ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಎನ್ಇಎಸ್ಟಿಎಸ್ ಭವಿಷ್ಯದ ಇಂಜಿನಿಯರ್ ಕಾರ್ಯಕ್ರಮದ ಅಂಗವಾಗಿ  ಇಎಂಆರ್ಎಸ್ ಶಾಲೆಗಳ ಶಿಕ್ಷಕರಿಗೆ ಎರಡು ದಿನಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಕ್ಕಾಗಿ ಅಮೆಜಾನ್ ಜೊತೆ ಪಾಲುದಾರಿಕೆ ಹೊಂದಿದೆ


ಎನ್ಇಎಸ್ಟಿಎಸ್ ಮತ್ತು ಅಮೆಜಾನ್ ನಡುವಿನ ಸಹಯೋಗವು ಡಿಜಿಟಲ್ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಬಲಗೊಳಿಸುತ್ತದೆ: ಶ್ರೀ ಅರ್ಜುನ್ ಮುಂಡಾ

Posted On: 28 DEC 2022 4:20PM by PIB Bengaluru

ಮುಖ್ಯಾಂಶಗಳು:

•  ಎರಡು ದಿನಗಳ ಮುಖಾಮುಖಿ ತರಬೇತಿ ಕಾರ್ಯಾಗಾರವನ್ನು 28 ಮತ್ತು 29 ಡಿಸೆಂಬರ್, 2022ರಂದು 6 ರಾಜ್ಯಗಳ 54  ಏಕಲವ್ಯ ಮಾದರಿ ವಸತಿ ಶಾಲೆಗಳ (ಇಎಂಆರ್ಎಸ್) ಶಿಕ್ಷಕರಿಗಾಗಿ ಆಯೋಜಿಸಲಾಗಿದೆ. 
• ತರಬೇತಿ ಕಾರ್ಯಾಗಾರವು ಬುಡಕಟ್ಟು ಮತ್ತು ಇತರ ಸಮುದಾಯಗಳಿಗೆ ಕಂಪ್ಯೂಟರ್ ವಿಜ್ಞಾನದ ಶಿಕ್ಷಣದ ಆರಂಭಿಕ ಪ್ರವೇಶದ ಕುರಿತು ಸಂಕ್ಷಿಪ್ತವಾಗಿ ಒಳಗೊಂಡಿರುತ್ತದೆ, ಇದು ಡೇಟಾ-ಕೋಡಿಂಗ್ ಕೌಶಲ್ಯಗಳವರೆಗೆ ಸರಳವಾದ ಕಂಪ್ಯೂಟೇಶನಲ್ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತದೆ.

ಬುಡಕಟ್ಟು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು (ಎನ್ಇಎಸ್ಟಿಎಸ್) ಅಮೆಜಾನ್ ಫ್ಯೂಚರ್ ಇಂಜಿನಿಯರ್ ಪ್ರೋಗ್ರಾಂ (ಸಿಎಸ್ಆರ್  ಪ್ರೋಗ್ರಾಂ) ಅನ್ನು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ (ಎಲ್ಎಲ್ಎಫ್) ಸಹಯೋಗದೊಂದಿಗೆ ಇಎಂಆರ್ಎಸ್ ಶಿಕ್ಷಕರಿಗೆ ಎರಡು ದಿನಗಳ ಮುಖಾಮುಖಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಈ ಸಂದರ್ಭದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಅರ್ಜುನ್ ಮುಂಡಾ ಮಾತನಾಡಿ ಎನ್ಇಎಸ್ ಟಿಎಸ್ ಮತ್ತು ಅಮೆಜಾನ್ ನಡುವಿನ ಸಹಯೋಗವು ಡಿಜಿಟಲ್ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಬಲಗೊಳಿಸುತ್ತದೆ. ಪ್ರಸ್ತುತ ದಶಕದಲ್ಲಿ ಈ ಉಪಕ್ರಮವು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರೊಂದಿಗೆ ಡಿಜಿಟಲ್ ಸಂವಹನವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮದಿಂದ ಇಎಂಆರ್ಎಸ್ನ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು. "ಭವಿಷ್ಯದ ಇಂಜಿನಿಯರ್ ಕಾರ್ಯಕ್ರಮವು ಇಎಮ್ಆರ್ಎಸ್ಗಳ ಬುಡಕಟ್ಟು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವು ಮೂಡಿಸುವಲ್ಲಿ ಒಂದು ಮೆಟ್ಟಿಲಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳಿದರು.

 

ಹಂತ 1 ರಲ್ಲಿ, ಎರಡು ದಿನಗಳ ಮುಖಾಮುಖಿ ತರಬೇತಿ ಕಾರ್ಯಾಗಾರವನ್ನು 28 ಮತ್ತು 29 ಡಿಸೆಂಬರ್ 2022ರಂದು ನವದೆಹಲಿಯ ವೈಎಂಸಿಎ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ ಮತ್ತು ತೆಲಂಗಾಣ ಮುಂತಾದ 6 ರಾಜ್ಯಗಳಾದ್ಯಂತ ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಡಿಜಿಟಲ್ ಮೂಲಸೌಕರ್ಯವನ್ನು ಹೊಂದಿರುವ ಶಾಲೆಗಳಲ್ಲಿ ಸುಮಾರು 54 ಇಎಂಆರ್ಎಸ್ಗಳಲ್ಲಿ ಅಮೆಜಾನ್ ಫ್ಯೂಚರ್ ಇಂಜಿನಿಯರ್ (ಎಎಫ್ಇ) ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ ಎನ್ನುವುದು ಒಂದು ಉದ್ದೇಶವಾಗಿದೆ. ಸ್ಥಿರ ಸಕ್ರಿಯ ಅಂತರ್ಜಾಲ ಸಂಪರ್ಕ. ಕೋರ್ಸ್ ಮಾಡ್ಯೂಲ್ಗಳು ಕಂಪ್ಯೂಟರ್ ಸೈನ್ಸ್ ಫಂಡಮೆಂಟಲ್ಸ್, ಕೋಡಿಂಗ್ ಪರಿಚಯ, ಲಾಜಿಕಲ್ ಸೀಕ್ವೆನ್ಸಿಂಗ್, ಲರ್ನಿಂಗ್ ಲೂಪ್ಗಳು, code.org ನಂತಹ ಮುಕ್ತ ಸುರಕ್ಷಿತ ಮೂಲ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಬ್ಲಾಕ್ ಪ್ರೋಗ್ರಾಮಿಂಗ್, ಟೆಕ್ ಸ್ಪೇಸ್, ವಿಭಿನ್ನ ಟೆಕ್ ಉಪಕ್ರಮಗಳು ಇತ್ಯಾದಿಗಳನ್ನು ಚರ್ಚಿಸಲು ಕ್ಲಾಸ್ ಚಾಟ್ ಸೆಷನ್ಗಳನ್ನು ಒಳಗೊಂಡಿರುತ್ತದೆ.

ಆಧುನಿಕ ಮಾಹಿತಿ ತಂತ್ರಜ್ಞಾನವು ಎಸ್ಟಿಇಎಂ  ಶಿಕ್ಷಣದಲ್ಲಿ ಭವಿಷ್ಯದ ವೃತ್ತಿಜೀವನಕ್ಕಾಗಿ ವಿದ್ಯಾರ್ಥಿಗಳ ಸನ್ನದ್ಧತೆಯನ್ನು ಮೊದಲೇ ಅರಿಯಲು ಮತ್ತು ಉತ್ತೇಜಿಸಲು ಅನುವು ಮಾಡಿಕೊಡುತ್ತದೆ. ಲರ್ನಿಂಗ್ ಲಿಂಕ್ಸ್ ಫೌಂಡೇಶನ್ (ಎಲ್ಎಲ್ಎಫ್)  ಎನ್ನುವುದು 'ಅಮೆಜಾನ್ ಫ್ಯೂಚರ್ ಇಂಜಿನಿಯರ್ ಪ್ರೋಗ್ರಾಂ' ಗಾಗಿ ಕೆಲಸ ಮಾಡುವ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದು ಇಎಂಆರ್ಎಸ್ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಂಪ್ಯೂಟೇಶನಲ್ ಕೌಶಲ್ಯ ತರಬೇತಿಯ ಕ್ಷೇತ್ರದಲ್ಲಿ ವಿಶಿಷ್ಟವಾಗಿದೆ.

ಇಎಂಆರ್ಎಸ್ ಶಿಕ್ಷಕರಿಗೆ ಉದ್ದೇಶಿತ ತರಬೇತಿ ಕಾರ್ಯಾಗಾರವು ಇಎಂಆರ್ಎಸ್ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಸೈನ್ಸ್ನ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಮತ್ತು ನಮ್ಮ ಶಾಲೆಗಳಲ್ಲಿ ಗುಣಮಟ್ಟದ ಮಾಹಿತಿ ತಂತ್ರಜ್ಞಾನ ಶಿಕ್ಷಣದ ಪ್ರವೇಶಕ್ಕೆ ಒಂದು ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ.

****



(Release ID: 1887096) Visitor Counter : 145