ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ರೋಗನಿರ್ಣಯ ಉದ್ಯಮದ ಪ್ರತಿನಿಧಿಗಳಿಗೆ ಎ.ಬಿ.ಡಿ.ಎಂ. ಅಂಗೀಕಾರ ಕಾರ್ಯಾಗಾರವನ್ನು ಆಯೋಜಿಸಿದೆ
प्रविष्टि तिथि:
22 DEC 2022 6:36PM by PIB Bengaluru
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್.ಎಚ್.ಎ.) 2022 ರ ಡಿಸೆಂಬರ್ 22 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ರೋಗನಿರ್ಣಯ ಉದ್ಯಮ ಪ್ರತಿನಿಧಿಗಳಿಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎ.ಬಿ.ಡಿ.ಎಂ.) ಕುರಿತ ಕಾರ್ಯಾಗಾರವನ್ನು ಆಯೋಜಿಸಿದೆ. ಎ.ಬಿ.ಡಿ.ಎಂ.ನ ಪಾತ್ರ ಮತ್ತು ರೋಗಿಗಳಿಗೆ ಡಿಜಿಟಲ್ ಆರೋಗ್ಯ ದಾಖಲೆಗಳ, ವಿಶೇಷವಾಗಿ ರೆಫರಲ್ ಸಂದರ್ಭದಲ್ಲಿ ಅಥವಾ ಬೇರೆ ಆರೋಗ್ಯ ಸೌಲಭ್ಯಕ್ಕಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪದೇ ಪದೇ ಅಗತ್ಯವಿರುವ ರೋಗನಿರ್ಣಯ ವರದಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು.
ಈ ಕಾರ್ಯಾಗಾರದಲ್ಲಿ ರೋಗಶಾಸ್ತ್ರಜ್ಞರು ಮತ್ತು ಸೂಕ್ಷ್ಮಜೀವಶಾಸ್ತ್ರಜ್ಞರು, ಡಯಾಗ್ನೋಸ್ಟಿಕ್ ಲ್ಯಾಬ್ ಮಾಲೀಕರು, ಇಂಡಿಯನ್ ಅಸೋಸಿಯೇಷನ್ ಆಫ್ ಪೆಥಾಲಜಿಸ್ಟ್ಸ್ ಅಂಡ್ ಮೈಕ್ರೋಬಯಾಲಜಿಸ್ಟ್ಸ್ (ಐ.ಎ.ಪಿ.ಎಂ.) ಪ್ರತಿನಿಧಿಗಳು ಮತ್ತು ಲ್ಯಾಬ್ ಮಾಲೀಕರ ಸಂಘದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು. ಡಯಾಗ್ನೋಸ್ಟಿಕ್ ಉದ್ಯಮದ ಈ ಪ್ರತಿನಿಧಿಗಳಲ್ಲದೆ, ಎನ್.ಎಚ್.ಎ. ಅಧಿಕಾರಿಗಳು, ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಎಲ್.ಎಂ.ಐ.ಎಸ್. (ಪ್ರಯೋಗಾಲಯ ನಿರ್ವಹಣಾ ಮಾಹಿತಿ ಪರಿಹಾರ) ಮತ್ತು ಪಿ.ಎಚ್.ಆರ್. (ವೈಯಕ್ತಿಕ ಆರೋಗ್ಯ ದಾಖಲೆಗಳ) ಪರಿಹಾರಗಳನ್ನು ನೀಡುವ ಎ.ಬಿ.ಡಿ.ಎಂ. ಪಾಲುದಾರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪ್ರತಿನಿಧಿಗಳಿಗಾಗಿ ಎ.ಬಿ.ಡಿ.ಎಂ.ನ ಅಡಿಯಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಡಿಜಿಟಲ್ ಆರೋಗ್ಯ ಪ್ರೋತ್ಸಾಹಕ ಯೋಜನೆ (ಡಿ.ಎಚ್.ಎಸ್.) ಬಗ್ಗೆಯೂ ಸಹಯೋಗಿಗಳಿಗೆ ವಿವರಿಸಲಾಯಿತು. ಡಿ.ಎಚ್.ಐ.ಎಸ್.ನ ಅಡಿಯಲ್ಲಿ, ಅರ್ಹ ಪ್ರಯೋಗಾಲಯಗಳು ಮತ್ತು ಎಲ್.ಎಂ.ಐ.ಎಸ್. ಪರಿಹಾರ ಪೂರೈಕೆದಾರರು, ರೋಗಿಗಳು ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಸಹಾಯ ಮಾಡುವ ಮೂಲಕ 4 ಕೋಟಿ ರೂ.ಗಳವರೆಗೆ ಆರ್ಥಿಕ ಪ್ರೋತ್ಸಾಹವನ್ನು ಗಳಿಸಬಹುದು.
ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ (ಬಿ.ಎಂ.ಜಿ.ಎಫ್.) ಮತ್ತು ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಎಲ್ಎಲ್ ಪಿ ಇಂಡಿಯಾದ ಬೆಂಬಲದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ವಿವಿಧ ಪ್ರದೇಶಗಳಲ್ಲಿನ ಸಹಯೋಗಿಗಳನ್ನು ತಲುಪಲು ಮತ್ತು ಎ.ಬಿ.ಡಿ.ಎಂ.ನ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಅವರಿಗೆ ಪರಿಚಯಗೊಳಿಸಲು ಇಂತಹ ಹೆಚ್ಚಿನ ಕಾರ್ಯಾಗಾರಗಳು ಮತ್ತು ವೆಬಿನಾರ್ ಗಳನ್ನು ಆಯೋಜಿಸಲಾಗುವುದು.
*****
(रिलीज़ आईडी: 1885874)
आगंतुक पटल : 186