ಬಾಹ್ಯಾಕಾಶ ವಿಭಾಗ
azadi ka amrit mahotsav

​​​​​​​ಕೇಂದ್ರ ಸಚಿವ ಡಾ. ಜಿತೇಂದ್ರ ಅವರು, ಶುಕ್ರ ಗ್ರಹಕ್ಕೆ ಕಳುಹಿಸಬಹುದಾದ ನಿಯೋಗಗಳ ಅಧ್ಯಯನಗಳ ಕಾರ್ಯಸಾಧ್ಯತೆ ಮತ್ತು ಏರೋನೋಮಿ ಅಧ್ಯಯನಕ್ಕಾಗಿ ಇಸ್ರೋ ಉಪಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ

Posted On: 14 DEC 2022 12:22PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಇಂದು ಶುಕ್ರ ಗ್ರಹಕ್ಕೆ ಕಳುಹಿಸಬಹುದಾದ ನಿಯೋಗಗಳ ಅಧ್ಯಯನಗಳ ಕಾರ್ಯಸಾಧ್ಯತೆ ಮತ್ತು ಏರೋನೋಮಿ ಅಧ್ಯಯನಗಳಿಗಾಗಿ ಇಸ್ರೋ ಉಪಕ್ರಮಗಳನ್ನು ಕೈಗೊಂಡಿದೆ ಎಂಬ ಮಾಹಿತಿ ನೀಡಿದರು.

ಸುಮಾರು 60 ವರ್ಷಗಳ ಹಿಂದೆ "ಏರೋನೋಮಿ" ಎಂಬ ಪದವನ್ನು ರಚಿಸಿ, ಪರಿಚಯಿಸಲಾಗಿದ್ದು, ಇದು ಭೂಮಿಯ ಮೇಲಿನ ವಾತಾವರಣದ ಪ್ರದೇಶಗಳು ಮತ್ತು ಇತರ ಸೌರವ್ಯೂಹದ ಕಾಯಗಳ ವೈಜ್ಞಾನಿಕ ಅಧ್ಯಯನವನ್ನು ಸೂಚಿಸುತ್ತದೆ. ಇದು ತಟಸ್ಥ ಮತ್ತು ವಿದ್ಯುದಾವೇಶ ಕಣಗಳೆರಡರ ರಸಾಯನಶಾಸ್ತ್ರ, ಸ್ಥಾಯೀಶಾಸ್ತ್ರ ಮತ್ತು ಶಕ್ತಿ ಸಮತೋಲನವನ್ನು ಒಳಗೊಂಡಿದೆ. 

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಡಾ. ಜಿತೇಂದ್ರ ಸಿಂಗ್, ಈ ಎರಡೂ ಕಾರ್ಯಸಾಧ್ಯತೆಗಳನ್ನು ಪರಿಕಲ್ಪನೆಗೊಳಿಸಲಾಗುತ್ತಿದೆ ಮತ್ತು ವಿಜ್ಞಾನ ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಇದರ ವೈಜ್ಞಾನಿಕ ವ್ಯಾಪ್ತಿಯನ್ನು ರಾಷ್ಟ್ರೀಯವಾಗಿ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

*****


(Release ID: 1883413) Visitor Counter : 190