ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಗುಜರಾತ್ ನ ಮೆಹ್ಸಾನಾದಲ್ಲಿರುವ ಶ್ರೀ ಗೋವರ್ಧನ್ ನಾಥ್ ಜೀ ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ದೇವಾಲಯದ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಗುಜರಾತ್ ನ ಮೆಹ್ಸಾನಾದಲ್ಲಿರುವ ಶೇಠ್ ಜಿ.ಸಿ. ಪ್ರೌಢಶಾಲೆಯು 95 ವರ್ಷ ಪೂರೈಸಿದ ಸಂಭ್ರಮಾಚರಣೆಯ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಅಮಿತ್ ಶಾ ಅವರು ಬಾಷಣ ಮಾಡಿದರು ಮತ್ತು ಶಾಲೆಯ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
2014 ರಲ್ಲಿ ಪ್ರಧಾನಮಂತ್ರಿಯಾದ ನಂತರ, ಶ್ರೀ ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿಯನ್ನು ತಂದರು ಮತ್ತು ಹೊಸ ಶಿಕ್ಷಣ ನೀತಿಯು ಮುಂದಿನ 25 ವರ್ಷಗಳಲ್ಲಿ ಭಾರತವು ವಿಶ್ವದಲ್ಲಿ ಉನ್ನತ ಸ್ಥಾನವನ್ನು ಸಾಧಿಸಲು ಸಹಾಯ ಮಾಡುತ್ತದೆ.
ಹೊಸ ಶಿಕ್ಷಣ ನೀತಿಯಲ್ಲಿ, ಸಾಧ್ಯವಾದಷ್ಟು ವಿದ್ಯಾರ್ಥಿಗಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅವರ ಮಾತೃಭಾಷೆಯಲ್ಲಿ ನಡೆಸಬೇಕು ಎಂದು ಖಚಿತಪಡಿಸಿಕೊಳ್ಳಲಾಗಿದೆ.
ಭಾರತದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯು ಮಾತೃಭಾಷೆಯಲ್ಲಿ ಮಾತನಾಡುವುದು ಮತ್ತು ಯೋಚಿಸುವುದರ ಜೊತೆಗೆ, ತಾರ್ಕಿಕ ಶಕ್ತಿ, ವಿಶ್ಲೇಷಣೆ, ಸಂಶೋಧನೆ ಮತ್ತು ಮಾತೃಭಾಷೆಯಲ್ಲಿ ಮೂಲ ಚಿಂತನೆಯನ್ನು ಪ್ರೋತ್ಸಾಹಿಸುತ್ತದೆ.
ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಭಾರತೀಯ ಮಾತೃಭಾಷೆಯಲ್ಲಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಮಧ್ಯಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣದ ಮೊದಲ ಸೆಮಿಸ್ಟರ್ ಪಠ್ಯಕ್ರಮದ ಅನೇಕ ಪುಸ್ತಕಗಳನ್ನು ಹಿಂದಿಯಲ್ಲಿ ಅನುವಾದಿಸಿದ
Posted On:
24 DEC 2022 6:16PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಗುಜರಾತ್ ನ ಮೆಹ್ಸಾನಾದಲ್ಲಿರುವ ಶ್ರೀ ಗೋವರ್ಧನ್ ನಾಥ್ ಜೀ ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ದೇವಾಲಯದ ಆವರಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿದರು.
ಮೆಹಸಾನಾದ ಪಿಲ್ವಾಯಿಯ ಶೇಠ್ ಜಿ.ಸಿ. ಪ್ರೌಢ ಶಾಲೆಯು 95 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶ್ರೀ ಅಮಿತ್ ಶಾ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಸೇರಿದಂತೆ ಇತರ ಹಲವು ಗಣ್ಯರು ಉಪಸ್ಥಿತರಿದ್ದರು.
ಗೃಹ ಸಚಿವರು ಗಾಂಧಿನಗರದಲ್ಲಿರುವ ಮಹುದಿ ಜೈನ ದೇವಾಲಯಕ್ಕೂ ಭೇಟಿ ನೀಡಿದರು. ಶೇಠ್ ಜಿ.ಸಿ. ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು 95 ವರ್ಷಗಳ ಕಾಲ ಸಂಸ್ಥೆಯನ್ನು ಅವಿರತವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಸಂಸ್ಥೆಯನ್ನು ಅತ್ಯಂತ ಧಾರ್ಮಿಕ ಮನೋಭಾವದಿಂದ ಸಮರ್ಥವಾಗಿ ನಿರ್ವಹಿಸಿರುವುದನ್ನು ತೋರಿಸುತ್ತದೆ ಎಂದರು. ಯಾವುದೇ ಸಂಸ್ಥೆ ನಡೆಸಲು ಸಂವೇದನಾಶೀಲತೆ ಮಾತ್ರ ಸಾಲದು, ನಿರಂತರ ಪ್ರಯತ್ನ, ಶ್ರಮ, ಸಮನ್ವಯತೆ ಅತೀ ಅಗತ್ಯ ಎಂದರು. ಶಾಲೆಯ ಆಡಳಿತ ಮಂಡಳಿಯು ಈ ಸಂಸ್ಥೆಯನ್ನು 95 ವರ್ಷಗಳಿಂದ ಯಾವುದೇ ಹಸ್ತಕ್ಷೇಪವಿಲ್ಲದೆ ಯಶಸ್ವಿಯಾಗಿ ನಿರ್ವಹಿಸಿ 35,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ಸುಧಾರಿಸಲು ಕೊಡುಗೆ ನೀಡಿದೆ, ಅವಿರತ ಶ್ರಮಿಸಿದೆ ಮತ್ತು ಅಂತಹ ಪ್ರಯತ್ನಕ್ಕಿಂತ ಹೆಚ್ಚಿನ ಪುಣ್ಯವಿಲ್ಲ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು.
ತನ್ನ 95 ವರ್ಷಗಳ ಅಧಿಕಾರಾವಧಿಯಲ್ಲಿ ಈ ಶಿಕ್ಷಣ ಸಂಸ್ಥೆಯು ಎರಡು ಶಿಕ್ಷಣ ನೀತಿಗಳಿಗೆ ಸಾಕ್ಷಿಯಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಮೊದಲನೆಯದು, ಬ್ರಿಟಿಷರು ಮಾಡಿದ ಶಿಕ್ಷಣ ನೀತಿಯಲ್ಲಿ ಮೌಖಿಕ ಕಲಿಕೆಯು ಬೌದ್ಧಿಕ ಸಾಮರ್ಥ್ಯದ ಸಂಕೇತವಾಗಿತ್ತು. ಈ ಶಿಕ್ಷಣ ನೀತಿಯಲ್ಲಿ ಚಿಂತನೆ, ಸಂಶೋಧನೆ, ತರ್ಕ, ವಿಶ್ಲೇಷಣೆ, ನಿರ್ಧಾರ ಕೈಗೊಳ್ಳುವ ಶಕ್ತಿ, ನ್ಯಾಯ, ತತ್ತ್ವಶಾಸ್ತ್ರ ಇವುಗಳತ್ತ ಗಮನ ಹರಿಸದ ಕಾರಣ ಸಮಾಜದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. 2014ರಲ್ಲಿ ದೇಶದಲ್ಲಿ ದೊಡ್ಡ ಬದಲಾವಣೆಯಾಗಿದ್ದು, ರಾಷ್ಟ್ರವು ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿತು ಮತ್ತು ಅವರು ದೇಶದ ಪ್ರಧಾನಮಂತ್ರಿಯಾದರು ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು.
ಪ್ರಧಾನಮಂತ್ರಿಯಾದ ನಂತರ ಶ್ರೀ ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿಯನ್ನು ತಂದರು ಮತ್ತು ಹೊಸ ನೀತಿಯು ಮುಂದಿನ 25 ವರ್ಷಗಳಲ್ಲಿ ಭಾರತವು ವಿಶ್ವದಲ್ಲಿ ಉನ್ನತ ಸ್ಥಾನವನ್ನು ಸಾಧಿಸಲು ಸಹಾಯ ಮಾಡುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಹಲವು ಮೂಲಭೂತ ಬದಲಾವಣೆಗಳನ್ನು ಅಳವಡಿಸಲಾಗಿದ್ದು, ಮಾತೃಭಾಷೆಯಲ್ಲಿ ಮಾಧ್ಯಮಿಕ ಹಂತದವರೆಗಿನ ಶಿಕ್ಷಣವನ್ನು ಹಂತಹಂತವಾಗಿ ನೀಡುತ್ತಿರುವುದು ದೊಡ್ಡ ಬದಲಾವಣೆಯಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು
ಹೊಸ ಶಿಕ್ಷಣ ನೀತಿಯು ಮಾತೃಭಾಷೆಯಲ್ಲಿ ಮಾತನಾಡುವುದು ಮತ್ತು ಯೋಚಿಸುವುದರ ಜೊತೆಗೆ, ಭಾರತದಲ್ಲಿ ಸಂಶೋಧನೆಗೆ ಒತ್ತು ನೀಡಲು ಮಾತೃಭಾಷೆಯಲ್ಲಿ ತಾರ್ಕಿಕ ಶಕ್ತಿ, ವಿಶ್ಲೇಷಣೆ, ಸಂಶೋಧನೆ ಮತ್ತು ಮೂಲ ಚಿಂತನೆಯ ಮೇಲೆ ಕೇಂದ್ರೀಕರಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಮಾತೃಭಾಷೆಯಲ್ಲಿ ಮೌಲಿಕ ಚಿಂತನೆಯನ್ನು ಹೊಂದುವುದು ಬಹಳ ಮುಖ್ಯ ಮತ್ತು ಅದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಖಚಿತಪಡಿಸುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು.
ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ . ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಲು ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ತಾಂತ್ರಿಕ, ವೈದ್ಯಕೀಯ ಮತ್ತು ಇತರ ಉನ್ನತ ಶಿಕ್ಷಣ ಪಠ್ಯ(ಕೋರ್ಸ್)ಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸುವ ಕೆಲಸವೂ ಪ್ರಾರಂಭವಾಗಿದೆ. ಮಧ್ಯಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣದ ಮೊದಲ ಸೆಮಿಸ್ಟರ್ ಪಠ್ಯಕ್ರಮದ ಅನೇಕ ಪುಸ್ತಕಗಳನ್ನು ಹಿಂದಿಯಲ್ಲಿ ಅನುವಾದಿಸಿದ ನಂತರ, ವೈದ್ಯಕೀಯ ಶಿಕ್ಷಣ ಮತ್ತು ಇತರ ಉನ್ನತ ಶಿಕ್ಷಣವನ್ನು ಈಗ ಗುಜರಾತಿ, ತೆಲುಗು, ಪಂಜಾಬಿ, ಒಡಿಯಾ ಮತ್ತು ಬೆಂಗಾಲಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.
ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರನನ್ನು ಉಲ್ಲೇಖಿಸಿದ ಕೇಂದ್ರ ಗೃಹ ಸಚಿವರು, "ಸ್ವಾತಂತ್ರ್ಯವನ್ನು ಪಡೆದ ನಂತರವೂ, ಅಧೀನತೆಯ ದುರ್ನಾತವು ಹೊರಹೊಮ್ಮುತ್ತಲೇ ಇದ್ದರೆ, ಸ್ವಾತಂತ್ರ್ಯದ ಪರಿಮಳವು ಹರಡಲು ಸಾಧ್ಯವಿಲ್ಲ" ಎಂದು ಶ್ರೀ ಶಾ ಅವರು ಹೇಳಿದರು
ದೇಶದ ಪ್ರಜೆಯು ತನ್ನ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವ ಮತ್ತು ಆಲೋಚನೆಗಳನ್ನು ಬೆಳೆಸಿಕೊಳ್ಳುವ ವರೆಗೆ, ಅವನು ತನ್ನ ಮತ್ತು ತನ್ನ ದೇಶದ ಬಗ್ಗೆ ಗೌರವವನ್ನು ಪಡೆಯಲು ಸಾಧ್ಯವಿಲ್ಲ. ಹೊಸ ಶಿಕ್ಷಣ ನೀತಿಯಲ್ಲಿ, 5 + 3 + 3 ಮತ್ತು 4 ವರ್ಷಗಳ ಶಿಕ್ಷಣ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ ಮತ್ತು ಈ ಶಿಕ್ಷಣ ರಚನೆಯನ್ನು 10 ವರ್ಷಗಳಲ್ಲಿ ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು; ಇದರೊಂದಿಗೆ ಸಮಗ್ರ ಕಲಿಕೆಯ ಪ್ರಮಾಣಪತ್ರದ (360 ಡಿಗ್ರಿ ಹೋಲಿಸ್ಟಿಕ್ ಪ್ರೋಗ್ರೆಸ್ ಕಾರ್ಡ್) ಕಾರ್ಯಕ್ರಮವನ್ನೂ ರೂಪಿಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ವೃತ್ತಿ ಮತ್ತು ಕೌಶಲ್ಯ ಶಿಕ್ಷಣಕ್ಕೂ ಬಹುದೊಡ್ಡ ಪಾತ್ರವಿದ್ದು, 10ನೇ ತರಗತಿ ಉತ್ತೀರ್ಣರಾಗುವ ಮುನ್ನವೇ ಯಾವುದಾದರೊಂದು ರೀತಿಯ ವೃತ್ತಿ ಶಿಕ್ಷಣದೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಶೇ.50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ವಯಂ ಉದ್ಯೋಗದ ಮೂಲಕ ಸಬಲೀಕರಣಗೊಳಿಸಲು ಈ ಹೊಸ ಶಿಕ್ಷಣ ಸಹಕಾರಿಯಾಗಲಿದೆ. ಈ ಶಿಕ್ಷಣ ನೀತಿಯಲ್ಲಿ ಆರನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಹತ್ತು ದಿನಗಳ ಚೀಲ ರಹಿತ(ಬ್ಯಾಗ್ ಲೆಸ್) ಅವಧಿಯನ್ನು ಆರಂಭಿಸಲಾಗಿದೆ ಎಂದು ಶ್ರೀ ಶಾ ಅವರು ಹೇಳಿದರು.
****
ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ಶಿಕ್ಷಕರಿಗೆ ತರಬೇತಿ ನೀಡುವವರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಹೊಸ ಶಿಕ್ಷಣ ನೀತಿಯ ತಲಮಟ್ಟದ ಹಂತದಲ್ಲಿ (ಆನ್-ಗ್ರೌಂಡ್) ಸಕ್ರಿಯಗೊಳಿಸುವಿಕೆಯನ್ನು ಸರ್ಕಾರ ಮಾತ್ರ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ದೈವಿಕ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ. ಪ್ರತಿದಿನ ಮುಂಜಾನೆ ಕಠಿಣ ಪರಿಶ್ರಮದ ಸಂಕಲ್ಪದೊಂದಿಗೆ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತನಗಾಗಿ ಕಷ್ಟಪಡುವುದರ ಜೊತೆಗೆ ಇತರರಿಗಾಗಿ, ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ದುಡಿಯಬೇಕು ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.
(Release ID: 1886421)
Visitor Counter : 163