ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಐಆರ್ ಇಡಿಎ 1,000 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಗಾಗಿ ಎಸ್ ಜೆವಿಎನ್ ಗ್ರೀನ್ ಎನರ್ಜಿ ಲಿಮಿಟೆಡ್ ನೊಂದಿಗೆ 4,445 ಕೋಟಿ ರೂ.ಗಳ ಸಾಲದ ಒಪ್ಪಂದಕ್ಕೆ ಸಹಿ ಹಾಕಿದೆ.
Posted On:
15 DEC 2022 4:00PM by PIB Bengaluru

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಲಿಮಿಟೆಡ್ (ಐಆರ್ ಇಡಿಎ) ಇಂದು ರಾಜಸ್ಥಾನದ ಬಿಕಾನೇರ್ ನಲ್ಲಿ 1,000 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಗಾಗಿ ಎಸ್ ಜೆವಿಎನ್ ಗ್ರೀನ್ ಎನರ್ಜಿ ಲಿಮಿಟೆಡ್ ನೊಂದಿಗೆ (ಎಸ್ ಜೆವಿಎನ್ ಲಿಮಿಟೆಡ್ ನ ಅಂಗಸಂಸ್ಥೆ) 4,444.71 ಕೋಟಿ ರೂ.ಗಳ ಐತಿಹಾಸಿಕ ಸಾಲದ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಐಆರ್ ಇಡಿಎ ಅನುದಾನಿತ ಯೋಜನೆಯು ಬಿಕಾನೇರ್ ಬಳಿಯ 400/220 ಕಿಲೊವ್ಯಾಟ್ ಸಬ್ ಸ್ಟೇಷನ್ ಬಿಕಾನೇರ್-2 ಕ್ಕೆ ಸಂಪರ್ಕ ಕಲ್ಪಿಸುತ್ತದೆ. ವಿಜಿಎಫ್ ಬೆಂಬಲದ ಆಧಾರದ ಮೇಲೆ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಗ್ರಿಡ್ ಸಂಪರ್ಕಿತ ಸೌರ ಪಿವಿ ವಿದ್ಯುತ್ ಯೋಜನೆಯನ್ನು ಅಭಿವೃದ್ಧಿಪಡಿಸಲು ಸಿಪಿಎಸ್ ಯು ಎರಡನೆಯ ಹಂತದ ಮೂರನೇ ಕಂತಿನ ಯೋಜನೆಯಡಿ ಐಆರ್ ಇಡಿಎ ಆಹ್ವಾನಿಸಿದ ಟೆಂಡರ್ ಮೂಲಕ ಎಸ್ ಜೆವಿಎನ್ ಈ ಯೋಜನೆಯನ್ನು ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಐಆರ್ ಇಡಿಎಯ ಉಪ ವ್ಯವಸ್ಥಾಪಕ ನಿರ್ದೇಶಕರು, "1,000 ಮೆಗಾವ್ಯಾಟ್ ಸೌರ ಯೋಜನೆಯ ಅಭಿವೃದ್ಧಿಗಾಗಿ ಎಸ್ ಜಿಇಎಲ್ ಗೆ ಐಆರ್ ಇಡಿಎ ಯ ಅತ್ಯಧಿಕ ಸಾಲದ ಮೊತ್ತವನ್ನು ಮಂಜೂರು ಮಾಡಲು ನಾವು ಸಂತೋಷಿಸುತ್ತೇವೆ. ಈ ರೀತಿಯ ಸಹಕಾರದ ಮೂಲಕ 2030ರ ವೇಳೆಗೆ ನವೀಕರಿಸಬಹುದಾದ ಇಂಧನಗಳಿಂದ ಶೇ.50ರಷ್ಟು ಇಂಧನದ ಪಾಲನ್ನು ಪಡೆಯುವ ಗುರಿಯನ್ನು ಸಾಧಿಸಲು ನಾವು ಭಾರತ ಸರ್ಕಾರವನ್ನು ಬೆಂಬಲಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಈ ಪಾಲುದಾರಿಕೆಯು ಹಸಿರು ಹೂಡಿಕೆಯನ್ನು ಉತ್ತೇಜಿಸಿ, ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ತಿಳಿಸಿದ್ದಾರೆ.

ಐ.ಆರ್.ಇ.ಡಿ.ಎ.ಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರದೀಪ್ ಕುಮಾರ್ ದಾಸ್ ಮತ್ತು ಎಸ್.ಜೆ.ವಿ.ಎನ್.ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ನಂದ್ ಲಾಲ್ ಶರ್ಮಾ ಅವರ ಉಪಸ್ಥಿತಿಯಲ್ಲಿ, ಉಪ ವ್ಯವಸ್ಥಾಪಕ ನಿರ್ದೇಶಕ (ಐ.ಆರ್.ಇ.ಡಿ.ಎ.) ಶ್ರೀ ಪ್ರದೀಪ್ತಾ ಕುಮಾರ್ ರಾಯ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಲ್. ಶರ್ಮಾ (ಎಸ್.ಜಿ.ಇ.ಎಲ್.) ಐ.ಆರ್.ಇ.ಡಿ.ಎ.ಯ ಕಾರ್ಪೊರೇಟ್ ಕಚೇರಿಯಲ್ಲಿ ಈ ಸಾಲದ ಒಪ್ಪಂದಕ್ಕೆ ಸಹಿ ಹಾಕಿದರು. ಐ.ಆರ್.ಇ.ಡಿ.ಎ. ನಿರ್ದೇಶಕರಾದ (ತಾಂತ್ರಿಕ) ಶ್ರೀ ಚಿಂತನ್ ಷಾ, ಎಸ್.ಜೆ.ವಿ.ಎನ್. ನಿರ್ದೇಶಕ (ಹಣಕಾಸು) ಶ್ರೀ ಎ.ಕೆ. ಸಿಂಗ್, ಸಿ.ಎಫ್.ಒ. ಡಾ. ಆರ್. ಸಿ. ಶರ್ಮಾ, ಶ್ರೀಮತಿ ದೇಬ್ಜಾನಿ ಭಾಟಿಯಾ, ಜಿ.ಎಂ. (ಟಿಎಸ್), ಐ.ಆರ್.ಇ.ಡಿ.ಎ. ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 1883951)