ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಡಿಒಪಿಟಿ ಭಾರತ ಸರ್ಕಾರದ ಪ್ರಮುಖ ಮಾನವ ಸಂಪನ್ಮೂಲ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ : ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
ದೆಹಲಿಯ ಸಿಎಸ್ಒಐ ಸಭಾಂಗಣದಲ್ಲಿ ಉತ್ತಮ ಆಡಳಿತ ಸಪ್ತಾಹದ (19-25 ಡಿಸೆಂಬರ್ 2022) ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಸಚಿವರು
Posted On:
25 DEC 2022 5:34PM by PIB Bengaluru
* ಕಳೆದ 8 ವರ್ಷಗಳ ಮೋದಿ ಸರ್ಕಾರದಲ್ಲಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಸಿಬ್ಬಂದಿ ಮತ್ತು ಸಾಮಾನ್ಯ ಜನರ ಸೇವೆಗಾಗಿ ಸಮರ್ಪಿತವಾದ "ಸಗಮಗೊಳಿಸುವ ಸಚಿವಾಲಯ" ವಾಗಿ ಮಾರ್ಪಟ್ಟಿದೆ.
* ಡಾ. ಜಿತೇಂದ್ರ ಸಿಂಗ್ ಅವರು ಪರಿಷ್ಕೃತ ಇ-ಎಚ್.ಆರ್.ಎಂ.ಎಸ್ 2.0 ಪೋರ್ಟಲ್ ಗೆ ಚಾಲನೆ ನೀಡಿದರು, ಇದು ಉದ್ಯೋಗಿಗಳಿಗೆ ಡಿಜಿಟಲ್ ವಿಧಾನದಲ್ಲಿ ಈ ಕೆಳಗಿನ ಸೇವೆಗಳನ್ನು - ವರ್ಗಾವಣೆಗಳು (ಆವರ್ತನ / ಪರಸ್ಪರ), ನಿಯೋಜನೆ, ಎಪಿಎಆರ್, ಐಪಿಆರ್, ಐಜಿಒಟಿ ತರಬೇತಿಗಳು, ವಿಚಕ್ಷಣಾ ಸ್ಥಿತಿ, ನಿಯೋಜನೆ ಅವಕಾಶಗಳು, ಸೇವಾ ಪುಸ್ತಕ ಮತ್ತು ಇತರ ಮೂಲಭೂತ ಮಾನವ ಸಂಪನ್ಮೂಲ ಸೇವೆಗಳು ಅಂದರೆ, ರಜೆ, ಪ್ರವಾಸ, ಮರುಪಾವತಿಯೇ ಮೊದಲಾದವನ್ನು ಒದಗಿಸುತ್ತದೆ.
* 78 ಮಾಸ್ಟರ್ ಸುತ್ತೋಲೆಗಳ ಸಂಕಲನವು ಸುಗಮ ಮತ್ತು ಅನುಕೂಲತೆಯನ್ನು ಉತ್ತೇಜಿಸುತ್ತದೆ ಮತ್ತು ಬಳಕೆದಾರ ಇಲಾಖೆಗಳು ತಮ್ಮ ಮಾನವ ಸಂಪನ್ಮೂಲ ಸಮಸ್ಯೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ; ಭೂ ವಿಜ್ಞಾನಗಳ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ; ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ಡಿಒಪಿಟಿ ಭಾರತ ಸರ್ಕಾರದ ಪ್ರಮುಖ ಮಾನವ ಸಂಪನ್ಮೂಲ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
ಸಿಎಸ್ಒಐ ಸಭಾಂಗಣದಲ್ಲಿಂದು ನಡೆದ ಉತ್ತಮ ಆಡಳಿತ ಸಪ್ತಾಹದ (19-25 ಡಿಸೆಂಬರ್ 2022) ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಡಾ.ಜಿತೇಂದ್ರ ಸಿಂಗ್, ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಸಿಬ್ಬಂದಿ ಮತ್ತು ಶ್ರೀಸಾಮಾನ್ಯರ ಸೇವೆಗಾಗಿ ಸಮರ್ಪಿತವಾದ "ಸುಗಮ ಸೇವಾ ಸಚಿವಾಲಯ" ವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ಕಳೆದ 8 ವರ್ಷಗಳಲ್ಲಿ ಡಿಒಪಿಟಿ, ಪಿಂಚಣಿ ಇಲಾಖೆ ಮತ್ತು ಎಆರ್.ಪಿ.ಜಿ ಕೈಗೊಂಡ ಪರಿವರ್ತನಾತ್ಮಕ ಸುಧಾರಣೆಗಳು ಪಾರದರ್ಶಕತೆ ಹೆಚ್ಚಿಸಿವೆ, ಉತ್ತರದಾಯಿತ್ವ ಹೆಚ್ಚಿಸಿವೆ ಮತ್ತು ಪ್ರಧಾನಮಂತ್ರಿಯವರ "ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ" ಮಂತ್ರದ ಅಂತಿಮ ಗುರಿಯನ್ನು ಅನುಸರಿಸಲು ತಂತ್ರಜ್ಞಾನ ಚಾಲಿತ ಬದಲಾವಣೆಗಳನ್ನು ಡ್ಯಾಶ್ ಬೋರ್ಡ್ ಕಾರ್ಯವಿಧಾನದ ಮೂಲಕ ಟೈಮ್ ಲೈನ್ ನಿಂದ ರಿಯಲ್ ಟೈಮ್ (ಕಾಲನಿಗದಿಯಿಂದ ಸಕಾಲಕ್ಕೆ) ತಂದಿದೆ ಎಂದು ಡಾ. ಜಿತೇಂದ್ರ ಸಿಂಗ್ ಒತ್ತಿ ಹೇಳಿದರು.
ಉತ್ತಮ ಆಡಳಿತ ದಿನವಾಗಿ ಆಚರಿಸಲಾಗುತ್ತಿರುವ ಮಾಜಿ ಪ್ರಧಾನಮಂತ್ರಿ, ಭಾರತ ರತ್ನ, ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಡಾ. ಜಿತೇಂದ್ರ ಸಿಂಗ್, ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವಾಗ, ಮುಂದಿನ ವರ್ಷದಲ್ಲಿ ಜಾಗತಿಕ ಸಮಸ್ಯೆಗಳು ಮತ್ತು ಸವಾಲುಗಳ ಮೇಲೆ ಛಾಪು ಮೂಡಿಸಲು ಜಿ -20 ರ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವುದರಿಂದ ಈ ಕಾರ್ಯಕ್ರಮ ವಿಶೇಷವಾಗಿದೆ ಎಂದು ಹೇಳಿದರು.
ಕರ್ಮಯೋಗಿ ಅಭಿಯಾನ ಹೊಸ ಹಂತಕ್ಕೆ ಏರಿದ್ದು, ಈಗ ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಕಲಿಯಲು ಮತ್ತು ತೊಡಗಿಸಿಕೊಳ್ಳಲು ಮೊಬೈಲ್ ಆಪ್ ಗಳು ಲಭ್ಯವಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. 2022ರ ನವೆಂಬರ್ 22 ರಂದು ರೋಜ್ಗಾರ್ ಮೇಳದ 2ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ಕರ್ಮಯೋಗಿ ಪ್ರಾರಂಭ್ ಮಾದರಿಗೆ ಚಾಲನೆ ನೀಡಿದ ನಂತರ ಕರ್ಮಯೋಗಿ ಅಭಿಯಾನ ಕೂಡ ಮುಂದಿನ ಪೀಳಿಗೆಗೆ ಸ್ಥಳಾಂತರಗೊಂಡಿದೆ ಎಂದು ಅವರು ಗಮನಸೆಳೆದರು. ಸರ್ಕಾರಿ ಸೇವೆಗೆ ಹೊಸದಾಗಿ ಪ್ರವೇಶಿಸುವವರಿಗೆ ಪ್ರಾರಂಭ್ ಮಾದರಿ ಅಪಾರ ಸಹಾಯ ಮಾಡುತ್ತದೆ ಮತ್ತು ಭವಿಷ್ಯದ ಪಾತ್ರಕ್ಕೆ ಪರಿಪೂರ್ಣ ರೀತಿಯಲ್ಲಿ ತಯಾರಿ ನಡೆಸುತ್ತದೆ ಎಂದು ಸಚಿವರು ಹೇಳಿದರು.
ಡಿಒಪಿಟಿ ಕಾರ್ಯದರ್ಶಿ ಶ್ರೀಮತಿ ಎಸ್ ರಾಧಾ ಚೌಹಾಣ್ ಅವರು ತಮ್ಮ ಭಾಷಣದಲ್ಲಿ, ಎಲ್ಲಾ ಸರ್ಕಾರಿ ಉದ್ಯೋಗಗಳ ಮುಖ್ಯ ಉದ್ದೇಶವು ಸಾಮಾನ್ಯ ಜನರಿಗೆ ಸೇವೆಗಳನ್ನು ಸುಲಭವಾಗಿ ಮತ್ತು ಸಕಾಲದಲ್ಲಿ ತಲುಪಿಸುವುದಾಗಿದೆ ಎಂದು ಹೇಳಿದರು. ಬದ್ಧತೆಯಿಂದ ಮತ್ತು ಗುಣಾತ್ಮಕ ರೀತಿಯಲ್ಲಿ ಸೇವೆಗಳನ್ನು ನೀಡುವುದು ಎಲ್ಲಾ ನಾಗರಿಕ ಸೇವಕರ ಮಾರ್ಗದರ್ಶಿ ತತ್ವವಾಗಿ ಉಳಿಯಬೇಕು ಎಂದು ಅವರು ಹೇಳಿದರು. ಉತ್ತಮ ಆಡಳಿತ ದಿನ ಶ್ರೀಸಾಮಾನ್ಯರಿಗೆ "ಸುಗಮ ಜೀವನ"ವನ್ನು ನೀಡುವ ಈ ಉದಾತ್ತ ಸಂಕಲ್ಪವನ್ನು ಪುನರುಚ್ಚರಿಸುವ ಸಂದರ್ಭವೂ ಆಗಿದೆ ಎಂದು ಶ್ರೀಮತಿ ಚೌಹಾಣ್ ಹೇಳಿದರು.
ಡಿಎಆರ್.ಪಿಜಿಯ ಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ್ ಮಾತನಾಡಿ, ಉತ್ತಮ ಆಡಳಿತ ಸಪ್ತಾಹ 2022 ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವ ಎರಡನೇ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಸಾಕ್ಷಿಯಾಗಿದೆ ಎಂದರು. ಪ್ರಶಾಸನ್ ಗಾಂವ್ ಕಿ ಓರ್ 2022 ಗಮನಾರ್ಹ ಪ್ರಗತಿಗೆ ಸಾಕ್ಷಿಯಾಗಿದೆ - 50.79 ಲಕ್ಷ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ, 282 ಲಕ್ಷ ಸೇವಾ ವಿತರಣಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ, ಆಡಳಿತದಲ್ಲಿ 863 ನಾವೀನ್ಯತೆಗಳನ್ನು ದಾಖಲಿಸಲಾಗಿದೆ ಮತ್ತು 194 ಮುನ್ನೋಟ India@2047 ಜಿಲ್ಲಾ ಮಟ್ಟದ ದಾಖಲೆಗಳನ್ನು 2022 ರ ಡಿಸೆಂಬರ್ 24 ರವರೆಗೆ ಜಿಜಿಡಬ್ಲ್ಯೂ 22 ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಡಾ. ಜಿತೇಂದ್ರ ಸಿಂಗ್ ಅವರು ಪರಿಷ್ಕೃತ ಇ-ಎಚ್.ಆರ್.ಎಂ.ಎಸ್ 2.0 ಪೋರ್ಟಲ್ ಗೆ ಚಾಲನೆ ನೀಡಿದರು, ಹಿಂದಿನ ಇ-ಎಚ್ಆರ್.ಎಂ.ಎಸ್. ಸ್ವರೂಪದ ವ್ಯಾಪ್ತಿಯಲ್ಲಿ ಸೀಮಿತವಾಗಿತ್ತು, ಅಲ್ಲಿ ಉದ್ಯೋಗಿಗಳು ಸೀಮಿತ ಸೇವೆಗಳನ್ನು ಪಡೆಯುತ್ತಿದ್ದರು ಮತ್ತು ಇದು ಇತರ ಮಾನವ ಸಂಪನ್ಮೂಲ ಆನ್ವಯಿಕಗಳೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಇದರ ಪರಿಣಾಮವಾಗಿ, ಉದ್ಯೋಗಿಗಳು ಡಿಜಿಟಲ್ ಸೇವಾ ವಿತರಣೆಗಳ ಸಂಪೂರ್ಣ ಪ್ರಯೋಜನಗಳನ್ನು ಮತ್ತು ಮಾನವ ಸಂಪನ್ಮೂಲ ಆನ್ವಯಿಕಗಳನ್ನು ಮತ್ತು ಸರ್ಕಾರದ ಉಪಕ್ರಮಗಳೊಂದಿಗೆ ತಡೆರಹಿತ ಸಂಪರ್ಕವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಪರಿಷ್ಕೃತ ಇ-ಎಚ್.ಆರ್.ಎಂ.ಎಸ್ 2.0 ಪೋರ್ಟಲ್ ಉದ್ಯೋಗಿಗಳಿಗೆ ಡಿಜಿಟಲ್ ವಿಧಾನದಲ್ಲಿ ಈ ಕೆಳಗಿನ ಸೇವೆಗಳನ್ನು - ವರ್ಗಾವಣೆಗಳು (ಆವರ್ತನ / ಪರಸ್ಪರ), ನಿಯೋಜನೆ, ಎಪಿಎಆರ್, ಐಪಿಆರ್, ಐಜಿಒಟಿ ತರಬೇತಿಗಳು, ವಿಜಕ್ಷಣಾ ಸ್ಥಿತಿ, ನಿಯೋಜನೆ ಅವಕಾಶಗಳು, ಸೇವಾ ಪುಸ್ತಕ ಮತ್ತು ಇತರ ಮೂಲಭೂತ ಮಾನವ ಸಂಪನ್ಮೂಲ ಸೇವೆಗಳಾದ ರಜೆ, ಪ್ರವಾಸ, ಮರುಪಾವತಿಗಳೇ ಮೊದಲಾದವನ್ನು ಒದಗಿಸುತ್ತದೆ.
ಪರಿಷ್ಕೃತ ಇ-ಎಚ್.ಆರ್.ಎಂ.ಎಸ್ 2.0 ಪೋರ್ಟಲ್ ಭಾರತ ಸರ್ಕಾರದ ಮೊದಲ ಡಿಜಿಟಲ್ ವ್ಯವಸ್ಥೆಯಾಗಿದ್ದು, ಆತುದಿಯಿಂದ ಈತುದಿಯವರೆಗೆ ಮಾನವ ಸಂಪನ್ಮೂಲ ಸೇವೆಗಳನ್ನು ಒದಗಿಸುತ್ತದೆ. ಪ್ರಸ್ತುತ, ಭಾರತದಲ್ಲಿ ಯಾವುದೇ ಸರ್ಕಾರಿ ಸೇವಾ ಕೇಡರ್ ವ್ಯವಸ್ಥೆಯು ಪರಿಷ್ಕೃತ ಇ-ಎಚ್.ಆರ್.ಎಂ.ಎಸ್ 2.0 ರಂತೆ ಅದರ ವ್ಯಾಪ್ತಿ ಮತ್ತು ಆನ್ವಯಿಕಗಳಲ್ಲಿ ಇಷ್ಟೊಂದು ಮುಂದುವರಿದಿರಲಿಲ್ಲ. ಈ ವ್ಯವಸ್ಥೆಯ ಪ್ರಾರಂಭದೊಂದಿಗೆ, ಡಿಒಪಿ ಮತ್ತು ಟಿ ಮಾನವ ಸಂಪನ್ಮೂಲ ಸೇವೆಗಳ ಒಟ್ಟಾರೆ ಡಿಜಿಟಲೀಕರಣದತ್ತ ಸಾಗುತ್ತಿದೆ. ಪರಿಷ್ಕೃತ ಇ-ಎಚ್.ಆರ್.ಎಂ.ಎಸ್ 2.0 ಹಲವಾರು ಸಾವಿರ ಮಾನವ-ಗಂಟೆಗಳು ಮತ್ತು ಟನ್ ಗಳಷ್ಟು ಮುದ್ರಣ ಕಾಗದವನ್ನು ಉಳಿಸುತ್ತದೆ. ಇದು ಉದ್ಯೋಗಿಯ ಸಂತೃಪ್ತಿಯನ್ನು ಸುಧಾರಿಸಲು, ಮಾನವ ಸಂಪನ್ಮೂಲ ಕೆಲಸವನ್ನು ಸುಗಮಗೊಳಿಸಲು/ಸಂಸ್ಕರಿಸಲು ಉತ್ತೇಜಿಸಲು ಮತ್ತು ಆಡಳಿತಾತ್ಮಕ ಕಾರ್ಯನಿರ್ವಹಣೆಯಲ್ಲಿ ಉತ್ಪಾದಕತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವಲ್ಲಿ ಬಹು ದೂರ ಸಾಗುತ್ತದೆ.
ಭಾರತಕ್ಕಾಗಿ ವೃತ್ತಿಪರ, ಉತ್ತಮ ತರಬೇತಿ ಪಡೆದ ಮತ್ತು ಭವಿಷ್ಯದ ಸಿದ್ಧ ನಾಗರಿಕ ಸೇವೆಯನ್ನು ಸೃಷ್ಟಿಸುವ ಉದ್ದೇಶದಿಂದ ಕರ್ಮಯೋಗಿ ಭಾರತ್ (ಎಸ್.ಪಿವಿ) ಯಿಂದ ಐಜಿಒಟಿ ಕರ್ಮಯೋಗಿ ಪೋರ್ಟಲ್ ನ ಮೊಬೈಲ್ ಆಪ್ ಗೆ ಸಚಿವರು ಚಾಲನೆ ನೀಡಿದರು. ಸರ್ಕಾರಗಳು ಎಲ್ಲರೂ ತಮ್ಮ ಕಾರ್ಯಕ್ಷಮತೆ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರವೇಶಿಸುವಂತೆ ಐಜಿಒಟಿ ಕರ್ಮಯೋಗಿ ವೇದಿಕೆಯನ್ನು ಪ್ರಜಾಸತ್ತಾತ್ಮಕ, ಸಾಮರ್ಥ್ಯ ಚಾಲಿತ ಪರಿಹಾರ ತಾಣವಾಗಿ ರೂಪಿಸಲಾಗಿದೆ,
ಈ ದೃಷ್ಟಿಕೋನದೊಂದಿಗೆ, ಐಜಿಒಟಿ-ಕರ್ಮಯೋಗಿ ಮೊಬೈಲ್ ಆಪ್ ಅನ್ನು ಸಹ ಪ್ರಾರಂಭಿಸಲಾಗುತ್ತಿದೆ. ಆನ್ವಯಿಕ ಮತ್ತು ವೇದಿಕೆ ಎಲ್ಲಾ ಸರ್ಕಾರಿ ನೌಕರರಿಗೆ, ಅನೇಕ ಹಂತಗಳಲ್ಲಿ, ಅವರ ಡೊಮೇನ್ ಪ್ರದೇಶಗಳನ್ನು ಅವಲಂಬಿಸಿ ನಿರಂತರ ತರಬೇತಿಗೆ ಒಳಗಾಗಲು ಅನುಮತಿಸುತ್ತದೆ. ಈ ಆಪ್ ಮತ್ತು ವೇದಿಕೆ ಸುಮಾರು 2 ಕೋಟಿ ಬಳಕೆದಾರರಿಗೆ ತರಬೇತಿ ನೀಡಲು ಯಾವುದೇ ಸಮಯದಲ್ಲಿ-ಎಲ್ಲಿಂದಲಾದರೂ-ಯಾವುದೇ-ಸಾಧನ ಕಲಿಕೆಯ ಅವಕಾಶ ಒದಗಿಸುತ್ತದೆ, ಇದು ಇಲ್ಲಿಯವರೆಗೆ ಸಾಂಪ್ರದಾಯಿಕ ಕ್ರಮಗಳ ಮೂಲಕ ಸಾಧಿಸಲು ಸಾಧ್ಯವಾಗಲಿಲ್ಲ. ಈ ಆಪ್ ನಲ್ಲಿ, ಕಲಿಯುವವರು ಈ ಕೆಳಗಿನವುಗಳನ್ನು ಮಾಡಬಹುದು:
• ಯಾವುದೇ ಸಾಧನದಲ್ಲಿ (ಆಫ್ ಲೈನ್ ನಲ್ಲಿಯೂ ಸಹ) ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಕಲಿಯಬಹುದು
• ಅವರ ಅಗತ್ಯಗಳಿಗಾಗಿ ಅನುಗುಣವಾಗಿ ವಿವಿಧ ಕೋರ್ಸ್ ಗಳೊಂದಿಗೆ ತಮ್ಮನ್ನು ತಾವು ಕೌಶಲ್ಯಪೂರ್ಣಗೊಳಿಸಿಕೊಳ್ಳಬಹುದು
• ಉನ್ನತ ಸಂಸ್ಥೆಗಳು ಮತ್ತು ತಜ್ಞರಿಂದ ನೇರವಾಗಿ ಕಲಿಯಬಹುದು
• ಪ್ರಮಾಣಪತ್ರಗಳನ್ನು ಪಡೆದು, ತಮ್ಮ ಪ್ರೊಫೈಲ್ ಅನ್ನು ಶ್ರೀಮಂತಗೊಳಿಸಿಕೊಳ್ಳಬಹುದು.
• ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ, ನೀತಿ, ಇತ್ಯಾದಿಗಳೊಂದಿಗೆ ಅಪ್-ಟು-ಡೇಟ್ ಆಗಬಹುದು.
• ತಮ್ಮಲ್ಲಿನ ಕಂದಕ ಮತ್ತು ಅಗತ್ಯಗಳನ್ನು ಗುರುತಿಸಿ ಹಾಗೂ ತಮ್ಮ ಕೌಶಲ್ಯಗಳು, ನಡೆವಳಿಕೆಳು ಮತ್ತು ಜ್ಞಾನವನ್ನು ನವೀಕರಿಸಿಕೊಳ್ಳಬಹುದು
ಐಜಿಒಟಿ-ಕರ್ಮಯೋಗಿ ವೇದಿಕೆ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದು ಅಥವಾ ಈ ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಬಹುದು: https://play.google.com/store/apps/details?id=com.igot.karmayogibharat
ಡಾ. ಜಿತೇಂದ್ರ ಸಿಂಗ್ ಅವರು ಪರಿಷ್ಕೃತ ಪ್ರೊಬಿಟಿ ಪೋರ್ಟಲ್ ಗೂ 2017 ರಲ್ಲಿ ಚಾಲನೆ ನೀಡಿದ್ದರು - ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಚಿವಾಲಯಗಳು / ಇಲಾಖೆಗಳು / ಸ್ವಾಯತ್ತ ಸಂಸ್ಥೆಗಳು / ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಡೇಟಾವನ್ನು ಪಡೆಯಲು ಮೀಸಲಾದ ಆನ್ ಲೈನ್ ಪೋರ್ಟಲ್ (https://probity-dopt.nic.in) ಅನ್ನು ಕ್ರಿಯಾತ್ಮಕಗೊಳಿಸಲಾಗಿತ್ತು -
a) ಎಫ್ ಆರ್ 56(ಜೆ)/ಇದೇ ರೀತಿಯ ನಿಬಂಧನೆಗಳ ಅಡಿಯಲ್ಲಿ ಪರಾಮರ್ಶೆ
b) ಪ್ರಾಸಿಕ್ಯೂಷನ್ ಗೆ ಮಂಜೂರಾತಿಗಾಗಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ
c) ಆವರ್ತನ ವರ್ಗಾವಣೆ ನೀತಿಯ ಅನುಷ್ಠಾನ - ಸೂಕ್ಷ್ಮ ಹುದ್ದೆಗಳನ್ನು ಮತ್ತು 3 ವರ್ಷಗಳಿಗಿಂತ ಹೆಚ್ಚು ಕಾಲ ನೆಲೆನಿಂತ ಸೂಕ್ಷ್ಮ ಹುದ್ದೆಗಳ ಸಂಖ್ಯೆ ಗುರುತಿಸುವುದು
d) ದೊಡ್ಡ ಮತ್ತು ಸಣ್ಣ ದಂಡದ ಶಿಸ್ತಿನ ಕ್ರಮಗಳ ಸಂಖ್ಯೆ
e) ಗ್ರೂಪ್ 'ಬಿ' (ಪತ್ರಾಂಕಿತೇತರ) / ಗ್ರೂಪ್ ಹುದ್ದೆಗಳಿಗೆ ಸಂದರ್ಶನಗಳನ್ನು ಮುಂದುವರಿಸದೇ ಇರುವುದು.
ಡಿಒಪಿ ಮತ್ತು ಟಿ ಈಗ ಅಸ್ತಿತ್ವದಲ್ಲಿರುವ ಪ್ರೊಬಿಟಿ ಪೋರ್ಟಲ್ ಅನ್ನು ಸಂಪೂರ್ಣವಾಗಿ ನವೀಕರಿಸಿದೆ. ಹೊಸ ಮತ್ತು ಪರಿಷ್ಕೃತ ಪ್ರೊಬಿಟಿ ಪೋರ್ಟಲ್ ಮತ್ತು ಅಂತಹ ವೇದಿಕೆಯನ್ನು ಬಳಸಿಕೊಂಡು ನೈಜ-ಸಮಯದ ಮಾಹಿತಿಯನ್ನು ಸೆರೆಹಿಡಿದು, ಸರ್ಕಾರಿ ನೌಕರರ 'ಕಾರ್ಯಕ್ಷಮತೆಯಿಲ್ಲದ' ಮತ್ತು 'ಅದಕ್ಷತೆ'ಯನ್ನು ಸಹಿಸಲಾಗುವುದಿಲ್ಲ ಮತ್ತು 'ಸಮಗ್ರತೆ' ಮತ್ತು 'ಪ್ರಾಮಾಣಿಕತೆ'ಯೊಂದಿಗೆ ಸಾರ್ವಜನಿಕ ಸೇವೆಯ ಬಗ್ಗೆ ಸರಿಯಾದ ಮನೋಭಾವವನ್ನು ಪ್ರತಿಯೊಬ್ಬ ಸರ್ಕಾರಿ ನೌಕರನಿಂದ ನಿರೀಕ್ಷಿಸಲಾಗುತ್ತದೆ ಎಂಬ ಸ್ಪಷ್ಟ ಸಂಕೇತವನ್ನು ರವಾನಿಸುತ್ತದೆ.
ಸೇವೆಯ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೊರಡಿಸಲಾಗುವ ಸೂಚನೆಗಳ ಕ್ರೋಡೀಕರಣದ ವ್ಯಾಪಕ ಅಭ್ಯಾಸವನ್ನು ಡಿಒಪಿಟಿ ಕೈಗೊಂಡಿದೆ ಮತ್ತು ಅವುಗಳನ್ನು ಸುಲಭವಾಗಿ ಪ್ರವೇಶಿಸುವಂತೆ ಮಾಡಿದೆ. ಅದರಂತೆ, 11 ಪ್ರಮುಖ ಶೀರ್ಷಿಕೆಗಳ (ಮತ್ತು ಸಂಬಂಧಿತ ಉಪ ಶೀರ್ಷಿಕೆಗಳು) ಅಡಿಯಲ್ಲಿ, 78 ಮಾಸ್ಟರ್ ಸುತ್ತೋಲೆಗಳು ಲಭ್ಯವಿವೆ, ಅವುಗಳನ್ನು ನೈಜ ಸಮಯದ ಆಧಾರದ ಮೇಲೆ ನವೀಕರಿಸಲಾಗುತ್ತದೆ ಮತ್ತು ಬುದ್ಧಿವಂತ ಸರ್ಚ್ ಎಂಜಿನ್ ಗಳ ಮೂಲಕ ಸುಲಭವಾಗಿ ಹುಡುಕಬಹುದು. ಮಾಸ್ಟರ್ ಸುತ್ತೋಲೆಗಳನ್ನು ಡಿಒಪಿಟಿ ವೆಬ್ಸೈಟ್ https://dopt.gov.in ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತಿದೆ.
ಸೂಚನೆಗಳ ಕ್ರೋಡೀಕರಣ ಕುರಿತ ಇ-ಪುಸ್ತಕವನ್ನು ಸಹ ಅನಾವರಣಗೊಳಿಸಲಾಯಿತು - ವಿವಿಧ ಕಚೇರಿ ಜ್ಞಾಪನಾ ಪತ್ರಗಳು ಮತ್ತು ಸುತ್ತೋಲೆಗಳ ರೂಪಗಳಲ್ಲಿನ ಸರ್ಕಾರದ ಸೂಚನೆಗಳು ಡಿಒಪಿ ಮತ್ತು ಟಿಯ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದ್ದವು, ಆದರೆ ಸರ್ಕಾರಿ ಅಧಿಕಾರಿಗಳು, ಇಲಾಖೆಗಳು, ಬಳಕೆದಾರರು ಮತ್ತು ಆಸಕ್ತ ನಾಗರಿಕರಿಗೆ ಮಾನವ ಸಂಪನ್ಮೂಲ / ಸೇವೆ / ಪಿಂಚಣಿ / ತರಬೇತಿ ಸಂಬಂಧಿತ ವಿಷಯಗಳ ಬಗ್ಗೆ ಸರ್ಕಾರದ ಸೂಚನೆಗಳ ಇತ್ತೀಚಿನ ಮತ್ತು ನವೀಕರಿಸಿದ ಆವೃತ್ತಿಗೆ ಪ್ರವೇಶ ಪಡೆಯುವುದು ಒಂದು ಸವಾಲಾಗಿತ್ತು.
*****
(Release ID: 1886565)
Visitor Counter : 182