ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ವರ್ಷಾಂತ್ಯದ ಅವಲೋಕನ: ಯುವ ವ್ಯವಹಾರಗಳ ಇಲಾಖೆ


"ಸ್ವಚ್ಛ ಭಾರತ್ 2.0" ಅಡಿಯಲ್ಲಿ 2.22 ಲಕ್ಷ ತ್ಯಾಜ್ಯ ಸಂಗ್ರಹಣೆ ಮತ್ತು ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸಲಾಗಿದೆ, 1.55 ಕೋಟಿ ಕೆಜಿಗೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರ ಮಟ್ಟದ ರಾಷ್ಟ್ರೀಯ ಯುವ ಸಂಸತ್ ಉತ್ಸವ ಆಯೋಜನೆ

ರಾಷ್ಟ್ರೀಯ ಯುವ ದಿನದಂದು ಸುಮಾರು 3.5 ಲಕ್ಷ ಯುವಜನರ ಭಾಗವಹಿಸುವಿಕೆಯೊಂದಿಗೆ 10,305 ಚಟುವಟಿಕೆಗಳನ್ನು ಆಯೋಜಿಸಲಾಯಿತು

6 ಲಕ್ಷ ಯುವ ಮುಖಂಡರು ಮತ್ತು ಸ್ವಯಂಸೇವಕರು ಎಕೆಎಎಂ ಮತ್ತು ಹರ್ ಘರ್ ತಿರಂಗ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದರು

ಅಂತರರಾಷ್ಟ್ರೀಯ ಯೋಗ ದಿನದಂದು 9.88 ಲಕ್ಷ ಯುವಕರು ಭಾಗವಹಿಸಿದ 947 ಜಿಲ್ಲಾ ಮಟ್ಟದ, 5661 ಬ್ಲಾಕ್ ಮಟ್ಟದ ಮತ್ತು 23782 ಗ್ರಾಮ ಮಟ್ಟದ ಯೋಗ ಕಾರ್ಯಕ್ರಮಗಳನ್ನು ಎನ್‌ ವೈ ಕೆ ಎಸ್‌ ಆಯೋಜಿಸಿತು.

ವಿಶ್ವ ಬೈಸಿಕಲ್ ದಿನದಂದು 8.06 ಲಕ್ಷ ಕಿಮೀ ದೂರವನ್ನು ಕ್ರಮಿಸಿದ 1,23,149 ಸೈಕ್ಲಿಸ್ಟ್‌ಗಳ ಭಾಗವಹಿಸುವಿಕೆಯೊಂದಿಗೆ 35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, 75 ಪ್ರಸಿದ್ಧ ಸ್ಥಳಗಳಲ್ಲಿ ಭಾರತದಾದ್ಯಂತ ಬೈಸಿಕಲ್ ರ್ಯಾಲಿಗಳನ್ನು ಎನ್‌ ವೈ ಕೆ ಎಸ್‌ ಆಯೋಜಿಸಿತು.

ರಾಷ್ಟ್ರೀಯ ಏಕತಾ ದಿನದಂದು ಒಟ್ಟು 1 ಕೋಟಿ ಕಿ.ಮೀ. ದೂರದ 68,364 ರನ್ ಫಾರ್ ಯೂನಿಟಿ ಓಟಗಳನ್ನು ಎನ್‌ ವೈ ಕೆ ಎಸ್‌ ಆಯೋಜಿಸಿತು, ಇದರಲ್ಲಿ 19.71 ಲಕ್ಷ ಯುವಜನರು ಭಾಗವಹಿಸಿದರು.

ವಿದ್ಯಾರ್ಥಿ ಯುವಜನರಲ್ಲಿ

Posted On: 26 DEC 2022 1:32PM by PIB Bengaluru

2022 ರಲ್ಲಿ ಯುವ ವ್ಯವಹಾರಗಳ ಇಲಾಖೆಯ ಪ್ರಮುಖ ಕಾರ್ಯಕ್ರಮಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ:

1. ರಾಷ್ಟ್ರೀಯ ಯುವ ಸಂಸತ್ ಉತ್ಸವ: ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಮಾಲೋಚನೆಗಳ ಮೂಲಕ ಯುವಜನರ ಧ್ವನಿಗಳನ್ನು ಆಲಿಸುವುದು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಯುವಕರನ್ನು ಪ್ರೋತ್ಸಾಹಿಸುವುದು ಮತ್ತು ತೊಡಗಿಸಿಕೊಳ್ಳುವುದು, ಜನಸಾಮಾನ್ಯರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು, ಅವರ ಅಭಿಪ್ರಾಯಗಳನ್ನು ರೂಪಿಸುವುದು ಮತ್ತು ಅದನ್ನು ವ್ಯಕ್ತಪಡಿಸುವುದು ಒಂದು ಸ್ಪಷ್ಟವಾದ ರೀತಿಯಲ್ಲಿ ಮತ್ತು ನವ ಭಾರತದ ದೃಷ್ಟಿಯಲ್ಲಿ ಅವರ ಅಭಿಪ್ರಾಯಗಳನ್ನು ಪಡೆಯುವುದು ಮತ್ತು ದಾಖಲಿಸುವುದು ಇದರ ಉದ್ದೇಶ.

ರಾಷ್ಟ್ರೀಯ ಯುವ ಸಂಸತ್ ಉತ್ಸವ 2021-2022 ಅನ್ನು "ನವ ಭಾರತದ ಧ್ವನಿಯಾಗಿರಿ" ಮತ್ತು "ಪರಿಹಾರಗಳನ್ನು ಹುಡುಕಿ ಮತ್ತು ನೀತಿಗೆ ಕೊಡುಗೆ ನೀಡಿ" ಎಂಬ ವಿಷಯದ ಮೇಲೆ ಆಯೋಜಿಸಲಾಯಿತು.

ಜಿಲ್ಲಾ ಯುವ ಸಂಸತ್ ಉತ್ಸವಗಳನ್ನು 150 ಜಿಲ್ಲಾ ಸ್ಥಳಗಳಲ್ಲಿ ವರ್ಚುವಲ್ ಮೋಡ್ ಮೂಲಕ ಆಯೋಜಿಸಲಾಯಿತು, ಇದರಲ್ಲಿ 701 ಜಿಲ್ಲೆಗಳ (ಎನ್‌ ವೈ ಕೆ ಜಿಲ್ಲೆಗಳು ಮತ್ತು ಎನ್‌ ವೈ ಕೆ ಯೇತರ ಜಿಲ್ಲೆಗಳು) 43,350 ಯುವಜನರು ಭಾಗವಹಿಸಿದರು. ಒಟ್ಟು 1394 ಯುವಕರು ಭಾಗವಹಿಸುವುದರೊಂದಿಗೆ 29 ರಾಜ್ಯ ಯುವ ಸಂಸತ್ತುಗಳನ್ನು ವರ್ಚುವಲ್ ಮೋಡ್ ಮೂಲಕ ಆಯೋಜಿಸಲಾಯಿತು.

2022 ರ ಮಾರ್ಚ್ 10 ರಿಂದ 11 ರವರೆಗೆ ದೆಹಲಿಯ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಯುವ ಸಂಸತ್ ಉತ್ಸವವನ್ನು ನಡೆಸಲಾಯಿತು, ಇದರಲ್ಲಿ ವಿವಿಧ ರಾಜ್ಯಗಳಿಂದ 82 ರಾಜ್ಯ ಮಟ್ಟದ ವಿಜೇತರು ಭಾಗವಹಿಸಿದ್ದರು. ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು 10 ನೇ ಮಾರ್ಚ್, 2022 ರಂದು ಉದ್ಘಾಟಿಸಿದರು.

ಲೋಕಸಭಾಧ್ಯಕ್ಷರು 2022 ರ ಮಾರ್ಚ್ 11 ರಂದು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು ಮತ್ತು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಅವರು ಬಹುಮಾನ ಮತ್ತು ಅರ್ಹತೆಯ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.

3rd National Youth Parliament Festival (NYPF) begins in New Delhi

2. ರಾಷ್ಟ್ರೀಯ ಯುವ ದಿನ (12 ಜನವರಿ, 2022): 12 ಜನವರಿ, 2022 ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ದೇಶಾದ್ಯಂತ 623 ಜಿಲ್ಲಾ ಎನ್‌ ವೈ ಕೆ ಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಗ್ರಾಮಗಳ ಯೂತ್ ಕ್ಲಬ್‌ಗಳು, ಸಂಸ್ಕೃತಿ ಸಚಿವಾಲಯದ ವಿವಿಧ ವಲಯ ಸಾಂಸ್ಕೃತಿಕ ಕೇಂದ್ರಗಳು ಮತ್ತು ಶ್ರೀ ರಾಮಕೃಷ್ಣ ಮಿಷನ್ ಮತ್ತು ವಿವೇಕಾನಂದ ಕೇಂದ್ರದಂತಹ ಸಂಸ್ಥೆಗಳಂತಹ ಮಧ್ಯಸ್ಥಗಾರರು ಮತ್ತಿತರರ ಬೆಂಬಲದೊಂದಿಗೆ ಎನ್‌ ವೈ ಕೆ ಎಸ್‌ ಆಚರಿಸಿತು.

ಆಚರಣೆಯ ಅಂಗವಾಗಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶದ ಕುರಿತು ಜಾಗೃತಿ ಕಾರ್ಯಕ್ರಮಗಳು, ಕಬಡ್ಡಿ/ಖೋ ಖೋ, ಕುಸ್ತಿಯಂತಹ ಸಾಂಪ್ರದಾಯಿಕ ಆಟಗಳ ಜನಪ್ರಿಯಗೊಳಿಸುವಿಕೆ, ಜನ ಭಾಗೀದರಿ ಮನೋಭಾವದಲ್ಲಿ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಿಕೆ, ಸ್ಪರ್ಧೆಗಳು (ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ, ಇತ್ಯಾದಿ) ಆಯೋಜಿಸಲಾಗಿತ್ತು.

ಎನ್‌ ವೈ ಕೆ ಎಸ್‌ ನೊಂದಿಗೆ ಸಂಯೋಜಿತವಾಗಿರುವ ಗ್ರಾಮಗಳ 40,752 ಯೂತ್ ಕ್ಲಬ್‌ಗಳ ಬೆಂಬಲ ಮತ್ತು ಸಮನ್ವಯದೊಂದಿಗೆ 5,861 ಬ್ಲಾಕ್‌ಗಳನ್ನು ಒಳಗೊಂಡ ಸುಮಾರು 3.5 ಲಕ್ಷ ಯುವಜನರ ಭಾಗವಹಿಸುವಿಕೆಯೊಂದಿಗೆ 10,305 ಚಟುವಟಿಕೆಗಳನ್ನು ನಡೆಸಲಾಯಿತು. ಅಲ್ಲದೆ, ಎನ್‌ ವೈ ಕೆ ಎಸ್‌ ನೊಂದಿಗೆ ಸಂಯೋಜಿತವಾಗಿರುವ 45.61 ಲಕ್ಷ ಯುವಜನರು 25 ನೇ ರಾಷ್ಟ್ರೀಯ ಯುವ ಉತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ವೀಕ್ಷಿಸಿದರು,ಈ ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವ ದಿನದಂದು ವರ್ಚುವಲ್ ಮಾದರಿಯ ಮೂಲಕ ಉದ್ದೇಶಿಸಿ ಮಾತನಾಡಿದರು.

Prime Minister Narendra Modi.https://static.pib.gov.in/WriteReadData/userfiles/image/image0014STD.jpg

https://lh6.googleusercontent.com/d77cmleQ92fx2g6JymUR2w1uPY3N7kNwrie_ANkJnh807g-LgLC644u5KNi1QFRrv-KiWWmU1zaHM9fEsuW6ih6RDyG87q_-IseudSoUEX8cdZUQciDoyhnc5YZvSOeTNzRc8Uo3dVlCsuWeEyMIEKVp75rRCxWPw8Gs-cQWs1WjC-ZBacaFj29AMrHVWWOEQkMd337Cewhttps://lh4.googleusercontent.com/uPQZ-DiO8jz2iOsLUXAiX0jaArZre6bpreb_Kh0CG4TRedevUtkrRInXqytYQ9bNyTdjrmkYIk3jeyMm6TQMh449zTMkx9WTmscFmV8xiDpqj6cI-g89IFYt8cajErW8YnaVdk5L5BFHwrwaiAZuBMiVkYzX59HVmEYoESBzJgHqPSIp3WepDpH1RKTGXbv3PXbPxBgqdw

3. ಜಿಲ್ಲಾ ಮಟ್ಟದಲ್ಲಿ ನೆರೆಹೊರೆಯ ಯುವ ಸಂಸತ್ತು: ಸಾಮಾನ್ಯವಾಗಿ ಗ್ರಾಮ ಸಮುದಾಯಗಳು ಮತ್ತು ವಿಶೇಷವಾಗಿ ಯುವಜನರು ಎದುರಿಸುತ್ತಿರುವ ಸಮಕಾಲೀನ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸಮಸ್ಯೆಗಳ ಬಗ್ಗೆ ಯೂತ್ ಕ್ಲಬ್ ಸದಸ್ಯರಿಗೆ ಶಿಕ್ಷಣ ನೀಡುವುದು ಮತ್ತು ಅಂತಹ ವಿಷಯಗಳ ಕುರಿತು ಚರ್ಚೆ/ವಾದಗಳಲ್ಲಿ ಅವರನ್ನು ಒಳಗೊಳ್ಳುವುದು ಇದರ ಗುರಿಯಾಗಿತ್ತು. ಕಾರ್ಯಕ್ರಮದ ಫಲಾನುಭವಿಗಳು 15-29 ವರ್ಷ ವಯಸ್ಸಿನ ಯುವಜನರು, ರಾಷ್ಟ್ರೀಯ ಯುವ ನೀತಿ, 2014 ರಲ್ಲಿನ 'ಯುವ' ವ್ಯಾಖ್ಯಾನಕ್ಕೆ ಅನುಗುಣವಾಗಿ. ಎನ್‌ ವೈ ಕೆ ಎಸ್ 481 ಜಿಲ್ಲಾ ಮಟ್ಟದ ಯುವ ಸಂಸತ್ತುಗಳನ್ನು 3.11 ಲಕ್ಷ ಭಾಗವಹಿಸುವಿಕೆಯೊಂದಿಗೆ ಆಯೋಜಿಸಿದೆ.

https://static.pib.gov.in/WriteReadData/userfiles/image/07ECI3.jpghttps://static.pib.gov.in/WriteReadData/userfiles/image/08HV8S.jpg

4. ಜಲಶಕ್ತಿ ಸಚಿವಾಲಯದ ರಾಷ್ಟ್ರೀಯ ಜಲ ಮಿಷನ್ ಸಹಯೋಗದೊಂದಿಗೆ ಕ್ಯಾಚ್‌ ದ ರೇನ್‌ ಮಳೆಯು ಎಲ್ಲಿ ಬೀಳುತ್ತದೋ ಅಲ್ಲಿ ಹಿಡಿದಿಡಿ ಯೋಜನೆ: ಯೋಜನೆಯ ಉದ್ದೇಶವು ಯುವ ಮುಖಂಡರು ಮತ್ತು ಸ್ವಯಂಸೇವಕರು, ಕುಟುಂಬಗಳು ಮತ್ತು ಗ್ರಾಮದ ಸಮುದಾಯಗಳಿಗೆ ವಿವಿಧ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಶಿಕ್ಷಣ ನೀಡುವುದು ಮತ್ತು ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಮತ್ತು ಅದರ ಅಭ್ಯಾಸ ಕುರಿತು ಜನರಿಗೆ ಶಿಕ್ಷಣ ನೀಡಲು ಪ್ರಮುಖ ಪಾತ್ರವನ್ನು ವಹಿಸಲು ಯುವಕರನ್ನು ಸಬಲೀಕರಣಗೊಳಿಸುವುದಾಗಿದೆ. ಯೋಜನೆಯ ಪ್ರಮುಖ ಚಟುವಟಿಕೆಗಳು ಎನ್‌ ವೈ ಕೆ ಎಸ್ ಅಧಿಕಾರಿಗಳಿಗೆ ತರಬೇತಿ, ರಾಷ್ಟ್ರೀಯ ಮಟ್ಟದ ಚಾಲನೆ, ಜಿಲ್ಲಾ ಮಟ್ಟದ ಚಾಲನೆ, ನೀರಿನ ಸಂರಕ್ಷಣೆಯ ಪ್ರತಿಜ್ಞೆ, ಯುವ ನಾಯಕರು ಮತ್ತು ಸ್ವಯಂಸೇವಕರ ದೃಷ್ಟಿಕೋನ ಮತ್ತು ಪ್ರೇರಣೆ, ಜಲ ಸಂರಕ್ಷಣೆ, ಜಾಗೃತಿ ಮತ್ತು ಶಿಕ್ಷಣ, ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಪ್ರೇರಣೆ, ನೀರು ಕುರಿತ ಮಾತುಕತೆ ಮತ್ತು ಸಂವಾದ, ಜ್ಞಾನ ಸ್ಪರ್ಧೆ ಮತ್ತು ಸ್ವಯಂಪ್ರೇರಿತ ಆಧಾರದ ಮೇಲೆ ಸಮುದಾಯ ಕಾರ್ಯ ಶಿಬಿರಗಳನ್ನು ಒಳಗೊಂಡಿವೆ.

ಯೋಜನೆಯ ಅಡಿಯಲ್ಲಿ, ಪ್ರಮುಖವಾಗಿ ಗೊತ್ತುಪಡಿಸಿದ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಧನೆಗಳು ಕೆಳಕಂಡಂತಿವೆ:

  • 6.10 ಲಕ್ಷ ಎನ್‌ ವೈ ಕೆ ಎಸ್ ಯುವ ಸ್ವಯಂಸೇವಕರು, ಯೂತ್ ಕ್ಲಬ್‌ಗಳ ಸದಸ್ಯರು, ಸಮುದಾಯಗಳು ಮತ್ತು ಇತರ ಮಧ್ಯಸ್ಥಗಾರರ ಭಾಗವಹಿಸುವಿಕೆಯೊಂದಿಗೆ 21,274 ಜಲ ಸಂರಕ್ಷಣೆ ಪ್ರತಿಜ್ಞೆಯ ಚಟುವಟಿಕೆಗಳನ್ನು ನಡೆಸಲಾಯಿತು.
  • 24.66 ಲಕ್ಷ ಅಭಿಪ್ರಾಯ ನಾಯಕರು, ಗ್ರಾಮ ವಕ್ತಾರರು, ಪಿ ಆರ್‌ ಐ ಗಳ ಸದಸ್ಯರು, ಸೇವಾ ಪೂರೈಕೆದಾರರು, ಯುವಕರು, ಎನ್‌ ವೈ ವಿ ಗಳು ಮತ್ತು ಇತರರ ಭಾಗವಹಿಸುವಿಕೆಯೊಂದಿಗೆ ಜಲ ಸಂರಕ್ಷಣೆಗಾಗಿ ಭಾಗವಹಿಸುವಿಕೆ ಮತ್ತು ಬೆಂಬಲಕ್ಕಾಗಿ 89,010 ಚಟುವಟಿಕೆಗಳನ್ನು ಆಯೋಜಿಸಲಾಯಿತು.
  • 9.90 ಲಕ್ಷ ರಾಷ್ಟ್ರೀಯ ಯುವ ಸ್ವಯಂಸೇವಕರು, ಯುವ ನಾಯಕರು, ಪಿ ಆರ್‌ ಐ ಗಳು ಮತ್ತು ಇತರ ಮಧ್ಯಸ್ಥಗಾರರ ಭಾಗವಹಿಸುವಿಕೆಯೊಂದಿಗೆ ಬೀದಿ ನಾಟಕಗಳು, ಪಾದಯಾತ್ರೆ/ಪ್ರಭಾತ್ ಫೆರೀಸ್ ಮತ್ತು ರ್ಯಾಲಿಗಳಂತಹ ವಿಷಯಾಧಾರಿತ ಕಾರ್ಯಕ್ರಮಗಳ ಮೂಲಕ ಜಾಗೃತಿ ಮತ್ತು ಶಿಕ್ಷಣದ 30,785 ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
  • ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಪ್ರೇರಣೆಯ 10.77 ಲಕ್ಷ ಚಟುವಟಿಕೆಗಳನ್ನು 39.35 ಲಕ್ಷ ಕುಟುಂಬ ಸದಸ್ಯರು/ರೈತರು/ಪಿ ಆರ್‌ ಐ ಗಳ ಸದಸ್ಯರು ಮತ್ತು ಇತರರನ್ನು ಸಜ್ಜುಗೊಳಿಸಲು ಮತ್ತು ಪ್ರೇರೇಪಿಸಲು ಆಯೋಜಿಸಲಾಯಿತು.
  • ಜಲ ಸಂವಾದ/ಜಲ ಚೌಪಲ್‌ಗಳ ಕುರಿತು 14657 ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ 3.07 ಲಕ್ಷ ರಾಷ್ಟ್ರೀಯ ಯುವ ಸ್ವಯಂಸೇವಕರು, ಯುವ ಸ್ವಯಂಸೇವಕರು, ಯೂತ್ ಕ್ಲಬ್‌ಗಳ ಸದಸ್ಯರು ಮತ್ತು ಇತರ ಪಾಲುದಾರರು ಭಾಗವಹಿಸಿದ್ದರು.
  • ರಸಪ್ರಶ್ನೆ, ಪೋಸ್ಟರ್ ತಯಾರಿಕೆ, ಚಿತ್ರಕಲೆ, ಸ್ಲೋಗನ್ ಬರವಣಿಗೆ ಮೂಲಕ ಜ್ಞಾನ ಸ್ಪರ್ಧೆಗಳ 19.682 ಚಟುವಟಿಕೆಗಳನ್ನು 5.61 ಲಕ್ಷ ಯುವ ಸ್ವಯಂಸೇವಕರು, ಯೂತ್ ಕ್ಲಬ್‌ಗಳ ಸದಸ್ಯರು ಮತ್ತು ಇತರ ಮಧ್ಯಸ್ಥಗಾರರ ಭಾಗವಹಿಸುವಿಕೆಯೊಂದಿಗೆ ಆಯೋಜಿಸಲಾಗಿದೆ.
  • 4.03 ಲಕ್ಷ ಎನ್‌ ವೈ ಕೆ ಎಸ್ ಅಧಿಕಾರಿಗಳು, ರಾಷ್ಟ್ರೀಯ ಯುವ ಸ್ವಯಂಸೇವಕರು, ಯುವ ಸ್ವಯಂಸೇವಕರು ಮತ್ತು ಇತರ ಮಧ್ಯಸ್ಥಗಾರರ ಭಾಗವಹಿಸುವಿಕೆಯೊಂದಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ಸಮುದಾಯ ಕಾರ್ಯ ಶಿಬಿರಗಳ 12,955 ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.‌

https://static.pib.gov.in/WriteReadData/userfiles/image/093N9L.jpghttps://static.pib.gov.in/WriteReadData/userfiles/image/10KK60.jpg

5. ವಿಶ್ವ ಬೈಸಿಕಲ್ ದಿನ 2022: ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಎನ್‌ ವೈ ಕೆ ಎಸ್‌ 3ನೇ ಜೂನ್ 2022 ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಿತು, ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಿಂದ 750 ಯುವ ಸೈಕ್ಲಿಸ್ಟ್‌ಗಳು ಮತ್ತು ಇತರ ಗಣ್ಯರೊಂದಿಗೆ 7.5 ಕಿಮೀ ದೂರವನ್ನು ಪೆಡ್ಲಿಂಗ್ ಮಾಡುವ ಮೂಲಕ ಮಾನ್ಯ ಕೇಂದ್ರ ಯುವ ವ್ಯವಹಾರಗಳ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಚಾಲನೆ ನೀಡಿದರು.

ಅಲ್ಲದೆ, 35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದೇಶದಾದ್ಯಂತ 75 ಹೆಸರಾಂತ ಸ್ಥಳಗಳಲ್ಲಿ 1,23,149 ಸೈಕ್ಲಿಸ್ಟ್‌ಗಳ ಭಾಗವಹಿಸುವಿಕೆಯೊಂದಿಗೆ ಒಟ್ಟು 8.06 ಲಕ್ಷ ಕಿ.ಮೀ. ದೂರದ ಬೈಸಿಕಲ್ ರ್ಯಾಲಿಗಳನ್ನು ಎನ್‌ ವೈ ಕೆ ಎಸ್‌ ಆಯೋಜಿಸಿತು.

ಎನ್‌ ಎಸ್‌ ಎಸ್ ಘಟಕಗಳಿಂದ ಬೈಸಿಕಲ್ ರ್ಯಾಲಿಗಳನ್ನು ಸಹ ಆಯೋಜಿಸಲಾಯಿತು, ಇದರಲ್ಲಿ 3,28,601 ಸ್ವಯಂಸೇವಕರು ಮತ್ತು ಇತರರು ಭಾಗವಹಿಸಿದರು ಮತ್ತು ದೇಶಾದ್ಯಂತ 16,43,005 ಕಿಮೀ ದೂರವನ್ನು ಕ್ರಮಿಸಿದರು.

https://static.pib.gov.in/WriteReadData/userfiles/image/11GNBD.jpghttps://static.pib.gov.in/WriteReadData/userfiles/image/12GD3T.jpg

https://static.pib.gov.in/WriteReadData/userfiles/image/137NJI.jpghttps://static.pib.gov.in/WriteReadData/userfiles/image/14GLYI.jpg

6. 8ನೇ ಅಂತರಾಷ್ಟ್ರೀಯ ಯೋಗ ದಿನದ ಆಚರಣೆ: ಆಜಾದಿ ಕಾ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ, 2022 ರ ಜೂನ್ 21 ರಂದು ಜನಸಾಮಾನ್ಯರಲ್ಲಿ ಯೋಗವನ್ನು ಜನಪ್ರಿಯಗೊಳಿಸಲು “ಮಾನವೀಯತೆಗಾಗಿ ಯೋಗ”ಎಂಬ ವಿಷಯದೊಂದಿಗೆ ಎನ್‌ ವೈ ಕೆ ಎಸ್‌  ದೇಶಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು.

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಸುಜಾನ್‌ಪುರದ ಐಪ್ರಸಿದ್ಧ ಕಟೋಚ್ ಕೋಟೆಯಲ್ಲಿ 8 ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಣೆಗಳನ್ನು ಮುನ್ನಡೆಸಿದರು. ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್ ನ ಅಟಲ್ ಸುರಂಗದಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ಸಹಾಯಕ ಸಚಿವರು ಆಚರಣೆಗಳನ್ನು ಮುನ್ನಡೆಸಿದರು.

ಈ ಕಾರ್ಯಕ್ರಮದಲ್ಲಿ, ಎನ್‌ ವೈ ಕೆ ಎಸ್‌ 947 ಜಿಲ್ಲಾ ಮಟ್ಟದ, 5661 ಬ್ಲಾಕ್ ಮಟ್ಟದ ಮತ್ತು 23782 ಗ್ರಾಮ ಮಟ್ಟದ ಯೋಗ ಕಾರ್ಯಕ್ರಮಗಳನ್ನು ನಡೆಸಿದ್ದು, 9.88 ಲಕ್ಷ ಯುವಜನರು ಮತ್ತು ಇತರರು ಭಾಗವಹಿಸಿದರು.

ಎನ್‌ ಎಸ್‌ ಎಸ್ ಘಟಕಗಳು ಸಹ 2022 ರ ಜೂನ್ 21 ರಂದು 2022 ರ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದವು. ಈ ಸಂದರ್ಭದ ಅಂಗವಾಗಿ ವಿವಿಧ ಯೋಗ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಇದರಲ್ಲಿ ದೇಶಾದ್ಯಂತದ 31,795 ಸಂಸ್ಥೆಗಳ 27,55,928 ಎನ್‌ ಎಸ್‌ ಎಸ್ ಸ್ವಯಂಸೇವಕರು ಮತ್ತು ಇತರರು ಭಾಗವಹಿಸಿದ್ದರು.

https://static.pib.gov.in/WriteReadData/userfiles/image/15LCOT.jpghttps://static.pib.gov.in/WriteReadData/userfiles/image/161EO8.jpg

7. ಬೃಹತ್‌ ಕೌಂಟ್ಡೌನ್ ಕಾರ್ಯಕ್ರಮಗಳು-ಯೋಗ ಮಹೋತ್ಸವ ಮತ್ತು ಯೋಗ ಮಹೋತ್ಸವ 2.0: ಅಂತರರಾಷ್ಟ್ರೀಯ ಯೋಗ ದಿನ 2022 ರ ಪೂರ್ವದಲ್ಲಿ, ಅಂತರರಾಷ್ಟ್ರೀಯ ಯೋಗ ದಿನ 2022 ಕ್ಕಾಗಿ ಮೆಗಾ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲು 100 ದಿನಗಳ ಕೌಂಟ್‌ಡೌನ್ ಸಮಯದಲ್ಲಿ ಪ್ರತಿ ಸಚಿವಾಲಯಗಳಿಗೆ ಭಾರತ ಸರ್ಕಾರವು ನಿರ್ದಿಷ್ಟ ದಿನಗಳನ್ನು ಗೊತ್ತುಪಡಿಸಿತ್ತು. ಇದರ ಭಾಗವಾಗಿ, ಎನ್‌ ವೈ ಕೆ ಎಸ್‌ 20ನೇ ಜೂನ್ 2022 ರಂದು ದೇಶದಾದ್ಯಂತ 6,025 ಚಟುವಟಿಕೆಗಳನ್ನು ನಡೆಸಿತು, ಒಟ್ಟು 1,73,476 ಯುವಕರು ಮತ್ತು ಇತರರು ಭಾಗವಹಿಸಿದ್ದರು. ಅಲ್ಲದೆ, 100 ದಿನಗಳ ಕೌಂಟ್‌ಡೌನ್ ಯೋಗ ಕಾರ್ಯಕ್ರಮಗಳ ಭಾಗವಾಗಿ, ಜೂನ್, 2022 ರಲ್ಲಿ, ಎನ್‌ ವೈ ಕೆ ಎಸ್‌ 4,250 ಕಾರ್ಯಕ್ರಮಗಳನ್ನು ನಡೆಸಿತು ಮತ್ತು 1.89 ಲಕ್ಷ ಯುವಜನರು ಮತ್ತು ಇತರ ಮಧ್ಯಸ್ಥಗಾರರ ಇದರಲ್ಲಿ ಭಾಗವಹಿಸಿದ್ದರು.

https://static.pib.gov.in/WriteReadData/userfiles/image/177HBH.jpghttps://static.pib.gov.in/WriteReadData/userfiles/image/181ARQ.jpg

https://static.pib.gov.in/WriteReadData/userfiles/image/19ZKMI.jpghttps://static.pib.gov.in/WriteReadData/userfiles/image/2018G7.jpg

8. ಹರ್ ಘರ್ ತಿರಂಗಾ: ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಲು ಮತ್ತು ಅದರ ಸ್ಮರಣಾರ್ಥವಾಗಿ ಮತ್ತು ಭಾರತವು ಅಮೃತ ಕಾಲಕ್ಕೆ ಪ್ರವೇಶಿಸುತ್ತಿರುವ ಸಂದರ್ಭದ ಅಂಗವಾಗಿ, ಹರ್ ಘರ್ ತಿರಂಗಾ ಅಭಿಯಾನವನ್ನು ಎನ್‌ ವೈ ಕೆ ಎಸ್ 1 ರಿಂದ 15 ಆಗಸ್ಟ್ 2022 ರವರೆಗೆ ನಡೆಸಿತು. ಈ ಅಭಿಯಾನವು ನಿಜವಾಗಿಯೂ “ಜನ್ ಭಾಗೀದಾರಿ ಮತ್ತು ಜನಾಂದೋಲನ”ದ  ಒಟ್ಟಾರೆ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇದನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ 2.26 ಲಕ್ಷ ಗ್ರಾಮಗಳಲ್ಲಿ ನಡೆಸಲಾಯಿತು.‌

ಈ ಆಚರಣೆಯ ಪ್ರಮುಖ ಅಂಶವೆಂದರೆ 6 ಲಕ್ಷ ಯುವ ನಾಯಕರು ಮತ್ತು ಸ್ವಯಂಸೇವಕರ ಮೂಲಕ ದೇಶದ ಎಲ್ಲಾ ಭಾಗಗಳನ್ನು ತಲುಪುವುದು. ಅವರು 3.70 ಕೋಟಿ ಮನೆಗಳಿಗೆ ತಲುಪಿದರು ಮತ್ತು ಎಕೆಎಎಂ ಮತ್ತು ಹರ್ ಘರ್ ತಿರಂಗಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದರು. ಈ ಪ್ರಕ್ರಿಯೆಯಲ್ಲಿ ಯುವ ಸ್ವಯಂಸೇವಕರು, ಭಾರತದ 9.38 ಕೋಟಿ ನಾಗರಿಕರನ್ನು ತಮ್ಮ ಮನೆಗಳ ಮೇಲೆ ತಿರಂಗಾ ಹಾರಿಸಲು ಪ್ರೇರೇಪಿಸಿದರು ಮತ್ತು 2 ಕೋಟಿಗೂ ಹೆಚ್ಚು ಕುಟುಂಬಗಳು 13-15 ಆಗಸ್ಟ್ 2022 ರ ಸಮಯದಲ್ಲಿ ತಮ್ಮ ಮನೆಗಳ ಮೇಲೆ ಸ್ವಯಂಪ್ರೇರಣೆಯಿಂದ ರಾಷ್ಟ್ರಧ್ವಜವನ್ನು ಹಾರಿಸಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ, ಪ್ರೇರಕ ಮತ್ತು ಶೈಕ್ಷಣಿಕ ಸಂದೇಶಗಳು, ಚಟುವಟಿಕೆಗಳು, ಕ್ರಿಯಾ ಛಾಯಾಚಿತ್ರಗಳು, ತಿರಂಗಾ ಸೆಲ್ಫಿಗಳು, ವೀಡಿಯೊಗಳು ಮತ್ತು ಘೋಷಣೆಗಳನ್ನು 1.16 ಲಕ್ಷ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಪ್ರಸಾರ ಮಾಡಲಾಯಿತು, ಇದು 13.33 ಲಕ್ಷದ ವರ್ಚುವಲ್ ಔಟ್ರೀಚ್ ಅನ್ನು ಹೊಂದಿದೆ.

ಎನ್‌ ವೈ ಕೆ ಎಸ್ ಸಹ 08ನೇ ಆಗಸ್ಟ್‌ನಿಂದ 14ನೇ ಆಗಸ್ಟ್ 2022 ರವರೆಗೆ ಐಕಾನಿಕ್‌ ವೀಕ್‌ ಆಚರಿಸಿತು ಮತ್ತು ದೇಶಾದ್ಯಂತ ಪ್ರಸಿದ್ಧ ಸ್ಥಳಗಳಲ್ಲಿ 7,458 ಸ್ವಚ್ಛತಾ ಚಟುವಟಿಕೆಗಳನ್ನು ನಡೆಸಿತು. ಸ್ವಚ್ಛತಾ ಚಟುವಟಿಕೆಗಳಲ್ಲಿ 7,047 ತಿರಂಗ ಯಾತ್ರೆಗಳನ್ನು ಆಯೋಜಿಸಲಾಗಿದ್ದು, 57,074 ಔಷಧೀಯ ಸಸಿಗಳನ್ನು ನೆಡಲಾಗಿದೆ.

ಹರ್ ಘರ್ ತಿರಂಗ ಕಾರ್ಯಕ್ರಮದ ಕೊನೆಯ ಹಂತದಲ್ಲಿ, 13 ರಿಂದ 15 ಆಗಸ್ಟ್ 2022 ರವರೆಗೆ, 7.1 ಲಕ್ಷ ನಾಗರಿಕರ ಭಾಗವಹಿಸುವಿಕೆಯೊಂದಿಗೆ 76,321 ಹಳ್ಳಿಗಳು ಮತ್ತು ಪಟ್ಟಣಗಳನ್ನು ಒಳಗೊಂಡ 24,519 ಪ್ರಭಾತ್ ಫೆರಿಗಳನ್ನು ಆಯೋಜಿಸಲಾಯಿತು.

32,657 ಸಂಸ್ಥೆಗಳಿಂದ 42,06,547 ಸ್ವಯಂಸೇವಕರು ಭಾಗವಹಿಸಿದ ಹರ್ ಘರ್ ತಿರಂಗ ಅಭಿಯಾನವನ್ನು 2022 ಆಗಸ್ಟ್ 1 ರಿಂದ 15 ರವರೆಗೆ ಎನ್‌ ಎಸ್‌ ಎಸ್‌ ನಡೆಸಿತು.

https://lh5.googleusercontent.com/awIQZsREnElYfWjw42iMYQJE4LYoqItUQII2MVtNmRhP8kUyPL25m0ZoykAPWWQfJHtNyPw0gBteLt4TA7q_ttJsNs3ABK3QnVIrP9CCyaw_DreFpv61ICe0khjPTM0CvsT-k8pAxpdKIfgZ-3uTFQJJQIeXUzzVUR0Es7EIu2eKg2KZ-skFnyXK3Dcxl7lijFbfv9fF-w     https://lh3.googleusercontent.com/-fU0BzY3NUveHwDJD4nrrXLrbp-P4E82mUYpiOkqdjHBv8gYapCx0RslBgrvlmapg6GiLYAvj0zP66PxUaoupzBAWS-Efp4iJvkxE45MRcpU6N2kcPVPTi_m2cflu-gVuB5ji5y5A_uZ8OTf_bpsE9GcKeaHKqO-oadYCVlr_rUD38F_tzIEdgzx5ZNch0hMFbGv5g2h5Q

https://static.pib.gov.in/WriteReadData/userfiles/image/23KJLC.jpghttps://static.pib.gov.in/WriteReadData/userfiles/image/245EGX.jpg

9. ಸ್ವಚ್ಛತಾ ಪಾಕ್ಷಿಕ ಆಚರಣೆ: ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸ್ವಚ್ಛತೆ ಮತ್ತು ನೈರ್ಮಲ್ಯ ಅಭಿಯಾನವನ್ನು ಕೈಗೊಳ್ಳಲು ಯುವಜನರನ್ನು ಪ್ರೇರೇಪಿಸುವುದು ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮೂಲಕ ದೇಶಾದ್ಯಂತ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಎನ್‌ ವೈ ಸ್ವಯಂಸೇವಕರು, ಯೂತ್ ಕ್ಲಬ್‌ಗಳು, ಸ್ಥಳೀಯ ಯುವಕರು ಮತ್ತು ಇತರ ಪ್ರಮುಖ ಪಾಲುದಾರರನ್ನು ಒಳಗೊಳ್ಳುವ ಮೂಲಕ 1-15ನೇ ಆಗಸ್ಟ್, 2022 ರಿಂದ ದೇಶಾದ್ಯಂತ ಸ್ವಚ್ಛತಾ ಪಾಕ್ಷಿಕ ಅಡಿಯಲ್ಲಿ ನೈರ್ಮಲ್ಯ ಅಭಿಯಾನ ನಡೆಸಲಾಯಿತು.

ಪ್ರಮುಖ ಚಟುವಟಿಕೆಗಳಾದ ಸ್ವಚ್ಛತಾ ಪ್ರತಿಜ್ಞೆ, ಪ್ರಧಾನಿಯವರು ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರ ಸಂದೇಶ/ಮನವಿ ಓದುವಿಕೆ, ಗೋಡೆ ಪೇಂಟಿಂಗ್‌ಗಳು, ಪೋಸ್ಟರ್‌ಗಳು, ಮನೆ ಬಾಗಿಲಿಗೆ ಪ್ರಚಾರ, ವಿಚಾರ ಸಂಕಿರಣಗಳು, ಜ್ಞಾನ ಸ್ಪರ್ಧೆಗಳು, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ, ಸಾರ್ವಜನಿಕ ಸ್ಥಳಗಳು/ಆಸ್ತಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವರದಿಯ ಅವಧಿಯಲ್ಲಿ, 34,230 ಸ್ವಚ್ಛತಾ ಚಟುವಟಿಕೆಗಳನ್ನು 14.81 ಲಕ್ಷ ಯುವಕರು ಮತ್ತು ಇತರರ ಒಳಗೊಳ್ಳುವಿಕೆಯೊಂದಿಗೆ ಆಯೋಜಿಸಲಾಗಿದೆ.

2022 ರ ಆಗಸ್ಟ್ 1 ರಿಂದ 15 ರವರೆಗೆ‌ ಎನ್‌ ಎಸ್‌ ಎಸ್ ನಿಂದ ಸ್ವಚ್ಛತಾ ಪಾಕ್ಷಿಕವನ್ನು ಆಚರಿಸಲಾಯಿತು, ಇದರಲ್ಲಿ ದೇಶಾದ್ಯಂತ 11,929 ಸಂಸ್ಥೆಗಳಿಂದ 8,12,279 ಸ್ವಯಂಸೇವಕರು ಭಾಗವಹಿಸಿದರು.

https://static.pib.gov.in/WriteReadData/userfiles/image/2561TB.jpg https://lh6.googleusercontent.com/8g9nAL9YaahcvUpDYKJ58T3l3JrzFikumFs98Rze_x5R4p67F62vTBnVDvGvi0VYEje6P2dc1_Aqyts3wzq9d7X6E2EO_GnBXnhI4oapP9hoE36JU473nmZ1rXpmxzp2Z5vnEDGm6AtA_Y9fMJ89VyCtilUfqp1jQhtzvxCzI2IGp6mReNqOZWBMkEQewQ76EoRgyyI2Yw

https://static.pib.gov.in/WriteReadData/userfiles/image/27WZD9.jpg WhatsApp Image 2022-08-17 at 3.09.11 PM.jpeg

10. ಜಿಲ್ಲಾ ಮಟ್ಟದ ಯುವ ಉತ್ಸವ- ಯುವ ಸಂವಾದ @2047: ಭಾರತ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಪಸರಿಸುವುದು, ವೈವಿಧ್ಯಮಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಜನಸಾಮಾನ್ಯರಲ್ಲಿ ಮೆಚ್ಚುಗೆಯನ್ನು ಮೂಡಿಸುವುದು ಇದರ ಉದ್ದೇಶ. ಪ್ರತಿ ಘಟಕದ ಅಡಿಯಲ್ಲಿ ಜಿಲ್ಲೆಯಿಂದ ರಾಜ್ಯಕ್ಕೆ ಮತ್ತು ರಾಜ್ಯದಿಂದ ರಾಷ್ಟ್ರ ಮಟ್ಟಕ್ಕೆ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಏಕರೂಪದಲ್ಲಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪ್ರತಿ ಯುವ ಉತ್ಸವವು ಯುವ ಕಲಾವಿದರ ಶಿಬಿರ-ಚಿತ್ರಕಲೆ, ಯುವ ಬರಹಗಾರರ ಶಿಬಿರ-ಕವಿತೆ, ಛಾಯಾಗ್ರಹಣ ಸ್ಪರ್ಧೆ, ಘೋಷಣೆ ಸ್ಪರ್ಧೆ, ಸಾಂಸ್ಕೃತಿಕ ಉತ್ಸವ-ಗುಂಪು ಕಾರ್ಯಕ್ರಮಗಳು ಮತ್ತು ಯುವ ಸಂವಾದ-ಭಾರತ@2047 ಎಂಬ ಆರು ಘಟಕಗಳನ್ನು ಹೊಂದಿದೆ. ಯುವ ಉತ್ಸವದ ವಿವಿಧ ಸ್ಪರ್ಧೆಗಳಲ್ಲಿ 1.31 ಲಕ್ಷ ಯುವಜನರು ಭಾಗವಹಿಸುವ ಮೂಲಕ 437 ಜಿಲ್ಲಾ ಯುವ ಉತ್ಸವ ಕಾರ್ಯಕ್ರಮಗಳನ್ನು ಎನ್‌ ವೈ ಕೆ ಎಸ್‌  ಆಯೋಜಿಸಿದೆ.

https://lh5.googleusercontent.com/6zakY5sNQ1kgZQBlZqIDvrGwQQ740syBoT7koem4A7edVddxHXfCS1xLq-I7rrOoI9xXcc0jdEKD66r31RN6DalSNkAdZaDO6aSu_VvRiE5Yb3pZsPd45g6TmGYdPoWiRgQimg3U67f2pId7sI1yeXig7NUzNSNwkLY_UEvuRrx-eIuntm3Gm9dhLJg7tZQEidxgfXGfXA https://lh3.googleusercontent.com/hEXNt2kJRsuiFaQp5XbDSFFKkQJWeqdd3RGvHmGqgloc4L4qlbd72AauqbMWw8yyfUQHyIeeklWBMAKK_H18rZSKTUsFisQf646ADKfz5mnqi8DX_elqd25OKgztnxGgQlaqGW2zi0gAl7KESxWhYvW2X3N_qEVJ8oe2DM7dsamdeOLzVvlqgRRtxyo0kyJnPs_NFiwZYQ

11. ರಾಷ್ಟ್ರೀಯ ಪೋಷನಾ ಮಾಸ ಆಚರಣೆ: ಪೋಷಣೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ವೈಯಕ್ತಿಕ ಕುಟುಂಬಗಳು ತಮ್ಮ ಮಕ್ಕಳು ಮತ್ತು ಗರ್ಭಿಣಿ/ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶವನ್ನು ಪೂರೈಸಲು ಸರ್ಕಾರಿ ಸೇವೆಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ.

ಎನ್‌ ವೈ ಕೆ ಎಸ್‌ 2018 ರಿಂದ ದೇಶಾದ್ಯಂತ ಪೋಷಣ ಮಾಸ ಕಾರ್ಯಕ್ರಮದ ಅನುಷ್ಠಾನಕ್ಕೆ ಪ್ರಮುಖ ಪಾಲುದಾರನಾಗಿದೆ. ಜಿಲ್ಲಾ ನೆಹರು ಯುವ ಕೇಂದ್ರಗಳು ಎನ್‌ ವೈ ವಿ ಗಳು ಮತ್ತು ಯುವ ಕ್ಲಬ್‌ಗಳಿಗೆ ಅಪೌಷ್ಟಿಕತೆ, ಸಮತೋಲನ ಆಹಾರದ ಪ್ರಾಮುಖ್ಯತೆ, ಸಾಂಪ್ರದಾಯಿಕ ಆಹಾರದ ಸಮಸ್ಯೆಗಳ ಕುರಿತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಜಿಲ್ಲಾಡಳಿತದ ಸಹಯೋಗದೊಂದಿಗೆ ಗ್ರಾಮಸ್ಥರನ್ನು ಜಾಗೃತಗೊಳಿಸಲು ಪ್ರೇರೇಪಿಸಿವೆ.

ಒಂದು ತಿಂಗಳ ಅವಧಿಯ ಪೋಶಣಾ ಮಾಸ 2022 ರಲ್ಲಿ, ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು:

  • ಯೂತ್ ಕ್ಲಬ್‌ಗಳ ಸದಸ್ಯರು ಮತ್ತು ಗ್ರಾಮಸ್ಥರಿಗೆ ಪೋಷಣೆಯ ಪ್ರಮುಖ ವಿಷಯಗಳ ಕುರಿತು ತಿಳುವಳಿಕೆ ಮತ್ತು ಪ್ರೇರಣೆ, ಪೋಷಣೆಯ ಪ್ರಮುಖ ಸಮಸ್ಯೆಗಳನ್ನು ವಿವರಿಸುವ ಬ್ಯಾನರ್‌ಗಳು/ಪ್ರಚಾರ ಸಾಮಗ್ರಿಗಳ ಪ್ರದರ್ಶನ, ಪೋಷಣೆ ಪ್ರತಿಜ್ಞೆ ಸ್ವೀಕಾರ ಸಮಾರಂಭ, ರ್ಯಾಲಿಗಳ ಆಯೋಜನೆ, ಓಟ, ಪಾದಯಾತ್ರೆ, ಸೈಕಲ್ ಯಾತ್ರೆ, ಪೌಷ್ಟಿಕ ಆಹಾರ ಮತ್ತು ಅಪೌಷ್ಟಿಕತೆ ಕುರಿತು ಜ್ಞಾನ ಸ್ಪರ್ಧೆ, ಗೋಡೆ ಬರಹ ಇತ್ಯಾದಿ ಒಟ್ಟು 13,230 ಕಾರ್ಯಕ್ರಮಗಳು/ಚಟುವಟಿಕೆಗಳನ್ನು ನಡೆಸಲಾಯಿತು.
  • ರಾಷ್ಟ್ರೀಯ ಯುವ ಸ್ವಯಂಸೇವಕರು, ಯುವ ಕ್ಲಬ್‌ಗಳ ಸದಸ್ಯರು ಮುಂತಾದವರು 22,820 ಸಸಿಗಳನ್ನು ನೆಟ್ಟರು.
  • ಒಟ್ಟು 5.47 ಲಕ್ಷ ಯೂತ್ ಕ್ಲಬ್ ಸದಸ್ಯರು, ಗ್ರಾಮಸ್ಥರನ್ನು ಮೇಲೆ ತಿಳಿಸಿದ ಚಟುವಟಿಕೆಗಳ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಲಾಯಿತು.
  • 2022 ರ ಸೆಪ್ಟೆಂಬರ್ 1 ರಿಂದ 30 ರವರೆಗೆ ದೇಶದಾದ್ಯಂತ ಎನ್‌ ಎಸ್‌ ಎಸ್ ಘಟಕಗಳಿಂದ ರಾಷ್ಟ್ರೀಯ ಪೋಷಣಾ ಮಾಸವನ್ನು ಆಚರಿಸಲಾಯಿತು. 5,09,521 ಎನ್‌ ಎಸ್‌ ಎಸ್ ಸ್ವಯಂಸೇವಕರು ಭಾಗವಹಿಸಿದ ವಿವಿಧ ಚಟುವಟಿಕೆಗಳನ್ನು ಎನ್‌ ಎಸ್‌ ಎಸ್‌ ಘಟಕಗಳಿಂದ ಆಯೋಜಿಸಲಾಯಿತು.

https://lh5.googleusercontent.com/0P8qWQsfHznP2MKuPfqoJ18O2iJhpR16vVduK-R9Dh5MMezS2Wm9He7dGDpsZo5KAyawepvTi2Cd1ppHMldOEloYBzXqThkZLtsz_vLfyYVwL2vt0a3y71qDLo_FS6kL6zxD_GVTa8OU0TDxBDC9DovmQGPqvo9InB6gQ7kI6qAhGhbttNqrjPwCg2MQmubVed50lhtI1AA group of children sitting at a tableDescription automatically generated with low confidence

12. ಸ್ವಚ್ಛ ಭಾರತ್ 2.0: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಎನ್‌ ವೈ ಕೆ ಎಸ್ ನ ಯುವ ವ್ಯವಹಾರಗಳ ಇಲಾಖೆಯ ಮಾರ್ಗದರ್ಶನದಲ್ಲಿ, ಯುವ ವ್ಯವಹಾರಗಳ ಸಚಿವಾಲಯವು "ಸ್ವಚ್ಛ ಭಾರತ 2.0" ಕಾರ್ಯಕ್ರಮದ ವಿವಿಧ ಚಟುವಟಿಕೆಗಳನ್ನು ಅಕ್ಟೋಬರ್ 1 ರಿಂದ 31 ಅಕ್ಟೋಬರ್, 2022 ರವರೆಗೆ ಆಯೋಜಿಸಿತು. ಈ ಕಾರ್ಯಕ್ರಮವು ಜಾಗೃತಿ ಮೂಡಿಸುವುದು, ಜನರನ್ನು ಸಜ್ಜುಗೊಳಿಸುವುದು ಮತ್ತು ಸ್ವಚ್ಛ ಭಾರತ ಉಪಕ್ರಮದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ, ಇದು ಪ್ರಮಾಣ ಮತ್ತು ಭಾಗವಹಿಸುವಿಕೆಯ ವಿಷಯದಲ್ಲಿ ವಿಶಿಷ್ಟವಾಗಿದೆ.

ಐತಿಹಾಸಿಕ ಸ್ಮಾರಕಗಳು ಮತ್ತು ಪಾರಂಪರಿಕ ತಾಣಗಳು, ಸಮುದಾಯ ಕೇಂದ್ರಗಳು, ಯೂತ್ ಕ್ಲಬ್/ಮಹಿಳಾ ಮಂಡಲದ ಕಟ್ಟಡಗಳ ನಿರ್ವಹಣೆ ಮತ್ತು ಸೌಂದರ್ಯೀಕರಣದ ಜೊತೆಗೆ 2022 ರ ಅಕ್ಟೋಬರ್ 01 ರಿಂದ ಅಕ್ಟೋಬರ್ 31 ರವರೆಗೆ ದೇಶಾದ್ಯಂತ ಸ್ವಚ್ಛತಾ ಚಟುವಟಿಕೆಗಳು ಮತ್ತು ತ್ಯಾಜ್ಯ ಸಂಗ್ರಹಣೆಯನ್ನು ಮುಖ್ಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ. ಸ್ವಯಂ ಸೇವಾ ಶಿಬಿರಗಳ ಮೂಲಕ ಶಾಲಾ ಕಟ್ಟಡಗಳು, ಪಂಚಾಯತ್ ಕಟ್ಟಡಗಳು, ಸಾಂಪ್ರದಾಯಿಕ ಜಲಮೂಲಗಳ ಸ್ವಚ್ಛತೆ ಮತ್ತು ನಿರ್ವಹಣೆ. ಜನಭಾಗೀದಾರಿಯಿಂದ ಜನ ಆಂದೋಲನ ಎಂಬ ತಂತ್ರದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು 1.68 ಲಕ್ಷ ಹಳ್ಳಿಗಳಲ್ಲಿ 2.22 ಲಕ್ಷ ತ್ಯಾಜ್ಯ ಸಂಗ್ರಹಣೆ ಮತ್ತು ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವ ಮೂಲಕ ಆಯೋಜಿಸಲಾಯಿತು. 1.55 ಕೋಟಿ ಕೆಜಿಗೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ; ಯೂತ್ ಕ್ಲಬ್ ಸದಸ್ಯರು, ಯುವ ಸ್ವಯಂಸೇವಕರು ಮತ್ತು ಸಮಾಜದ ಇತರ ವರ್ಗಗಗಳು ಇದರಲ್ಲಿ ಭಾಗವಹಿಸಿದವು; ಅದರಲ್ಲಿ 1.54 ಕೋಟಿ ಕೆಜಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. 38.10 ಲಕ್ಷ ಯುವಕರು ಮತ್ತು ಇತರರ ಭಾಗವಹಿಸುವಿಕೆಯೊಂದಿಗೆ 2,585 ಪ್ರವಾಸಿ ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ, 1.13 ಲಕ್ಷ ಗ್ರಾಮಗಳ ಸೌಂದರ್ಯೀಕರಣ ಮತ್ತು 2.29 ಲಕ್ಷ ವರ್ತನೆಯ ಬದಲಾವಣೆ ಸಂವಹನ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.

ಎನ್‌ ಎಸ್‌ ಎಸ್ ದೇಶಾದ್ಯಂತ 2022 ರ ಅಕ್ಟೋಬರ್ 1 ರಿಂದ 31 ರವರೆಗೆ ಸ್ವಚ್ಛತಾ ಚಟುವಟಿಕೆಗಳನ್ನು ಆಯೋಜಿಸಿತು. ಈ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಒಟ್ಟು 38,27,394 ಎನ್‌ಎಸ್‌ಎಸ್ ಸ್ವಯಂಸೇವಕರು 60,51,427 ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಿದರು.

https://static.pib.gov.in/WriteReadData/userfiles/image/35FH2K.jpg

https://lh6.googleusercontent.com/gzmOLiIabXIXK1vsyVS0-AbK8gtBypveBSpYg1wCytAWZee4G5dWny8QM5F46YMJjVHIVYwG4AKGmE4XHawUXI8thCcnRw2SI-NY2CZIu3lnvKWtPqCY0wPNkwAdaq0WIEMQMt1NKFByu7dsd07I8fBe6HE1Yjk16nB_zexPSXPMwNujsv0AQqbgkRm5r6otOVW2fjlilQ https://lh3.googleusercontent.com/DHY_Fxz_OJoCIlTtUT0To3J6HvIlTE2a5pg-YVBcD9d22A-DF1tsjoFj9vZFssTdpjaYLnCeydjIRJujFTa6R2IP6nXBB8lUUY9vAgkHX8Ksoepy-Q4JxZt_ULWsLRjZGnvQH7XxTmB9Unb2HOduyYKMulEn5MECzre2vYldoBjJC5KhnCHsBwCt7izHyaoyAG0nALUtzQ

https://static.pib.gov.in/WriteReadData/userfiles/image/38TGFG.jpghttps://static.pib.gov.in/WriteReadData/userfiles/image/39GB3S.jpg

13. ಅಕ್ಟೋಬರ್ 31, 2022 ರಂದು 'ರಾಷ್ಟ್ರೀಯ ಏಕತಾ ದಿವಸ' (ರಾಷ್ಟ್ರೀಯ ಏಕತಾ ದಿನ) ಆಚರಣೆ: ಎನ್‌ ವೈ ಕೆ ಎಸ್ 2022 ರ ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 147 ನೇ ಜನ್ಮದಿನವನ್ನು ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ, ರಾಷ್ಟ್ರೀಯ ಏಕತಾ ದಿವಸ್ ಎಂದು ಆಚರಿಸಿತು. ಈ ಮಹಾನ್ ನಾಯಕರು ಬೆಳೆಸಿದ ಮೌಲ್ಯಗಳು ಮತ್ತು ಆಲೋಚನೆಗಳನ್ನು ಪ್ರಚಾರ ಮಾಡುವ ಮೂಲಕ ನಮ್ಮ ಮುಂದಿನ ಪೀಳಿಗೆಯನ್ನು ಪ್ರೇರೇಪಿಸಲು, ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ನಿಜವಾದ ಮತ್ತು ಸಂಭಾವ್ಯ ಬೆದರಿಕೆಗಳನ್ನು ತಡೆದುಕೊಳ್ಳಲು ನಮ್ಮ ರಾಷ್ಟ್ರದ ಅಂತರ್ಗತ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಮರು-ದೃಢೀಕರಿಸುವುದು ಈ ದಿನದ ಉದ್ದೇಶವಾಗಿದೆ.

ರಾಷ್ಟ್ರೀಯ ಯುವ ಸ್ವಯಂಸೇವಕರು, ಯೂತ್ ಕ್ಲಬ್‌ಗಳ ಸದಸ್ಯರು ಮತ್ತು ಇತರ ಮಧ್ಯಸ್ಥಗಾರರ ಬೆಂಬಲ ಮತ್ತು ಒಳಗೊಳ್ಳುವಿಕೆಯೊಂದಿಗೆ ದೇಶಾದ್ಯಂತ ಪ್ರತಿಜ್ಞೆ ತೆಗೆದುಕೊಳ್ಳುವುದು, ಏಕತಾ ಓಟಗಳು, ಮೋಟಾರ್ ಬೈಕ್ ರ್ಯಾಲಿ ಮತ್ತು ಸೈಕಲ್ ರ್ಯಾಲಿಗಳು ಎನ್‌ ವೈ ಕೆ ಎಸ್‌ ಕೈಗೊಂಡ ಪ್ರಮುಖ ಚಟುವಟಿಕೆಗಳಾಗಿವೆ.

ಎನ್‌ ವೈ ಕೆ ಎಸ್‌ 19.71 ಲಕ್ಷ ಯುವಕರು ಮತ್ತು ಇತರರ ಭಾಗವಹಿಸುವಿಕೆಯೊಂದಿಗೆ ಒಟ್ಟು 1 ಕೋಟಿ ಕಿ.ಮೀ.ಗಳ ರನ್ ಫಾರ್ ಯೂನಿಟಿಯ 68,364 ಚಟುವಟಿಕೆಗಳನ್ನು ಆಯೋಜಿಸಿತು.

https://lh5.googleusercontent.com/RbI1mufWer_ziy8WWjn7vHNM6UIgTTMjlmR6ERHprdhX1G5c0SaoAEPv0qVFKpxuGfwIx6DU-MteOV3kQjliBnmLWf0XooucAPcH37rfLAtZSQLJsNQq7pCM739ibOHklirbLCy8XHAZBB7N4nkHkKBw6DV4kxLA0-RujNeOHNWVpMfqvi6kohbDdegseQzgYtNWyB2iyg    https://lh6.googleusercontent.com/SzBOQm5VZPXj33KbL2XPriQ4dN23e04V-uUIztOfgB5JfL1gOWuoyCw5SCTPJFuxNc-CwMt0CdsHngtfvnDIBxsfVEeh-Lgc2I7hzn5VjpJljgTXmxIUYzhI8S_qfk2rVvLk4r0qBpddwjmA9QR_JOyXtf0uZAIA82EJKJ16_a0-ZwSY7nyT-Zm2xTsjatv5hBWsGA7SnQ

14.ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ: ಕಾರ್ಯಕ್ರಮವನ್ನು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಎಲ್‌ ಡಬ್ಲ್ಯು ಇ ವಿಭಾಗದ ಆರ್ಥಿಕ ಬೆಂಬಲದೊಂದಿಗೆ ಮತ್ತು ಸಹಯೋಗದೊಂದಿಗೆ ಆಯೋಜಿಸಲಾಯಿತು. ಎಲ್‌ ಡಬ್ಲ್ಯು ಇ ಬುಡಕಟ್ಟು ಯುವಕರನ್ನು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಸಂವೇದನಾಶೀಲಗೊಳಿಸುವುದು ಮತ್ತು ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಪ್ರಶಂಸಿಸಲು, ದೇಶದ ಇತರ ಭಾಗಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ಮತ್ತು ತಾಂತ್ರಿಕ/ಕೈಗಾರಿಕಾ ಪ್ರಗತಿಗೆ ಅವರನ್ನು ಒಡ್ಡಲು ಮತ್ತು ಅವರ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವುದು ಇದರ ಗುರಿಯಾಗಿದೆ. ಪ್ರಮುಖ ಜೀವನ ಕೌಶಲ್ಯಗಳ ಬಗ್ಗೆ ಅವರ ತಿಳುವಳಿಕೆಯನ್ನು ಹೆಚ್ಚಿಸುವ ಮೂಲಕ, ಅವರ ಕೌಶಲ್ಯ ಅಭಿವೃದ್ಧಿ ಅಗತ್ಯಗಳನ್ನು ಗುರುತಿಸುವುದು ಮತ್ತು ಅವರಿಗೆ ಅಗತ್ಯವಾದ ವೃತ್ತಿ ಸಮಾಲೋಚನೆಯನ್ನು ಒದಗಿಸುವುದು ಇದರ ಗುರಿಯಾಗಿದೆ.

ಈ ಕಾರ್ಯಕ್ರಮದಲ್ಲಿ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ 31 ಎಲ್‌ ಡಬ್ಲ್ಯು ಇ ಪೀಡಿತ ಜಿಲ್ಲೆಗಳಿಂದ 20 ತಂಡದ ನಾಯಕರೊಂದಿಗೆ 18-22 ವರ್ಷ ವಯಸ್ಸಿನ 200 ಯುವಕರನ್ನು ಆಯ್ಕೆಮಾಡಲಾಯಿತು. ಹೈದರಾಬಾದ್ (ತೆಲಂಗಾಣ), ಲೂಧಿಯಾನ (ಪಂಜಾಬ್), ಗುರುಗ್ರಾಮ (ಹರಿಯಾಣ), ಜಮ್ಮು (ಜಮ್ಮು, ಕಾಶ್ಮೀರ ಮತ್ತು ಲಡಾಖ್), ಬೆಂಗಳೂರು (ಕರ್ನಾಟಕ), ಚೆನ್ನೈ (ತಮಿಳುನಾಡು), ಮುಂಬೈ (ಮಹಾರಾಷ್ಟ್ರ), ತಿರುವನಂತಪುರ (ಕೇರಳ), ಭುವನೇಶ್ವರ್ (ಒಡಿಶಾ) ಡೆಹ್ರಾಡೂನ್ (ಉತ್ತರಾಖಂಡ), ಅಹಮದಾಬಾದ್ (ಗುಜರಾತ್), ಮಧ್ಯ ದೆಹಲಿ (ದೆಹಲಿ) ಸೇರಿದಂತೆ ಮುಂತಾದ 13 ಸ್ಥಳಗಳ 2839 ಬುಡಕಟ್ಟು ಯುವಕರ (ತಂಡದ ನಾಯಕರನ್ನು ಒಳಗೊಂಡಂತೆ) ಭಾಗವಹಿಸುವಿಕೆ ಇತ್ತು.

https://lh6.googleusercontent.com/GEjlfXh9v9_lVuaqtarEFFwIx9-z2H5F6df9KwF29OiGl03BBnpCzXaP7mznBkyCEsTAg8JWcFEAktV5h_Xrsc2sBlE4vezvywSvlhtZS-SaE1qkFuE-CU_PSjO9wi4IFc56gQmVki_CehGo2eghdifNiuiefCBAQVfV-y5w8-eJVV5oygeai9gijijcr_l0qJ1xSvNifg https://static.pib.gov.in/WriteReadData/userfiles/image/4372KD.jpg

 

15. ನವೆಂಬರ್ 26, 2022 ರಂದು ಸಂವಿಧಾನ ದಿನಾಚರಣೆ (ಸಂವಿಧಾನ ದಿನ): ಭಾರತ ಸಂವಿಧಾನದ ಮೂಲ ತತ್ವಗಳು ಮತ್ತು ಸ್ಪೂರ್ತಿಯ ಬಗ್ಗೆ ಜನಸಾಮಾನ್ಯರು ಮತ್ತು ವಿಶೇಷವಾಗಿ ಯುವಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಅವರ ಗೆಳೆಯರ ಗುಂಪುಗಳಲ್ಲಿ ಸಂವಿಧಾನದ ಬಗ್ಗೆ ಜಾಗೃತಿಯ ಪ್ರಚಾರದಲ್ಲಿ ಅವರನ್ನು ತೊಡಗಿಸಿಕೊಳ್ಳಲು ಎನ್‌ ವೈ ಕೆ ಎಸ್‌ ದೇಶದಾದ್ಯಂತ 26 ನವೆಂಬರ್ 2022 ರಂದು ಸಂವಿಧಾನ ದಿನವನ್ನು ಆಚರಿಸಿತು. ಎನ್‌ ವೈ ಕೆ ಎಸ್‌ ಕೈಗೊಂಡ ಪ್ರಮುಖ ಚಟುವಟಿಕೆಗಳಾದ ಸಂವಿಧಾನದ ಪೀಠಿಕೆ ಓದುವುದು, “ಭಾರತ-ಪ್ರಜಾಪ್ರಭುತ್ವದ ತಾಯಿʼಕುರಿತ ಆನ್‌ಲೈನ್ ರಸಪ್ರಶ್ನೆ, ಸಂವಿಧಾನದ ಪೀಠಿಕೆಯ ಆಧಾರದ ಮೇಲೆ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವ ಪ್ರತಿಜ್ಞೆ ಮಾಡುವುದು ಮತ್ತು ಜಾಗೃತಿ ಮಾತುಕತೆಗಳು/ ಸೆಮಿನಾರ್‌ಗಳು/ ವೆಬಿನಾರ್‌ಗಳು/ ಕರ್ತವ್ಯ ಸಂವಾದ, ಮೂಲಭೂತ ಕರ್ತವ್ಯಗಳ ಕುರಿತು ಸಂದೇಶ ಪ್ರಸಾರ, ಜ್ಞಾನ ಸ್ಪರ್ಧೆ, ರಾಷ್ಟ್ರೀಯ ಯುವ ಸ್ವಯಂಸೇವಕರು, ಯೂತ್ ಕ್ಲಬ್‌ಗಳ ಸದಸ್ಯರು ಮತ್ತು ಇತರರ ಬೆಂಬಲ ಮತ್ತು ಪಾಲ್ಗೊಳ್ಳುವಿಕೆಯೊಂದಿಗೆ ರ್ಯಾಲಿಗಳು ಮತ್ತು ನಾಟಕಗಳನ್ನು ಆಯೋಜನೆ ಇದರಲ್ಲಿ ಸೇರಿದ್ದವು.

4.27 ಲಕ್ಷ ಯುವಜನರು ಮತ್ತು ಇತರರ ಭಾಗವಹಿಸುವಿಕೆಯೊಂದಿಗೆ ಒಟ್ಟು 16,442 ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

https://lh6.googleusercontent.com/ttSVB9kA4Q7BqnlBdSLin_PpmVxr4qTxpj29ZjW0ELBHVL4e1FEOQgGW0A3TMhshUGepAxqFI477W_KOwZtJ8uiV0i4thPj1kR8BeUqTHNAN9dc8-QbqGPZo1-M9VfWNYlvNHS_FpAy3OQUN20REdX_rxLGUS3j4E-oTkijxA7W1MW0ImJmYpupTFgan5UAmyS2WMgOUew   https://static.pib.gov.in/WriteReadData/userfiles/image/45ZO7W.jpg

16. ನಿಮ್ಮ ಸಂವಿಧಾನವನ್ನು ತಿಳಿಯಿರಿ -ನಾಗರಿಕ ಜಾಗೃತಿ ಕಾರ್ಯಕ್ರಮ: ಪ್ರಮುಖ ಕಾರ್ಯಕ್ರಮದ ಭಾಗವಾಗಿ ಎನ್‌ ವೈ ಕೆ ಎಸ್‌ ದೇಶದಾದ್ಯಂತ 623 ಜಿಲ್ಲಾ ಎನ್‌ ವೈ ಕೆ ಗಳಲ್ಲಿ ನಿಮ್ಮ ಸಂವಿಧಾನವನ್ನು ತಿಳಿದುಕೊಳ್ಳಿ -ನಾಗರಿಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು. ಸಂವಿಧಾನದ ಪೀಠಿಕೆಯನ್ನು ಓದುವುದು, ಭಾರತದ ಸಂವಿಧಾನದ ಕಥೆಯನ್ನು ಹಂಚಿಕೊಳ್ಳುವುದು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಚರ್ಚೆ ಮತ್ತು ನಿಮ್ಮ ಸಂವಿಧಾನವನ್ನು ತಿಳಿದುಕೊಳ್ಳಿ ರಸಪ್ರಶ್ನೆ ಮುಂತಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಾರ್ಯಕ್ರಮದ ವ್ಯಾಪಕ ಪ್ರಚಾರವನ್ನು ಮಾಡಲಾಯಿತು. ಇದಲ್ಲದೆ, #knowyourconstitution #consitutionday ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ಸಾಹ ತುಂಬಲಾಯಿತು.

https://static.pib.gov.in/WriteReadData/userfiles/image/46ESTW.jpghttps://static.pib.gov.in/WriteReadData/userfiles/image/47PNA5.jpg

17. ನಮಾಮಿ ಗಂಗೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ: “ನಮಾಮಿ ಗಂಗೆಯಲ್ಲಿ ಯುವಕರ ಒಳಗೊಳ್ಳುವಿಕೆ”ಯೋಜನೆಯು ಜಲ್ ಶಕ್ತಿ ಸಚಿವಾಲಯದ ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್‌ ಎಂ ಸಿ ಜಿ), ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ‌ದ ಯುವ ವ್ಯವಹಾರಗಳ ಇಲಾಖೆಯ ನೆಹರೂ ಯುವ ಕೇಂದ್ರ ಸಂಘಟನೆ (ಎನ್‌ ವೈ ಕೆ ಎಸ್) ಸಹಯೋಗದೊಂದಿಗೆ  ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ "ನಮಾಮಿ ಗಂಗೆ"ಯ ಪ್ರಮುಖ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಪ್ರಯತ್ನವಾಗಿದೆ.

ಜನವರಿ 2022 ರಿಂದ ನವೆಂಬರ್ 2022 ರವರೆಗೆ, ನೆಹರು ಯುವ ಕೇಂದ್ರ ಸಂಘಟನೆ, ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನಿಂದ “ನಮಾಮಿ ಗಂಗೆ ಕಾರ್ಯಕ್ರಮದಲ್ಲಿ ಯುವಕರ ಒಳಗೊಳ್ಳುವಿಕೆ” ಯೋಜನೆಯಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಂಡಿತು. ಆ ಚಟುವಟಿಕೆಗಳು ಈ ಕೆಳಗಿನಂತಿವೆ:

  • 38107 ಸಸಿಗಳನ್ನು ನೆಡಲಾಯಿತು.
  • 18526 ಜಾಗೃತಿ ಕಾರ್ಯಕ್ರಮದ ಚಟುವಟಿಕೆಗಳನ್ನು ಆಯೋಜಿಸಲಾಯಿತು,
  • 10745 ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳಲಾಗಿದೆ.
  • 3094 ಮನೆ ಬಾಗಿಲಿಗೆ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ
  • ಮೂರು ಪ್ರಾದೇಶಿಕ ಮಟ್ಟದ ತರಬೇತಿ ಕಾರ್ಯಕ್ರಮಗಳು ಪೂರ್ಣಗೊಂಡಿವೆ
  • 51 ಜಿಲ್ಲಾ ಮಟ್ಟದ ಮುಂಚೂಣಿ ತಂಡಗಳ ತರಬೇತಿಯನ್ನು ನಡೆಸಲಾಯಿತು
  • 798 ಗಂಗಾ ದೂತರ ಕ್ಲಸ್ಟರ್ ಮಟ್ಟದ ತರಬೇತಿ
  • 22 ಜಿಲ್ಲಾ ಸಮಾವೇಶ

ಈ ಅವಧಿಯಲ್ಲಿ, ಇತರ ವಿಶೇಷ ಚಟುವಟಿಕೆಗಳನ್ನು ಸಹ ಕೈಗೊಳ್ಳಲಾಯಿತು. ಅವುಗಳೆಂದರೆ:

  • ಮಕರ ಸಂಕ್ರಾಂತಿ: ಮಕರ ಸಂಕ್ರಾಂತಿಯ ಸಂದರ್ಭದಲ್ಲಿ 13129 ಜನರು ಗಂಗಾ ನದಿಯ ದಡದಲ್ಲಿ, ಅದರ ಉಪನದಿಗಳಲ್ಲಿ ಮತ್ತು ಮನೆಯಲ್ಲಿ ಸೂರ್ಯನಮಸ್ಕಾರವನ್ನು ಆಚರಿಸಿದರು. 2624 ಯುವಕರು ಮತ್ತು ಇತರರಿಂದ 100 ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಯಿತು, ಗಂಗಾನದಿಯನ್ನು ಸ್ವಚ್ಛವಾಗಿಡಲು 370 ಜಾಗೃತಿ ಚಟುವಟಿಕೆಗಳನ್ನು ನಡೆಸಲಾಯಿತು. ಇದರಲ್ಲಿ 14389 ಜನರಿಗೆ ಅರಿವು ಮೂಡಿಸಲಾಯಿತು. ಕೋವಿಡ್-19 ಕುರಿತು ಜಾಗೃತಿ ಮೂಡಿಸಲು 164 ಚಟುವಟಿಕೆಗಳನ್ನು ನಡೆಸಲಾಯಿತು, ಇದರಲ್ಲಿ 19175 ಜನರು ಭಾಗಿಯಾಗಿದ್ದರು.
  • ನೆಹರು ಯುವ ಕೇಂದ್ರ ಸಂಘಟನೆಯು ಗಂಗಾ ಸ್ವಚ್ಛತಾ ಪಾಕ್ಷಿಕವನ್ನು ಸಹ ಆಯೋಜಿಸಿದ್ದು, ಇದರಲ್ಲಿ 1331 ಯುವಕರು ಭಾಗವಹಿಸಿ ಒಟ್ಟು 39 ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಯಿತು.
  • ಎನ್‌ ವೈ ಕೆ ಎಸ್‌, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ 48 ಜಿಲ್ಲೆಗಳಲ್ಲಿ 8 ಮೇ 2022 ರಂದು ಗಂಗಾ ಜಯಂತಿಯನ್ನು ಆಯೋಜಿಸಿತು, ಇದರಲ್ಲಿ ಸಸಿ ನೆಡುವುದು, ರ್ಯಾಲಿ, ಪ್ರಮಾಣ ವಚನ ಸ್ವೀಕಾರ ಸಮಾರಂಭ, ಯೋಗ, ಸಾಂಸ್ಕೃತಿಕ ಕಾರ್ಯಕ್ರಮದಂತಹ ವಿವಿಧ ಚಟುವಟಿಕೆಗಳನ್ನು ಒಟ್ಟು 7803 ಜನರು ಭಾಗವಹಿಸುವ ಮೂಲಕ ಕೈಗೊಳ್ಳಲಾಯಿತು.
  • ಎನ್‌ ವೈ ಕೆ ಎಸ್‌ 5ನೇ ಜೂನ್ 2021 ರಂದು ಪರಿಸರ ದಿನವನ್ನು ಆಚರಿಸಿತು. 265 ಪ್ರತಿಜ್ಞೆ ಚಟುವಟಿಕೆಗಳು, 130 ಜ್ಞಾನ ಸ್ಪರ್ಧೆಗಳು, 6733 ಸಸಿಗಳ ನೆಡುವಿಕೆಯೊಂದಿಗೆ 466 ಗಿಡನೆಡುವ ಚಟುವಟಿಕೆಗಳು, ಉಪನ್ಯಾಸಗಳು ಮತ್ತು ಸಾಕ್ಷ್ಯಚಿತ್ರಗಳು, ಸೆಮಿನಾರ್   ಮತ್ತು 67 ವಿವಿಧ ಚಟುವಟಿಕೆಗಳ ಮೂಲಕ ಬೀದಿ ನಾಟಕ, ಮರಳು ಕಲೆ ತಯಾರಿಕೆ ಮತ್ತು 20802 ವ್ಯಕ್ತಿಗಳ ಭಾಗವಹಿಸುವಿಕೆಯೊಂದಿಗೆ ಗಂಗಾ ವ್ಯಾಖ್ಯಾನ ಕೇಂದ್ರಕ್ಕೆ ಭೇಟಿ ನೀಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿತು.
  • 21 ಜೂನ್ 2022 ರಂದು ಯೋಗ ದಿನವನ್ನು ಸಹ ಆಚರಿಸಲಾಯಿತು. ಈ ವರ್ಷ ಗಂಗಾ ನದಿಯ 145 ಘಾಟ್‌ಗಳಲ್ಲಿ ಕೋವಿಡ್-19 ರ ಮಾರ್ಗಸೂಚಿಗಳ ಅಡಿಯಲ್ಲಿ ಯೋಗ ಚಟುವಟಿಕೆಗಳನ್ನು ನಡೆಸಲಾಯಿತು, ಒಟ್ಟು 55 ಜಿಲ್ಲೆಗಳಿಂದ 38,359 ಜನರು ಭಾಗವಹಿಸಿದ್ದರು.
  • "ಹರ್‌ ಘರ್‌ ತಿರಂಗಾ" ಮಾದರಿಯಲ್ಲಿ, ನೆಹರು ಯುವ ಕೇಂದ್ರ ಸಂಘಟನೆಯು "ನಮಾಮಿ ಗಂಗೆ ಕಾರ್ಯಕ್ರಮದಲ್ಲಿ ಯುವಕರ ಒಳಗೊಳ್ಳುವಿಕೆ" ಯೋಜನೆಯಡಿಯಲ್ಲಿ "ಹರ್‌ ಘಾಟ್‌ ತಿರಂಗಾ" ಪರಿಕಲ್ಪನೆಯನ್ನು ಪ್ರಾರಂಭಿಸಿತು. 5 ಗಂಗಾ ಜಲಾನಯನ ರಾಜ್ಯಗಳ 51 ಜಿಲ್ಲೆಯ 224 ಘಾಟ್‌ಗಳು ಮತ್ತು ಇತರ ಸ್ಥಳಗಳಲ್ಲಿ ಒಟ್ಟು 574 ಧ್ವಜಾರೋಹಣ ಚಟುವಟಿಕೆಗಳನ್ನು ನಡೆಸಲಾಯಿತು, ಇದರಲ್ಲಿ ಯುವ ಸ್ವಯಂಸೇವಕರು, ಮುಂಚೂಣಿ ತಂಡದ ಸದಸ್ಯರು, ಯೂತ್ ಕ್ಲಬ್ ಸದಸ್ಯರು ಮತ್ತು ಗಂಗಾ ದೂತರು, ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಒಟ್ಟು 30,918 ಪಾಲುದಾರರು ಸ್ವಯಂಪ್ರೇರಣೆಯಿಂದ ಭಾಗವಹಿಸಿದರು. .
  • ಎನ್‌ ವೈ ಕೆ ಎಸ್‌ 31 ಅಕ್ಟೋಬರ್ 2022 ರಂದು 5 ರಾಜ್ಯಗಳ 9 ಜಿಲ್ಲೆಗಳ 14 ಸ್ಥಳಗಳು/ ಘಾಟ್‌ಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿತ್ತು, ಇದರಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು, 808 ಯುವಕರ ಭಾಗವಹಿಸುವಿಕೆಯೊಂದಿಗೆ ಇದರಲ್ಲಿ ಒಟ್ಟು 1029 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.

https://static.pib.gov.in/WriteReadData/userfiles/image/485WE3.jpg https://lh4.googleusercontent.com/7SNqz4omSWEHAbk4hun9_NsI8HEN8eL2m1g0lBSDT0a_1LfKLAhVeKDGNeHXa51r5F2czamyWSqBsTZf0TdleouhdnGTtHs_DEHaKIyckj0tW-aMhtXvQPGVApHnWiwltk0rIkvJ0jhR4sY30nouQ-McQDb0BYjYRlrLNd_9NYxQmsD70ncOSO4uuzfX69Hbz58oeUsZeg

18.ಎನ್‌ ಎಸ್‌ ಎಸ್ ಗಣರಾಜ್ಯೋತ್ಸವ ಪರೇಡ್ ಶಿಬಿರ, 2022: ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ 147 ಮಂದಿಯ (74 ಬಾಲಕರು ಮತ್ತು 73 ಬಾಲಕಿಯರು) ಎನ್‌ ಎಸ್‌ ಎಸ್ ತುಕಡಿಯು 26ನೇ ಜನವರಿ, 2022 ರಂದು ನವದೆಹಲಿಯ ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿತು. ಎನ್‌ ಎಸ್‌ ಎಸ್ ಸ್ವಯಂಸೇವಕರಿಗೆ ಪ್ರಧಾನ ಮಂತ್ರಿಯವರು ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರನ್ನು ಭೇಟಿ ಮಾಡುವ ಅವಕಾಶ ದೊರೆಯಿತು.

https://static.pib.gov.in/WriteReadData/userfiles/image/5064L7.jpghttps://static.pib.gov.in/WriteReadData/userfiles/image/51ARQK.jpg

19. ಎನ್‌ ಎಸ್ ಎಸ್ ಪ್ರಶಸ್ತಿಗಳ ಪ್ರದಾನ-2021-22: 2020-21 ನೇ ಸಾಲಿನ ಎನ್‌ ಎಸ್‌ ಎಸ್ ಪ್ರಶಸ್ತಿಗಳನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಯವರು ರಾಷ್ಟ್ರಪತಿ ಭವನದಲ್ಲಿ ಸೆಪ್ಟೆಂಬರ್ 24, 2022 ರಂದು ಅತ್ಯುತ್ತಮ ವಿಶ್ವವಿದ್ಯಾಲಯಗಳಿಗೆ (2 ಪ್ರಶಸ್ತಿಗಳು), ಅತ್ಯುತ್ತಮ ಘಟಕಗಳಿಗೆ/ ಕಾರ್ಯಕ್ರಮ ಅಧಿಕಾರಿಗಳು (10 ಪ್ರಶಸ್ತಿಗಳು) ಮತ್ತು ಅತ್ಯುತ್ತಮ ಸ್ವಯಂಸೇವಕರಿಗೆ (30 ಪ್ರಶಸ್ತಿಗಳು) ಪ್ರದಾನ ಮಾಡಿದರು.

https://static.pib.gov.in/WriteReadData/userfiles/image/52OGLT.jpghttps://static.pib.gov.in/WriteReadData/userfiles/image/52Z9BJ.jpg

20. ಏಕ್ ಭಾರತ್ ಶ್ರೇಷ್ಠ ಭಾರತ್: ಏಕ್ ಭಾರತ್ ಶ್ರೇಷ್ಠ ಭಾರತ್ ಅಡಿಯಲ್ಲಿ 15 ರಾಷ್ಟ್ರೀಯ ಸಮಗ್ರತಾ ಶಿಬಿರಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯಾರ್ಥಿ ಯುವಜನರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಸಮಗ್ರತೆಯ ಭಾವನೆ ಮತ್ತು ಮನೋಭಾವವನ್ನು ಬೆಳೆಸಲು ಆಯೋಜಿಸಲಾಯಿತು. ಈ ರಾಷ್ಟ್ರೀಯ ಮಟ್ಟದ ಶಿಬಿರಗಳಲ್ಲಿ ದೇಶಾದ್ಯಂತದ 3,150 ಎನ್‌ಎಸ್‌ಎಸ್ ಸ್ವಯಂಸೇವಕರು ತಂಡದ ನಾಯಕರೊಂದಿಗೆ ಭಾಗವಹಿಸಿದ್ದರು.

https://static.pib.gov.in/WriteReadData/userfiles/image/53U3Z9.jpghttps://static.pib.gov.in/WriteReadData/userfiles/image/546H4D.jpg

21. ಶಹೀದಿ ದಿವಸ್-2022: ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ, ದೇಶಾದ್ಯಂತ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಶಹೀದಿ ದಿವಸ್ ಅನ್ನು ಆಚರಿಸಿದವು. ಈ ಕಾರ್ಯಕ್ರಮದಲ್ಲಿ, ದೇಶಾದ್ಯಂತ 10,926 ಸಂಸ್ಥೆಗಳನ್ನು ಒಳಗೊಂಡ 457 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು.

ಪ್ರಭಾತ್ ಪೇರಿ, ರಾಷ್ಟ್ರೀಯ ಸಮಗ್ರತೆ ಮತ್ತು ದೇಶಪ್ರೇಮಕ್ಕಾಗಿ ಪ್ರಮಾಣ ವಚನ ಸ್ವೀಕಾರ, ಕ್ಯಾಂಪಸ್ ಸ್ವಚ್ಛತೆ, ರಕ್ತದಾನ, ಶಹೀದ್ ಭಗತ್ ಸಿಂಗ್ ಮತ್ತು ಇತರ ಕ್ರಾಂತಿಕಾರಿಗಳ ಕುರಿತು ಭಾಷಣ ಮತ್ತು ರಾಷ್ಟ್ರೀಯತೆಗೆ ಅವರ ಕೊಡುಗೆಗಳು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳ ಸ್ವಚ್ಛತೆ, ವರ್ಣಚಿತ್ರಗಳು ಮತ್ತು ಪೋಸ್ಟರ್‌ಗಳ ತಯಾರಿಕೆ, ವೆಬಿನಾರ್ ಮತ್ತು ಆನ್‌ಲೈನ್ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. 5,22,588 ಸ್ವಯಂಸೇವಕರಿಗೆ ರಾಷ್ಟ್ರೀಯ ಸಮಗ್ತೆ ಮತ್ತು ದೇಶಭಕ್ತಿಯ ಪ್ರತಿಜ್ಞೆ ಬೋಧಿಸಲಾಯಿತು.

ಕೆಲವೆಡೆ ದೇಶಭಕ್ತಿ ಗೀತೆಗಳ ಸ್ಪರ್ಧೆಗಳು, ಪ್ರೇರಕ ಕವಿತೆಗಳು ಮತ್ತು ಕ್ರಾಂತಿಕಾರಿ ಮೌಲ್ಯ ಮತ್ತು ಧೈರ್ಯದ ಕುರಿತು ಸಂವಾದಗಳನ್ನು ಆಯೋಜಿಸಲಾಯಿತು. ಆನ್‌ಲೈನ್ ಮತ್ತು ಆಫ್‌ಲೈನ್ ಕಾರ್ಯಕ್ರಮಗಳಲ್ಲಿ ಒಟ್ಟು 9,31,933 ಸ್ವಯಂಸೇವಕರು ಮತ್ತು ಇತರ ಯುವಕರು ಭಾಗವಹಿಸಿದ್ದರು.

https://static.pib.gov.in/WriteReadData/userfiles/image/55OQ6M.jpghttps://static.pib.gov.in/WriteReadData/userfiles/image/5619QE.jpg

 

Related links:

https://pib.gov.in/PressReleasePage.aspx?PRID=1859315

https://pib.gov.in/PressReleasePage.aspx?PRID=1850311

https://pib.gov.in/PressReleasePage.aspx?PRID=1872786

https://pib.gov.in/PressReleasePage.aspx?PRID=1869161

https://pib.gov.in/PressReleasePage.aspx?PRID=1872301

https://pib.gov.in/PressReleasePage.aspx?PRID=1864221

 

******



(Release ID: 1887159) Visitor Counter : 214


Read this release in: English , Marathi