ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಅಂತಾರಾಷ್ಟ್ರೀಯ ದರದಲ್ಲಿ ದಾಖಲೆಯ ಹೆಚ್ಚಳದ ಹೊರತಾಗಿಯೂ 2022ರ ಏಪ್ರಿಲ್ 6 ರಿಂದ ಸಾರ್ವಜನಿಕ ವಲಯದ ಒಎಂಸಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿಲ್ಲ: ಶ್ರೀ ಹರ್ದೀಪ್ ಎಸ್. ಪುರಿ.
ಹೆಚ್ಚಿನ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಪರಿಣಾಮದಿಂದ ಭಾರತೀಯ ಗ್ರಾಹಕರನ್ನು ರಕ್ಷಿಸಲು ಕೇಂದ್ರ ಸರ್ಕಾರ ಕೇಂದ್ರ ಅಬಕಾರಿ ಸುಂಕವನ್ನು ಎರಡು ಬಾರಿ ತಗ್ಗಿಸಿದೆ.
Posted On:
15 DEC 2022 1:47PM by PIB Bengaluru
ಭಾರತವು ತನ್ನ ಕಚ್ಚಾ ತೈಲದ ಅಗತ್ಯದ ಪೈಕಿ ಶೇ. 85 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆಯಾ ಬೆಲೆಗಳೊಂದಿಗೆ ಸಂಬಂಧ ಹೊಂದಿವೆ. ಪೆಟ್ರೋಲ್ ಮತ್ತು ಡೀಸೆಲ್ ನ ಚಿಲ್ಲರೆ ದರ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿವೆ ಅಂದರೆ ಕಚ್ಚಾತೈಲ ಖರೀದಿ ದರ, ವಿನಿಮಯ ದರ, ಸಾಗಣೆ ಶುಲ್ಕಗಳು, ಒಳನಾಡು ಸರಕು ಸಾಗಣೆ ವೆಚ್ಚ, ಶುದ್ಧೀಕರಣದ ಲಾಭ, ಮಾರಾಟಗಾರರ ಕಮಿಷನ್, ಕೇಂದ್ರ ತೆರಿಗೆಗಳು, ರಾಜ್ಯದ ವ್ಯಾಟ್ ಮತ್ತು ಇತರ ವೆಚ್ಚಗಳು.
ನವೆಂಬರ್ 2020 ಮತ್ತು ನವೆಂಬರ್ 2022 ರ ನಡುವೆ ಕಚ್ಚಾ ತೈಲದ ಭಾರತೀಯ ಖರೀದಿಯ ಸರಾಸರಿ ಬೆಲೆ ಶೇ.102ರಷ್ಟು (43.34 ಡಾಲರ್ ಗಳಿಂದ 87.55 ಡಾಲರ್ ಗೆ) ಏರಿದ್ದು, ಈ ಅವಧಿಯಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಚಿಲ್ಲರೆ ದರ ಕೇವಲ ಶೇ.18.95 ಮತ್ತು ಶೇ.26.5 ರಷ್ಟು ಹೆಚ್ಚಾಗಿದೆ. ಕೆಲವು ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ಹೋಲಿಕೆ ಈ ಕೆಳಗಿನಂತಿದೆ:
(ಬೆಲೆಗಳು ಐ.ಎನ್.ಆರ್.ನಲ್ಲಿ)
|
ಅಕ್ಟೋಬರ್ 2022
|
ಅಕ್ಟೋಬರ್ 2020
|
ಶೇಕಡವಾರು ಬದಲಾವಣೆ
|
ದೇಶ
|
ಪೆಟ್ರೋಲ್
|
ಡೀಸೆಲ್
|
ಪೆಟ್ರೋಲ್
|
ಡೀಸೆಲ್
|
ಪೆಟ್ರೋಲ್
|
ಡೀಸೆಲ್
|
ಭಾರತ (ದೆಹಲಿ)
|
96.72
|
89.62
|
81.06
|
70.53
|
19.3%
|
27.1%
|
ಅಮೆರಿಕ
|
83.00
|
113.38
|
41.87
|
46.35
|
98.2%
|
144.6%
|
ಕೆನಡ
|
104.65
|
130.84
|
57.96
|
54.87
|
80.6%
|
138.4%
|
ಸ್ಪೇನ್
|
140.47
|
154.88
|
100.27
|
88.96
|
40.1%
|
74.1%
|
ಯುಕೆ
|
152.41
|
171.35
|
108.06
|
112.76
|
41.0%
|
52.0%
|
ವಿನಿಮಯ ದರ
|
Rs. 82.34/$
|
Rs. 73.46/$
|
12 %
|
ಮೂಲ: ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ (ಪಿಪಿಎಸಿ), ನವೆಂಬರ್ 20 ಮತ್ತು ನವೆಂಬರ್ 22 ರ ಐಇಎ ವರದಿ ಆಧರಿಸಿದೆ.
ಅಂತಾರಾಷ್ಟ್ರೀಯ ದರಗಳ ದಾಖಲೆಯ ಹೆಚ್ಚಳದ ಹೊರತಾಗಿಯೂ, 2022ರ ಏಪ್ರಿಲ್ 6 ರಿಂದ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿಲ್ಲ. ಇದರ ಪರಿಣಾಮವಾಗಿ, 2021-22ರ ಹಣಕಾಸು ವರ್ಷದ ಎಚ್ 1 ರಲ್ಲಿ ಒಟ್ಟು 28360 ಕೋಟಿ ರೂ.ಗಳ 'ತೆರಿಗೆಗೆ ಮುಂಚಿನ ಲಾಭ'ಕ್ಕೆ ಪ್ರತಿಯಾಗಿ, ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್.ಪಿ.ಸಿಎಲ್ ಈ ಮೂರು ಒಎಂಸಿಗಳು ಪ್ರಸಕ್ತ ಹಣಕಾಸು ವರ್ಷ 2022-23 ರ ಎಚ್ 1 ರಲ್ಲಿ ಒಟ್ಟು 27276 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿವೆ.
ಹೆಚ್ಚಿದ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಪರಿಣಾಮದಿಂದ ಭಾರತೀಯ ಗ್ರಾಹಕರನ್ನು ರಕ್ಷಿಸಲು, ಕೇಂದ್ರ ಸರ್ಕಾರವು 2021 ರ ನವೆಂಬರ್ 21 ಮತ್ತು 2022ರ ಮೇ 22, ರಂದು ಎರಡು ಬಾರಿ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸಿತು, ಇದು ಪೆಟ್ರೋಲ್ ಮತ್ತು ಡೀಸೆಲ್ ಗೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 13 ಮತ್ತು 16 ರೂ.ಗಳ ಸಂಚಿತ ಕಡಿತ ಮಾಡಿತು, ಇದನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲಾಯಿತು. ಕೇಂದ್ರ ಅಬಕಾರಿ ಸುಂಕದಲ್ಲಿ ಈ ಕಡಿತಗಳನ್ನು ಅನುಸರಿಸಿ, ಕೆಲವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ದರಗಳನ್ನು ತಗ್ಗಿಸಿವೆ. ಡಿಸೆಂಬರ್ 2020 ರಿಂದ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಮಾಸಿಕ ಸರಾಸರಿ ಚಿಲ್ಲರೆ ಮಾರಾಟ ಬೆಲೆಗಳ (ಆರ್.ಎಸ್.ಪಿ.) ವಿವರಗಳನ್ನು ಅನುಬಂಧ -1 ರಲ್ಲಿ ನೀಡಲಾಗಿದೆ.
ಭಾರತವು ತನ್ನ ದೇಶೀಯ ಎಲ್ಪಿಜಿ ಬಳಕೆಯ ಶೇ.60 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ದೇಶದಲ್ಲಿ ಎಲ್ಪಿಜಿಯ ಬೆಲೆಗಳು ಎಲ್ಪಿಜಿಯ ಅಂತಾರಾಷ್ಟ್ರೀಯ ಬೆಲೆಗಳ ಮಾನದಂಡವಾದ ಸೌದಿ ಕರಾರು ದರ (ಸಿಪಿ) ವನ್ನು ಆಧರಿಸಿರುತ್ತವೆ. ಸೌದಿ ಸಿಪಿ ಏಪ್ರಿಲ್ 2020 ರಲ್ಲಿದ್ದ 236 ಡಾಲರ್ / ಮೆಟ್ರಿಕ್ ಟನ್ ನಿಂದ 2022 ರ ಏಪ್ರಿಲ್ ನಲ್ಲಿ 952 ಡಾಲರ್ / ಮೆಟ್ರಿಕ್ ಟನ್ ಗೆ ಏರಿದೆ ಮತ್ತು ಪ್ರಸ್ತುತ ಉನ್ನತ ಮಟ್ಟದಲ್ಲಿ ಮೇಲುಗೈ ಸಾಧಿಸಿದೆ. ಆದಾಗ್ಯೂ, ಸರ್ಕಾರವು ದೇಶೀಯ ಎಲ್ಪಿಜಿ ಗ್ರಾಹಕರಿಗೆ ಪರಿಣಾಮಕಾರಿಯಾಗಿ ದರ ನಿರ್ವಹಣೆ ಮಾಡುವುದನ್ನು ಮುಂದುವರಿಸಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ದೇಶೀಯ ಎಲ್ಪಿಜಿ ಮಾರಾಟದಲ್ಲಿ ಭಾರಿ ನಷ್ಟವನ್ನು ಅನುಭವಿಸಿವೆ. ಈ ನಷ್ಟವನ್ನು ಸರಿದೂಗಿಸಲು, ಒಎಂಸಿಗಳಿಗೆ 22,000 ಕೋಟಿ ರೂ.ಗಳ ಒಂದು ಬಾರಿಯ ಪರಿಹಾರವನ್ನು ಸರ್ಕಾರ ಇತ್ತೀಚೆಗೆ ಅನುಮೋದಿಸಿದೆ.
ಡಿಸೆಂಬರ್ 2020 ರಿಂದ ದೇಶೀಯ ಎಲ್ಪಿಜಿಯ (ದೆಹಲಿಯಲ್ಲಿ) ಚಿಲ್ಲರೆ ಮಾರಾಟ ಬೆಲೆ (ಆರ್.ಎಸ್.ಪಿ.) ವಿವರಗಳನ್ನು ಅನುಬಂಧ -2 ರಲ್ಲಿ ನೀಡಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ಲೋಕಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
***
(Release ID: 1883813)
Visitor Counter : 164