ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನವನ್ನು ಮರುರೂಪಿಸುವ ಬಗ್ಗೆ ಒಂದು ದಿನದ ಸಮಾಲೋಚನಾ ಕಾರ್ಯಾಗಾರ ಆಯೋಜಿಸಿದ ಶಿಕ್ಷಣ ಸಚಿವಾಲಯ

Posted On: 18 DEC 2022 2:11PM by PIB Bengaluru

ಪ್ರಮುಖ ಮುಖ್ಯಾಂಶಗಳು:

- ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ತಮ್ಮ ಪ್ರಾಯೋಗಿಕ ಅನುಭವವನ್ನು ಸೂಕ್ತ ಚೌಕಟ್ಟಿನ ಮಟ್ಟದೊಂದಿಗೆ ಸರಿದೂಗಿಸುವ ಮೂಲಕ ಮರುರೂಪಿಸಿಕೊಳ್ಳಲು ಎನ್.ಸಿಆರ್.ಎಫ್ ಸಹಾಯ ಮಾಡುತ್ತದೆ - ಶ್ರೀ ಸಂಜಯ್ ಕುಮಾರ್

- ವೃತ್ತಿಜೀವನದ ಮಾರ್ಗದರ್ಶನದ ಮೇಲಿನ ಚರ್ಚೆಗಳು ಶಾಲೆಗಳಲ್ಲಿಯೇ ಮಾಡಬಹುದಾದ ಭೌತಿಕ ಮಧ್ಯಪ್ರವೇಶಗಳು ಮತ್ತು ವೃತ್ತಿ ಸಮಾಲೋಚನೆಯ ಪಾತ್ರವನ್ನು ಪ್ರತಿಬಿಂಬಿಸುತ್ತವೆ.

- ಶಿಕ್ಷಣ ಸಚಿವಾಲಯವು ಯುನಿಸೆಫ್ ಮತ್ತು ಯುವಾಹ್ ಸಹಯೋಗದೊಂದಿಗೆ 2022ರ ಡಿಸೆಂಬರ್ 16 ರಂದು ನವದೆಹಲಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನದ ಮರು ಕಲ್ಪನೆ ಕುರಿತು ಒಂದು ದಿನದ ಸಮಾಲೋಚನಾ ಕಾರ್ಯಾಗಾರವನ್ನು ಆಯೋಜಿಸಿತ್ತು.

WhatsApp Image 2022-12-17 at 8.24.57 PM (1).jpeg

WhatsApp Image 2022-12-17 at 8.25.53 PM (1).jpeg

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಅವರು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ತರಬೇತಿ ಮಹಾನಿರ್ದೇಶನಾಲಯ (ಐಟಿಐ), ಪಿಎಸ್.ಎಸ್.ಸಿ.ಐ.ವಿ.ಇ, ಭೋಪಾಲ್, ಎನ್.ಸಿಇಆರ್ ಟಿ, ಸಿಬಿಎಸ್.ಇ, ಎನ್.ಸಿವಿಇಟಿ, ಎಐಸಿಟಿಇ ಇತ್ಯಾದಿಗಳೊಂದಿಗೆ ಸಮಾಲೋಚನಾ ಕಾರ್ಯಾಗಾರ ಮತ್ತು ಎರಡು ದುಂಡುಮೇಜಿನ ಸಂವಾದಗಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರ ಮತ್ತು ದುಂಡುಮೇಜಿನ ಸಂವಾದದಲ್ಲಿ ಪಿಡಬ್ಲ್ಯೂಸಿ, ಯುವಹ್ಹಾ, ನಾಗರಿಕ ಸಮಾಜದ ಸಂಸ್ಥೆಗಳು, ರಾಜ್ಯ ಶಿಕ್ಷಣ ಇಲಾಖೆ, ವೃತ್ತಿ ಶಿಕ್ಷಣ ಮತ್ತು ವೃತ್ತಿ ಸಮಾಲೋಚನೆ, ಸಾಂಸ್ಥಿಕ ಸಂಸ್ಥೆಗಳು ಮತ್ತು ಹಾಲಿ ಹಾಗೂ ಉತ್ತೀರ್ಣರಾಗಿ ಹೋಗುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ತಜ್ಞರು ಭಾಗವಹಿಸಿದ್ದರು.

WhatsApp Image 2022-12-17 at 8.24.57 PM.jpeg

WhatsApp Image 2022-12-17 at 8.25.39 PM.jpeg

ಪ್ರಧಾನ ಭಾಷಣ ಮಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್, ವಿದ್ಯಾರ್ಥಿ ದೆಸೆಯಲ್ಲಿ ಔಪಚಾರಿಕ ವೃತ್ತಿಪರ ತರಬೇತಿಯ ಮೂಲಕ ಕಾರ್ಯಪಡೆಯನ್ನು ಕೌಶಲ್ಯಗೊಳಿಸುವ ವಿಷಯದಲ್ಲಿ ಭಾರತವು ಇತರ ದೇಶಗಳೊಂದಿಗೆ ಸಂಪರ್ಕ ಸಾಧಿಸುವ ಅಗತ್ಯವಿದೆ ಎಂದು ಗಮನಸೆಳೆದರು. ಎನ್ಇಪಿ 2020 ಅಂತಹ ಸಮಸ್ಯೆಗಳನ್ನು ಗುರುತಿಸಿದೆ ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಿದೆ ಎಂದು ಅವರು ಹೇಳಿದರು.

ಎನ್ಇಪಿ, 2020ರ ಪ್ರಕಾರ ವೃತ್ತಿಪರ ಶಿಕ್ಷಣವನ್ನು ಮುಂದಿನ ದಶಕದಲ್ಲಿ ಹಂತ ಹಂತವಾಗಿ ಎಲ್ಲಾ ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಯೋಜಿಸುವ ಅಗತ್ಯವಿದೆ ಎಂದು ಶ್ರೀ ಕುಮಾರ್ ಒತ್ತಿ ಹೇಳಿದರು. ಕೌಶಲ್ಯಗಳ ಅಂತರ ವಿಶ್ಲೇಷಣೆ ಮತ್ತು ಸ್ಥಳೀಯ ಅವಕಾಶಗಳ ಮ್ಯಾಪಿಂಗ್ ಆಧಾರದ ಮೇಲೆ ಟ್ರೇಡ್ ಗಳು ಮತ್ತು ಕೋರ್ಸ್ ಗಳನ್ನು ಆಯ್ಕೆ ಮಾಡಲಾಗುತ್ತದೆ. ವೃತ್ತಿ ಶಿಕ್ಷಣವನ್ನು ಕಳಂಕಮುಕ್ತಗೊಳಿಸಲು ಮತ್ತು ಅದನ್ನು ಮಹತ್ವಾಕಾಂಕ್ಷೆಯನ್ನಾಗಿ ಮಾಡಲು ಎಲ್ಲಾ ಬಾಧ್ಯಸ್ಥರಿಂದ ಸಂಘಟಿತ ಪ್ರಯತ್ನಗಳ ಅಗತ್ಯವಿದೆ.  ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಪ್ರಸ್ತುತ ಅಂತಿಮಗೊಳಿಸುತ್ತಿರುವ ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟು, ಕಲಿಕೆಯ ವಿವಿಧ ಕ್ಷೇತ್ರಗಳ ನಡುವಿನ ಸಾಂಪ್ರದಾಯಿಕ ಶ್ರೇಣಿಗಳು ಮತ್ತು ಕಂದಕಗಳನ್ನು ಸಹ ತೆಗೆದುಹಾಕುತ್ತದೆ ಇದು ಕಲೆ ಮತ್ತು ವಿಜ್ಞಾನಗಳ ನಡುವಿನ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ, ವೃತ್ತಿಪರ ಮತ್ತು ಶೈಕ್ಷಣಿಕ ವಿಭಾಗಗಳ ನಡುವೆ ಸಂಕೀರ್ಣ ಪ್ರತ್ಯೇಕತೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಶೈಕ್ಷಣಿಕ, ಪಠ್ಯೇತರ ಮತ್ತು ಪ್ರಾಯೋಗಿಕ ಕಲಿಕೆಗೆ ಕ್ರೆಡಿಟ್ ಗಳನ್ನು ಒದಗಿಸುವ ಮೂಲಕ, ಎನ್.ಸಿಆರ್.ಎಫ್ ಔಪಚಾರಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದವರು ತಮ್ಮ ಪ್ರಾಯೋಗಿಕ ಅನುಭವವನ್ನು ಸೂಕ್ತ ಚೌಕಟ್ಟಿನ ಮಟ್ಟದೊಂದಿಗೆ ಹೊಂದಿಸುವ ಮೂಲಕ ಮರುಜೋಡಣೆ ಪಡೆಯಲು ಸಹಾಯ ಮಾಡುತ್ತದೆ.

ಈ ಸಮಾಲೋಚನೆಗಳನ್ನು ಉದ್ದೇಶಿಸಿ ಯುವಜನ ಅಭಿವೃದ್ಧಿ ಮತ್ತು ಪಾಲುದಾರಿಕೆಯ ಜನರೇಷನ್ ಅನ್ಲಿಮಿಟೆಡ್ (ಯು ವ್ಹಾ), ಮುಖ್ಯಸ್ಥೆ ಶ್ರೀಮತಿ ಧುವರಾಖಾ ಶ್ರೀರಾಮ್ ಮತ್ತು ಯುನಿಸೆಫ್ ನ ಶಿಕ್ಷಣ ಮುಖ್ಯಸ್ಥ ಶ್ರೀ ಟೆರ್ರಿ ಡುರಿಯನ್  ಅವರು ಮಾತನಾಡಿದರು.  ಮರುವಿನ್ಯಾಸ, ವೃತ್ತಿಪರ ಶಿಕ್ಷಣ ಮಾದರಿಗಳನ್ನು ಮರುಶೋಧಿಸುವುದು ಮೊದಲಾದವುಗಳಿಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಸುದೀರ್ಘವಾಗಿ ಚರ್ಚಿಸಲಾಯಿತು. ಜೀವನ ಕೌಶಲ್ಯಗಳ ಪ್ರಾಮುಖ್ಯತೆ - ಲಂಬವಾದ ಮತ್ತು ಸಮತಲ, ಮಹತ್ವಾಕಾಂಕ್ಷೆಯ ಸಂಪರ್ಕ ಕಡಿತ ಮತ್ತು ವೃತ್ತಿಪರ ಶಿಕ್ಷಣ ಶಾಲೆಯನ್ನು ತೆಗೆದುಕೊಳ್ಳುವಲ್ಲಿ ಮಾಹಿತಿ ಅಸಮ್ಮತಿ, ವೃತ್ತಿಪರ ಶಿಕ್ಷಣಕ್ಕೆ ಲಿಂಗ ದೃಷ್ಟಿಕೋನವನ್ನು ನೀಡುವುದು, ಇತ್ಯಾದಿಗಳು ಸಹ ಈ ಚರ್ಚೆಗಳ ಕೇಂದ್ರಬಿಂದುವಾಗಿದ್ದವು. ಹೊಸದಾಗಿ ಪ್ರಾರಂಭಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ, 2020ರ ನಿಟ್ಟಿನಲ್ಲಿ ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಮಿಷಿನ್ ಲರ್ನಿಂಗ್, ಡೇಟಾ ಅನಾಲಿಟಿಕ್ಸ್, ರೊಬೋಟಿಕ್ ಪ್ರಕ್ರಿಯೆ ಆಟೋಮೇಷನ್, ಸೈಬರ್ ಸೆಕ್ಯುರಿಟಿ, ಇತ್ಯಾದಿಗಳಂತಹ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವುದು ಇದರ ಗುರಿಯಾಗಿರಬೇಕು, ಇದರಿಂದ ವೃತ್ತಿಪರ ಪದವೀಧರರು ಜಾಗತಿಕ ಆರ್ಥಿಕತೆಯಲ್ಲಿ ಸ್ಪರ್ಧಿಸಬಹುದು. ವರ್ಚುವಲ್ ಲ್ಯಾಬ್ ಗಳನ್ನು ಸ್ಥಾಪಿಸುವ ಅಗತ್ಯ ಒತ್ತಿ ಹೇಳಿ, ಇದರಿಂದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಪ್ರಾಯೋಗಿಕ ಮತ್ತು ನೇರ ಅನುಭವಕ್ಕೆ ಸಮಾನ ಪ್ರವೇಶವನ್ನು ಹೊಂದಿರುತ್ತಾರೆ ಎಂದು ತಿಳಿಸಲಾಯಿತು.  ಬಹು-ಕೌಶಲ್ಯ ಕೋರ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕೋರ್ಸ್ ನಂತಹ ವೃತ್ತಿಪರ ಕೋರ್ಸ್ ಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳ ಸ್ಪಂದನೆಯಿಂದ ಸಮ್ಮೇಳನವು ಪ್ರಯೋಜನ ಪಡೆಯಿತು.

WhatsApp Image 2022-12-17 at 8.25.38 PM.jpeg

2ನೇ ದುಂಡುಮೇಜಿನ ಸಭೆಯಲ್ಲಿ ಶಾಲೆಗಳಲ್ಲಿ ವೃತ್ತಿ ಸಮಾಲೋಚನೆಯ ಪ್ರಸ್ತುತ ವ್ಯವಸ್ಥೆಗಳು ಮತ್ತು ಪ್ರಮುಖ ಕಲಿಕೆಗಳು ಹಾಗೂ ಉತ್ತಮ ರೂಢಿಗಳು ಯಾವುವು ಎಂಬುದರ ಬಗ್ಗೆ ಚರ್ಚಿಸಲಾಯಿತು.  ಪರಿಹಾರಗಳು ಕೃತಕ ಬುದ್ಧಿಮತ್ತೆ ಸೇರಿದಂತೆ ತಾಂತ್ರಿಕ ಆವಿಷ್ಕಾರಗಳನ್ನು ಬಳಸಿಕೊಂಡು ಪ್ರಮಾಣ, ವೇಗ ಮತ್ತು ಸುಸ್ಥಿರತೆಯೊಂದಿಗೆ ಶಾಲೆಗಳಲ್ಲಿ ವೃತ್ತಿ ಸಮಾಲೋಚನೆಯ ಸಾಂಸ್ಥಿಕ ಮಾದರಿಯನ್ನು ನಿರ್ಮಿಸುವತ್ತ ಗಮನ ಹರಿಸಬೇಕು ಎಂದು ಡಿ.ಇ.ಎಲ್ ಕಾರ್ಯದರ್ಶಿ ಹೇಳಿದರು.  ಸಂಪನ್ಮೂಲಗಳನ್ನು ನಕ್ಷೆ ಮಾಡುವ ಮತ್ತು ಅದರ ಡೇಟಾಬೇಸ್ ಅನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಹೇಳಿದರು.  ವೃತ್ತಿ ಮಾರ್ಗದರ್ಶನದ ಮೇಲಿನ ಚರ್ಚೆಗಳು ಶಾಲೆಗಳಲ್ಲಿಯೇ ಮಾಡಬಹುದಾದ ಭೌತಿಕ ಹಸ್ತಕ್ಷೇಪಗಳು ಮತ್ತು ವೃತ್ತಿ ಸಮಾಲೋಚನೆಯ ಪಾತ್ರದ ಬಗ್ಗೆಯೂ ಪ್ರತಿಬಿಂಬಿತವಾಗಿದ್ದವು.

*****



(Release ID: 1884633) Visitor Counter : 284