ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ದೇಶದ ಆರೋಗ್ಯ ಸಂಶೋಧನೆಗೆ ಉತ್ತೇಜನ ನೀಡುವ, ಮಹತ್ವದ ಮೂಲಸೌಕರ್ಯ ಮೈಲಿಗಲ್ಲು, ನಾಗ್ಪುರದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಒನ್ ಹೆಲ್ತ್ (ಆರೋಗ್ಯಕ್ಕಾಗಿ ರಾಷ್ಟ್ರೀಯ ಸಂಸ್ಥೆ)ಗೆ ಅಡಿಪಾಯ ಹಾಕಲಿದ್ದಾರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಹೊಸ ರೀತಿಯ ಮತ್ತು ಅಜ್ಞಾತ ಝೂನೋಟಿಕ್ ಏಜೆಂಟ್ಗಳನ್ನು ಗುರುತಿಸಲು ಸನ್ನದ್ಧತೆ ಮತ್ತು ಪ್ರಯೋಗಾಲಯದ ಸಾಮರ್ಥ್ಯಗಳನ್ನು ಹೆಚ್ಚಿಸುವುದರ ಮೇಲೆ ಗಮನಹರಿಸಲಿದೆ ಈ ರಾಷ್ಟ್ರೀಯ ಸಂಸ್ಥೆ.
ದೇಶದಲ್ಲಿ ಹಿಮೋಗ್ಲೋಬಿನೋಪತಿ ಮತ್ತು ಅಂತಹುದೇ ರೋಗಗಳ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಿಮೋಗ್ಲೋಬಿನೋಪತಿ - ರಕ್ತಸಂಬಂಧಿ ರೋಗಗಳ ಕುರಿತ ಸಂಶೋಧನೆ, ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರವನ್ನು
ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ,
Posted On:
10 DEC 2022 2:09PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 11, 2022, ಭಾನುವಾರದಂದು ನಾಗ್ಪುರದಲ್ಲಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಹಿಮೋಗ್ಲೋಬಿನೋಪತಿ - ರಕ್ತಕಣದೋಷಸಂಬಂಧಿ ವ್ಯಾಧಿಗಳ ಸಂಶೋಧನೆ, ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರವನ್ನು ಉದ್ಘಾಟನೆ ಮಾಡಲಿದ್ದಾರೆ.
ಶ್ರೇಷ್ಠ ಮಟ್ಟದ ವೈದ್ಯಕೀಯ ಸೇವೆಗಳನ್ನು ನೀಡುವ ಈ ಹೊಸ ಸಂಸ್ಥೆಗಳು, ನಮ್ಮ ನಾಗರಿಕರಿಗಾಗಿ ಸೇವೆ ಸಲ್ಲಿಸಲು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಯನ್ನು ಕ್ಷಿಪ್ರಗತಿಯಲ್ಲಿ ಮಾಡುವ ಪ್ರಯತ್ನಕ್ಕೆ ಮುಂದಾಗಲಿದೆ. ನಾಗ್ಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಒನ್ ಹೆಲ್ತ್ ಗೆ ಶಂಕುಸ್ಥಾಪನೆ, ಚಂದ್ರಾಪುರದಲ್ಲಿ ICMR-ಸೆಂಟರ್ ಫಾರ್ ರಿಸರ್ಚ್, ಮ್ಯಾನೇಜ್ಮೆಂಟ್ & ಕಂಟ್ರೋಲ್ ಆಫ್ ಹಿಮೋಗ್ಲೋಬಿನೋಪತಿಸ್ ಉದ್ಘಾಟನೆಯನ್ನು ಗೌರವಾನ್ವಿತ ಪ್ರಧಾನ ಮಂತ್ರಿಗಳು ನೆರವೇರಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಡಾ. ಭಾರತಿ ಪ್ರವೀಣ್ ಪವಾರ್, ಆರೋಗ್ಯ ಸಂಶೋಧನಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ. ಮಹಾನಿರ್ದೇಶಕರಾದ ಡಾ. ರಾಜೀವ್ ಬಹ್ಲ್ ಭಾಗವಹಿಸಲಿದ್ದಾರೆ.
ಮಾನವ ಮತ್ತು ಪ್ರಾಣಿಗಳ ನಡುವೆ, ಅದು ಸಾಕು ಪ್ರಾಣಿ ಅಥವಾ ವನ್ಯಮೃಗವಾಗಲಿ ಇತ್ತೀಚೆಗೆ ಒಡನಾಟ ಹೆಚ್ಚಾಗಿರುವುದು ಹಾಗೆಯೇ ಹವಾಮಾನ ವೈಪರೀತ್ಯ ಮನುಷ್ಯರ ಆರೋಗ್ಯದ ಮೆಲೆ ಪರಿಣಾಮ ಬಿರದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಸುಮಾರು ಶೇ.50ರಷ್ಟು ಸೋಂಕುಗಳು ಪ್ರಾಣಿಗಳಿಂದ ಹರಡಿರಬಹುದು.
ಈ ಸಂದರ್ಭದಲ್ಲಿ, ನಾಗ್ಪುರದಲ್ಲಿರುವ ಆರೋಗ್ಯಕ್ಕಾಗಿನ ರಾಷ್ಟ್ರೀಯ ಸಂಸ್ಥೆಯು ದೇಶದ ಆರೋಗ್ಯ ಕ್ಷೇತ್ರದ ಪ್ರಮುಖ ಮೂಲಸೌಕರ್ಯದ ಮೈಲಿಗಲ್ಲು ಆಗಲಿದೆ ಹೊಸ ಮತ್ತು ಅಜ್ಞಾತ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕುಗಳನ್ನು ಗುರುತಿಸಲು ಸನ್ನದ್ಧತೆ ಮತ್ತು ಪ್ರಯೋಗಾಲಯದ ಸಾಮರ್ಥ್ಯಗಳನ್ನು ಹೆಚ್ಚಿಸುವುದರ ಮೇಲೆ ಈ ಸಂಸ್ಥೆ ಹೆಚ್ಚು ಗಮನಹರಿಸುತ್ತದೆ. ಈ ಸಂಸ್ಥೆಯು ಬಯೋ ಸೇಫ್ಟಿ ಲೆವೆಲ್ (BSL-IV)- ಜೈವಿಕ ಸುರಕ್ಷತಾ ಮಟ್ಟದ ಪ್ರಯೋಗಾಲಯವನ್ನು ಹೊಂದಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಣಿಗಳಿಂದ ಮಾನವರಿಗೆ ಹರಡುವ ಸೋಂಕು ಪರಿಶೀಲನೆಗೆ ಸಹಾಯ ಮಾಡುತ್ತದೆ ಮತ್ತು ಉತ್ತಮ ನಿಯಂತ್ರಣ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತದೆ.
ವಿದರ್ಭ ಪ್ರದೇಶದಲ್ಲಿ, ವಿಶೇಷವಾಗಿ ಬುಡಕಟ್ಟು ಸಮುದಾಯದಲ್ಲಿ ಸಿಕಲ್ ಸೆಲ್ - ಕುಡಗೋಲು ಕಣ ರೋಗದ ಹರಡುವಿಕೆಯು ಅಧಿಕವಾಗಿದೆ, ಕೆಲವು ಬುಡಕಟ್ಟು ಗುಂಪುಗಳಲ್ಲಿ ಅಂದಾಜು ಹರಡುವಿಕೆಯು ಶೇಕಡ 35% ರಷ್ಟು ಹೆಚ್ಚು ಇದೆ. ಈ ಸಮಸ್ಯೆಯನ್ನು ಅರಿತುಕೊಂಡು ಮತ್ತು ದೇಶದಲ್ಲಿ ಇದೇ ರೀತಿಯ ರೋಗಗಳ ಹರಡುವಿಕೆಯನ್ನು ಅರಿತುಕೊಂಡು, ICMR - ಸೆಂಟರ್ ಫಾರ್ ರಿಸರ್ಚ್, ಮ್ಯಾನೇಜ್ಮೆಂಟ್ & ಕಂಟ್ರೋಲ್ ಆಫ್ ಹಿಮೋಗ್ಲೋಬಿನೋಪತೀಸ್ ಅನ್ನು ಸ್ಥಾಪಿಸಲಾಗಿದೆ. ಅದು ದೇಶದಲ್ಲಿ ರಕ್ತಕಣದೊಷಸಂಬಂಧಿ ರೋಗಗಳ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕೇಂದ್ರವು ಬಯೋ-ಬ್ಯಾಂಕಿಂಗ್ ಮತ್ತು ಪ್ರೋಟಿಯೊಮಿಕ್ಸ್ ಸೌಲಭ್ಯಗಳನ್ನು ಒಳಗೊಂಡಂತೆ ರೋಗನಿರ್ಣಯ ಮತ್ತು ಸಂಶೋಧನಾ ಸೌಲಭ್ಯಗಳನ್ನು ಹೊಂದಿರುತ್ತದೆ. ಇದು ರೋಗದ ಬಗ್ಗೆ ಹೆಚ್ಚುನ ಸಂಶೋಧನೆ ನಡೆಸಲು ನೆರವಾಗಲಿದೆ. ಶ್ರೇಷ್ಠ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿರುವ ಈ ಕೇಂದ್ರವು ರಕ್ತಕಣದೋಷಸಂಬಂಧೀ ರೋಗಗಳ ಸಂಶೋಧನೆಗೆ ಮೀಸಲಾಗಿರುತ್ತದೆ, ಇದು ಹಿಮೋಗ್ಲೋಬಿನ್ನ ಆನುವಂಶಿಕ ಅಸ್ವಸ್ಥತೆಗಳು ಮತ್ತು β-ಥಲಸ್ಸೆಮಿಯಾ ಸಿಂಡ್ರೋಮ್ಗಳು ಮತ್ತು ಕುಡಗೋಲು ಕೋಶ ರೋಗಗಳ ಮೇಲೆ ಸಂಶೋಧನೆ ಮಾಡುವುದನ್ನು ಒಳಗೊಂಡಿರುತ್ತದೆ.
ಚಂದ್ರಾಪುರ ಮತ್ತು ಪಕ್ಕದ ಪ್ರದೇಶಗಳಲ್ಲಿನ ರೋಗಿಗಳಿಗೆ ನಿಯಂತ್ರಣ ಕಾರ್ಯಕ್ರಮಗಳು ಮತ್ತು ಸಂಶೋಧನೆಯ ಹಿನ್ನೆಲೆ ಕೆಲವು ಸಲಹೆ ಸೂಚನೆಗಳನ್ನು ನೀಡುವ ಮೂಲಕ ಈ ಕೇಂದ್ರ ನೆರವಾಗಲಿದೆ.
*****
(Release ID: 1882352)
Visitor Counter : 162