ರಾಷ್ಟ್ರಪತಿಗಳ ಕಾರ್ಯಾಲಯ

ಭಾರತೀಯ ಅಂಕಿಅಂಶ ಸೇವೆಯ ಪ್ರೊಬೆಷನರಿಗಳಿಂದ ರಾಷ್ಟ್ರಪತಿಗಳ ಭೇಟಿ


ಪ್ರಸಕ್ತ ಕಾಲದಲ್ಲಿ ಮಾಹಿತಿ ಮತ್ತು ದತ್ತಾಂಶಗಳ ಹರಿವು ಹೇರಳವಾಗಿದೆ. ಈ ಯುಗದಲ್ಲಿ, ಅಂಕಿಅಂಶಗಳ ಪಾತ್ರ ಮತ್ತು ಪ್ರಾಮುಖ್ಯತೆಯು ಅತ್ಯಂತ ಮಹತ್ವದ್ದಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Posted On: 16 DEC 2022 2:39PM by PIB Bengaluru

ಭಾರತೀಯ ಸಂಖ್ಯಾಶಾಸ್ತ್ರದ ಸೇವೆಯ ಪ್ರೊಬೆಷನರ್ ಗಳು ಇಂದು (ಡಿಸೆಂಬರ್ 16, 2022) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಸರಿಯಾದ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡದೆ, ಯಾವುದೇ ರೀತಿಯ ನೀತಿ ನಿರೂಪಣೆ ಮತ್ತು ಯೋಜನೆ ಅನುಷ್ಠಾನವು ಪರಿಣಾಮಕಾರಿಯಾಗಿ ಆಗುವುದಿಲ್ಲ ಎಂದರು. ಮಾಹಿತಿ ಮತ್ತು ದತ್ತಾಂಶಗಳು (ಡೇಟಾ) ಅತಿ ಹೇರಳವಾಗಿ ಹರಿದು ಬರುತ್ತಿರುವ ಈ ಯುಗದಲ್ಲಿ, ಅಂಕಿಅಂಶಗಳ ಪಾತ್ರ ಮತ್ತು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಯಾವುದೇ ಮಾನದಂಡಕ್ಕೆ ಹೋಲಿಸಿ ಅಥವಾ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಭಾರತದ ಶ್ರೇಣಿಯ ಬಗ್ಗೆ ಮಾತನಾಡುವಾಗ, ಅದು ಅಂಕಿಅಂಶಗಳ ಮೇಲೆ ಆಧಾರವಾಗಿರುತ್ತದೆ. ಭಾರತವು ಯುವ ರಾಷ್ಟ್ರ ಅಥವಾ ಅತಿ ಹೆಚ್ಚು ಯುವ ಜನಸಂಖ್ಯೆ ಹೊಂದಿದೆ ಹಾಗೂ ಇದು ಲಾಭದಾಯಕವಾಗಿಯೂ ಇದೆ ಎಂದು ನಾವು ಹೇಳಿದಾಗ, ಅಂಕಿಅಂಶಗಳ ಆಧಾರದ ಮೇಲೆಯೇ ನಾವು ಹೇಳುತ್ತೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.

ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗಾಗಿ ಹಾಗೂ ಕೇಂದ್ರ ಮಟ್ಟದಲ್ಲಿ ಅಧಿಕೃತ ಅಂಕಿಅಂಶಗಳನ್ನು ಸಂಗ್ರಹಿಸುವಲ್ಲಿ ಭಾರತೀಯ ಸಾಂಖ್ಯಿಕ ಸೇವಾ ಅಧಿಕಾರಿಗಳು ಪ್ರಮುಖ ಪಾತ್ರವನ್ನು ಹೊಂದಿರುತ್ತಾರೆ ಎಂದು ರಾಷ್ಟ್ರಪತಿಗಳು ವಿವರಿಸಿದರು.

ಉದ್ಯೋಗಕ್ಕೆ ಸಂಖ್ಯಾಶಾಸ್ತ್ರೀಯ ವಿಧಾನಗಳಲ್ಲಿ ಹೆಚ್ಚಿನ ಪ್ರಾವೀಣ್ಯತೆಯ ಅಧಿಕಾರಿಗಳಿಗೆ ಅತಿ ಅಗತ್ಯವಿರುತ್ತದೆ, ದೇಶದ  ಕೆಲವು ಅಗತ್ಯಗಳಿಗೆ ಪರಿಹಾರಗಳನ್ನು ಒದಗಿಸಲು ಡೇಟಾ ಮತ್ತು ಮಾಹಿತಿ ಬಳಸಬೇಕಾಗುತ್ತದೆ. ತಮ್ಮ ತರಬೇತಿ ಅವಧಿಯಲ್ಲಿ ವಿವಿಧ ಮಾಡ್ಯೂಲ್ಲ್ ಗಳನ್ನು ಬಳಸಿಕೊಳ್ಳಬೇಕು ಡೇಟಾ ಮೈನಿಂಗ್, ಬಿಗ್ ಡೇಟಾ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇರಿದಂತೆ ವ್ಯಾಪಕ ಶ್ರೇಣಿಯನ್ನು ಒಳಗೊಂಡಿರುತ್ತದೆ. ಈ ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಿ ಅವುಗಳಿಂದ ನಿಖರ ಮತ್ತು ನಿರ್ದಿಷ್ಟ ಮಾಹಿತಿಯನ್ನು ಪಡೆಯಬೇಕಾಗುತ್ತದೆ ಎಂದು ರಾಷ್ಟ್ರಪತಿಗಳು ವಿವರಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ಸಾಮಾಜಿಕ-ಆರ್ಥಿಕ ಪರಿವರ್ತನೆಯ ಹೊಸ ಹಂತದ ತುದಿಯಲ್ಲಿದೆ ಎಂದು ರಾಷ್ಟ್ರಪತಿಗಳು ಪ್ರಸ್ತಾಪಿಸಿದರು. ಡಿಜಿಟಲ್ ತಂತ್ರಜ್ಞಾನಗಳ ಅತಿ ಹೆಚ್ಚು ಬಳಕೆಯು ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತಂದಿದೆ, ಇ-ಆಡಳಿತದ ಒಟ್ಟಾರೆ ಚಿತ್ರಣವೇ ಬದಲಾಗಿದೆ. ಈ ಉಪಕ್ರಮಗಳ ಮೂಲಕ ಬರುತ್ತಿರುವ ಹೇರಳ ಮಾಹಿತಿಗಳು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಅತಿ ಹೆಚ್ಚು ನೆರವು ಒದಗಿಸುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.

ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಮಾಡಬೇಕು. ಇದರಿಂದ ಜನರಿಗೆ ಒಳಿತಾಗುತ್ತದೆ ಎಂದು ರಾಷ್ಟ್ರಪತಿಗಳು ಸಲಹೆ ನೀಡಿದರು. ಭಾರತವನ್ನು ಪ್ರಗತಿ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ನಿಮ್ಮಂಥ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು. ಅಧಿಕಾರಿಗಳು ಒದಗಿಸುವ ಮಾಹಿತಿ ಮತ್ತು ದತ್ತಾಂಶ ವಿಶ್ಲೇಷಣೆಯು ಅಭಿವೃದ್ಧಿಯ ಹಾದಿಯಲ್ಲಿ ಮಹತ್ವದ್ದು ಮತ್ತು ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳುವ ನೀತಿಗಳನ್ನು ರೂಪಿಸಲು ಮತ್ತು ಅದನ್ನು ಕಾರ್ಯಗತಗೊಳಿಸಲು ನೆರವಾಗುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ವಿವರಿಸಿದರು.

ರಾಷ್ಟ್ರಪತಿಗಳ ಸಂಪೂರ್ಣ ಭಾಷಣಕ್ಕೆ ಇಲ್ಲಿ ಕ್ಲಿಕ್ ಮಾಡಿ

*****



(Release ID: 1884137) Visitor Counter : 139