ಹಣಕಾಸು ಸಚಿವಾಲಯ

ಭಾರತದ ಅಧ್ಯಕ್ಷತೆಯಲ್ಲಿ ಜಿ20ರ ಮೊದಲನೇ ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ನಿಯೋಗಿಗಳ (ಎಫ್ ಸಿಬಿಡಿ) ಸಭೆಯನ್ನು ಕರ್ನಾಟಕದ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.


ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಫೈನಾನ್ಸ್ ಟ್ರ್ಯಾಕ್ ನ ಪ್ರಾರಂಭವನ್ನು ಸೂಚಿಸುವ ಎಫ್ ಸಿಬಿಡಿ ಸಭೆಯಲ್ಲಿ 160 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಎರಡು ದಿನಗಳ ಎಫ್ ಸಿಬಿಡಿ ಸಭೆಯು ಜಾಗತಿಕ ಆರ್ಥಿಕತೆ, ಅಂತರರಾಷ್ಟ್ರೀಯ ಹಣಕಾಸು ರಚನೆ, ಮೂಲಸೌಕರ್ಯ, ಸುಸ್ಥಿರ ಹಣಕಾಸು, ಅಂತರರಾಷ್ಟ್ರೀಯ ತೆರಿಗೆ, ಜಾಗತಿಕ ಆರೋಗ್ಯ, ಹಣಕಾಸು ವಲಯ ಮತ್ತು ಹಣಕಾಸು ಒಳಗೊಳ್ಳುವಿಕೆಯ ವಿಷಯಗಳ ಬಗ್ಗೆ 7 ಚರ್ಚಾ ಅಧಿವೇಷನಗಳನ್ನು ಮುಕ್ತಾಯಗೊಳಿಸಿತು.

'21 ನೇ ಶತಮಾನದ ಪಾಲುದಾರಿಕಾ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ (ಎಂಡಿಬಿ) ಪ್ರಬಲಪಡಿಕೆ' ಮತ್ತು 'ಹವಾಮಾನ ಹಾನಿಯನ್ನು ತಡೆಯುವಲ್ಲಿ ಮತ್ತು ಸೂಕ್ಷ್ಮ ಹಣಕಾಸು ನಿರ್ವಹಣೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರ' ಎಂಬ ವಿಷಯದ ಕುರಿತ ಚರ್ಚೆಗಳು ಸಹ ಬದಿಯಲ್ಲಿ ನಡೆದವು.

Posted On: 14 DEC 2022 6:34PM by PIB Bengaluru

ಭಾರತದ ಅಧ್ಯಕ್ಷತೆಯಡಿಯಲ್ಲಿ 2022ರ  ಡಿಸೆಂಬರ್ 13 ರಿಂದ 14  ರವರೆಗೆ ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಜಿ 20 ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಉಪ ಮುಖ್ಯಸ್ಥರ ಸಭೆಯು ಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ  ಅಜಯ್ ಸೇಠ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಡಾ. ಮೈಕೆಲ್ ಪಾತ್ರಾ  ಅವರ ಸಹ-ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಜಿ 20 ಸದಸ್ಯ ರಾಷ್ಟ್ರಗಳ ಉಪ ಮುಖ್ಯಸ್ಥರು, ಆಹ್ವಾನಿತ ರಾಷ್ಟ್ರಗಳ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ 160ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಉತ್ಸಾಹದಿಂದ ಸಭೆ ಪಾಲ್ಗೊಂಡಿದ್ದರು.  ಇದು  ಭಾರತೀಯ ಅಧ್ಯಕ್ಷತೆಯಡಿಯಲ್ಲಿ ಜಿ 2೦ ಹಣಕಾಸು ಮಾರ್ಗ (ಟ್ರ್ಯಾಕ್)ದ ಪ್ರಾರಂಭದ ಅಂಗವಾಗಿದೆ. 

ಎರಡು ದಿನಗಳ ಅವಧಿಯಲ್ಲಿ, ಏಳು ಚರ್ಚಾಗೋಷ್ಠಿಗಳು ಮತ್ತು ಎರಡು ಬದಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿವಿಧ ಕಲಾ ಪ್ರಕಾರಗಳ ಪ್ರದರ್ಶನದ ಮೂಲಕ ಪ್ರತಿನಿಧಿಗಳಿಗೆ ಕರ್ನಾಟಕದ ಸಾಂಪ್ರದಾಯಿಕ ಮತ್ತು ಸಮಕಾಲೀನ ಸಂಸ್ಕೃತಿಯ ಒಂದು ಕಿರುನೋಟವನ್ನು ಪರಿಚಯಿಸಲಾಯಿತು.

 

ಈ ಸಭೆಯ ಕಾರ್ಯಸೂಚಿಯನ್ನು ಮಾನ್ಯ  ಪ್ರಧಾನಮಂತ್ರಿಯವರು ಜಿ 20ರ ಧ್ಯೇಯಕ್ಕೆ ನೀಡಿದ ಚಿಂತನೆ ಮತ್ತು ಭಾರತದ ಅಧ್ಯಕ್ಷತೆಯನ್ನು ಗಮನದಲ್ಲಿಟ್ಟುಕೊಂಡು  ರೂಪಿಸಲಾಗಿತ್ತು.

2023ರ ಭಾರತದ ಜಿ20 ಹಣಕಾಸು ಮಾರ್ಗದ ಆದ್ಯತೆಗಳ ಬಗ್ಗೆ ವಿವಿಧ ಕಾರ್ಯಪ ಕ್ಷೇತ್ರಗಳಲ್ಲಿ ಜಿ 20 ಸದಸ್ಯರ ಅಭಿಪ್ರಾಯಗಳನ್ನು ಪಡೆಯುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು.  

21ನೇ ಶತಮಾನದಲ್ಲಿ ಹಂಚಿಕೆಯ ಜಾಗತಿಕ ಸವಾಲುಗಳನ್ನು ಎದುರಿಸಲು ಎಂ.ಡಿ.ಬಿ.ಗಳನ್ನು ಬಲಪಡಿಸುವುದು' ಎಂಬ ವಿಷಯದ  ಬಗ್ಗೆ  ಉಪ ಮುಖ್ಯಸ್ಥರ ಸಭೆಯ  ನೇಪಥ್ಯದಲ್ಲಿ ನಡೆಯಿತು. ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಸುಮನ್ ಬೆರಿಯವರ ನಿರ್ವಹಣೆ ಮಾಡಿದ ಈ ಕಾರ್ಯಕ್ರಮವು, ಗಡಿಯಾಚೆಗಿನ ಸವಾಲುಗಳನ್ನು ಪರಿಹರಿಸುವಲ್ಲಿ ಎಂ.ಡಿ.ಬಿ.ಗಳು ದೇಶಗಳಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಚರ್ಚಿಸುವತ್ತ ಗಮನ ಹರಿಸಿತು.  ಅಮೆರಿಕದ ಹಣಕಾಸು ಇಲಾಖೆ ಉಪ ಮುಖ್ಯಸ್ಥ  ಶ್ರೀ ಆಂಡಿ ಬೌಕೋಲ್ ಮತ್ತು ಸೌದಿ ಅರೇಬಿಯಾದ ಹಣಕಾಸು ಇಲಾಖೆ ಉಪ ಮುಖ್ಯಸ್ಥ ಶ್ರೀ ರಿಯಾದ್ ಅಲ್ಖರೀಫ್ ಅವರು ಎಡಿಬಿಯ ಮಹಾನಿರ್ದೇಶಕ ಶ್ರೀ ಟೊಮೊಯುಕಿ ಕಿಮುರಾ  ಮತ್ತು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ  ದೇವೇಶ್ ಕಪೂರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 'ಹವಾಮಾನ ಅಪಾಯವನ್ನು ನಿರ್ವಹಿಸುವಲ್ಲಿ ಮತ್ತು ಹಸಿರು ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರ'  ಕುರಿತ ಮತ್ತೊಂದು ಬದಿಯ  ಕಾರ್ಯಕ್ರಮವೂ ನಡೆಯಿತು.

ಬೆಂಗಳೂರಿನಲ್ಲಿ ಹೆಚ್ಚಿನ ಜಿ 20 ನಿಯೋಗಗಳು, ಆಹ್ವಾನಿತರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಅದರಲ್ಲೂ ವಿಶೇಷವಾಗಿ ಸವಾಲಿನ ಜಾಗತಿಕ ಆರ್ಥಿಕ ಸನ್ನಿವೇಶದ ನಡುವೆ ಭೌತಿಕ ಉಪಸ್ಥಿತಿಯು ಭಾರತದ ಜಿ 20 ಅಧ್ಯಕ್ಷತೆಯನ್ನು ಬೆಂಬಲಿಸುವ ಜಾಗತಿಕ ಬದ್ಧತೆಯನ್ನು ಪ್ರದರ್ಶಿಸಿತು.

"ವಸುದೈವ ಕುಟುಂಬಕಂ" ಮತ್ತು "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ"   ಎಂಬ ವಿಷಯಗಳನ್ನು ಪ್ರತಿಬಿಂಬಿಸುವ ಚರ್ಚೆಗಳು ಜಾಗತಿಕ ಆರ್ಥಿಕತೆ ಮತ್ತು ಅಪಾಯಗಳು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು (ಎಂಡಿಬಿ) ಬಲಪಡಿಸುವುದು, ಜಾಗತಿಕ ಸಾಲ ಸೂಕ್ಷ್ಮತೆಗಳನ್ನು ನಿರ್ವಹಿಸುವುದು, ಹವಾಮಾನ ಕ್ರಮ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್.ಡಿ.ಜಿಗಳು) ಮತ್ತು ತಾಳಿಕೊಳ್ಳುವ, ಸಮಗ್ರ ಮತ್ತು ಸುಸ್ಥಿರ ಭವಿಷ್ಯದ ನಗರಗಳನ್ನು ನಿರ್ಮಿಸುವ ವಿಷಯಗಳ ಮೇಲೆ ಕೇಂದ್ರೀಕರಿಸಿದವು.

ಜಾಗತಿಕ ಆರ್ಥಿಕತೆ ಮತ್ತು ಚೌಕಟ್ಟು ಕಾರ್ಯ ಗುಂಪಿನ ಆದ್ಯತೆಗಳ ಮೇಲಿನ ಮೊದಲ ಅಧಿವೇಶನದಲ್ಲಿ, ಜಿ 20 ಸದಸ್ಯರು ಜಾಗತಿಕ ಆರ್ಥಿಕ  ಸವಾಲುಗಳು, ಆಹಾರ ಮತ್ತು ಇಂಧನ ಅಭದ್ರತೆ ಮತ್ತು ಹವಾಮಾನ ಬದಲಾವಣೆಯ ಸ್ಥೂಲ ಆರ್ಥಿಕ ಪರಿಣಾಮಗಳು ಸೇರಿದಂತೆ ಜಾಗತಿಕ ಆರ್ಥಿಕ ಸವಾಲುಗಳ ಕುರಿತು ಚರ್ಚಿಸಿದರು.

ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ ಕುರಿತ ಅಧಿವೇಶನದಲ್ಲಿ, ಪ್ರತಿನಿಧಿಗಳು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು (ಎಂಡಿಬಿಗಳು) ಬಲಪಡಿಸುವುದು ಮತ್ತು ಜಾಗತಿಕ ಸಾಲ ಒತ್ತಡಗಳು, ಬಂಡವಾಳದ ಹರಿವು ಮತ್ತು ಜಾಗತಿಕ ಹಣಕಾಸು ಸುರಕ್ಷತಾ ಜಾಲ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ 2023 ರಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚಿಂತನೆಗಳ ವಿನಿಮಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ಮೂಲಸೌಕರ್ಯ ಅಧಿವೇಶನದಲ್ಲಿ,  "ಭವಿಷ್ಯದ ಹಣಕಾಸು ನಗರಗಳು: ಸಮಗ್ರ, ತಾಳಿಕೊಳ್ಳುವ ಮತ್ತು ಸುಸ್ಥಿರ" ಸೇರಿದಂತೆ ಮೂಲಸೌಕರ್ಯ ಕಾರ್ಯ ಗುಂಪಿನ 2023ರ ಭಾರತದ ಆದ್ಯತೆಗಳ ಬಗ್ಗೆ ಚರ್ಚೆಗಳು ನಡೆದವು.

ಸುಸ್ಥಿರ ಹಣಕಾಸು ವಿಷಯಗಳ ಬಗ್ಗೆ, ಸದಸ್ಯರು ಸುಸ್ಥಿರ ಮತ್ತು ಚೇತೋಹಾರಿ ಜಾಗತಿಕ ಆರ್ಥಿಕತೆಯ ಅಭಿವೃದ್ಧಿಗೆ ಅನುಕೂಲವಾಗುವಂತೆ ಹವಾಮಾನ ಕ್ರಮ ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್.ಡಿ.ಜಿ) ಹಣಕಾಸು ನೀಡುವ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

2023ರ ಆದ್ಯತೆಯ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ತೆರಿಗೆ ಕುರಿತ ಅಧಿವೇಶನದಲ್ಲಿ ಒಇಸಿಡಿ / ಜಿ 20 ಸಮಗ್ರ ಚೌಕಟ್ಟಿನ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಎರಡು-ಸ್ತಂಭಗಳ ತೆರಿಗೆ ಪ್ಯಾಕೇಜ್ ನ ಪ್ರಗತಿಯ ಮೇಲ್ವಿಚಾರಣೆ, ತೆರಿಗೆ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ತೆರಿಗೆಯ ಮೇಲೆ ಬಹುಪಕ್ಷೀಯ ಸಾಮರ್ಥ್ಯ ವರ್ಧನೆ ಸೇರಿದಂತೆ ಮಹತ್ವದ ವಿಷಯಗಳ ಚರ್ಚೆಗಳು ನಡೆದವು.

ಜಾಗತಿಕ ಆರೋಗ್ಯ ಕುರಿತ ಅಧಿವೇಶನದಲ್ಲಿ, ಜಿ 20 ಪ್ರತಿನಿಧಿಗಳು  ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಸನ್ನದ್ಧತೆ ಮತ್ತು ಸ್ಪಂದನೆಗಾಗಿ ಹಣಕಾಸು ಮತ್ತು ಆರೋಗ್ಯ ಸಚಿವಾಲಯಗಳ (ಪಿಪಿಆರ್) ನಡುವಿನ ಸಮನ್ವಯ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು, ಇದರಲ್ಲಿ ಪ್ರಮುಖ ಪ್ರಾದೇಶಿಕ ಸಂಸ್ಥೆಗಳನ್ನು ಚರ್ಚೆಗಳಿಗೆ ಆಹ್ವಾನಿಸುವ ಮೂಲಕ ಕಡಿಮೆ-ಆದಾಯದ ರಾಷ್ಟ್ರಗಳ ಧ್ವನಿಯನ್ನು ವಿಸ್ತರಿಸುವುದೂ ಸೇರಿದೆ.

ಹಣಕಾಸು ವಲಯ ಮತ್ತು ಹಣ ಪೂರಣ ವಿಷಯಗಳ ಬಗ್ಗೆ ಸಭೆಯ ಕೊನೆಯ ಅಧಿವೇಶನದಲ್ಲಿ ಚರ್ಚೆ ಕೈಗೆತ್ತಿಕೊಳ್ಳಲಾಯಿತು.  ಹಣಕಾಸು ವಲಯದ ಬೆಳವಣಿಗೆಗಳು ಮತ್ತು ಜನ ಕೇಂದ್ರಿತ ದೃಷ್ಟಿಕೋನದ ಮೂಲಕ ಹಣ ಪೂರಣ ಮುಂದುವರಿಸುವ ವಿಧಾನಗಳ ಮೇಲೆ ಚರ್ಚೆ ಕೇಂದ್ರೀಕರಿಸಿತು. ಪ್ರತಿನಿಧಿಗಳು ಸೂಕ್ತ ಹಣಕಾಸು ನಿಯಂತ್ರಣಗಳಿಗೆ ಆದ್ಯತೆಗಳ ಬಗ್ಗೆ ಮತ್ತು ಸಾಮಾನ್ಯ ವಿಧಾನದ ಮೂಲಕ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಒಟ್ಟಾರೆಯಾಗಿ, ಸಭೆಯು 2023ರ ಭಾರತದ ಜಿ 20 ಹಣಕಾಸು ಟ್ರ್ಯಾಕ್ ಕಾರ್ಯಸೂಚಿಯ ಉದ್ದೇಶಿತ ಆದ್ಯತೆಗಳ ಬಗ್ಗೆ ವ್ಯಾಪಕ ಬೆಂಬಲಕ್ಕೆ ಸಾಕ್ಷಿಯಾಯಿತು.  ಭಾರತೀಯ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಕಾರ್ಯಸೂಚಿಗಳ ಮತ್ತಷ್ಟು ಅಭಿವೃದ್ಧಿಯು ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಉಪ ಮುಖ್ಯಸ್ಥರು ಪ್ರಸ್ತುತಪಡಿಸಿದ ದೃಷ್ಟಿಕೋನಗಳಿಂದ ಸಮೃದ್ಧವಾಗಿತ್ತು.

ಈ ಚರ್ಚೆಗಳು  ಕರ್ನಾಟಕದ ಬೆಂಗಳೂರಿನಲ್ಲಿ ಫೆಬ್ರವರಿ 23 ರಿಂದ 25 ರವರೆಗೆ ನಡೆಯಲಿರುವ ಮೊದಲ ಜಿ 20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ ಸಭೆಗೆ ದಾರಿ ಸುಗಮಗೊಳಿಸುತ್ತವೆ.

****



(Release ID: 1883579) Visitor Counter : 750


Read this release in: English , Urdu , Marathi , Telugu