ಪ್ರಧಾನ ಮಂತ್ರಿಯವರ ಕಛೇರಿ

ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ವೀರ ಬಾಲ ದಿವಸ್' ಅಂಗವಾಗಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ  ಭಾಗಿಯಾದ ಪ್ರಧಾನ ಮಂತ್ರಿ 


"ವೀರ ಬಾಲ ದಿವಸ್ ರಾಷ್ಟ್ರಕ್ಕೆ ಹೊಸ ಆರಂಭದ ದಿನವಾಗಿದೆ"

"ವೀರ ಬಾಲ ದಿವಸ್ ವು ಭಾರತ ಎಂದರೇನು ಮತ್ತು ಅದರ ಅಸ್ಮಿತೆ ಏನು ಎಂಬುದನ್ನು ನಮಗೆ ತಿಳಿಸುತ್ತದೆ"

"ವೀರ ಬಾಲ ದಿವಸ್ ಹತ್ತು ಸಿಖ್ ಗುರುಗಳ ಅಪಾರ ಕೊಡುಗೆ ಮತ್ತು ರಾಷ್ಟ್ರದ ಗೌರವವನ್ನು ರಕ್ಷಿಸಲು ಸಿಖ್ ಸಂಪ್ರದಾಯದ ತ್ಯಾಗವನ್ನು ನೆನಪಿಸುತ್ತದೆ"

"ಶಾಹಿದಿ ಸಪ್ತಾಹ ಮತ್ತು ವೀರ ಬಾಲ ದಿವಸ ಕೇವಲ ಭಾವನೆಗಳ ಗುಚ್ಛವಲ್ಲ, ಆದರೆ ಅಪರಿಮಿತ ಸ್ಫೂರ್ತಿಯ ಮೂಲವಾಗಿದೆ"

"ಒಂದೆಡೆ ಭಯೋತ್ಪಾದನೆ ಮತ್ತು ಧಾರ್ಮಿಕ ಮತಾಂಧತೆಯ ಉತ್ತುಂಗ, ಮತ್ತೊಂದೆಡೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೇವರನ್ನು ಕಾಣಲು ಆಧ್ಯಾತ್ಮಿಕತೆ ಮತ್ತು ದಯೆಯ ಪರಾಕಾಷ್ಠೆ ಇದೆ"

"ಅಂತಹ ಭವ್ಯವಾದ ಇತಿಹಾಸವನ್ನು ಹೊಂದಿರುವ ಯಾವುದೇ ದೇಶವು ಆತ್ಮವಿಶ್ವಾಸ ಮತ್ತು ಆತ್ಮಗೌರವದಿಂದ ತುಂಬಿರಬೇಕು, ಆದಾಗ್ಯೂ ಕೀಳರಿಮೆಯನ್ನು ತುಂಬಲು ಕಪೋಲಕಲ್ಪಿತ ನಿರೂಪಣೆಗಳನ್ನು ಬೋಧಿಸಲಾಗಿದೆ"

"ಮುಂದೆ ಸಾಗಲು ಭೂತಕಾಲದ ಸಂಕುಚಿತ ವ್ಯಾಖ್ಯಾನದಿಂದ ಮುಕ್ತವಾಗುವ ಅಗತ್ಯವಿದೆ"

"ವೀರ ಬಾಲ ದಿವಸ್ ಪಂಚ ಪ್ರಾಣಗಳಿಗೆ ಜೀವಸೆಲೆಯಂತೆ"

"ಸಿಖ್ ಗುರು ಪರಂಪರೆ ಏಕ ಭಾರತ ಶ್ರೇಷ್ಠ ಭಾರತದ ಪರಿಕಲ್ಪನೆಗೆ ಸ್ಫೂರ್ತಿಯ ಸೆಲೆಯಾಗಿದೆ"

" ಗುರು ಗೋವಿಂದ್ ಸಿಂಗ್ ಜೀ ಅವರ 'ರಾಷ್ಟ್ರ

Posted On: 26 DEC 2022 2:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ವೀರ ಬಾಲ ದಿವಸ್' ಅಂಗವಾಗಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಸುಮಾರು ಮುನ್ನೂರು ಬಾಲ ಕೀರ್ತನಿಗಳು ಪ್ರದರ್ಶಿಸಿದ 'ಶಬಾದ್ ಕೀರ್ತನೆ'ಯಲ್ಲಿ ಭಾಗವಹಿಸಿದ್ದರು. ಈ ಮಹತ್ವದ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಮೂರು ಸಾವಿರ ಮಕ್ಕಳ ಪಥಸಂಚಲನಕ್ಕೂ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು.

ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರ ಪ್ರಕಾಶ್ ಪೂರಬ್ ದಿನವಾದ 2022ರ ಜನವರಿ 9 ರಂದು, ಪ್ರಧಾನಮಂತ್ರಿಯವರು, ಶ್ರೀ ಗುರು ಗೋವಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್ಜಾದಾಸ್ ಬಾಬಾ ಜೊರಾವರ್ ಸಿಂಗ್ ಜಿ ಮತ್ತು ಬಾಬಾ ಫತೇಹ್ ಸಿಂಗ್ ಜೀ ಅವರು ಹುತಾತ್ಮರಾದ ದಿನದ ಸ್ಮರಣಾರ್ಥ ಡಿಸೆಂಬರ್ 26 ಅನ್ನು 'ವೀರ ಬಾಲ ದಿವಸ' ಎಂದು ಆಚರಿಸಲಾಗುವುದು ಎಂದು ಘೋಷಿಸಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ಇಂದು ಮೊದಲ ವೀರ ಬಾಲ ದಿವಸವನ್ನು ಆಚರಿಸುತ್ತಿದೆ ಎಂದು ಹೇಳಿದರು. ಈ ಹಿಂದೆ ಮಾಡಲಾದ ತ್ಯಾಗಕ್ಕಾಗಿ ನಾವೆಲ್ಲರೂ ತಲೆ ಬಾಗಲು ಒಗ್ಗೂಡಿರುವ ಇದು ರಾಷ್ಟ್ರಕ್ಕೆ ಹೊಸ ಆರಂಭದ ದಿನವಾಗಿದೆ. "ಶಾಹೀದಿ ಸಪ್ತಾಹ ಮತ್ತು ವೀರ ಬಾಲ ದಿವಸ ಕೇವಲ ಭಾವನೆಗಳ ಗುಚ್ಛವಲ್ಲ, ಅನಂತ ಸ್ಫೂರ್ತಿಯ ಮೂಲವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ತೀವ್ರ ಶೌರ್ಯ ಮತ್ತು ತ್ಯಾಗದ ವಿಷಯಕ್ಕೆ ಬಂದಾಗ ವಯಸ್ಸು ಮುಖ್ಯವಲ್ಲ ಎಂಬುದನ್ನು ವೀರ ಬಾಲ ದಿವಸ ನಮಗೆ ನೆನಪಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ವೀರ ಬಾಲ ದಿವಸ ಹತ್ತು ಸಿಖ್ ಗುರುಗಳ ಅಪಾರ ಕೊಡುಗೆ ಮತ್ತು ರಾಷ್ಟ್ರದ ಗೌರವವನ್ನು ರಕ್ಷಿಸಲು ಸಿಖ್ ಸಂಪ್ರದಾಯದ ತ್ಯಾಗವನ್ನು ನೆನಪಿಸುತ್ತದೆ. "ವೀರ ಬಾಲ ದಿವಸ ಭಾರತ ಎಂದರೇನು ಮತ್ತು ಅದರ ಅಸ್ಮಿತೆ ಏನು ಎಂಬುದನ್ನು ನಮಗೆ ತಿಳಿಸುತ್ತದೆ ಮತ್ತು ವೀರ ಬಾಲ ದಿವಸ ಪ್ರತಿ ವರ್ಷ, ನಮ್ಮ ಭೂತಕಾಲವನ್ನು ಗುರುತಿಸಲು ಮತ್ತು ನಮ್ಮ ಭವಿಷ್ಯವನ್ನು ರೂಪಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಇದು ನಮ್ಮ ಯುವ ಪೀಳಿಗೆಯ ಶಕ್ತಿಯ ಬಗ್ಗೆ ಪ್ರತಿಯೊಬ್ಬರಿಗೂ ನೆನಪಿಸುತ್ತದೆ", ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿಯವರು ವೀರ ಸಾಹೇಬ್ ಜಾದೆಗಳು, ಗುರುಗಳು ಮತ್ತು ಮಾತಾ ಗುರ್ಜರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. "ಡಿಸೆಂಬರ್ 26 ರಂದು ವೀರ ಬಾಲ ದಿವಸ ಎಂದು ಘೋಷಿಸಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಸರ್ಕಾರದ ಸೌಭಾಗ್ಯ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.

ವಿಶ್ವದ ಸಾವಿರ ವರ್ಷಗಳಷ್ಟು ಹಳೆಯದಾದ ಇತಿಹಾಸವು ಭಯಾನಕ ಕ್ರೌರ್ಯದ ಅಧ್ಯಾಯಗಳಿಂದ ತುಂಬಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ನಾವು ಎಲ್ಲಿಯೇ ಕ್ರೌರ್ಯದ ಹಿಂಸಾತ್ಮಕ ಮುಖಗಳನ್ನು ಕಂಡರೂ, ನಮ್ಮ ವೀರರ ಪಾತ್ರ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಚಮಕೌರ್ ಮತ್ತು ಸಿರ್ಹಿಂದ್ ಯುದ್ಧಗಳಲ್ಲಿ ಏವೆಲ್ಲಾ ನಡೆದಿದೆಯೋ ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಸ್ಮರಿಸಿದರು. ಈ ಘಟನೆಗಳು ಕೇವಲ ಮೂರು ಶತಮಾನಗಳ ಹಿಂದೆ ಈ ನೆಲದ ಮಣ್ಣಿನಲ್ಲಿ ಸಂಭವಿಸಿವೆ ಎಂದು ಅವರು ಹೇಳಿದರು. "ಒಂದೆಡೆ ಧಾರ್ಮಿಕ ಮತಾಂಧತೆಯಿಂದ ಕುರುಡಾಗಿದ್ದ ಪ್ರಬಲ ಮೊಘಲ್ ಸುಲ್ತಾನರು ಇದ್ದರು, ಮತ್ತೊಂದೆಡೆ ನಮ್ಮ ಗುರುಗಳು ಭಾರತದ ಪ್ರಾಚೀನ ತತ್ವಗಳಿಗೆ ಅನುಗುಣವಾಗಿ ಜ್ಞಾನದಲ್ಲಿ ಮಿನುಗುತ್ತಿದ್ದರು ಮತ್ತು ಬದುಕುತ್ತಿದ್ದರು", ಎಂದೂ ಪ್ರಧಾನಮಂತ್ರಿ ಹೇಳಿದರು, "ಒಂದು ಕಡೆ ಭಯೋತ್ಪಾದನೆ ಮತ್ತು ಧಾರ್ಮಿಕ ಮತಾಂಧತೆಯ ಉತ್ತುಂಗವಿತ್ತು, ಮತ್ತೊಂದೆಡೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೇವರನ್ನು ಕಾಣುವ ಆಧ್ಯಾತ್ಮಿಕತೆ ಮತ್ತು ದಯೆಯ ಪರಾಕಾಷ್ಠೆ ಇತ್ತು. ಇದೆಲ್ಲದರ ನಡುವೆ, ಮೊಘಲರು ಲಕ್ಷಾಂತರ ಜನರ ಸೈನ್ಯವನ್ನು ಹೊಂದಿದ್ದರೆ, ಗುರುಗಳ ವೀರ್ ಸಾಹೇಬ್ಜಾದೆಗಳು ತಮ್ಮ ಧೈರ್ಯವನ್ನು ಮೆರೆದಿದ್ದರು ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಒಬ್ಬಂಟಿಯಾಗಿದ್ದರೂ ಅವರು ಮೊಘಲರರಿಗೆ ತಲೆಬಾಗಲಿಲ್ಲ. ಈ ಸಮಯದಲ್ಲಿ ಮೊಘಲರು ಅವರನ್ನು ಜೀವಂತವಾಗಿ ಸುತ್ತುವರಿದಿದ್ದರು. ಅವರ ಶೌರ್ಯವೇ ಶತಮಾನಗಳಿಂದ ಸ್ಫೂರ್ತಿಯ ಮೂಲವಾಗಿದೆ.

ಅಂತಹ ಭವ್ಯ ಇತಿಹಾಸವನ್ನು ಹೊಂದಿರುವ ಯಾವುದೇ ದೇಶವು ಆತ್ಮವಿಶ್ವಾಸ ಮತ್ತು ಆತ್ಮಗೌರವದಿಂದ ತುಂಬಿರಬೇಕು ಎಂದು ಹೇಳಿದ ಪ್ರಧಾನಮಂತ್ರಿಯವರು, ಆದಾಗ್ಯೂ, ಕಪೋಲಕಲ್ಪಿತ ಕಥನಗಳನ್ನು ಕಲಿಸಲಾಗಿದೆ ಎಂದು ವಿಷಾದಿಸಿದರು. ಇದು ದೇಶದಲ್ಲಿ ಕೀಳರಿಮೆಯ ಭಾವನೆಯನ್ನು ಉಂಟುಮಾಡಿತು. ಇದರ ಹೊರತಾಗಿಯೂ ಸ್ಥಳೀಯ ಸಂಪ್ರದಾಯಗಳು ಮತ್ತು ಸಮಾಜವು ಈ ವೈಭವದ ಗಾಥೆಗಳನ್ನು ಜೀವಂತವಾಗಿಟ್ಟಿದೆ. ನಾವು ಮುಂದೆ ಸಾಗಲು ಗತಕಾಲದ ಸಂಕುಚಿತ ವ್ಯಾಖ್ಯಾನದಿಂದ ಮುಕ್ತರಾಗುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅದಕ್ಕಾಗಿಯೇ, ಆಜಾದಿ ಕಾ ಅಮೃತ ಕಾಲದಲ್ಲಿ ಗುಲಾಮಿ ಮನಃಸ್ಥಿತಿಯ ಎಲ್ಲಾ ಕುರುಹುಗಳನ್ನು ತೆಗೆದುಹಾಕುವ ಪ್ರತಿಜ್ಞೆಯನ್ನು ದೇಶವು ತೆಗೆದುಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ವೀರ ಬಾಲ ದಿವಸ ಪಂಚ ಪ್ರಾಣಗಳಿಗೆ ಜೀವಸೆಲೆ ಇದ್ದಂತೆ", ಎಂದು ಪ್ರಧಾನಮಂತ್ರಿ ಹೇಳಿದರು.
ಯುವಪೀಳಿಗೆಯು ಕ್ರೌರ್ಯಕ್ಕೆ ಸಿಲುಕಲು ಸಿದ್ಧರಿಲ್ಲ ಮತ್ತು ದೇಶದ ನೈತಿಕ ಸ್ಥೈರ್ಯವನ್ನು ರಕ್ಷಿಸಲು ದೃಢವಾಗಿ ನಿಂತಿದೆ ಎಂಬುದನ್ನು ಔರಂಗಜೇಬ ಮತ್ತು ಅವನ ಜನರ ದಬ್ಬಾಳಿಕೆಯ ವಿರುದ್ಧ ತೋರಿದ ವೀರ್ ಸಾಹೇಬ್ ಜಾದೆ ಅವರ ದೃಢ ಸಂಕಲ್ಪ ಮತ್ತು ಶೌರ್ಯದ ಮಹತ್ವವನ್ನು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು. ಇದು ಒಂದು ರಾಷ್ಟ್ರದ ಭವಿಷ್ಯದಲ್ಲಿ ಯುವ ಪೀಳಿಗೆಯ ಪಾತ್ರವನ್ನು ಪ್ರತಿಪಾದಿಸುತ್ತದೆ. ಇಂದಿನ ಯುವ ಪೀಳಿಗೆ ಕೂಡ ಭಾರತವನ್ನು ಅದೇ ದೃಢಸಂಕಲ್ಪದೊಂದಿಗೆ ಮುನ್ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದು ಪ್ರತಿ ವರ್ಷ ಡಿಸೆಂಬರ್ 26 ರಂದು ವೀರ ಬಾಲ ದಿವಸ ಈ ಪಾತ್ರವನ್ನು ಹೆಚ್ಚು ಮುಖ್ಯವಾಗಿಸುತ್ತದೆ ಎಂದು ಅವರು ಹೇಳಿದರು.

ಸಿಖ್ ಗುರು ಪರಂಪರೆಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, ಇದು ಕೇವಲ ಆಧ್ಯಾತ್ಮಿಕತೆ ಮತ್ತು ತ್ಯಾಗದ ಸಂಪ್ರದಾಯ ಮಾತ್ರವಲ್ಲ, ಏಕ ಭಾರತ ಶ್ರೇಷ್ಠ ಭಾರತದ ಪರಿಕಲ್ಪನೆಗೆ ಸ್ಫೂರ್ತಿಯ ಸೆಲೆಯೂ ಆಗಿದೆ ಎಂದರು. ಇದಕ್ಕೆ ದೊಡ್ಡ ಉದಾಹರಣೆಯೆಂದರೆ ಶ್ರೀ ಗುರು ಗ್ರಂಥ ಸಾಹಿಬ್ ನ ವಿಶ್ವಮಾನವ ಮತ್ತು ಅಂತರ್ಗತ ಗುಣಲಕ್ಷಣವಾಗಿದ್ದು, ಅಲ್ಲಿ ಭಾರತದಾದ್ಯಂತದ ಸಂತರ ಬೋಧನೆಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲಾಗಿದೆ. ಗುರು ಗೋವಿಂದ್ ಸಿಂಗ್ ಜೀ ಅವರ ಜೀವನ ಪಯಣವೂ ಈ ಲಕ್ಷಣಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 'ಪಂಚ ಪ್ಯಾರೆ' ದೇಶದ ಎಲ್ಲಾ ಭಾಗಗಳಿಂದ ಬಂದಿದೆ ಎಂಬ ಅಂಶವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಮೂಲ ಪಂಚ ಪ್ಯಾರೆಗಳಲ್ಲಿ ಒಂದು ದ್ವಾರಕಾದಿಂದ ಬಂದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

"'ರಾಷ್ಟ್ರ ಪ್ರಥಮ'ದ ನಿರ್ಣಯವು ಗುರು ಗೋವಿಂದ್ ಸಿಂಗ್ ಜೀ ಅವರ ಅಚಲ ಸಂಕಲ್ಪವಾಗಿತ್ತು" ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀ ಮೋದಿ ಅವರ ಕುಟುಂಬದ ಅಪಾರ ವೈಯಕ್ತಿಕ ತ್ಯಾಗವನ್ನು ಸ್ಮರಿಸುವ ಮೂಲಕ ಈ ಅಂಶವನ್ನು ಪುಷ್ಟೀಕರಿಸಿದರು. "ರಾಷ್ಟ್ರ ಮೊದಲು ಎಂಬ ಈ ಸಂಪ್ರದಾಯವು ನಮಗೆ ದೊಡ್ಡ ಸ್ಫೂರ್ತಿಯಾಗಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಭಾರತದ ಮುಂದಿನ ಪೀಳಿಗೆಯ ಭವಿಷ್ಯವು ಅವರ ಸ್ಫೂರ್ತಿಯ ಮೂಲವನ್ನು ಅವಲಂಬಿಸಿರುತ್ತದೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. ಭರತ, ಭಕ್ತ ಪ್ರುಹ್ಲಾದ, ನಚಿಕೇತ ಮತ್ತು ಧ್ರುವ, ಬಾಲರಾಮ, ಲವ-ಕುಶ ಮತ್ತು ಬಾಲ ಕೃಷ್ಣರಂತಹ ಮಕ್ಕಳನ್ನು ಪ್ರೇರೇಪಿಸುವ ಅಸಂಖ್ಯಾತ ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪ್ರಾಚೀನ ಕಾಲದಿಂದ ಆಧುನಿಕ ಯುಗದವರೆಗೆ ಧೈರ್ಯಶಾಲಿ ಬಾಲಕರು ಮತ್ತು ಬಾಲಕಿಯರು ಭಾರತದ ಶೌರ್ಯದ ಪ್ರತಿಬಿಂಬವಾಗಿದ್ದಾರೆ ಎಂದರು.

ದೀರ್ಘಕಾಲದಿಂದ ಕಳೆದುಹೋದ ತನ್ನ ಪರಂಪರೆಯನ್ನು ನವ ಭಾರತ ಪುನಃಸ್ಥಾಪಿಸುವ ಮೂಲಕ ಹಿಂದಿನ ದಶಕಗಳ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ವಿಶ್ವಾಸದಿಂದ ಹೇಳಿದರು. ಯಾವುದೇ ದೇಶವನ್ನು ಅದರ ತತ್ವಗಳಿಂದ ಗುರುತಿಸಲಾಗುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಒಂದು ರಾಷ್ಟ್ರದ ಮೂಲ ಮೌಲ್ಯಗಳು ಪರಿವರ್ತನೆಯ ಮೂಲಕ ಸಾಗಿದಾಗ, ರಾಷ್ಟ್ರದ ಭವಿಷ್ಯವು ಕಾಲದೊಂದಿಗೆ ಬದಲಾಗುತ್ತದೆ ಎಂದು ಒತ್ತಿ ಹೇಳಿದರು. ಇಂದಿನ ಪೀಳಿಗೆಗೆ ಈ ನೆಲದ ಇತಿಹಾಸದ ಬಗ್ಗೆ ಸ್ಪಷ್ಟತೆ ಇದ್ದಾಗ ಮಾತ್ರ ರಾಷ್ಟ್ರದ ಮೌಲ್ಯಗಳನ್ನು ಉಳಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು. "ಯುವಕರು ಸದಾ ಕಲಿಯಲು ಮತ್ತು ಸ್ಫೂರ್ತಿಯನ್ನು ಕಂಡುಕೊಳ್ಳಲು ಆದರ್ಶ ವ್ಯಕ್ತಿಯನ್ನು ಹುಡುಕುತ್ತಾರೆ. ಈ ಕಾರಣಕ್ಕಾಗಿಯೇ ನಾವು ಭಗವಾನ್ ರಾಮನ ಆದರ್ಶಗಳನ್ನು ನಂಬುತ್ತೇವೆ, ಗೌತಮ ಬುದ್ಧ ಮತ್ತು ಭಗವಾನ್ ಮಹಾವೀರರಿಂದ ಸ್ಫೂರ್ತಿ ಪಡೆಯುತ್ತೇವೆ ಮತ್ತು ಗುರುನಾನಕ್ ದೇವ್ ಜೀ ಅವರ ಮಾತುಗಳ ಮೂಲಕ ಬದುಕಲು ಪ್ರಯತ್ನಿಸುತ್ತೇವೆ, ಜೊತೆಗೆ ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ವೀರ ಶಿವಾಜಿ ಅವರ ಮಾರ್ಗಗಳನ್ನು ಸಹ ಅಧ್ಯಯನ ಮಾಡುತ್ತೇವೆ", ಎಂದು ಪ್ರಧಾನಮಂತ್ರಿ ಹೇಳಿದರು. ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ನಂಬಿಕೆಯಿಟ್ಟಿರುವ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ನಮ್ಮ ನೆಲದ ಪೂರ್ವಜರು ಹಬ್ಬಗಳು ಮತ್ತು ನಂಬಿಕೆಗಳೊಂದಿಗೆ ಸಂಬಂಧ ಹೊಂದಿರುವ ಭಾರತೀಯ ಸಂಸ್ಕೃತಿಗೆ ಒಂದು ಸ್ವರೂಪ ನೀಡಿದ್ದಾರೆ ಎಂದು ಹೇಳಿದರು. ನಾವು ಆ ಪ್ರಜ್ಞೆಯನ್ನು ಶಾಶ್ವತಗೊಳಿಸಬೇಕಾಗಿದೆ ಮತ್ತು ಅದಕ್ಕಾಗಿಯೇ ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶವು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ವೈಭವವನ್ನು ಪುನರುಜ್ಜೀವಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿಯೊಬ್ಬ ವ್ಯಕ್ತಿಗೂ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರು ಮತ್ತು ಬುಡಕಟ್ಟು ಸಮುದಾಯದ ಕೊಡುಗೆಯನ್ನು ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ವೀರ ಬಾಲ ದಿವಸಕ್ಕಾಗಿ ಆಯೋಜಿಸಲಾದ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳಲ್ಲಿ ದೇಶದ ಪ್ರತಿಯೊಂದು ಭಾಗದಿಂದ ಅಪಾರ ಭಾಗವಹಿಸುವಿಕೆಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ವೀರ ಸಾಹೇಬ್ ಜಾದಾಗಳ ಜೀವನದ ಸಂದೇಶವನ್ನು ಪೂರ್ಣ ಸಂಕಲ್ಪದೊಂದಿಗೆ ವಿಶ್ವಕ್ಕೆ ತಲುಪಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದರು.

ಪಂಜಾಬ್ ಮುಖ್ಯಮಂತ್ರಿ ಶ್ರೀ ಭಗವಂತ್ ಮಾನ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಚಿವರುಗಳಾದ ಶ್ರೀ ಹರ್ದೀಪ್ ಸಿಂಗ್ ಪುರಿ, ಶ್ರೀ ಅರ್ಜುನ್ ರಾಮ್ ಮೇಘವಾಲ್, ಶ್ರೀಮತಿ ಮೀನಾಕ್ಷಿ ಲೇಖಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಸಾಹೇಬ್ ಜಾದಾರ ಅನುಕರಣೀಯ ಶೌರ್ಯದ ಗಾಥೆಯನ್ನು ನಾಗರಿಕರಿಗೆ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ತಿಳಿಸಲು ಮತ್ತು ಶಿಕ್ಷಣ ನೀಡಲು ಸರ್ಕಾರವು ದೇಶಾದ್ಯಂತ ಸಂವಾದಾತ್ಮಕ ಮತ್ತು ಭಾಗವಹಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಪ್ರಯತ್ನದಲ್ಲಿ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳು ಮತ್ತು ಇತರ ಚಟುವಟಿಕೆಗಳನ್ನು ದೇಶಾದ್ಯಂತದ ಶಾಲಾ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ. ರೈಲ್ವೆ ನಿಲ್ದಾಣಗಳು, ಪೆಟ್ರೋಲ್ ಪಂಪ್ ಗಳು, ವಿಮಾನ ನಿಲ್ದಾಣಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಡಿಜಿಟಲ್ ವಸ್ತುಪ್ರದರ್ಶನಗಳನ್ನು ಸ್ಥಾಪಿಸಲಾಗುವುದು. ದೇಶಾದ್ಯಂತ, ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು, ಅಲ್ಲಿ ಗಣ್ಯರು ಸಾಹೇಬ್ ಜಾದಾರ ಜೀವನ ಗಾಥೆ ಮತ್ತು ತ್ಯಾಗವನ್ನು ವಿವರಿಸುತ್ತಾರೆ.

*****

 

 



(Release ID: 1886717) Visitor Counter : 185