ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ: ವರ್ಷಾಂತ್ಯದ ಅವಲೋಕನ 2022
Posted On:
28 DEC 2022 3:40PM by PIB Bengaluru
1. ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮ (ಎನ್‌ಎಐಪಿ) ಹಂತ-೪ ಅನ್ನು 2022ರ ಆಗಸ್ಟ್ 1ರಿಂದ 3.3 ಕೋಟಿ ಪ್ರಾಣಿಗಳನ್ನು ಕೃತಕ ಗರ್ಭಧಾರಣೆಯ ಮೂಲಕ ಶೇ.50 ಕ್ಕಿಂತ ಕಡಿಮೆ ಎಐ ವ್ಯಾಪ್ತಿ ಇರುವ 604 ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ.
2. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಸರ್ಕಾರಿ ವೀರ್ಯ ಕೇಂದ್ರಗಳಲ್ಲಿ 27.86 ಲಕ್ಷ ಡೋಸ್ ಲಿಂಗ ವಿಂಗಡಣೆಯ ವೀರ್ಯವನ್ನು ಉತ್ಪಾದಿಸಲಾಗಿದೆ ಮತ್ತು ಹಾಲು ಒಕ್ಕೂಟ, ಸರ್ಕಾರೇತರ ಸಂಸ್ಥೆಗಳು ಮತ್ತು ಖಾಸಗಿ ವೀರ್ಯ ಕೇಂದ್ರಗಳಿಂದ 31.12 ಲಕ್ಷ ಡೋಸ್‌ಗಳನ್ನು ಉತ್ಪಾದಿಸಲಾಗಿದೆ.
3. ದೇಶದಲ್ಲಿ ಕನಿಷ್ಠ 200 ಗೋವಿನ ಹಿಂಡಿನ ಗಾತ್ರದ ತಳಿ ವೃದ್ಧಿ ಸಾಕಾಣೆ ಕೇಂದ್ರಗಳನ್ನು ಸ್ಥಾಪಿಸಲು ಖಾಸಗಿ ಉದ್ಯಮಿಗಳಿಗೆ ಬಂಡವಾಳ ವೆಚ್ಚದಲ್ಲಿ (ಭೂಮಿ ವೆಚ್ಚವನ್ನು ಹೊರತುಪಡಿಸಿ) ಶೇ.50 (ಪ್ರತಿ ಫಾರ್ಮ್‌ಗೆ ರೂ 2 ಕೋಟಿಗಳವರೆಗೆ) ಸಹಾಯಧನವನ್ನು ಒದಗಿಸಲು ಉದ್ದೇಶಿಸಲಾಗಿದೆ.
4. 2022ರ ನವೆಂಬರ್ 26 ರ ರಾಷ್ಟ್ರೀಯ ಹಾಲು ದಿನದ ಮುನ್ನಾದಿನದಂದು 3 ಅತ್ಯುತ್ತಮ ಡೇರಿ ರೈತರು, 3 ಅತ್ಯುತ್ತಮ ಕೃತಕ ಬುದ್ದಿಮತ್ತೆ ತಂತ್ರಜ್ಞರು ಮತ್ತು 3 ಅತ್ಯುತ್ತಮ ಡೇರಿ ಸಹಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
5. ಪಶುಸಂಗೋಪನೆ ಮತ್ತು ಡೇರಿ ವಲಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನವೀನ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಪರಿಹಾರಗಳನ್ನು ಕಂಡುಕೊಳ್ಳುವ ಸಲುವಾಗಿ, ಪಶುಸಂಗೋಪನಾ ಇಲಾಖೆಯು 2021-22ರಲ್ಲಿ ಸ್ಟಾರ್ಟ್ ಅಪ್ ಗ್ರ್ಯಾಂಡ್ ಚಾಲೆಂಜ್ 2.0 ಅನ್ನು ಆಯೋಜಿಸಿದೆ.
6. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವೃತ್ತಿಪರರಿಗೆ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು 2022ರ ನವೆಂಬರ್ 26ರ ರಾಷ್ಟ್ರೀಯ ಹಾಲು ದಿನದಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ.
7. ಹೈ ಜೆನೆಟಿಕ್ ಮೆರಿಟ್ (ಎಚ್‌ಜಿಎಂ) ಹೋರಿ ವಿತರಣೆಗಾಗಿ ಆನ್‌ಲೈನ್ ಪೋರ್ಟಲ್ ಅನ್ನು 2022ರಲ್ಲಿ ಆರಂಭಿಸಲಾಗಿದೆ. ಪೋರ್ಟಲ್ ಮೂಲಕ, ವೀರ್ಯ ಕೇಂದ್ರಗಳು ಎಚ್‌ಜಿಎಂ ಹೋರಿ ಮತ್ತು ರೋಗಗಳ ಬಗ್ಗೆ ಬೇಡಿಕೆಯನ್ನು ಸಲ್ಲಿಸಬಹುದು.
|
1. ವಿಶ್ವದಲ್ಲಿ ಇದೇ ಮೊದಲ ಬಾರಿಗೆ, ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಎಮ್ಮೆಗಳ ಡಿಎನ್‌ಎ ಆಧರಿತ ಆಯ್ಕೆಗಾಗಿ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಜೀನೋಮಿಕ್ ಚಿಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸುಸ್ಥಿರ ರೀತಿಯಲ್ಲಿ ಎಮ್ಮೆ ಸಂಖ್ಯೆಯಲ್ಲಿ ಶೇ.2.5ಕ್ಕೂ ಅಧಿಕ ಆನುವಂಶಿಕ ಲಾಭಕ್ಕೆ ಕಾರಣವಾಗಿದೆ.
2. ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ಡೆನ್ಮಾಕ್ ನ ಆಹಾರ, ಕೃಷಿ ಮತ್ತು ಮೀನುಗಾರಿಕೆ ಸಚಿವಾಲಯ ನಡುವೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ, ಪಶುಸಂಗೋಪನೆ ಮತ್ತು ಡೇರಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ 2022ರ ಮೇ 2ರಂದು ಡೆನ್ಮಾರ್ಕ್‌ನ ಕೋಪನ್ ಹೇಗನ್‌ನಲ್ಲಿ ಜಂಟಿ ಉದ್ದೇಶದ ಘೋಷಣೆಗೆ ಸಹಿ ಹಾಕಲಾಗಿದೆ.
3. 2022ರ ಜನವರಿ ಯಿಂದ ನವೆಂಬರ್ 2022ರ ಅವಧಿಯಲ್ಲಿ (21 ನವೆಂಬರ್ 2022 ರಲ್ಲಿದ್ದಂತೆ) ಡೇರಿ ಅಭಿವೃದ್ಧಿ ಯೋಜನೆಯ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ 7 ರಾಜ್ಯಗಳಲ್ಲಿ ಒಟ್ಟು ರೂ. 355.25 ಕೋಟಿ (ಕೇಂದ್ರ ಪಾಲು ರೂ.244.14 ಕೋಟಿ) ರೂ. ಮೊತ್ತದ 14 ಹೊಸ ಯೋಜನೆಗಳನ್ನು ಅನುಮೋದಿಸಲಾಗಿದೆ.
4. ಈವರೆಗೆ, ದೇಶದಲ್ಲಿ ಎಎಚ್‌ಡಿ ರೈತರಿಗೆ ಒಟ್ಟು 23.70 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಮಂಜೂರು ಮಾಡಲಾಗಿದೆ
5. ಎಂಒಎಫ್‌ಎಎಚ್‌ಡಿ, ಗ್ರೇಟರ್ ನೋಯ್ಡಾದ ಭಾರತೀಯ ವಸ್ತುಪ್ರದರ್ಶನ ಕೇಂದ್ರ ಮತ್ತು ಮಾರ್ಟ್‌ನಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಡೇರಿ ಫೆಡರೇಶನ್ ವಿಶ್ವ ಡೇರಿ ಶೃಂಗಸಭೆ (ಐಡಿಎಫ್-ಡಬ್ಲೂಡಿಎಸ್), 2022ನಲ್ಲಿ ಭಾಗವಹಿಸಿತ್ತು.
6. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಯ ಕೇಂದ್ರ ಸಚಿವರಾದ ಶ್ರೀ ಪ್ರಶೋತ್ತಮ್ ರೂಪಾಲಾ ಅವರು 2022ರ ಜೂನ್ 7 ರಂದು ಪಿಎಂಎಂಎಸ್‌ವೈ -ಎಂಐಎಸ್ ಡ್ಯಾಶ್‌ಬೋರ್ಡ್ ಅನ್ನು ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಆರಂಭಿಸಿದರು. ಪಿಎಂಎಂಎಸ್‌ವೈ -ಎಂಐಎಸ್ ಡ್ಯಾಶ್‌ಬೋರ್ಡ್ ಈ ಉದ್ದೇಶಗಳನ್ನು ಹೊಂದಿದೆ (1) ಪಿಎಂಎಂಎಸ್‌ವೈ ಯೋಜನೆಯ ಚಟುವಟಿಕೆಗಳು ಮತ್ತು ಎಲ್ಲಾ ಭಾಗವಹಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅವುಗಳ ಪ್ರಗತಿಯ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆ (2) ಮಾಹಿತಿಯುಕ್ತ ನಿರ್ಧಾರಕ್ಕಾಗಿ ಮಾಹಿತಿಯನ್ನು ಕಾರ್ಯತಂತ್ರವಾಗಿ ಬಳಸಿಕೊಳ್ಳುವುದು.
7. "ಆಜಾದಿ ಕಾ ಅಮೃತ ಮಹೋತ್ಸವ" ಅಡಿಯಲ್ಲಿ ಮೀನುಗಾರಿಕಾ ಇಲಾಖೆಯು ಒಟ್ಟು 9 ವೆಬಿನಾರ್‌ಗಳನ್ನು ಆಯೋಜಿಸಿದೆ, ಅದರಲ್ಲಿ ಮೀನು, ಮೀನುಗಾರರು, ಉದ್ಯಮಿಗಳು, ವಿದ್ಯಾರ್ಥಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕೇಂದ್ರ ಹಾಗೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಸೇರಿದಂತೆ 6000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
|
2022ರಲ್ಲಿ ಪಶುಸಂಗೋಪನಾ ಇಲಾಖೆಯ ಉಪಕ್ರಮಗಳು ಮತ್ತು ಸಾಧನೆಗಳು
ಎ. ರಾಷ್ಟ್ರೀಯ ಗೋಕುಲ್ ಮಿಷನ್:
ಆರ್‌ಜಿಎಂ ಅಡಿಯಲ್ಲಿ ಕೈಗೊಂಡ ಹೊಸ ಉಪಕ್ರಮಗಳು
*ಕೃತಕ ಬುದ್ಧಿಮತ್ತೆ ವ್ಯಾಪ್ತಿಯನ್ನು ಹೆಚ್ಚಿಸಲು ರಾಷ್ಟ್ರವ್ಯಾಪಿ ಎಐ ಕಾರ್ಯಕ್ರಮ-4
ರಾಷ್ಟ್ರವ್ಯಾಪಿ ಎಐ-ಕೃತಕ ಬುದ್ದಿಮತ್ತೆ ಕಾರ್ಯಕ್ರಮವನ್ನು 2019ರ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿದೆ ಮತ್ತು ಕಾರ್ಯಕ್ರಮದ ಅಡಿಯಲ್ಲಿ ಎಐ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುತ್ತದೆ. ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮ (ಎನ್‌ಎಐಪಿ) ಹಂತ-4 ಅನ್ನು 2022ರ ಆಗಸ್ಟ್ 1ರಿಂದ 3.3 ಕೋಟಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆಯ ಮೂಲಕ ಶೇ.50 ಕ್ಕಿಂತ ಕಡಿಮೆ ಕೃತಕ ಬುದ್ದಿಮತ್ತೆ ವ್ತಾಪ್ತಿ ಹೊಂದಿರುವ 604 ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. 2022ರ ಡಿಸೆಂಬರ್ 2 ಅಂಕಿ ಅಂಶದಂತೆ, 4.20 ಕೋಟಿ ಪ್ರಾಣಿಗಳು ಇದರ ವ್ಯಾಪ್ತಿಗೆ ಒಳಪಟ್ಟಿದ್ದು, 5.19 ಕೋಟಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆಯನ್ನು ಮಾಡಲಾಗಿದೆ ಮತ್ತು 2.78 ಕೋಟಿ ರೈತರು ಎನ್‌ಎಐಪಿಯಡಿಯಲ್ಲಿ ಪ್ರಯೋಜನ ಪಡೆದಿದ್ದಾರೆ.
*ಸುಧಾರಿತ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಜೆನೆಟಿಕ್ ಅಪ್ ಗ್ರಡೇಷನ್
* ಐವಿಎಫ್ ತಂತ್ರಜ್ಞಾನ
ಹೈನುಗಾರರಿಗೆ ಹೆಣ್ಣು ಕರುಗಳನ್ನು ಉತ್ಪಾದಿಸಲು ಐವಿಎಫ್ ತಂತ್ರಜ್ಞಾನ ಮತ್ತು ಲಿಂಗ ವಿಂಗಡಣೆಯ ವೀರ್ಯದೊಂದಿಗೆ ಕೃತಕ ಗರ್ಭಧಾರಣೆಯನ್ನು ಬಳಸಿಕೊಳ್ಳಲಾಗುತ್ತಿದೆ. ಐವಿಎಫ್ ತ್ವರಿತ ಪ್ರಮಾಣದಲ್ಲಿ ಗೋವುಗಳ ಸಂತತಿ ವೃದ್ಧಿಯ ಆನುವಂಶಿಕ ಉನ್ನತೀಕರಣಕ್ಕೆ ಪ್ರಮುಖ ಸಾಧನವಾಗಿದೆ, 7 ತಲೆಮಾರುಗಳಲ್ಲಿ (ದನ ಮತ್ತು ಎಮ್ಮೆಗಳ ಸಂದರ್ಭದಲ್ಲಿ 21 ವರ್ಷಗಳು) ಮಾಡುವ ಕೆಲಸವನ್ನು ಕೇವಲ 1 ತಲೆಮಾರಿನಲ್ಲಿ (ದನ ಮತ್ತು ಎಮ್ಮೆಗಳ ಸಂದರ್ಭದಲಿ 3 ವರ್ಷಗಳು) ಎಐ ಮೂಲಕ ಮಾಡಬಹುದು. ಪ್ರತಿ ಹಾಲುಣಿಸುವ ಸಮಯದಲ್ಲಿ 4000 ಕೆಜಿ ಹಾಲನ್ನು ಉತ್ಪಾದಿಸುವ ಆನುವಂಶಿಕ ಸಾಮರ್ಥ್ಯವನ್ನು ಹೊಂದಿರುವ ಹೆಣ್ಣು ಕರುಗಳ ಉತ್ಪಾದನೆಯ ಮೂಲಕ ರೈತರ ಆದಾಯ ವೃದ್ಧಿಯಲ್ಲಿ ತಂತ್ರಜ್ಞಾನವು ಬಹುದೊಡ್ಡ ಸಾಮರ್ಥ್ಯ ಹೊಂದಿದೆ, ಹಾಗಾಗಿ ರೈತರ ಆದಾಯ ಹಲವುಪಟ್ಟು ವೃದ್ಧಿಸುತ್ತಿದೆ. ಗುರುತಿಸಲಾದ ಹಾಲಿನ ಉತ್ಪಾದನೆ ಅಧಿಕವಿರುವ ಪ್ರದೇಶಗಳಲ್ಲಿ 2 ಲಕ್ಷ ಐವಿಎಫ್ ಗರ್ಭಧಾರಣೆಗಳನ್ನು ನಡೆಸಲು ವೇಗವರ್ಧಿತ ತಳಿ ಸುಧಾರಣೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ವೇಗವರ್ಧಿತ ತಳಿ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ ದೇಶದಲ್ಲಿ 2 ಲಕ್ಷ ಐವಿಎಫ್ ಗರ್ಭಧಾರಣೆ ಮಾಡಿಸಲಾಗುವುದು. ಪ್ರತಿ ಗರ್ಭ ಧರಿಸಿದ ಜಾನುವಾರಿಗೆ 5000 ರೂ.ಗಳ ಸಹಾಯಧನವನ್ನು ರೈತರಿಗೆ ನೀಡಲಾಗುವುದು. ಈ ಕಾರ್ಯಕ್ರಮವನ್ನು ಈಗಾಗಲೇ ದೇಶದಲ್ಲಿ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಇದುವರೆಗೆ ಒಟ್ಟು 402 ಐವಿಎಫ್ ಭ್ರೂಣಗಳನ್ನು ವರ್ಗಾಯಿಸಲಾಗಿದೆ ಮತ್ತು 30 ಗರ್ಭಧಾರಣೆಗಳನ್ನು ನಡೆಸಲಾಗಿದೆ. ಇದಲ್ಲದೆ 19 ಭ್ರೂಣ ವರ್ಗಾವಣೆ ತಂತ್ರಜ್ಞಾನ (ಇಟಿಟಿ)/ ಇನ್-ವಿಟ್ರೋ ಫರ್ಟಿಲೈಸೇಶನ್ (ಐವಿಎಫ್) ಪ್ರಯೋಗಾಲಯಗಳನ್ನು ಕಾರ್‍ಯಾರಂಭ ಮಾಡಲಾಗಿದೆ. ಈ ಪ್ರಯೋಗಾಲಯಗಳಿಂದ 15,375 ಕಾರ್ಯಸಾಧ್ಯವಾದ ಭ್ರೂಣಗಳನ್ನು ಉತ್ಪಾದಿಸಲಾಗಿದೆ ಮತ್ತು 1178 ಕರುಗಳು ಭ್ರೂಣ ವರ್ಗಾವಣೆಯ ಮೂಲಕ ಜನಿಸಿವೆ.
* ಲಿಂಗ ವಿಂಗಡಿಸಲಾದ ವೀರ್ಯ
ಶೇ. 90ರಷ್ಟು ನಿಖರತೆಯೊಂದಿಗೆ ಹೆಣ್ಣು ಕರುಗಳನ್ನು ಉತ್ಪಾದಿಸಲು ಲಿಂಗ ವಿಂಗಡಣೆ ಮಾಡಿದ ವೀರ್ಯವನ್ನು ಬಳಸಿಕೊಂಡು ವೇಗವರ್ಧಿತ ತಳಿ ಸುಧಾರಣೆ ಕಾರ್ಯಕ್ರಮವನ್ನು ಅಳವಡಿಸಲಾಗಿದೆ. ಲಿಂಗ ವಿಂಗಡಣೆ ಮಾಡಿದ ವೀರ್ಯದೊಂದಿಗೆ ಎಐ ಅನ್ನು ತೆಗೆದುಕೊಳ್ಳುವ ರೈತರಿಗೆ ಪ್ರತಿ ಗರ್ಭಧಾರಣೆಗೆ 750 ರೂ. ಪ್ರೋತ್ಸಾಹಿಸಲಾಗುತ್ತದೆ ಮತ್ತು ಬಾಕಿ ಮೊತ್ತವನ್ನು ಲಿಂಗ ವಿಂಗಡಣೆ ಮಾಡಿದ ವೀರ್ಯದ ಮೂಲಕ ಗರ್ಭಧಾರಣೆಯನ್ನು ತೆಗೆದುಕೊಳ್ಳುವ ರೈತನು ನೀಡಬೇಕಾಗುತ್ತದೆ. ಈವರೆಗೆ, ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಸರ್ಕಾರಿ ವೀರ್ಯ ಕೇಂದ್ರಗಳಲ್ಲಿ 27.86 ಲಕ್ಷ ಡೋಸ್ ಮತ್ತು ಹಾಲು ಒಕ್ಕೂಟ, ಎನ್‌ಜಿಒ ಮತ್ತು ಖಾಸಗಿ ವೀರ್ಯ ಕೇಂದ್ರಗಳಿಂದ 31.12 ಲಕ್ಷ ಡೋಸ್‌ಗಳನ್ನು ಉತ್ಪಾದಿಸಲಾಗಿದೆ.
* ರಾಷ್ಟ್ರೀಯ ಡಿಜಿಟಲ್ ಜಾನುವಾರು ಮಿಷನ್ (ಎನ್‌ಡಿಎಲ್‌ಎಂ)
ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಎನ್ ಡಿಡಿಬಿ ಯೊಂದಿಗೆ "ರಾಷ್ಟ್ರೀಯ ಡಿಜಿಟಲ್ ಜಾನುವಾರು ಮಿಷನ್" (ಎನ್‌ಡಿಎಲ್ ಎಂ) ಎಂಬ ಡಿಜಿಟಲ್ ಮಿಷನ್ ಅನ್ನು ಕೈಗೆತ್ತಿಕೊಂಡಿದೆ. ಇದು ಪ್ರಾಣಿಗಳ ಉತ್ಪಾದಕತೆಯನ್ನು ಸುಧಾರಿಸಲು, ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಪರಿಣಾಮ ಬೀರುವ ರೋಗಗಳನ್ನು ನಿಯಂತ್ರಿಸಲು, ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಿಗೆ ಗುಣಮಟ್ಟದ ಜಾನುವಾರುಗಳನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಎನ್‌ಡಿಎಲ್‌ಎಂ ಜಾನುವಾರು ವಲಯಕ್ಕೆ ಸಮಗ್ರ ಪೂರಕ ವ್ಯವಸ್ಥೆಯ ಸೃಷ್ಟಿಸಲಿದೆ. ಇದನ್ನು ಪ್ರಧಾನಮಂತ್ರಿಗಳ ಪ್ರಧಾನ ವೈಜ್ಞಾನಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ.
ಉತ್ತರಾಖಂಡದಲ್ಲಿ, ಹರಿದ್ವಾರ ಮತ್ತು ಡೆಹ್ರಾಡೂನ್ ಎಂಬ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಾಯೋಗಿಕ ಕಾರ್ಯವನ್ನು 2021ರ ಏಪ್ರಿಲ್ 1 ರಿಂದ ಆರಂಭಿಸಲಾಗಿದೆ. ಪ್ರಾಯೋಗಿಕ ಕಾರ್ಯದ ಸಮಯದಲ್ಲಿ ಎಲ್ಲಾ ಕ್ಷೇತ್ರ ಸಿಬ್ಬಂದಿಗೆ ಐಟಿ ಸಾಧನಗಳ ಬಳಕೆಗಾಗಿ ತರಬೇತಿ ನೀಡಲಾಗಿದೆ ಮತ್ತು ಈ ಕೆಳಗಿನ ಚಟುವಟಿಕೆಗಳನ್ನು ಪ್ರಸಕ್ತ ವರ್ಷದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
(1) ಪ್ರಾಣಿಗಳ ಚಿಕಿತ್ಸೆಗಾಗಿ ಇ-ಪ್ರಿಸ್ಕ್ರಿಪ್ಷನ್ ಬಳಕೆ.
(2)ಐಎನ್‌ಎಪಿಎಚ್ ವ್ಯವಸ್ಥೆಯೊಂದಿಗೆ ಸಂಯೋಜಿತ ಕಾಲ್ ಸೆಂಟರ್ ಅಪ್ಲಿಕೇಶನ್ ಅನ್ನು ರೈತರಿಂದ ಮನವಿಗಳನ್ನು ಸ್ವೀಕರಿಸಲು ಮತ್ತು ಮನವಿ ಮಾಡಿದ ಸೇವೆಯನ್ನು ಪೂರ್ಣಗೊಳಿಸಿದ ನಂತರ ಐಎನ್ ಎಪಿಚ್ ವ್ಯವಸ್ಥೆಯ ಮೂಲಕ ಅವುಗಳನ್ನು ಮುಕ್ತಾಯಗೊಳಿಸಲು ಯಶಸ್ವಿಯಾಗಿ ಬಳಸಲಾಗಿದೆ.
(3) ಉತ್ತರಾಖಂಡದ ಪ್ರಾಯೋಗಿಕ ಯೋಜನೆಯಲ್ಲಿ ಸೆರೋ ಕಣ್ಗಾವಲು ಮತ್ತು ಸೆರೋ ಮಾನಿಟರಿಂಗ್ (ಎಸ್ ಎಸ್ &ಎಸ್ ಎಂ) ಮಾದರಿಯನ್ನು ಆರಂಭಿಸಲಾಗಿದೆ.
(4) ಕರ್ನಾಟಕದಲ್ಲಿ ಕುರಿ ಮತ್ತು ಮೇಕೆಗಳಂತಹ ಸಣ್ಣ ಮೆಲುಕು ಹಾಕುವ ಪ್ರಾಣಿಗಳನ್ನು ಒಳಗೊಂಡ ಪ್ರಾಯೋಗಿಕ ಕಾರ್ಯವನ್ನು ಎನ್‌ಸಿಡಿಇಎಕ್ಸ್ ಇ-ಮಾರುಕಟ್ಟೆ ಲಿಮಿಟೆಡ್ (ಎನ್ ಇಎಂಎಲ್ ) ನೊಂದಿಗೆ ಸಮನ್ವಯದಿಂದ ಆರಂಭಿಸಲಾಗಿದೆ. ಡಿಜಿಟಲ್ ಇ-ಮಾರುಕಟ್ಟೆಗಳ ಮೂಲಕ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವುದು ಈ ಕಾರ್ಯದ ಮುಖ್ಯ ಗುರಿಯಾಗಿದೆ. ಈ ಪ್ರಾಯೋಗಿಕ ಕಾರ್ಯದ ಪರಿಣಾಮ, ಸಣ್ಣ ಮೆಲುಕು ಹಾಕುವ ಪ್ರಾಣಿಗಳಿಗೆ ಸಂಬಂಧಿಸಿದ ಮಾದರಿಗಳನ್ನು ವಿನ್ಯಾಸಗೊಳಿಸಲು ಬಹಳ ನಿರ್ಣಾಯಕವಾಗಿದೆ, ಏಕೆಂದರೆ ದೊಡ್ಡ ಮೆಲುಕು ಹಾಕುವ ಪ್ರಾಣಿಗಳಿಗೆ ಅಭಿವೃದ್ಧಿಪಡಿಸಿದ ಮಾದರಿಗಳು ಸಣ್ಣ ಪ್ರಾಣಿಗಳಿಗೆ ಅನ್ವಯಿಸುವುದಿಲ್ಲ, ಕಾರಣ ಅವುಗಳ ಜೀವಿತಾವಧಿಯು ತುಂಬಾ ಕಡಿಮೆ ಅವಧಿಯದ್ದಾಗಿರುತ್ತದೆ.
*ತಳಿ ವೃದ್ಧಿ ಫಾರ್ಮ್‌ಗಳು
ಡೇರಿ ವಲಯಕ್ಕೆ ಉದ್ಯಮಶೀಲತೆಯನ್ನು ಆಕರ್ಷಿಸಲು ತಳಿ ವೃದ್ಧಿ(ಮಲ್ಪಿಪ್ಲಿಕೇಷನ್) ಫಾರ್ಮ್ ಘಟಕವನ್ನು ಆರಂಭಿಸಲಾಗಿದೆ ಮತ್ತು ಏಕಕಾಲದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯ ಡೇರಿ ಕೃಷಿಯನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ, ಅಲ್ಲಿ ಸಣ್ಣ ಮತ್ತು ಮಧ್ಯಮ ಡೇರಿ ರೈತರು ವಿಶ್ವಾಸಾರ್ಹ ಡೇರಿ ಸೇವೆಗಳ ಸ್ಥಳೀಯ ಕೇಂದ್ರದ ಸಹಾಯದಿಂದ ಅಭಿವೃದ್ಧಿ ಹೊಂದಬಹುದು. ದೇಶದಲ್ಲಿ ಕನಿಷ್ಠ 200 ಗೋವಿನ ಹಿಂಡಿನ ಗಾತ್ರದ ತಳಿ ವೃದ್ಧಿ ಸಾಕಣೆ ಕೇಂದ್ರಗಳನ್ನು ಸ್ಥಾಪಿಸಲು ಈ ಯೋಜನೆಯಡಿಯಲ್ಲಿ ಖಾಸಗಿ ಉದ್ಯಮಿಗಳಿಗೆ ಬಂಡವಾಳ ವೆಚ್ಚದಲ್ಲಿ (ಭೂಮಿ ವೆಚ್ಚವನ್ನು ಹೊರತುಪಡಿಸಿ) ಶೇ.50 ರಷ್ಟು (ಪ್ರತಿ ಫಾರ್ಮ್‌ಗೆ 2 ಕೋಟಿ ರೂ. ಗಳವರೆಗೆ) ಸಹಾಯಧನ ಒದಗಿಸಲು ಪ್ರಸ್ತಾಪಿಸಲಾಗಿದೆ. ಗುಡ್ಡಗಾಡು ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಈ ಸಂಖ್ಯೆ 50 ನಿಗದಿಪಡಿಸಲಾಗಿದೆ. ಇದಲ್ಲದೆ, ಬ್ಯಾಂಕ್ ಸಾಲಕ್ಕಾಗಿ ಉದ್ಯಮಿಯು ಎಎಚ್‌ಐಡಿಎಫ್ ಯೋಜನೆಯೊಂದಿಗೆ ಸಂಯೋಜನೆ ಮೂಲಕ ಶೇ.3ರ ಬಡ್ಡಿ ರಿಯಾಯಿತಿಯನ್ನು ಪಡೆಯಬಹುದು. 2022ರ ಡಿಸೆಂಬರ್ 2ರ ಅಂಕಿ ಅಂಶಗಳಂತೆ 28 ತಳಿ ವರ್ಧನೆ ಫಾರ್ಮ್ ಸ್ಥಾಪನೆಗೆ ಇಲಾಖೆಯು ಆರ್ಥಿಕ ನೆರವು ನೀಡಿದೆ.
ಪ್ರಶಸ್ತಿಗಳು ಮತ್ತು ಹೊಸ ಉಪಕ್ರಮಗಳ ಆರಂಭ
*ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ 2022
ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಯು ಜಾನುವಾರು ಮತ್ತು ಡೇರಿ ಕ್ಷೇತ್ರದಲ್ಲಿ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಒಂದಾಗಿದೆ. ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ, ಅವುಗಳೆಂದರೆ (ಎ) ಅತ್ಯುತ್ತಮ ಡೇರಿ ರೈತ ಸಾಕಣೆ ಸ್ಥಳೀಯ ದನ/ಎಮ್ಮೆ ತಳಿಗಳು; (ಬಿ) ಅತ್ಯುತ್ತಮ ಕೃತಕ ಗರ್ಭಧಾರಣೆ ತಂತ್ರಜ್ಞ (ಐವಿಎಫ್) ಮತ್ತು ಅತ್ಯುತ್ತಮ ಡೇರಿ ಸಹಕಾರಿ. ಪ್ರಶಸ್ತಿಯು ಪ್ರತಿ ವಿಭಾಗದಲ್ಲಿ ಜೇಷ್ಠತಾ ಪ್ರಮಾಣಪತ್ರ, ಸ್ಮರಣಿಕೆ ಮತ್ತು ಕೆಳಗಿನ ನಗದು ಮೊತ್ತವನ್ನು ಒಳಗೊಂಡಿರುತ್ತದೆ: ಮೊದಲನೇ ಶ್ರೇಯಾಂಕ ಹೊಂದಿರುವವರಿಗೆ 5,೦೦,೦೦೦/- ( ಐದು ಲಕ್ಷ ರೂಪಾಯಿ ); ರೂ. 3,೦೦,೦೦೦/- ( ಮೂರು ಲಕ್ಷ ರೂಪಾಯಿ ) 2 ನೇ ಶ್ರೇಯಾಂಕ ಹೊಂದಿರುವವರಿಗೆ ಮತ್ತು ರೂ. 2,೦೦,೦೦೦/- (ಎರಡು ಲಕ್ಷ ರೂಪಾಯಿ) 3ನೇ ಶ್ರೇಯಾಂಕ ಹೊಂದಿರುವವರಿಗೆ. 2022ರ ನವೆಂಬರ್ 26 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆಯ ಮುನ್ನಾದಿನದಂದು 3 ಅತ್ಯುತ್ತಮ ಡೈರಿ ರೈತರು, 3 ಅತ್ಯುತ್ತಮ ಎಐ ತಂತ್ರಜ್ಞರು ಮತ್ತು 3 ಅತ್ಯುತ್ತಮ ಡೇರಿ ಸಹಕಾರಿಗಳನ್ನು ಗೌರವಿಸಲಾಯಿತು.
ಪಶುಸಂಗೋಪನೆ ಸ್ಟಾರ್ಟ್‌ಅಪ್ ಗ್ರ್ಯಾಂಡ್ ಚಾಲೆಂಜ್ 2.0
ಪಶುಸಂಗೋಪನೆ ಮತ್ತು ಡೇರಿ ವಲಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನವೀನ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಪರಿಹಾರಗಳನ್ನು ಹುಡುಕುವ ಸಲುವಾಗಿ 2021-22ರಲ್ಲಿ ಪಶುಸಂಗೋಪನೆ ಸ್ಟಾರ್ಟ್‌ಅಪ್ ಗ್ರ್ಯಾಂಡ್ ಚಾಲೆಂಜ್ 2.0ಅನ್ನು ಇಲಾಖೆಯು ಆಯೋಜಿಸಿದೆ. ಸ್ಟಾರ್ಟಪ್ ಗ್ರ್ಯಾಂಡ್ ಚಾಲೆಂಜ್ ಅನ್ನು 2021ರ ನವೆಂಬರ್ 26 ರಂದು ಎಫ್‌ಎಎಚ್‌ಡಿ ಸಚಿವರು ಚಾಲನೆ ನೀಡಿದ್ದರು ಮತ್ತು ಸ್ಟಾರ್ಟ್‌ಅಪ್‌ಗಳು ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 2022ರ ಜನವರಿ 31. ಸ್ಟಾರ್ಟ್‌ಅಪ್ ಇಂಡಿಯಾ ಅಭಿವೃದ್ಧಿಪಡಿಸಿದ ಪೋರ್ಟಲ್‌ನಲ್ಲಿ ಸ್ಟಾರ್ಟ್‌ಅಪ್‌ಗಳಿಂದ 250 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗಿದೆ. ಸ್ಟಾರ್ಟಪ್ ಗ್ರ್ಯಾಂಡ್ ಚಾಲೆಂಜ್ 2.0 ವಿಜೇತರನ್ನು 2022ರ ಜೂನ್ 1ರ ವಿಶ್ವ ಹಾಲು ದಿನದಂದು ಗೌರವಿಸಲಾಯಿತು. ಪ್ರತಿಯೊಂದು ಸಮಸ್ಯೆಯ ವಲಯದಲ್ಲಿ, ವಿಜೇತರಿಗೆ 10ಲಕ್ಷ ರೂ. ಮತ್ತು 7 ಲಕ್ಷ ರೂ. ನೊಂದಿಗೆ ರನ್ನರ್-ಅಪ್ ಅನ್ನು ನಗದು ಬಹುಮಾನವಾಗಿ ನೀಡಲಾಗುತ್ತದೆ. ಪಶು ಸಂಗೋಪನೆ ಗ್ರ್ಯಾಂಡ್ ಚಾಲೆಂಜ್ 2.0 ನ ಎಲ್ಲಾ ವಿಜೇತರಿಗೆ ಸ್ಟಾರ್ಟ್‌ಅಪ್ ಇಂಡಿಯಾ ಮೂಲಕ ಮಾಸ್ಟರ್ ಕ್ಲಾಸ್‌ಗಳು, ಮಾರ್ಗದರ್ಶನ ಮತ್ತು ಇನ್‌ಕ್ಯುಬೇಷನ್ ಸೌಕರ್ಯ ಕೂಡ ದೊರಕಲಿದೆ.
*ಜಾನುವಾರು ಸಂವರ್ಧನಾ ಕೇಂದ್ರ- ಸೆಂಟ್ರಲ್ ಕ್ಯಾಟಲ್ ಬ್ರೀಡಿಂಗ್ ಫಾರ್ಮ್ (ಸಿಸಿಬಿಎಫ್) ಹೆಸರಘಟ್ಟದಲ್ಲಿ ಐವಿಎಫ್ ತಂತ್ರಜ್ಞಾನದ ಪ್ರದರ್ಶನ
2022ರ ನವೆಂಬರ್ 1ರ ರಾಷ್ಟ್ರೀಯ ಹಾಲು ದಿನಾಚರಣೆಯಂದು ಸಿಸಿಬಿಎಫ್ ಹೆಸರಘಟ್ಟದಲ್ಲಿ ಐವಿಎಫ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಲಾಯಿತು. ಟೆಂಡರ್ ಪ್ರಕ್ರಿಯೆಯ ಮೂಲಕ ಇಲಾಖೆ ಕಂಡುಹಿಡಿದ ದರಗಳ ಪ್ರಕಾರ ಐವಿಎಫ್ ಸೌಲಭ್ಯಗಳು ಸಿಸಿಬಿಎಫ್ ಹೆಸರಘಟ್ಟದಿಂದ ಸೇವಾ ಪೂರೈಕೆದಾರರ ಮೂಲಕ ಅವರ ಮನೆ ಬಾಗಿಲಿಗೆ ಲಭ್ಯವಿರುತ್ತವೆ.
*ವೃತ್ತಿಪರರಿಗಾಗಿ ತರಬೇತಿ ಸಂಸ್ಥೆ ಸ್ಥಾಪನೆಗೆ ಶಿಲಾನ್ಯಾಸ
2022ರ ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನದಂದು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವೃತ್ತಿಪರರಿಗೆ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. 2023ರ ಮಾರ್ಚ್ ವೇಳೆಗೆ ತರಬೇತಿ ಸಂಸ್ಥೆಯು ಕಾರ್ಯಾರಂಭ ಮಾಡಲಿದೆ.
2022ರ ವರ್ಷದ ವಿಶಿಷ್ಠ ಸಾಧನೆ
ವಿಶ್ವದಲ್ಲಿ ಮೊದಲ ಬಾರಿಗೆ, ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಎಮ್ಮೆಗಳ ಡಿಎನ್‌ಎ ಆಧಾರಿತ ಆಯ್ಕೆಗಾಗಿ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಜೀನೋಮಿಕ್ ಚಿಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸುಸ್ಥಿರ ರೀತಿಯಲ್ಲಿ ಎಮ್ಮೆಗಳ ಪ್ರಮಾಣ ಶೇ.2.5ಕ್ಕೂ ಅಧಿಕ ಆನುವಂಶಿಕ ಲಾಭಕ್ಕೆ ಕಾರಣವಾಗಿದೆ.
ಈ ವಿಶಿಷ್ಟ ಉಪಕ್ರಮವು ಅಂತಾರಾಷ್ಟ್ರೀಯ ಡೇರಿ ಒಕ್ಕೂಟದಿಂದ "ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾವೀನ್ಯತೆ - ಕೃಷಿ" ವಿಭಾಗದಲ್ಲಿ ಡೇರಿ ನಾವೀನ್ಯತಾ ಪ್ರಶಸ್ತಿ 2022ಅನ್ನು ಪಡೆದಿದೆ.
ಆನ್‌ಲೈನ್ ಪೋರ್ಟಲ್‌ಗಳು
ಹೈ ಜೆನೆಟಿಕ್ ಮೆರಿಟ್ (ಎಚ್‌ಜಿಎಂ) ಹೋರಿಗಳ ವಿತರಣೆಗಾಗಿ ಆನ್‌ಲೈನ್ ಪೋರ್ಟಲ್ ಅನ್ನು 2022 ರಲ್ಲಿ ಆರಂಭಿಸಲಾಗಿದೆ. ಪೋರ್ಟಲ್ ಮೂಲಕ, ವೀರ್ಯ ಕೇಂದ್ರಗಳು ಎಚ್‌ಜಿಎಂ ಹೋರಿಗಳ ಬೇಡಿಕೆಯನ್ನು ಸಲ್ಲಿಸಬಹುದು ಮತ್ತು ರೋಗ ಮುಕ್ತ ಎಚ್‌ಜಿಎಂ ಹೋರಿಗಳನ್ನು ದೇಶದ ಎಲ್ಲಾ ವೀರ್ಯ ಕೇಂದ್ರಗಳಿಗೆ ಆನ್‌ಲೈನ್‌ನಲ್ಲಿ ವಿತರಿಸಲಾಗುತ್ತದೆ. 2022 ರಲ್ಲಿ ಡಿಎಎಚ್‌ಡಿ ಮೂಲಕ ಲಿಂಗ ವಿಂಗಡಣೆಯ ವೀರ್ಯದೊಂದಿಗೆ ಕೃತಕ ಗರ್ಭಧಾರಣೆ ಮತ್ತು ಐವಿಎಫ್ ತಂತ್ರಜ್ಞಾನಕ್ಕಾಗಿ ಆನ್‌ಲೈನ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗಿದೆ.
ಮುಂದುವರಿದ ಡೇರಿ ರಾಷ್ಟ್ರಗಳೊಂದಿಗೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ:
ಪಶುಸಂಗೋಪನೆ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಸರ್ಕಾರದ ಮೀನುಗಾರಿಕೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ಡೆನ್ಮಾರ್ಕ್‌ನ ಆಹಾರ, ಕೃಷಿ ಮತ್ತು ಮೀನುಗಾರಿಕೆ ಸಚಿವಾಲಯದ ನಡುವೆ ಜಂಟಿ ಉದ್ದೇಶದ ಘೋಷಣೆಗೆ 2022ರ ಮೇ 2ರಂದು ಕೋಪನ್ ಹೇಗನ್ ಸಹಿ ಹಾಕಲಾಗಿದೆ. ಹೈನುಗಾರಿಕೆಯಲ್ಲಿ ಉತ್ಕೃಷ್ಟತೆಯ ಕೇಂದ್ರವನ್ನು ಸ್ಥಾಪಿಸುವುದು ಸಹ ಉದ್ದೇಶದ ಜಂಟಿ ಘೋಷಣೆಯ ಭಾಗವಾಗಿದೆ.
ಡೇರಿ ಅಭಿವೃದ್ಧಿ ಯೋಜನೆಗಳು:
1. ಡೇರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್ ಪಿಡಿಡಿ ) :
ಪ್ರಗತಿ/ಸಾಧನೆಗಳು:
ಎನ್‌ಪಿಡಿಡಿ ಯೋಜನೆಯಡಿ 2022ರ ಜನವರಿ ಯಿಂದ 2022ರ ನವೆಂಬರ್ ಅವಧಿಯಲ್ಲಿ (21 ನವೆಂಬರ್ 2022 ರ ಅಂಕಿ ಅಂಶಗಳಂತೆ) ಒಟ್ಟು 355.25 ಕೋಟಿ ರೂ. (ಕೇಂದ್ರ ಪಾಲು ರೂ.244.14 ಕೋಟಿ) 7 ರಾಜ್ಯಗಳಲ್ಲಿ 14 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳು ಪ್ರಾಥಮಿಕವಾಗಿ 638 ಬಲ್ಕ್ ಮಿಲ್ಕ್ ಕೂಲರ್‌ಗಳನ್ನು (1491.೦೦ ಸಾವಿರ ಲೀಟರ್ ಸಾಮರ್ಥ್ಯದೊಂದಿಗೆ), 2990 ಸ್ವಯಂಚಾಲಿತ ಹಾಲು ಸಂಗ್ರಹಣಾ ಘಟಕಗಳು ಮತ್ತು 1419 ಎಲೆಕ್ಟ್ರಾನಿಕ್ ಹಾಲು ಕಲಬೆರಕೆ ಪರೀಕ್ಷಾ ಯಂತ್ರಗಳನ್ನು ಸ್ಥಾಪಿಸುವ ಮೂಲಕ ಗ್ರಾಮ ಮಟ್ಟದ ಹಾಲು ಶೀಥಲೀಕರಣ, ಸಂಗ್ರಹಣೆ ಮತ್ತು ಪರೀಕ್ಷೆಯ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.
ಡೇರಿ ಚಟುವಟಿಕೆಗಳಲ್ಲಿ ತೊಡಗಿರುವ ಡೇರಿ ಸಹಕಾರಿಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುವುದು (ಎಸ್‌ಡಿಸಿಎಫ್‌ಪಿ ಒ):
2021-22 ರಿಂದ 2025-26 ರವರೆಗೆ 500 ಕೋಟಿ ರೂ. ವೆಚ್ಚದಲ್ಲಿ "ಮೂಲಸೌಕರ್ಯ ಅಭಿವೃದ್ಧಿ ನಿಧಿ" ಯ ಭಾಗವಾಗಿ ಡೇರಿ ಚಟುವಟಿಕೆಗಳಲ್ಲಿ ತೊಡಗಿರುವ ಪೋಷಕ ಡೇರಿ ಸಹಕಾರಿಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ (ಎಸ್‌ಡಿಸಿಎಫ್ ಪಿಒ) ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2022-23ನೇ ಸಾಲಿನ ಬಜೆಟ್‌ನಲ್ಲಿ 100.00 ಕೋಟಿ ರೂ. ತೆಗೆದಿರಿಸಲಾಗಿದೆ.
ಭೌತಿಕ ಮತ್ತು ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಸಾಧನೆ:
ಎನ್ ಡಿಡಿಬಿ 55 ಹಾಲು ಒಕ್ಕೂಟಗಳಿಗೆ 10588.64 ಕೋಟಿ ರೂ.ಗಳನ್ನು ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ದುಡಿಯುವ ಬಂಡವಾಳದ ಸಾಲದ ಮೊತ್ತದ ವಿರುದ್ಧ 151.02 ಕೋಟಿ ರೂ.ಗಳ ಬಡ್ಡಿ ಸಬ್ವೆನ್ಶನ್ ಮೊತ್ತದ ಅನುಮೋದನೆಯನ್ನು ನೀಡಿದೆ ಮತ್ತು 202021 ವರ್ಷಕ್ಕೆ 156.24 ಕೋಟಿಗಳನ್ನು (ಮಾಮೂಲಿ ಬಡ್ಡಿ ಸಬ್ವೆನ್ಷನ್ ಗಾಗಿ 78.84 ಕೋಟಿ ರೂ. ಮತ್ತು ಹೆಚ್ಚುವರಿ ಬಡ್ಡಿ ಸಬ್ವೆನ್ಷನ್ ಗಾಗಿ 77.40 ಕೋಟಿ ರೂ.) ಬಿಡುಗಡೆ ಮಾಡಲಾಗಿದೆ.
2021-22 ನೇ ಸಾಲಿಗೆ, ಎನ್ ಡಿಡಿಬಿ 60 ಹಾಲು ಒಕ್ಕೂಟಗಳಿಗೆ ವಾರ್ಷಿಕ ಶೇ. 2ರ ಬಡ್ಡಿದರದಲ್ಲಿ ದುಡಿಯುವ ಬಂಡವಾಳದ ಸಾಲದ ಮೊತ್ತದ ರೂ 13748.85 ಅಡಿ ವಿರುದ್ಧ 208.88 ಕೋಟಿ ರೂ. ಬಡ್ಡಿ ಸಬ್ವೆನ್ಷನ್ ಮೊತ್ತದ ಮಂಜೂರಾತಿಯನ್ನು ರವಾನಿಸಿದೆ ಮತ್ತು 171.45 ಕೋಟಿ ರೂ. ಅಡಿ (ರೂ 93.20 ಅಡಿ ಮತ್ತು ನಿಯಮಿತ ಬಡ್ಡಿ ಉಪದಾನವಾಗಿ ಹೆಚ್ಚುವರಿ ಬಡ್ಡಿ ಸಬ್ವೆನ್ಶನ್ ಮೊತ್ತವಾಗಿ ರೂ 78.25ಕೋಟಿ ರೂ. ಒಳಗೊಂಡಿದೆ).
2022-23 ನೇ ಸಾಲಿಗೆ, ಎನ್‌ಡಿಡಿಬಿ 23 ಹಾಲು ಒಕ್ಕೂಟಗಳಿಗೆ ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ 7637.12 ಕೋಟಿ ರೂ. ದುಡಿಯುವ ಬಂಡವಾಳದ ಸಾಲದ ಮೊತ್ತದ ವಿರುದ್ಧ 104.95 ಕೋಟಿ ರೂ.ಗಳ ಬಡ್ಡಿ ಸಬ್ವೆನ್ಶನ್ ಮೊತ್ತದ ಮಂಜೂರಾತಿಯನ್ನು ನೀಡಿದೆ.
ಸಿ. ಪಶುಸಂಗೋಪನೆ ಮತ್ತು ಡೇರಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
ಎಲ್ಲಾ ಅರ್ಹ ಪಶುಸಂಗೋಪನೆ ಮತ್ತು ಮೀನುಗಾರಿಕೆ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸಲು, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಹಣಕಾಸು ಸೇವೆಗಳ ಇಲಾಖೆಯ ಸಹಯೋಗದೊಂದಿಗೆ 2021ರ ನವೆಂಬರ್ 15ರಿಂದ 2022ರ ಫೆಬ್ರವರಿ 15ರೆಗೆ ರಾಷ್ಟ್ರವ್ಯಾಪಿ ಎಎಚ್‌ಡಿಎಫ್ ಕೆಸಿಸಿ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನವನ್ನು 31.07.2022 ರವರೆಗೆ ಮತ್ತು 31.03.2023 ರವರೆಗೆ ವಿಸ್ತರಿಸಲಾಗಿದೆ. ಈ ಅಭಿಯಾನದ ಸಂದರ್ಭದಲ್ಲಿ, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ (ಎಲ್‌ಡಿಎಂ) ಅವರಿಂದ ಸಂಯೋಜಿತವಾಗಿರುವ ಕೆಸಿಸಿ ಸಮನ್ವಯ ಸಮಿತಿಯಿಂದ ಪ್ರತಿ ವಾರ ಜಿಲ್ಲಾ ಮಟ್ಟದ ಕೆಸಿಸಿ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಅಭಿಯಾನದ ಅಡಿಯಲ್ಲಿ 04.11.2022 ರಂತೆ ಒಟ್ಟು 19,97,541 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಮತ್ತು ಅವುಗಳಲ್ಲಿ 19,28,548 ಅರ್ಜಿಗಳನ್ನು ಬ್ಯಾಂಕ್‌ಗಳು ಸ್ವೀಕರಿಸಿವೆ ಮತ್ತು ದೇಶದಲ್ಲಿ 9,53,963 ಕೆಸಿಸಿಗಳನ್ನು ಮಂಜೂರು ಮಾಡಲಾಗಿದೆ.
ಈವರೆಗೆ, ದೇಶದಲ್ಲಿ ಎಎಚ್‌ಡಿ ರೈತರಿಗೆ ಒಟ್ಟು 23,70 ಲಕ್ಷ ಹೊಸ ಕೆಸಿಸಿಗಳನ್ನು ಮಂಜೂರು ಮಾಡಲಾಗಿದೆ.
ಡಿ.ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ (ಎಲ್ ಎಚ್ ಡಿಸಿಪಿ):
1. ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಎನ್‌ಎಡಿಸಿಪಿ)
ಪ್ರಾಣಿಗಳ ರೋಗಗಳ ಪತ್ತೆಹಚ್ಚುವಿಕೆ, ಮೇಲ್ವಿಚಾರಣೆ ಮತ್ತು ನಿಯಂತ್ರಣ ಹೆಚ್ಚಿಸುವ ಸಲುವಾಗಿ, ಅರ್ಹ ಪ್ರಾಣಿಗಳ ಜನಸಂಖ್ಯೆಯ ಶೇ.100 ಕಿವಿಗೆ ಗುರುತಿನ ಸಂಖ್ಯೆ ಹಾಕುವುದು ಮತ್ತು ಐಎನ್‌ಎಪಿಚ್ (ಪ್ರಾಣಿ ಉತ್ಪಾದಕತೆ ಮತ್ತು ಆರೋಗ್ಯ ಪೋರ್ಟಲ್‌ಗಾಗಿ ಮಾಹಿತಿ ನೆಟ್‌ವರ್ಕ್) ನಲ್ಲಿ ಅವುಗಳ ನೋಂದಣಿಯನ್ನು ಕಲ್ಪಿಸುತ್ತದೆ. ಈವರೆಗೆ, ಸರಿಸುಮಾರು 24.83 ಕೋಟಿ ದನ ಮತ್ತು ಎಮ್ಮೆಗಳಿಗೆ ಕಿವಿಗೆ ನಂಬರ್ ಅಳವಡಿಸಲಾಗಿದೆ; ಎಫ್‌ಎಂಡಿ ಸುತ್ತು-1ರಲ್ಲಿ 16.91 ಕೋಟಿ ದನ ಮತ್ತು ಎಮ್ಮೆಗಳಿಗೆ ಲಸಿಕೆ ಹಾಕಲಾಗಿದೆ; ನಡೆಯುತ್ತಿರುವ ಸದ್ಯ ನಡೆಯುತ್ತಿರುವ 2ನೇ ಸುತ್ತಿನಲ್ಲಿ 13.84 ಕೋಟಿ ದನಗಳು ಮತ್ತು ಎಮ್ಮೆಗಳಿಗೆ ಲಸಿಕೆ ನೀಡಲಾಗಿದೆ (2022ರ ಅವಧಿಯಲ್ಲಿ, ಒಟ್ಟು 9.11 ಕೋಟಿ ಲಸಿಕೆಯನ್ನು ಹಾಕಲಾಗಿದೆ) ; ಮತ್ತು ಸದ್ಯ ನಡೆಯುತ್ತಿರುವ ಬ್ರೂಸೆಲೋಸಿಸ್ ಲಸಿಕೆ ಹಂತದಲ್ಲಿ 1.32 ಕೋಟಿ (2022ರಲ್ಲಿ, 4-8 ತಿಂಗಳ ನಡುವಿನ ಹಸುವಿನ ಕರುಗಳಿಗೆ ಒಟ್ಟು 1.05ಕೋಟಿ ಲಸಿಕೆಗಳನ್ನು ಹಾಕಲಾಗಿದೆ) ಚುಚ್ಚುಮದ್ದು ನೀಡಲಾಗಿದೆ.
2. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ (ಎಲ್‌ಎಚ್&ಡಿಸಿ) ಯೋಜನೆ
ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ (ಎಲ್‌ಎಚ್ ಡಿಸಿಪಿ) ಎನ್‌ಎಡಿಸಿಪಿ ಮತ್ತು ಎಲ್‌ಎಚ್ ಡಿಸಿ ಎರಡನ್ನೂ ಒಳಗೊಂಡಿರುತ್ತದೆ, ಬಜೆಟ್ ಹಂಚಿಕೆಯೊಂದಿಗೆ (ಅಂದಾಜು ವೆಚ್ಚ 1470.೦೦ ಕೋಟಿ ರೂ. ಮತ್ತು ಪರಿಷ್ಕೃತ ಅಂದಾಜು. 886.೦೦ ಕೋಟಿ). ಇದರಲ್ಲಿ ಎಲ್‌ಎಚ್&ಡಿಸಿಪಿ ಯ ವಿವಿಧ ಘಟಕಗಳ ಅಡಿಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್‌ಎಚ್&ಡಿಸಿಪಿ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 159 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಇ.ಪಶುಸಂಗೋಪನೆ ಅಂಕಿ ಅಂಶಗಳು:
20ನೇ ಜಾನುವಾರು ಗಣತಿ ವರದಿಯ ಪ್ರಕಾರ, ದೇಶದ ಒಟ್ಟು ಜಾನುವಾರು ಜನಸಂಖ್ಯೆ ಮತ್ತು ಒಟ್ಟು ಕೋಳಿಗಳು ಕ್ರಮವಾಗಿ 536.76 ಮಿಲಿಯನ್ ಮತ್ತು 851.81, ಜಾನುವಾರು ಗಣತಿ-2012ಕ್ಕೆ ಹೋಲಿಸಿದರೆ ಕ್ರಮವಾಗಿ ಶೇ.4.8 ಮತ್ತು ಶೇ.16.8 ರಷ್ಟು ಹೆಚ್ಚಳವಾಗಿದೆ.
*ಜಾನುವಾರು ಮತ್ತು ಕೋಳಿಗಳ ತಳಿ-ವಾರು ವರದಿ (20ನೇ ಜಾನುವಾರು ಗಣತಿಯನ್ನು ಆಧರಿಸಿ) ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ವರದಿಯು 15 ಪ್ರಾಣಿ ಪ್ರಭೇದಗಳು ಮತ್ತು ಕೋಳಿಗಳ 184 ನೋಂದಾಯಿತ ತಳಿಗಳ ಪ್ರಮಾಣದ ವಿವರಗಳು ಮತ್ತು ಭೌಗೋಳಿಕ ಹಂಚಿಕೆಯನ್ನು ಒಳಗೊಂಡಿದೆ.
* ಸಮಗ್ರ ಮಾದರಿ ಸಮೀಕ್ಷೆ-ಇಂಟಿಗ್ರೇಟೆಡ್ ಸ್ಯಾಂಪಲ್ ಸರ್ವೆ(ಐಎಸ್‌ಎಸ್).
ಎಸ್‌ಎಸ್ ಸಮೀಕ್ಷೆಯ ಅಡಿಯಲ್ಲಿ ಎಲ್ಲಾ ಚಟುವಟಿಕೆಗಳನ್ನು ಡಿಜಿಟಲೀಕರಣ ಮಾಡಲು, ಐಸಿಎಆರ್-ಐಎಎಸ್ ಆರ್‌ಐ ಸಹಯೋಗದೊಂದಿಗೆ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಇದು ವೆಬ್ ಪೋರ್ಟಲ್ ಮತ್ತು ಮನೆಗಳಿಂದ ಎಂಎಲ್‌ಪಿ ದತ್ತಾಂಶವನ್ನು ಸಂಗ್ರಹಿಸಲು "ಇಎಲ್‌ಐಎಸ್‌ಎಸ್" ಎಂಬ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಒಳಗೊಂಡಿರುತ್ತದೆ. ಈ ಅಭಿವೃದ್ಧಿಯು ಸಂಗ್ರಹಿಸಿದ ದತ್ತಾಂಶದ ಸಮಯೋಚಿತತೆ ಮತ್ತು ವಿಶ್ವಾಸಾರ್ಹತೆ ಖಾತ್ರಿಪಡಿಸುತ್ತದೆ. 2021-22ರಲ್ಲಿ, ಐಎಸ್‌ಎಸ್ ಯೋಜನೆಯಡಿಯಲ್ಲಿ ದತ್ತಾಂಶವನ್ನು ಅಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಸಂಗ್ರಹಿಸಲಾಗಿದೆ.
ಎಫ್.ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಎಚ್‌ಐಡಿಎಫ್)
ಪ್ರಧಾನಮಂತ್ರಿ ಅವರ ಆತ್ಮನಿರ್ಭರ ಭಾರತ ಅಭಿಯಾನದ ಉತ್ತೇಜನದ ಪ್ಯಾಕೇಜ್ ರೂಪದಲ್ಲಿ 15,000 ಕೋಟಿ ರೂ.ಗಳ ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಎಚ್‌ಐಡಿಎಫ್) ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಯೋಜನೆಯನ್ನು 24.06.2022ರಂದು ಅನುಮೋದಿಸಲಾಗಿದೆ. ಯೋಜನೆಯಡಿಯಲ್ಲಿ, ಎಲ್ಲಾ ಅರ್ಹ ಘಟಕಗಳಿಗೆ ಶೇ.2ರ ಬಡ್ಡಿ ಸಬ್ವೆನ್ಶನ್ ಅನ್ನು ಒದಗಿಸಲಾಗಿದೆ. ಈವರೆಗೆ, 4770.09 ಕೋಟಿ ಮೌಲ್ಯದ ಯೋಜನೆಗಳಿಗೆ ಎಎಚ್‌ಐಡಿಎಫ್ ಅಡಿಯಲ್ಲಿ 3280.37 ಕೋಟಿ ಸಾಲವನ್ನು 171 ಯೋಜನೆಗಳಿಗೆ ಬ್ಯಾಂಕ್‌ಗಳಿಂದ ಮಂಜೂರು ಮಾಡಲಾಗಿದೆ. ಅಲ್ಲದೆ, ಈ ಯೋಜನೆಯನ್ನು ಎಂಒಎಫ್‌ಪಿಐ ಜಾರಿಗೊಳಿಸಿದ ಪಿಎಂಎಫ್ ಎಂಇ ಮತ್ತು ಪಿಎಂಎಸ್‌ಕೆವೈ ನೊಂದಿಗೆ ಸಮನ್ವಯಗೊಳಿಸಲಾಗಿದೆ. ಇದು ಫಲಾನುಭವಿಗಳಿಗೆ ಹೆಚ್ಚಿನ ಸಾಲವನ್ನು ಪಡೆಯಲು ಹೆಚ್ಚುವರಿ ಪ್ರಯೋಜನವನ್ನು ನೀಡಿದೆ. ಯೋಜನೆಯ ಅನುಷ್ಠಾನದಿಂದಾಗಿ ಹಾಲಿ ಇರುವ ಸಂಸ್ಕರಣಾ ಸಾಮರ್ಥ್ಯದಲ್ಲಿ ಹಾಲಿನ ಸಂಸ್ಕರಣಾ ಸಾಮರ್ಥ್ಯ 13.14 ಲಕ್ಷ ಮೆಟ್ರಿಕ್ ಟನ್, ಮಾಂಸ ಸಂಸ್ಕರಣಾ ಸಾಮರ್ಥ್ಯ 5.47 ಲಕ್ಷ ಟನ್, ಪಶು ಆಹಾರ ಸಂಸ್ಕರಣಾ ಸಾಮರ್ಥ್ಯ 34.92ಲಕ್ಷ ಮೆಟ್ರಿಕ್ ಟನ್ ಸೇರ್ಪಡೆ ಮಾಡಲಾಗಿದೆ.
ಜಿ. ರಾಷ್ಟ್ರೀಯ ಜಾನುವಾರು ಮಿಷನ್: ಇದೇ ಮೊದಲ ಬಾರಿಗೆ, ಕೇಂದ್ರ ಸರ್ಕಾರವು ವೈಯಕ್ತಿಕ, ರೈತ ಉತ್ಪಾದಕರ ಸಂಸ್ಥೆಗಳು (ಎಫ್‌ಪಿಒಗಳು), ರೈತರ ಸಹಕಾರಿ ಸಂಸ್ಥೆಗಳು (ಎಫ್‌ಸಿಒಗಳು), ಜಂಟಿ ಹೊಣೆಗಾರಿಕೆ ಗುಂಪುಗಳು (ಜೆಎಲ್‌ಜಿಗಳು), ಸ್ವಸಹಾಯ ಗುಂಪುಗಳು (ಎಸ್‌ಎಚ್‌ಜಿಗಳು), ಗ್ರಾಮೀಣ ಕೋಳಿ ಮೊಟ್ಟೆ ಕೇಂದ್ರಗಳು, ಕುರಿ, ಮೇಕೆ ಮತ್ತು ಹಂದಿಗಳಿಗೆ ಖಾಸಗಿ ಸಾಕಣೆ ಕೇಂದ್ರ ಮತ್ತು ಮೇವು ಮತ್ತು ಮೇವು ಸ್ಥಾಪನೆಯನ್ನು ಸ್ಥಾಪಿಸಲು ಉದ್ಯಮಶೀಲತೆ ಅಭಿವೃದ್ಧಿಗಾಗಿ ಸೆಕ್ಷನ್ 8 ವ್ಯಾಪ್ತಿಯ ಕಂಪನಿ ಸೇರಿ ಅರ್ಹ ಘಟಕಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಯೋಜನೆಯು ಕುರಿ, ಮೇಕೆ ಮತ್ತು ಹಂದಿ ಮತ್ತು ಮೇವಿನ ಬೀಜಗಳ ಸಂವರ್ಧನೆಗೆ ಸರಪಳಿಗಾಗಿ ಕೇಂದ್ರೀಕೃತ ತಳಿ ಸುಧಾರಣೆಯನ್ನು ಸಹ ಕಲ್ಪಿಸುತ್ತದೆ.
ಎಚ್. ಆಜಾದಿ ಕಾ ಅಮೃತ್ ಮಹೋತ್ಸವ (ಎಕೆಎಎಂ) ಅಡಿಯಲ್ಲಿ ಡಿಎಎಚ್‌ಡಿಯ ಉಪಕ್ರಮಗಳು
ಇಲಾಖೆಯು 75 ಉದ್ಯಮಿಗಳ ಸಮಾವೇಶ ಮತ್ತು 75 ಸ್ಥಳೀಯ ಜಾನುವಾರು ತಳಿಗಳ ಪ್ರದರ್ಶನವನ್ನು ವಿಶ್ವ ಹಾಲು ದಿನದಂದು 1 ಜೂನ್ 2022 ರಂದು ಆಯೋಜಿಸಿದೆ. ಎಎಚ್‌ಐಡಿಎಫ್ ಯೋಜನೆಯ ಮೂಲಕ ಉದ್ಯಮಿಗಳ ಸಮಾವೇಶವನ್ನು 2022ರ ಜುಲೈ 14 ರಂದು ಆಯೋಜಿಸಲಾಗಿದೆ. ಪ್ರೋತ್ಸಾಹ ಮತ್ತು ಪ್ರೋತ್ಸಾಹ ಆತ್ಮನಿರ್ಭರ ಭಾರತದ ಸ್ಪೂರ್ತಿಯಿಂದ ಉತ್ತೇಜಿತವಾಗಿರುವ ಭಾರತವನ್ನು ಸಕ್ರಿಯಗೊಳಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯ ಸಾಕಾರಕ್ಕೆ ಉದ್ಯಮಿಗಳು ದಾರಿ ಮಾಡಿಕೊಡುತ್ತಾರೆ.
"ಎ-ಎಚ್‌ಇಎಲ್ ಪಿ” (ಆರೋಗ್ಯ ಮತ್ತು ಜಾನುವಾರು ಉತ್ಪಾದನೆಯ ವಿಸ್ತರಣೆಗಾಗಿ ಮಾನ್ಯತೆ ಪಡೆದ ಏಜೆಂಟ್) ಎಂಬ ಹೆಸರಿನ ಒಂದು ನವೀನ ಉಪಕ್ರಮವನ್ನು 7 ಪ್ರಾಯೋಗಿಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ (ಮಧ್ಯಪ್ರದೇಶ, ಕರ್ನಾಟಕ, ಬಿಹಾರ, ಜಾರ್ಖಂಡ್, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಜೆ&ಕೆ) ಆರಂಭಿಸಲಾಗುತ್ತಿದೆ ಮತ್ತು ಅದೇ ಜುಲೈ 23, 2022 ರಂದು ಮಧ್ಯಪ್ರದೇಶದಲ್ಲಿ ಮತ್ತು 2022ರ ಅಕ್ಟೋಬರ್ 11 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭಿಸಲಾಯಿತು.
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು "ಭಾರತದ ಶ್ವೇತ ಕ್ರಾಂತಿಯ ಪಿತಾಮಹ" ಡಾ. ವರ್ಗೀಸ್ ಕುರಿಯನ್ ಅವರ 101 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ "ರಾಷ್ಟ್ರೀಯ ಹಾಲು ದಿನ" ವನ್ನು ಆಚರಿಸಿತು, ಇದು "ಆಜಾದಿ ಕಾ ಅಮೃತ ಮಹೋತ್ಸವದ" ಭಾಗವಾಗಿ 2022 ರ ನವೆಂಬರ್ 26 ರಂದು ಬೆಂಗಳೂರಿನಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳು 2022 ಅನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. ಕರ್ನಾಟಕದ ವಿವಿಧ ಹಾಲು ಒಕ್ಕೂಟಗಳ 1500 ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಯೋಜಿಸಲಾದ 1000 ಗ್ರಾಮ ಮಟ್ಟದ ಶಿಬಿರಗಳ ಮೂಲಕ 50000 ರೈತರು ವರ್ಚುವಲ್ ರೂಪದಲ್ಲಿ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಿದ್ದರು.
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಎಂಒಎಫ್‌ಎಎಚ್‌ಡಿ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್‌ನಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಡೇರಿ ಫೆಡರೇಶನ್ ವಿಶ್ವ ಡೇರಿ ಶೃಂಗಸಭೆ (ಐಡಿಎಫ್ ಡಬ್ಲೂಎಸ್), 2022ರಲ್ಲಿ ಭಾಗವಹಿಸಿದೆ. ಸೆಪ್ಟೆಂಬರ್ 12 ರಿಂದ 15 ರವರೆಗೆ ನಡೆದ ನಾಲ್ಕು ದಿನಗಳ ಐಡಿಎಫ್ ಡಬ್ಲೂಎಸ್ 2022, ಉದ್ಯಮದ ಮುಖಂಡರು, ತಜ್ಞರು, ರೈತರು ಮತ್ತು ನೀತಿ ನಿರೂಪಕರು ಸೇರಿದಂತೆ ಜಾಗತಿಕ ಮತ್ತು ಭಾರತೀಯ ಡೇರಿ ಪಾಲುದಾರರ ಸಭೆಯಾಗಿದ್ದು, "ಡೇರಿ ಫಾರ್ ನ್ಯೂಟ್ರಿಷನ್ ಮತ್ತು ಜೀವನೋಪಾಯ’ ಎಂಬ ವಿಷಯದ ಬಗ್ಗೆ ಕೇಂದ್ರೀಕರಿಸಲಾಗಿತ್ತು. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಸಂಪೂರ್ಣ ವಿವರಗಳನ್ನು ಬಾಧ್ಯಸ್ಥರು, ಉದ್ಯಮಿಗಳಿಗೆ ನೀಡಲಾಯಿತು.
ಮೀನುಗಾರಿಕೆ ಇಲಾಖೆ
ಕೆಲವು ವರ್ಷಗಳ ಹಿಂದೆ ಚಿಂತನೆ ನಡೆಸದಿದ್ದ ಹಲವು ಕ್ಷೇತ್ರಗಳಲ್ಲಿ ಭಾರತ ಅದ್ಭುತ ಪ್ರಗತಿ ಸಾಧಿಸಿದೆ. ಅಂತಹ ಒಂದು ಉದಯೋನ್ಮುಖ ವಲಯವೆಂದರೆ ಮೀನುಗಾರಿಕಾ ವಲಯ, ಇದು ಸಾಂಪ್ರದಾಯಿಕವಾಗಿ ದೇಶಾದ್ಯಂತ ಮೀನುಗಾರರ ದೈನಂದಿನ ಪೋಷಣೆ ಮತ್ತು ಜೀವನೋಪಾಯವನ್ನು ಬೆಂಬಲಿಸುವ ಕ್ಷೇತ್ರವಾಗಿದೆ. ಭಾರತೀಯ ಆರ್ಥಿಕತೆಯಲ್ಲಿ ಮೀನುಗಾರಿಕೆ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಇದು ರಾಷ್ಟ್ರೀಯ ಆದಾಯ, ರಫ್ತು, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಹಾಗೂ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತದೆ. ಮೀನುಗಾರಿಕಾ ವಲಯವನ್ನು "ಸೂರ್ಯೋದಯ ವಲಯ" ಎಂದು ಗುರುತಿಸಲಾಗಿದೆ ಮತ್ತು 2015-16 ರಿಂದ 2020-21 ರ ಅವಧಿಯಲ್ಲಿ 9.03% (ಸ್ಥಿರ ಬೆಲೆ: 2011-12) ಅತ್ಯುತ್ತಮ ಬೆಳವಣಿಗೆ ದರವನ್ನು ಪ್ರದರ್ಶಿಸಿದೆ. ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ ಕೃಷಿಯು ಲಕ್ಷಾಂತರ ಜನರಿಗೆ ಆಹಾರ, ಪೋಷಣೆ, ಆದಾಯ ಮತ್ತು ಜೀವನೋಪಾಯದ ಪ್ರಮುಖ ಮೂಲವಾಗಿದೆ.
2021-22ನೇ ಆರ್ಥಿಕ ವರ್ಷದಲ್ಲಿ ಈ ವಲಯವು ದಾಖಲೆಯ 162.48 ಲಕ್ಷ ಟನ್‌ಗಳಷ್ಟು ಮೀನು ಉತ್ಪಾದನೆಯನ್ನು ತಲುಪಿದೆ ಮತ್ತು ಮತ್ತಷ್ಟು ಬೆಳವಣಿಗೆಯ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಇದು ಭಾರತದಲ್ಲಿ ವಿಶೇಷವಾಗಿ ತಳಮಟ್ಟದಲ್ಲಿರುವ ಮತ್ತು ದುರ್ಬಲ ಸಮುದಾಯಗಳಿಗೆ 28 ದಶಲಕ್ಷಕ್ಕೂ ಹೆಚ್ಚು ಜನರ ಜೀವನೋಪಾಯವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೊಡುಗೆ ನೀಡಿದೆ.
ಜಾಗತಿಕ ಉತ್ಪಾದನೆಯ ಶೇ8 ರಷ್ಟನ್ನು ಹೊಂದಿರುವ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮೀನು ಉತ್ಪಾದಿಸುವ ದೇಶವಾಗಿದೆ ಮತ್ತು ದೇಶದ ಒಟ್ಟು ಮೌಲ್ಯವರ್ಧಿತ (ಜಿವಿಎ) ಗೆ ಸುಮಾರು ಶೇ. 1.09 ಮತ್ತು ಕೃಷಿ ಜಿವಿಎ ಗೆ ಶೇ.6.724 ರಷ್ಟು ಕೊಡುಗೆ ನೀಡುತ್ತದೆ. 2021-22ರಲ್ಲಿ ಮೀನುಗಾರಿಕಾ ವಲಯದಿಂದ ರಫ್ತು ಆದಾಯವು ರೂ.57,586.48 ಕೋಟಿಗಳಾಗಿ ದಾಖಲಾಗಿದೆ. ಈ ವಲಯವು ಪ್ರಾಥಮಿಕ ಹಂತದಲ್ಲಿ ಸುಮಾರು 280 ಲಕ್ಷ ಜನರಿಗೆ ಜೀವನೋಪಾಯದ ಬೆಂಬಲವನ್ನು ಒದಗಿಸುತ್ತದೆ ಮತ್ತು ಮೌಲ್ಯ ಸರಪಳಿಯಲ್ಲಿ ಸುಮಾರು ಎರಡು ಪಟ್ಟು ಹೆಚ್ಚು ಮತ್ತು ಮೀನುಗಾರಿಕೆ ವಲಯದಲ್ಲಿ ವಾರ್ಷಿಕ ಸರಾಸರಿ ಬೆಳವಣಿಗೆ ದರವು ಕಳೆದ ಕೆಲವು ವರ್ಷಗಳಿಂದ ಶೇ. 7 ರಷ್ಟಾಗಿದೆ. ಮೀನು ಪ್ರಾಣಿ ಪ್ರೋಟೀನ್‌ನ ಕೈಗೆಟುಕುವ ಮತ್ತು ಶ್ರೀಮಂತ ಮೂಲವಾಗಿದೆ, ಹಸಿವು ಮತ್ತು ಪೋಷಕಾಂಶಗಳ ಕೊರತೆಯನ್ನು ತಗ್ಗಿಸಲು ಆರೋಗ್ಯಕರ ಆಯ್ಕೆಗಳಲ್ಲಿ ಒಂದಾಗಿದೆ. ಈ ವಲಯವು ತನ್ನ ರಫ್ತುಗಳನ್ನು ದ್ವಿಗುಣಗೊಳಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ, ಸುಸ್ಥಿರ, ಜವಾಬ್ದಾರಿಯುತ, ಅಂತರ್ಗತ ಮತ್ತು ಸಮಾನ ರೀತಿಯಲ್ಲಿ ಅದರ ಅಭಿವೃದ್ಧಿಯನ್ನು ವೇಗಗೊಳಿಸಲು ನೀತಿ ಮತ್ತು ಆರ್ಥಿಕ ಬೆಂಬಲದ ಮೂಲಕ ಮೀನುಗಾರಿಕೆ ವಲಯಕ್ಕೆ ನಿರಂತರ ಮತ್ತು ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ.
ಯೋಜನೆಗಳು ಮತ್ತು ಕಾರ್ಯಕ್ರಮಗಳು
ಎ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಪಿಎಂಎಂಎಸ್‌ವೈ ಅನ್ನು ಆರಂಭದಲ್ಲಿ 2019-20ನೇ ಹಣಕಾಸು ವರ್ಷಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಯಿತು ಮತ್ತು ನಂತರ ಭಾರತ ಸರ್ಕಾರದ ಕೋವಿಡ್-19 ಪರಿಹಾರ ಪ್ಯಾಕೇಜ್ (ಆತ್ಮ ನಿರ್ಭರ್ ಭಾರತ ಪ್ಯಾಕೇಜ್) ಭಾಗವಾಗಿ ಘೋಷಿಸಲಾಯಿತು. ಪಿಎಂಎಂಎಸ್‌ವೈ ಗೆ ಪ್ರಧಾನ ಮಂತ್ರಿಯವರು 2020ರ ಸೆಪ್ಟೆಂಬರ್ 10 ರಂದು ಚಾಲನೆ ನೀಡಿದರು.
ಪಿಎಂಎಂಎಸ್‌ವೈ ಅಡಿಯಲ್ಲಿ ಭೌತಿಕ ಸಾಧನೆಗಳು (2020-21 ರಿಂದ 14ನೇ ಡಿಸೆಂಬರ್ 2022 ರವರೆಗೆ)
1. ಒಳನಾಡು ಮೀನುಗಾರಿಕೆ: ಒಳನಾಡಿನ ಜಲಚರ ಸಾಕಣೆಗಾಗಿ 14.417.83 ಹೆಕ್ಟೇರ್ ಕೊಳದ ಪ್ರದೇಶ, 2,795 ಬಯೋಫ್ಲೋಕ್ ಘಟಕಗಳು ಮತ್ತು 5,000 ಮರು-ಪರಿಚಲನೆಯ ಜಲಚರ ಸಾಕಣೆ ವ್ಯವಸ್ಥೆಗಳು (ಆರ್‌ಎಎಸ್), 24294 ಪಂಜರಗಳು ಮತ್ತು 394.7 ಹೆಕ್ಟೇರ್ ಜಲಾಶಯಗಳು ಮತ್ತು ಇತರ ಜಲ-ಜಲಾಗಾರಗಳಲ್ಲಿ; 509 ಮೀನುಗಳು ಮತ್ತು 4 ಸ್ಕಾಂಪಿ ಮೊಟ್ಟೆಮರಿಗಳು, 1815 ಹೆಕ್ಟೇರ್ ಕೊಳದ ಪ್ರದೇಶವು ಒಳನಾಡಿನ ಲವಣಯುಕ್ತ ನೀರಿನ-ಕ್ಷಾರೀಯ ಸಂಸ್ಕೃತಿ ಮತ್ತು 12 ಬ್ರೂಡ್ ಬ್ಯಾಂಕುಗಳ ಸ್ಥಾಪನೆ.
2 ಸಾಗರ ಮೀನುಗಾರಿಕೆ: 426 ಆಳ ಸಮುದ್ರ ಮೀನುಗಾರಿಕೆ ಹಡಗು, 1027 ಅಸ್ತಿತ್ವದಲ್ಲಿರುವ ಮೀನುಗಾರಿಕೆ ಹಡಗುಗಳ ಉನ್ನತೀಕರಣ, 4250 ಯಾಂತ್ರಿಕೃತ ಮೀನುಗಾರಿಕೆ ಹಡಗುಗಳಲ್ಲಿ ಜೈವಿಕ ಶೌಚಾಲಯಗಳು; ಮೀನು ಕೃಷಿಗಾಗಿ 1556 ತೆರೆದ ಸಮುದ್ರ ಪಂಜರ; 5 ಸಣ್ಣ ಮರೈನ್ ಫಿಶ್ ಹ್ಯಾಚರಿಗಳು, ಉಪ್ಪುನೀರಿನ ಆಕ್ವಾಕಲ್ಚರ್ ಗಾಗಿ 1325 ಹೆಕ್ಟೇರ್ ಕೊಳದ ಪ್ರದೇಶ ಮತ್ತು 13 ಉಪ್ಪುನೀರಿನ ಮೊಟ್ಟೆಕೇಂದ್ರಗಳ ಸ್ಥಾಪನೆ.
3 ಮೀನುಗಾರರ ಕಲ್ಯಾಣ: ಮೀನುಗಾರರಿಗೆ 5323 ಬದಲಿ ದೋಣಿಗಳು ಮತ್ತು ಬಲೆಗಳು, 6,77,462 ಮೀನುಗಾರರ ಕುಟುಂಬಗಳಿಗೆ ಜೀವನೋಪಾಯ ಮತ್ತು ಪೌಷ್ಠಿಕ ಬೆಂಬಲವನ್ನು ಮೀನುಗಾರಿಕೆ ನಿಷೇಧ / ರಜಾ ಅವಧಿಯಲ್ಲಿ ಮೀನುಗಾರಿಕೆ ಸಂಪನ್ಮೂಲಗಳ ಸಂರಕ್ಷಣೆಗಾಗಿ ಮತ್ತು 73 ವಿಸ್ತರಣೆ ಮತ್ತು ಬೆಂಬಲ ಸೇವೆಗಳು (ಮತ್ಸ್ಯ ಸೇವಾ ಕೇಂದ್ರಗಳು)
4 ಮೀನುಗಾರಿಕೆ ಮೂಲಸೌಕರ್ಯ: 354 ಐಸ್ ಪ್ಲಾಂಟ್/ಕೋಲ್ಡ್ ಸ್ಟೋರೇಜ್‌ಗಳು, 540 ಫಿಶ್ ಫೀಡ್ ಮಿಲ್/ಪ್ಲಾಂಟ್‌ಗಳು, 17535 ಯೂನಿಟ್ ಮೀನು ಸಾಗಣೆ ಸೌಲಭ್ಯಗಳು ಅಂದರೆ, ಶೈತ್ಯೀಕರಿಸಿದ (187) ಮತ್ತು ಇನ್ಸುಲೇಟೆಡ್ ಟ್ರಕ್‌ಗಳು (792), ಜೀವಂತ ಮೀನು ಮಾರಾಟ ಕೇಂದ್ರಗಳು (601), ಆಟೋ ರಿಕ್ಷಾಗಳು (2867) , ಮೋಟಾರ್ ಸೈಕಲ್‌ಗಳು (8195) ಮತ್ತು ಐಸ್ ಬಾಕ್ಸ್‌ನೊಂದಿಗೆ ಬೈಸಿಕಲ್‌ಗಳು (4893); ಮೀನು ಚಿಲ್ಲರೆ ಮಾರುಕಟ್ಟೆಗಳ 5867 ಘಟಕಗಳು (186) ಮತ್ತು ಅಲಂಕಾರಿಕ ಗೂಡಂಗಡಿಗಳು (5697) ಸೇರಿದಂತೆ ಮೀನು ಗೂಡಂಗಡಿಗಳು ಮತ್ತು 93 ಮೌಲ್ಯವರ್ಧಿತ ಉದ್ಯಮ ಘಟಕಗಳು
5 ಅಕ್ವಾಟಿಕ್ ಹೆಲ್ತ್ ಮ್ಯಾನೇಜ್‌ಮೆಂಟ್: 14 ರೋಗ ರೋಗಪತ್ತೆ ಕೇಂದ್ರ ಮತ್ತು ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯಗಳು, 21 ಸಂಚಾರಿ ಕೇಂದ್ರಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳು ಮತ್ತು 4 ಜಲವಾಸಿ ರೆಫರಲ್ ಲ್ಯಾಬ್‌ಗಳು
6. ಅಲಂಕಾರಿಕ ಮೀನುಗಾರಿಕೆ: 1690 ಅಲಂಕಾರಿಕ ಮೀನು ಸಾಕಣೆ ಘಟಕಗಳು ಮತ್ತು 127 ಸಮಗ್ರ ಅಲಂಕಾರಿಕ ಮೀನು ಘಟಕಗಳು (ಸಂತಾನೋತ್ಪತ್ತಿ ಮತ್ತು ಪಾಲನೆ)
7. ಕಡಲಕಳೆ ಕೃಷಿ: 54,500 ರಾಫ್ಟ್‌ಗಳು ಮತ್ತು 63,731 ಮೊನೊಲಿನ್ ಟ್ಯೂಬೆನೆಟ್ ಅನುಮೋದನೆ
8. ಈಶಾನ್ಯ ಪ್ರದೇಶಗಳಲ್ಲಿ ಅಭಿವೃದ್ಧಿ: ಒಟ್ಟು ಯೋಜನೆ 824.03 ಕೋಟಿ ರೂ, ಮೊತ್ತದ ಯೋಜನೆಗಳಿಗೆ ಅನುಮೋದಿಸಲಾಗಿದೆ, ಅದರಲ್ಲಿ ಕೇಂದ್ರದ ಪಾಲು 445.69 ಕೋಟಿ ರೂ. 160 ಹ್ಯಾಚರಿಗಳು, ಸಮಗ್ರ ಮೀನು ಸಾಕಣೆಗಾಗಿ 2699.35 ಹೆಕ್ಟೇರ್, 146 ಮರು-ಪರಿಚಲನೆಯ ಜಲಚರ ಸಾಕಣೆ ವ್ಯವಸ್ಥೆ (ಆರ್‌ಎಎಸ್), 480 ಅಲಂಕಾರಿಕ ಮೀನುಗಾರಿಕೆ ಘಟಕಗಳು, 440 ಬಯೋಫ್ಲೋಕ್ ಘಟಕಗಳು, 3353.2 ಹೆಕ್ಟೇರ್ ಹೊಸ ಕೊಳಗಳ ನಿರ್ಮಾಣ ಮತ್ತು 106 ಫೆಡ್ ಮಿಲ್‌ಗಳು
9. ಇತರ ಪ್ರಮುಖ ಚಟುವಟಿಕೆಗಳು: 2496 ಸಾಗರ ಮಿತ್ರರು
ಬಿ. ಮೀನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿ
ಎಫ್‌ಐಡಿಇ ಅಡಿಯಲ್ಲಿ, ಮೀನುಗಾರಿಕೆ ಇಲಾಖೆಯು ವಾರ್ಷಿಕ ಶೇ.5 ಕ್ಕಿಂತ ಕಡಿಮೆಯಿಲ್ಲದ ಬಡ್ಡಿದರದಲ್ಲಿ ಎನ್‌ಎಲ್ ಇ ಗಳಿಂದ ರಿಯಾಯಿತಿಯ ಹಣಕಾಸು ಒದಗಿಸಲು ವಾರ್ಷಿಕ ಶೇ.3 ವರೆಗೆ ಬಡ್ಡಿ ರಿಯಾಯಿತಿಯನ್ನು ಒದಗಿಸುತ್ತದೆ. ಎಫ್‌ಐಡಿಇ ಅಡಿಯಲ್ಲಿ ಸಾಲ ನೀಡುವ ಅವಧಿಯು 2018-19 ರಿಂದ 2022-23 ರವರೆಗೆ ಐದು ವರ್ಷಗಳು ಮತ್ತು ಅಸಲು ಮರುಪಾವತಿಯ ಮೇಲೆ 2 ವರ್ಷಗಳ ಮೊರಟೋರಿಯಂ ಸೇರಿದಂತೆ 12 ವರ್ಷಗಳ ಗರಿಷ್ಠ ಮರುಪಾವತಿ ಅವಧಿ.
ಎಫ್‌ಐಡಿಇ ಅಡಿಯಲ್ಲಿ, ಇದುವರೆಗೆ 110 ಪ್ರಸ್ತಾವನೆಗಳು 5285,45 ಕೋಟಿ ರೂ. ಖಾಸಗಿ ಫಲಾನುಭವಿಗಳ ಪ್ರಸ್ತಾವನೆಗಳು ಸೇರಿದಂತೆ ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಶಿಫಾರಸು ಮಾಡಲಾಗಿದೆ.
ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಜೆ & ಕೆ, ತೆಲಂಗಾಣ, ಮಿಜೋರಾಂ, ಪಶ್ಚಿಮ ಬಂಗಾಳ, ಅಸ್ಸಾಂ, ಲಕ್ಷದ್ವೀಪ, ಗುಜರಾತ್, ಉತ್ತರ ಪ್ರದೇಶ, ಒಡಿಶಾ, ಹರಿಯಾಣ, ಹಿಮಾಚಲ ಪ್ರದೇಶ, ಮಣಿಪುರ, ಅಂಡಮಾನ್& ನಿಕೋಬಾರ್, ಕೇರಳ, ತ್ರಿಪುರ, ಗೋವಾ ಮತ್ತು ಬಿಹಾರ ಗಳಂತಹ ಒಟ್ಟು 21 ರಾಜ್ಯಗಳು/ಯುಟಿಗಳಿಂದ ಈ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ.
ಸಿ. ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ)
ಈ ಅಭಿಯಾನದ ಸಂದರ್ಭದಲ್ಲಿ, ಜಿಲ್ಲಾ ಮಟ್ಟದ ಕೆಸಿಸಿ ಶಿಬಿರಗಳನ್ನು ಕೆಸಿಸಿ ಸಮನ್ವಯ ಸಮಿತಿಯಿಂದ ವಾರಕ್ಕೊಮ್ಮೆ ಆಯೋಜಿಸಲಾಗಿದ್ದು, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ (ಎಲ್‌ಡಿಎಂ) ಅವರು ಮೂಲದಿಂದ ಪಡೆದ ಅರ್ಜಿಗಳ ಸ್ಥಳ ಪರಿಶೀಲನೆಗಾಗಿ ಸಂಯೋಜಿಸಿದ್ದಾರೆ. 09.12.2022 ರವರೆಗೆ ಮೀನುಗಾರರು ಮತ್ತು ಮೀನುಗಾರರಿಗೆ ಒಟ್ಟು 1,21,450 ಕೆ.ಸಿ.ಸಿ.ಗಳನ್ನು ವಿತರಿಸಲಾಗಿದೆ.
ಬಜೆಟ್ ಘೋಷಣೆಗಳು
ಎ. ತಮಿಳುನಾಡಿನಲ್ಲಿ ಏಕೀಕೃತ ಬಹುಪಯೋಗಿ ಕಡಲಕಳೆ ಪಾರ್ಕ್
ತಮಿಳುನಾಡು ರಾಜ್ಯ ಸರ್ಕಾರದಿಂದ ಪಡೆದಿರುವ ಬಹುಪಯೋಗಿ ಕಡಲಕಳೆ ಉದ್ಯಾನವನದ ಸ್ಥಾಪನೆಯ ಪ್ರಸ್ತಾವನೆಯನ್ನು ಡಿಒಇ (ಜಿಒಐ) ಅನುಮೋದಿಸಿದೆ. ಪಿಎಂಎಂಎಸ್ ವೈ ಅಡಿಯಲ್ಲಿ ಇದರ ಅಂದಾಜು ವೆಚ್ಚ 127.71 ಕೋಟಿ ರೂ. ಮತ್ತು ನಿಧಿ ಬಿಡುಗಡೆಗೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಯೋಜನೆಯು ಕಡಲಕಳೆ ರೈತರಿಗೆ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ, ಹೊಸ ಉತ್ಪನ್ನದ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಉತ್ಪನ್ನ ನಾವೀನ್ಯತೆ ಪ್ರಯೋಗಾಲಯ, ನೀರು ಮತ್ತು ಕಡಲಕಳೆ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ಪರೀಕ್ಷಾ ಸೌಲಭ್ಯ ಒದಗಿಸಲಾಗುವುದು, ಜೊತೆಗೆ ಉದ್ಯಮಿಗಳು ಮತ್ತು ಸಂಸ್ಕರಣೆದಾರರಿಗೆ ಏಕಗವಾಕ್ಷಿ ಬೆಂಬಲ ನೀಡಲಾಗುವುದು.
ಬಿ. ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿ 5 ಪ್ರಮುಖ ಮೀನುಗಾರಿಕೆ ಬಂದರುಗಳ ಅಭಿವೃದ್ಧಿ
ಕೇಂದ್ರ ಬಜೆಟ್ 2021-22 ರ ಘೋಷಣೆ ಪ್ರಕಾರ, 4 ಮೀನುಗಾರಿಕಾ ಬಂದರುಗಳಾದ ಪಾರಾದೀಪ್, ಚೆನ್ನೈ, ಕೊಚ್ಚಿನ್, ವಿಶಾಖಪಟ್ಟಣಂ ಮತ್ತು ಮಲ್ಲೆಟೆ ಬಂದರ್ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಒಟ್ಟು 615.21 ಕೋಟಿ ರೂ.
ಯೋಜನೆಗೆ ಸಂಬಂಧಿಸಿದ ಪ್ರಮುಖ ಉಪಕ್ರಮಗಳು/ ಮುಖ್ಯಾಂಶಗಳು
ಎ. ಡಿಒಎಫ್ (ಜಿಒಐ) 21 ನವೆಂಬರ್ 2022 ರಂದು ದಾಮನ್‌ನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ "ವಿಶ್ವ ಮೀನುಗಾರಿಕಾ ದಿನ"ವನ್ನು ಆಚರಿಸಿತು. ಭಾರತ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ 2019-20 ರಿಂದ 2021-22 ರವರೆಗೆ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳು/ಜಿಲ್ಲೆಗಳು ಮತ್ತು ಒಳನಾಡು, ಸಮುದ್ರ, ಗುಡ್ಡಗಾಡು ಮತ್ತು ಈಶಾನ್ಯ ಪ್ರದೇಶ, ಒಳನಾಡು ಮತ್ತು ಸಾಗರಕ್ಕೆ ಉತ್ತಮ ಜಿಲ್ಲೆ ಇತ್ಯಾದಿ 22 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿದೆ. ಕಾರ್ಯಕ್ರಮದಲ್ಲಿ ಸಾಗರ್ ಪರಿಕ್ರಮದ ಹಾಡು , ಎಸ್ ಎಸ್ ಎಸ್, ಇಂಡಿಯಾ@ 75 - “ಭಾರತೀಯ ಮೀನುಗಾರಿಕೆಯಿಂದ 100 ಸೂಪರ್ ಯಶೋಗಾಥೆಗಳು”, ಪೋಸ್ಟರ್‌ಗಳು ಮತ್ತು ಇತರ ಪ್ರಕಟಣೆಗಳನ್ನು ಆರಂಭಿಸಲಾಯಿತು. ಅಲ್ಲದೆ, ಹೆಚ್ಚುವರಿಯಾಗಿ, ಸಂಸ್ಥೆಗಳು/ಸರ್ಕಾರಿ ಸಂಸ್ಥೆಗಳು/ಖಾಸಗಿ ವಲಯದಿಂದ ಅಭಿವೃದ್ಧಿಪಡಿಸಲಾದ ವಿವಿಧ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಯಿತು.
ಬಿ. ವಿವಿಧ ಏಜೆನ್ಸಿಗಳಲ್ಲಿ ಅಸ್ತಿತ್ವದಲ್ಲಿರುವ ಮತ್ತು ಪ್ರಸ್ತಾವಿತ ಮೂಲಸೌಕರ್ಯಗಳ ಕೇಂದ್ರೀಕೃತ ಏಕೀಕರಣದೊಂದಿಗೆ ಸುಧಾರಿತ ಸಾಗಾಣೆ ದಕ್ಷತೆ, ಕಡಿಮೆ ಸಾರಿಗೆ ವೆಚ್ಚದ ಮೂಲಕ "ಮೊದಲ ಮತ್ತು ಕೊನೆಯ ಮೈಲು ಸಂಪರ್ಕ" ಖಾತ್ರಿಪಡಿಸುವ ಮೂಲಕ ಪರಿವರ್ತನೆಯ ವಿಧಾನವನ್ನು ತರಲು ಯೋಜಿಸುವ ಬಹು-ಮಾದರಿ ಸಂಪರ್ಕವನ್ನು ಉತ್ತೇಜಿಸುವ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಯೋಜನೆಯನ್ನು ಇಲಾಖೆಯು ಬೆಂಬಲಿಸುತ್ತದೆ. 27ನೇ ಅಕ್ಟೋಬರ್ 2022 ರಂದು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ದಿಂದ ಡಿಒಎಫ್(ಜಿಒಐ) ಅಧಿಕಾರಿಗಳಿಗೆ “ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣಕ್ಕಾಗಿ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್” ಕುರಿತ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿತ್ತು.
ಸಿ. ಸಿಎಎ ನಿಯಮಗಳನ್ನು ಗೆಜೆಟ್ ಅಧಿಸೂಚನೆ ಸಂಖ್ಯೆ, ಜಿಎಸ್ ಆರ್ 216(ಎ), 2022ರ ಮಾರ್ಚ್ 15ರಂದು ಕರಾವಳಿ ಅಕ್ವಾಕಲ್ಚರ್ ಫಾರ್ಮ್ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಮತ್ತು ಡಿಜಿಟಲ್ ಸಹಿ ಮಾಡಿದ ಪರವಾನಗಿ ಪ್ರಮಾಣಪತ್ರಗಳ ವಿತರಣೆಗಾಗಿ ಆನ್‌ಲೈನ್ ಪೋರ್ಟಲ್ ಅನ್ನು ರಚಿಸುವ ಮೂಲಕ ವ್ಯವಹಾರವನ್ನು ಸುಲಭಗೊಳಿಸಲು ಬಿಡುಗಡೆ ಮಾಡಿದೆ.
ಡಿ. ಭಾರತ-ಶ್ರೀಲಂಕಾ ಜಂಟಿ ಕಾರ್ಯಕಾರಿ ಗ್ರೂಪ್ (ಜೆಡಬ್ಲೂಜಿ)ಯ ಮೀನುಗಾರಿಕೆಯ ಐದನೇ ಸಭೆಯು 25 ಮಾರ್ಚ್ 2022 ರಂದು ವರ್ಚುವಲ್ ಮಾದರಿ ಮೂಲಕ ನಡೆಯಿತು. ಜೆಡಬ್ಲೂಜಿ ಮೀನುಗಾರರು ಮತ್ತು ಮೀನುಗಾರಿಕಾ ದೋಣಿಗಳಿಗೆ ಸಂಬಂಧಿಸಿದ ಕಾಳಜಿಗಳು, ಪಾಕ್ ಬೇ ಮೀನುಗಾರಿಕೆಯ ಉತ್ಪಾದಕತೆಯನ್ನು ಹೆಚ್ಚಿಸಲು ಜಂಟಿ ಸಂಶೋಧನೆ ಸೇರಿದಂತೆ ಎಲ್ಲಾ ಸಂಬಂಧಿತ ವಿಷಯಗಳನ್ನು ವಿವರವಾಗಿ ಚರ್ಚಿಸಿತು.
ಇ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ (ಎಂಎಎಫ್‌ಎಎಚ್‌ಡಿ) ಸಚಿವಾಲಯದ ಮೊದಲ ದ್ವೈವಾರ್ಷಿಕ ಬೇಸಿಗೆ ಶೃಂಗಸಭೆಯನ್ನು 19ನೇ ಏಪ್ರಿಲ್ 2022 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ಎಂಒಎಫೆಎಚ್‌ಡಿ ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಬೇಸಿಗೆ ಶೃಂಗಸಭೆಯಲ್ಲಿ ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕಾ ಸಚಿವರು ಭಾಗವಹಿಸಿದ್ದರು ಮತ್ತು ಅಧಿಕಾರಿಗಳು ಮತ್ತು ದೇಶದ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ವಲಯದ ನಿರ್ದಿಷ್ಟ ಅಭಿಪ್ರಾಯಗಳು / ಸಲಹೆಗಳು / ಬೇಡಿಕೆಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಯಿತು.
ಜಿ. ವೆಚ್ಚ ಹಣಕಾಸು ಸಮಿತಿಯು (ಇಎಫ್ ಸಿ) 2022ರ ಮೇ 10ರ ಸಭೆಯಲ್ಲಿ ಈ ಇಲಾಖೆಯ ಪ್ರಸ್ತಾವನೆಯನ್ನು "ಮೀನುಗಾರಿಕೆ ವಲಯ ಕೋವಿಡ್-19 ನಿರ್ವಹಣೆ ಮತ್ತು ಚೇತರಿಕೆ ಯೋಜನೆ" ಎಂಬ ಶೀರ್ಷಿಕೆಯ ಯೋಜನೆಗೆ ಒಟ್ಟು ರೂ.3,000 ಕೋಟಿ ರೂ.ಗಳ ವೆಚ್ಚದೊಂದಿಗೆ ಮತ್ತು ವಿಶ್ವಬ್ಯಾಂಕ್ ಮತ್ತು ಪಿಎಂಎಂಎಸ್ ವೈ ಅಡಿ ಎಎಫ್ ಡಿ ಬೆಂಬಲಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಆರ್ಥಿಕ ಸೇರ್ಪಡೆ, ಅಪಾಯ ತಗ್ಗಿಸುವಿಕೆ, ಸೂಕ್ಷ್ಮ ಉದ್ಯಮಗಳ ಉತ್ತೇಜನ ಮತ್ತು ಮೀನುಗಾರಿಕೆ ವಲಯದಲ್ಲಿ ಸುರಕ್ಷಿತ ಮಾರುಕಟ್ಟೆ ಅಭ್ಯಾಸಗಳ ಮೂಲಕ ದೇಶೀಯ ಮಾರುಕಟ್ಟೆಯ ವಿಸ್ತರಣೆಯ ಮೇಲೆ ಕೇಂದ್ರೀಕರಿಸುತ್ತದೆ. ಇಲಾಖೆಯು ಅದರ ಅನುಮೋದನೆಗಾಗಿ ಸಚಿವ ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ.
ಜಿ. 2022 ರ ಜೂನ್ 12 ರಿಂದ 17 ರವರೆಗೆ ಜಿನೀವಾದಲ್ಲಿ ನಡೆದ ಡಬ್ಲೂಟಿಒದ 12 ನೇ ಸಚಿವರ ಸಮ್ಮೇಳನದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವರ ನೇತೃತ್ವದ ನಿಯೋಗದ ಭಾಗವಾಗಿ ಮೀನುಗಾರಿಕೆ ಇಲಾಖೆಯು ಭಾಗವಹಿಸಿತು ಮತ್ತು ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮತ್ತು ವಿವಿಧ ಬಹುಪಕ್ಷೀಯ ವಿಷಯಗಳಲ್ಲಿ ಸಹಮತವನ್ನು ಮೂಡಿಸಲು ಸಕ್ರಿಯವಾಗಿ ಕೆಲಸ ಮಾಡಿರುವುದರಿಂದ 17ನೇ ಜೂನ್ 2022 ರಂದು ಮೀನುಗಾರಿಕೆ ಸಬ್ಸಿಡಿಗಳ ಐತಿಹಾಸಿಕ ಒಪ್ಪಂದವನ್ನು ಅಳವಡಿಸಿಕೊಳ್ಳಲು ಕಾರಣವಾಗಿದೆ.
ಎಚ್. 2022ರ ಸೆಪ್ಟೆಂಬರ್ 10 ರಂದು ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಆರಂಭದ 2 ನೇ ವಾರ್ಷಿಕೋತ್ಸವವನ್ನು ಇಲಾಖೆಯು ಆಚರಿಸಿತು. ಈ ಕಾರ್ಯಕ್ರಮವು ರಾಜ್ಯದ ಅಧಿಕಾರಿಗಳೊಂದಿಗೆ ಮೀನುಗಾರರು, ಮೀನುಗಾರರು ಮತ್ತು ಇತರ ಬಾಧ್ಯಸ್ಥಗಾರರೊಂದಿಗೆ ಮೀನುಗಾರಿಕೆ ಇಲಾಖೆಗಳು ಮತ್ತು ವಿವಿಧ ಸಂಶೋಧನಾ ಸಂಸ್ಥೆಗಳು ಮತ್ತು ಸಂಸ್ಥೆಗಳ ವಿಜ್ಞಾನಿಗಳು ಮತ್ತು ವಿದ್ವಾಂಸರು ಭಾಗವಹಿಸಿದ್ದರು.
ಐ. ಇಲಾಖೆಯು 70 ದಿನಗಳ ಸುದೀರ್ಘ “ಸ್ವಚ್ಚ ಸಾಗರ, ಸುರಕ್ಷಿತ ಸಾಗರ” ಅಭಿಯಾನವನ್ನು ಎಂಇಎಸ್ ಆರಂಭಿಸಿದೆ. ಎಫ್‌ಎಎಚ್ ಡಿ ಸಂಪುಟ ಸಚಿವರು 2022ರ ಸೆಪ್ಟೆಂಬರ್ 17 ರಂದು ಗುಜರಾತ್ ಜಿಲ್ಲೆಯ ಅಮ್ರೇಲಿಯಲ್ಲಿ ಕರಾವಳಿ ಸ್ವಚ್ಛತಾ ಕಾರ್ಯಕ್ರಮವನ್ನು ಆರಂಭಿಸಿದರು ಮತ್ತು 12,000 ಸ್ವಯಂಸೇವಕರೊಂದಿಗೆ ಜಫ್ರಾಬಾದ್-ರಾಜುಲಾ ಕರಾವಳಿಯ 55 ಕಿಮೀ ವ್ಯಾಪ್ತಿಯ ಉದ್ದಕ್ಕೂ 6 ಮೀಸಲಾದ ಸ್ಥಳಗಳಲ್ಲಿ ಕರಾವಳಿ ಸ್ವಚ್ಛತೆಯನ್ನು ಆಯೋಜಿಸಲಾಗಿದೆ. 5000 ಭಾಗವಹಿಸುವವರೊಂದಿಗೆ ಎಂಒಎಸ್ (ಎಫ್‌ಎಎಚ್ ಡಿ) ನೇತೃತ್ವದಲ್ಲಿ ಚೆನ್ನೈನ ಬೆಸೆಂಟ್ ನಗರ ಬೀಚ್‌ನಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ: 6 ಕಿಮೀ ಮಿನಿ ಮ್ಯಾರಥಾನ್. ಸ್ವಚ್ಛ ಬೀಚ್‌ಗಳ ಬಗ್ಗೆ ಜಾಗೃತಿ ಮೂಡಿಸಲು ಸಹ ಆಯೋಜಿಸಲಾಗಿತ್ತು.
ಜೆ. ಸಾಗರ್ ಪರಿಕ್ರಮ-2022 ಎರಡನೇ ಹಂತವನ್ನು 2022ರ ಸೆಪ್ಟೆಂಬರ್ 22 ರಿಂದ 25 ರವರೆಗೆ ಗುಜರಾತ್ ಕರಾವಳಿಯಲ್ಲಿ ಆಯೋಜಿಸಲಾಗಿತ್ತು, ಇದು ಮ್ಯಾಂಗ್ರೋಲ್‌ನಿಂದ ಆರಂಭಿಸಿ ಮತ್ತು ಆ ಮಾರ್ಗದ 7 ಸ್ಥಳಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ಸಂಬಂಧಿತ ಕರಾವಳಿ ಗ್ರಾಮಗಳ 35,000 ಕ್ಕೂ ಹೆಚ್ಚು ನಿವಾಸಿಗಳು ಮತ್ತು ಮೀನುಗಾರರೊಂದಿಗೆ ಸಂವಾದವನ್ನು ಒಳಗೊಂಡಿತ್ತು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲಾಯಿತು.
ಕೆ. ಎಂಪಿಇಡಿಎ-ಆರ್‌ಜಿಸಿಎಗೆ 12.15 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಪಿ. ಮೊನೊಡಾನ್ (ಟೈಗರ್ ಶ್ರಿಂಪ್)ಗಾಗಿ ಬ್ರೂಡ್ ಸ್ಟಾಕ್ ಮಲ್ಟಿಪ್ಲಿಕೇಶನ್ ಸೆಂಟರ್ ಅನ್ನು ಸ್ಥಾಪಿಸಲು ಅನುಮೋದನೆ ನೀಡಲಾಯಿತು. ಈ ಬ್ರೂಡ್‌ಸ್ಟಾಕ್ ಮಲ್ಟಿಪ್ಲಿಕೇಶನ್ ಸೆಂಟರ್ (ಬಿಎಂಸಿ) ಕಾರ್ಯಾರಂಭ ಮಾಡುವುದರೊಂದಿಗೆ, ಪಿ. ಮೊನೊಡಾನ್‌ಗೆ ಸಂಬಂಧಿಸಿದಂತೆ ಸೀಗಡಿ ಬ್ರೂಡ್ ಸ್ಟಾಕ್ ಪೂರೈಕೆಯಲ್ಲಿ ದೇಶವು ಸ್ವಾವಲಂಬಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಎಕ್ಸ್ ಎಕ್ಸ್. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪ್ರಶೋತ್ತಮ್ ರೂಪಾಲಾ ಅವರು 2022ರ ಜೂನ್ 7ರಂದು ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಯಲ್ಲಿ ಪಿಎಂಎಂಎಸ್ ವೈ-ಎಂಐಎಸ್ ಡ್ಯಾಶ್‌ಬೋರ್ಡ್ ಅನ್ನು ಆರಂಭಿಸಿದರು. ಪಿಎಂಎಂಎಸ್ ವೈ-ಎಂಐಎಸ್ ಡ್ಯಾಶ್‌ಬೋರ್ಡ್ (1) ಪಿಎಂಎಂಎಸ್ ವೈ ಯೋಜನೆಯ ಚಟುವಟಿಕೆಗಳ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಎಲ್ಲಾ ಭಾಗವಹಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅವುಗಳ ಪ್ರಗತಿ (2) ಮಾಹಿತಿಯುಕ್ತ ನಿರ್ಧಾರಕ್ಕಾಗಿ ಮಾಹಿತಿಯನ್ನು ಕಾರ್ಯತಂತ್ರವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.
ಐಐಐಐಐಐಐ. "ಆಜಾದಿ ಕಾ ಅಮೃತ್ ಮಹೋತ್ಸವ’ ಅಡಿಯಲ್ಲಿ ಮೀನುಗಾರಿಕಾ ಇಲಾಖೆಯು ಒಟ್ಟು 9 ವೆಬ್‌ನಾರ್‌ಗಳನ್ನು ಆಯೋಜಿಸಿದೆ, ಇದರಲ್ಲಿ ಮೀನುಗಾರರು, ಮೀನು ಕೃಷಿಕರು, ಉದ್ಯಮಿಗಳು, ವಿದ್ಯಾರ್ಥಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಸೇರಿ 6000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
*****
(Release ID: 1887263)
Visitor Counter : 411