ"ವನ್ನಾಗಿ ಮಾಡಲು ತನ್ನ ಸಹಾಯವನ್ನು ಒದಗಿಸುತ್ತದೆ ಎಂದು ಹೇಳಿದರು.

ಕೊಮೊಡೋರ್ (ನಿವೃತ್ತ) ಅಮಿತ್ ರಸ್ತೋಗಿಯವರು ಸಚಿವರ ಮುಂದೆ ಮಂಡಿಸಿದ ತಮ್ಮ ಪ್ರಸ್ತುತಿಯಲ್ಲಿ, ಯುನಿಫೋರ್, ಭಾರತೀಯ ಯುನಿಕಾರ್ನ್ ಮತ್ತು ದಿ ಲೀಡರ್ ಇನ್ ಕನ್ವರ್ಷನಲ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಆಟೋಮೇಷನ್ 2008ರಲ್ಲಿ ಎನ್.ಆರ್.ಡಿ.ಸಿ.ಯಿಂದ 30 ಲಕ್ಷ ರೂ.ಗಳ ಧನಸಹಾಯ ಮತ್ತು ತಂತ್ರಜ್ಞಾನ ಬೆಂಬಲವನ್ನು ಪಡೆದಿದೆ ಎಂದು ಮಾಹಿತಿ ನೀಡಿದರು. ಶ್ರೀ ರಸ್ತೋಗಿಯವರು ಡಾ. ಜಿತೇಂದ್ರ ಸಿಂಗ್ ಅವರಿಗೆ ತಾವು ಮತ್ತು ತಮ್ಮ ತಂಡವು ನಿಗಮವನ್ನು ತಂತ್ರಜ್ಞಾನ ವರ್ಗಾವಣೆಯಲ್ಲಿ ವಿಶ್ವದ ಅತ್ಯುತ್ತಮ ಮತ್ತು ಪ್ರಮುಖ ಸಂಸ್ಥೆಯನ್ನಾಗಿ ಮಾಡಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಎನ್.ಆರ್.ಡಿ.ಸಿ ನವೋದ್ಯಮಗಳಿಗೆ ಶಾಖಸಂಪುಟ ಸೌಲಭ್ಯಗಳನ್ನು ಸೃಷ್ಟಿಸಿದೆ ಮತ್ತು ನವೋದ್ಯಮಗಳಿಗೆ ಧನಸಹಾಯ, ಮಾರ್ಗದರ್ಶನ, ಐಪಿ ನೆರವು ಮತ್ತು ಇತರ ಸಂಬಂಧಿತ ಸೇವೆಗಳ ವಿಷಯದಲ್ಲಿ ಬೆಂಬಲವನ್ನು ಒದಗಿಸಲು ಪ್ರಯೋಜನಕಾರಿ ಯೋಜನೆಗಳನ್ನು ಉತ್ತೇಜಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ, ನಿಗಮವು ಮೂರು ಇನ್ಕ್ಯುಬೇಶನ್ ಕೇಂದ್ರಗಳನ್ನು ಮತ್ತು ಒಂದು ಔಟ್ರೀಚ್ ಕೇಂದ್ರವನ್ನು ಸ್ಥಾಪಿಸಿದೆ. ಈಶಾನ್ಯ ಭಾರತದ ಗುವಾಹಟಿಯಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು 2023ರ ಜನವರಿಯಲ್ಲಿ ಮತ್ತೊಂದು ಔಟ್ರೀಚ್ ಕೇಂದ್ರವನ್ನು ಉದ್ಘಾಟಿಸಲು ಯೋಜಿಸಲಾಗಿದೆ. ಐಪಿ ಫೈಲಿಂಗ್, ಇನ್ಕ್ಯುಬೇಶನ್ ಮತ್ತು ಸ್ಟಾರ್ಟ್ ಅಪ್ ನೋಂದಣಿಗೆ ಸಂಬಂಧಿಸಿದಂತೆ ಇದುವರೆಗೆ 10,000 ನವೋದ್ಯಮಗಳಿಗೆ ಬೆಂಬಲ ದೊರೆತಿದೆ.

ಎನ್.ಆರ್.ಡಿ.ಸಿ. ನಾಗರಿಕ ಬಳಕೆಗಾಗಿ ರಕ್ಷಣೆ ಮತ್ತು ಪರಮಾಣು ತಂತ್ರಜ್ಞಾನಗಳ ಕ್ಷೇತ್ರಕ್ಕೂ ಹೆಜ್ಜೆ ಇಟ್ಟಿದೆ. ಮೇಡ್-ಇನ್-ಇಂಡಿಯಾವನ್ನು ಬೆಂಬಲಿಸುವ ಗುರಿಯೊಂದಿಗೆ, ಎನ್.ಆರ್.ಡಿ.ಸಿ. ಭಾರತೀಯ ತಂತ್ರಜ್ಞಾನಗಳಿಗೆ ವಿಶ್ವ ಮಾರುಕಟ್ಟೆಯನ್ನು ಅನ್ವೇಷಿಸಲು ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಟ್ರೇಡ್ಮಾರ್ಕ್ ಆಫೀಸ್ (ಯು.ಎಸ್.ಪಿ.ಟಿ.ಒ), ಆಫ್ರಿಕನ್-ಏಷ್ಯನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎ.ಎ.ಆರ್.ಡಿ.ಓ) ಇತ್ಯಾದಿಗಳೊಂದಿಗೆ ವಿದೇಶಿ ಸಹಯೋಗವನ್ನು ಸ್ಥಾಪಿಸಿದೆ. ಇದಲ್ಲದೆ, ಎನ್.ಆರ್.ಡಿ.ಸಿ. ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಕೈಗಾರಿಕೆಗಳ ನಡುವೆ ವೇಗವರ್ಧಕವಾಗಿದೆ ಎಂದು ಸಾಬೀತುಪಡಿಸುತ್ತಿದೆ. ಇದು ಕಳೆದ ಐದು ವರ್ಷಗಳಲ್ಲಿ 220 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಎನ್.ಆರ್.ಡಿ.ಸಿ ಕೂಡಾ ತನ್ನ ರುಜುವಾತುಗಳನ್ನು ಸಾಬೀತುಪಡಿಸಿದೆ. ಅದರ ವಿಶಾಖಪಟ್ಟಣಂ ಘಟಕವು 2021ರಲ್ಲಿ "ಅತ್ಯುತ್ತಮ ತಂತ್ರಜ್ಞಾನ" ಮತ್ತು "ಆವಿಷ್ಕಾರ ಬೆಂಬಲ ಕೇಂದ್ರ" ಪ್ರಶಸ್ತಿಯನ್ನು ಪಡೆದಿದೆ. ಸ್ಟಾರ್ಟ್ ಅಪ್ ಗಳಿಗೆ ಒನ್-ಸ್ಟಾಪ್ ಶಾಪ್ ಒದಗಿಸಲು ರಾಷ್ಟ್ರೀಯ ತಂತ್ರಜ್ಞಾನ ವರ್ಗಾವಣಾ ಸಂಸ್ಥೆಯನ್ನು ಸ್ಥಾಪಿಸುವ ಗುರಿಯೊಂದಿಗೆ, ಅಂತರರಾಷ್ಟ್ರೀಯ ಮಾರ್ಕೆಟಿಂಗ್ ವಿಭಾಗವನ್ನು ಸ್ಥಾಪಿಸುವ ಮೂಲಕ, ಎನ್.ಆರ್.ಡಿ.ಸಿ. ಭವಿಷ್ಯದಲ್ಲಿ ದೊಡ್ಡ ಪ್ರಮಾಣದ ಉನ್ನತಿಗೆ ಸಜ್ಜಾಗಿದೆ.

****



(Release ID: 1887806) Visitor Counter : 137