ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್  ಅಡಿಯಲ್ಲಿ  ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಎಬಿಎಚ್‌ಎ) ಸಂಖ್ಯೆಗಳೊಂದಿಗೆ 4 ಕೋಟಿಗೂ ಹೆಚ್ಚು ನಾಗರಿಕರ ಆರೋಗ್ಯ ದಾಖಲೆಗಳನ್ನು ಡಿಜಿಟೈಸ್ ಜೊತೆಗೆ ಲಿಂಕ್ ಮಾಡಲಾಗಿದೆ.


ನಾಗರಿಕರು ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಪಡೆಯಬಹುದು ಮತ್ತು ನಿರ್ವಹಿಸಬಹುದಾಗಿದೆ.ಅಲ್ಲದೇ (ಎಬಿಡಿಎಂ ) ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಪೇಪರ್-ಲೆಸ್ ಡಿಜಿಟಲ್ ಆರೋಗ್ಯ ಸೇವೆಗಳನ್ನು ಸಹ ಪಡೆಯಬಹುದಾಗಿದೆ.

Posted On: 17 DEC 2022 2:27PM by PIB Bengaluru

ಪ್ರಮುಖ ಯೋಜನೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ದೇಶಕ್ಕೆ ಸಮಗ್ರ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ.  ವ್ಯಕ್ತಿಗಳ  ಎಬಿಎಚ್‌ಎ ಖಾತೆಗಳಿಗೆ 4 ಕೋಟಿಗೂ ಹೆಚ್ಚು ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡುವ ಮೂಲಕ, ಯೋಜನೆಯು ಮಹತ್ವದ ಮೈಲಿಗಲ್ಲನ್ನು ದಾಟಿದೆ.  ಇದುವರೆಗೆ 29 ಕೋಟಿಗೂ ಹೆಚ್ಚು ನಾಗರಿಕರು ತಮ್ಮ ವಿಶಿಷ್ಟ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗಳನ್ನು ಹೊಂದಿದ್ದಾರೆ.ಹೀಗೆ  ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಖಾತೆ ಹೊಂದಿದವರ ಆರೋಗ್ಯ ದಾಖಲೆಗಳನ್ನು ಅವರ  ಖಾತೆಗಳಿಗೆ ಡಿಜಿಟಲ್‌ನಲ್ಲಿ ಲಿಂಕ್ ಮಾಡುವುದರೊಂದಿಗೆ ನಾಗರಿಕರು ಅನುಕೂಲಕ್ಕೆ ಅನುಗುಣವಾಗಿ ದಾಖಲೆಗಳನ್ನು ಸುಲಭವಾಗಿ ಪಡೆದು ನಿರ್ವಹಿಸಬಹುದಾಗಿದೆ.  ಇದು ವಿವಿಧ ಆರೋಗ್ಯ ಪೂರೈಕೆದಾರರ  ಸಮಗ್ರ ವೈದ್ಯಕೀಯ ಇತಿಹಾಸವನ್ನು  ತಿಳಿಯಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಪಡೆಯಲು ಮತ್ತು  ನಿರ್ಧರಿಸಲು ಸಹಾಯಕವಾಗುತ್ತದೆ. ಇದಲ್ಲದೆ, ನಾಗರಿಕರು ಸಂಬಂಧಿತ ಆರೋಗ್ಯ ದಾಖಲೆಗಳನ್ನು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನೋಂದಾಯಿತ ಆರೋಗ್ಯ ಪೂರೈಕೆದಾರರೊಂದಿಗೆ ಡಿಜಿಟಲ್ ಆಗಿ ಹಂಚಿಕೊಳ್ಳಬಹುದಾಗಿದೆ.

ಆರೋಗ್ಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವಲ್ಲಿ ಎಬಿಡಿಎಂ ಪಾತ್ರದ ಬಗ್ಗೆ   ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮ್ ಸೇವಕ್ ಶರ್ಮಾ  ಅವರು  ವಿವರಿಸಿ,  ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ ಅನುಷ್ಠಾನ ಸಂಸ್ಥೆಯಾಗಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಡಿಜಿಟಲ್ ಆರೋಗ್ಯ ಸೇವೆಗಳ ಪ್ರಯೋಜನಗಳನ್ನು ಹೆಚ್ಚಿನ ನಾಗರಿಕರು ಪಡೆಯಬಹುದೆಂದು ಖಚಿತಪಡಿಸಿಕೊಳ್ಳಬಹುದಾಗಿದೆ. ಈ ಯೋಜನೆಯು ವಿವಿಧ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.  ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಡಯಾಗ್ನೋಸ್ಟಿಕ್ ಲ್ಯಾಬ್‌ಗಳಂತಹ ಆರೋಗ್ಯ ಸೌಲಭ್ಯಗಳಿಗಾಗಿ ನಾವು ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ.  ಆರೋಗ್ಯ ದಾಖಲೆಗಳ ಡಿಜಿಟಲೀಕರಣವನ್ನು ಮತ್ತಷ್ಟು ಉತ್ತೇಜಿಸಲು
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನೊಂದಿಗೆ ಸಂಯೋಜಿಸಲು ನಾವು ವಿವಿಧ ಆರೋಗ್ಯ ಲಾಕರ್ ಅಪ್ಲಿಕೇಶನ್‌ಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಇದರಿಂದ ನಾಗರಿಕರು ತಮ್ಮ ಡಿಜಿಟಲ್ ದಾಖಲೆಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಸುಲಭವಾಗುತ್ತದೆ.

ಎಬಿಎಚ್‌ಎನೊಂದಿಗೆ ವ್ಯಕ್ತಿಯ ಆರೋಗ್ಯ ದಾಖಲೆಗಳ ಈ ಡಿಜಿಟಲ್ ಲಿಂಕ್ ಅನ್ನು  ಸರ್ಕಾರಗಳ ಬೆಂಬಲದೊಂದಿಗೆ ದೇಶದ ವಿವಿಧ ಆರೋಗ್ಯ ಸೌಲಭ್ಯಗಳಲ್ಲಿಯೂ  ವಿಸ್ತರಿಸಲಾಗಿದ್ದು, ದೇಶಾದ್ಯಂತ ಯೋಜನೆಯ ಲಾಭ ಪಡೆಯಬಹುದಾಗಿದೆ.ಹೀಗೆ ಎಬಿಎಚ್‌ಎ ಸಂಯೋಜಿತ ಆರೋಗ್ಯ ದಾಖಲೆಗಳಿಗೆ  ಆಂಧ್ರ ಪ್ರದೇಶ ಸರ್ಕಾರ, ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (RCH) ಯೋಜನೆ, eHospital ಮತ್ತು CoWin ಇವುಗಳು ಪ್ರಮುಖ ಕೊಡುಗೆದಾರರಾಗಿವೆ.

*****



(Release ID: 1884630) Visitor Counter : 168