ಉಪರಾಷ್ಟ್ರಪತಿಗಳ ಕಾರ್ಯಾಲಯ
ಕ್ರಿಸ್ಮಸ್ ಪ್ರಯುಕ್ತ ದೇಶದ ಜನತೆಗೆ ಉಪರಾಷ್ಟ್ರಪತಿಗಳ ಶುಭಾಶಯ
प्रविष्टि तिथि:
24 DEC 2022 4:31PM by PIB Bengaluru
ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ಕ್ರಿಸ್ಮಸ್ ಹಬ್ಬದ ಮುನ್ನಾ ದಿನದಂದು ಜನತೆಗೆ ಶುಭಾಶಯ ಕೋರಿದ್ದಾರೆ.
ಅವರ ಸಂದೇಶದ ಪೂರ್ಣ ಪಠ್ಯ ಇಂತಿದೆ-
"ಕ್ರಿಸ್ಮಸ್ ನ ಈ ಪವಿತ್ರ ಸಂದರ್ಭದಲ್ಲಿ ಸರ್ವರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.
ಏಸು ಕ್ರಿಸ್ತರು ನಮಗೆ ಪ್ರೀತಿ, ಸಹಾನುಭೂತಿ ಮತ್ತು ದಯೆಯ ಮಾರ್ಗವನ್ನು ತೋರಿಸಿದ್ದಾರೆ. ಅದು ನಮ್ಮ ಬದುಕನ್ನು ಮಹತ್ವಪೂರ್ಣವಾಗಿಸುತ್ತದೆ ಮತ್ತು ಸಮಾಜದಲ್ಲಿ ಸಹಿಷ್ಣುತೆ ಹಾಗು ಸಾಮರಸ್ಯವನ್ನು ತರುತ್ತದೆ, ಅದು ಅಂತಿಮವಾಗಿ ಜಗತ್ತಿನಲ್ಲಿ ಶಾಶ್ವತ ಶಾಂತಿಗೆ ದಾರಿಯಾಗಬಲ್ಲುದು.
ನಾವು ಕ್ರಿಸ್ಮಸ್ ನ್ನು ಸಂತೋಷ ಮತ್ತು ಧರ್ಮ ನಿಷ್ಠೆಯಿಂದ ಆಚರಿಸುವಾಗ, ಸೌಹಾರ್ದಯುತ, ಸಹಿಷ್ಣು, ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ"
****
(रिलीज़ आईडी: 1886342)
आगंतुक पटल : 164