ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರನ್ನು ಸ್ವಾಗತಿಸುವ ಪ್ರಧಾನಮಂತ್ರಿಯವರ ಭಾಷಣದ ಪಠ್ಯ
Posted On:
07 DEC 2022 12:54PM by PIB Bengaluru
ಮಾನ್ಯ ಶ್ರೀ ಸಭಾಪತಿಗಳೇ...
ಗೌರವಾನ್ವಿತ ಸಂಸತ್ತಿನ ಎಲ್ಲ ಸದಸ್ಯರೇ...
ಮೊದಲನೆಯದಾಗಿ, ಗೌರವಾನ್ವಿತ ಸಭಾಪತಿಗಳೇ, ನಾನು ಈ ಸದನದ ಪರವಾಗಿ ಮತ್ತು ಇಡೀ ದೇಶದ ಪರವಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಸಾಮಾನ್ಯ ಕುಟುಂಬದಿಂದ ಬಂದು ಹೋರಾಟಗಳ ನಡುವೆ ಜೀವನ ಪಯಣದಲ್ಲಿ ಮುನ್ನಡೆಯುವ ಮೂಲಕ ನೀವು ತಲುಪಿದ ಸ್ಥಳವು ದೇಶದ ಅನೇಕ ಜನರಿಗೆ ಸ್ಫೂರ್ತಿಯಾಗಿದೆ. ಈ ಮೇಲ್ಮನೆಯಲ್ಲಿ ನೀವು ಈ ಘನತೆಯ ಸ್ಥಾನವನ್ನು ಅಲಂಕರಿಸುತ್ತಿದ್ದೀರಿ. ರೈತನ ಮಗನ (ಅನ್ನದಾತನ ಕಂದನ)ಈ ಸಾಧನೆಯಿಂದಾಗಿ ದೇಶದ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಮಾನ್ಯ ಶ್ರೀ ಸಭಾಪತಿಗಳೇ..
ಇಂದು ಸಶಸ್ತ್ರ ಪಡೆಗಳ ಧ್ವಜ ದಿನವೂ ಆಗಿರುವುದು ಸಂತಸದ ಸಂದರ್ಭ.
ಮಾನ್ಯ ಶ್ರೀ ಸಭಾಪತಿಗಳೇ,
ನೀವು ಝುಂಝುನು ಮಣ್ಣಿನಿಂದ ಬಂದಿದ್ದೀರಿ, ಝುಂಝುನು ವೀರರ ನಾಡು. ದೇಶ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸದ ಯಾವುದೇ ಕುಟುಂಬ ಅಲ್ಲಿರಲು ಸಾಧ್ಯವಿಲ್ಲ. ಅಲ್ಲದೇ ನೀವೇ ಸ್ವತಃ ಸೈನಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದೀರಿ ಎಂಬುದು ಕೇಕ್ ಮೇಲೆ ಐಸಿಂಗ್ ಆಗಿದೆ. ಆದ್ದರಿಂದ ಒಬ್ಬ ರೈತನ ಮಗನಾಗಿ ಮತ್ತು ಸೈನಿಕ ಶಾಲೆಯ ವಿದ್ಯಾರ್ಥಿಯಾಗಿ, ನೀವು ಒಬ್ಬ ರೈತ ಮತ್ತು ಸೈನಿಕ ಎಂಬುದನ್ನು ನಾನು ಗೌರವದಿಂದ ಕಾಣುತ್ತೇನೆ.
ನೀವು ಸಭಾಪತಿಗಳಾಗಿ ಸ್ಥಾನ ಅಲಂಕರಿಸಿದ ಈ ಸಶಸ್ತ್ರ ಪಡೆಗಳ ಧ್ವಜ ದಿನದಂದು ನಾನು ಸದನದಿಂದ ಎಲ್ಲ ದೇಶವಾಸಿಗಳಿಗೆ ಶುಭಾಶಯಗಳನ್ನು ಕೋರುತ್ತೇನೆ. ಈ ಸದನದ ಎಲ್ಲ ಗೌರವಾನ್ವಿತ ಸದಸ್ಯರ ಪರವಾಗಿಯೂ ನಾನು ದೇಶದ ಸಶಸ್ತ್ರ ಪಡೆಗಳಿಗೆ ವಂದನೆ ಸಲ್ಲಿಸುತ್ತೇನೆ.
ಮಾನ್ಯ ಶ್ರೀ ಸಭಾಪತಿಗಳೇ...
ಇಂದು, ದೇಶವು ಎರಡು ಮಹತ್ವದ ಸಂದರ್ಭಗಳಿಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ ಸಂಸತ್ತಿನ ಈ ಮೇಲ್ಮನೆ ನಿಮ್ಮನ್ನು ಸ್ವಾಗತಿಸುತ್ತದೆ. ಕೆಲ ದಿನಗಳ ಹಿಂದಷ್ಟೇ ಜಿ-20 ಗುಂಪಿನ ಆತಿಥ್ಯ ವಹಿಸುವ ಜವಾಬ್ದಾರಿಯನ್ನು ಜಗತ್ತು ಭಾರತಕ್ಕೆ ವಹಿಸಿದೆ. ಅಲ್ಲದೇ ಈ ಬಾರಿ ಅಮೃತ ಕಾಲ ಸಹ ಆರಂಭವಾಗಿದೆ. ಈ ಅಮೃತ ಕಾಲವು ಹೊಸ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಅವಧಿ ಮಾತ್ರವಲ್ಲ, ಈ ಅವಧಿಯಲ್ಲಿ ಪ್ರಪಂಚದ ಭವಿಷ್ಯದ ದಿಕ್ಕನ್ನು ನಿರ್ಧರಿಸುವಲ್ಲಿ ಭಾರತವು ಅತ್ಯಂತ ಪ್ರಮುಖ ಪಾತ್ರವನ್ನು ಸಹ ವಹಿಸುತ್ತದೆ.
ಮಾನ್ಯ ಶ್ರೀ ಸಭಾಪತಿಗಳೇ..
ಭಾರತದ ಈ ಪಯಣದಲ್ಲಿ ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂಸತ್ತು, ನಮ್ಮ ಸಂಸದೀಯ ವ್ಯವಸ್ಥೆ ಕೂಡ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ನಿರ್ಣಾಯಕ ಘಟ್ಟದಲ್ಲಿ ಮೇಲ್ಮನೆಯು ನಿಮ್ಮಂತಹ ಸಮರ್ಥ ಮತ್ತು ಪರಿಣಾಮಕಾರಿ ನಾಯಕತ್ವವನ್ನು ಪಡೆದಿರುವುದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ಮಾರ್ಗದರ್ಶನದಲ್ಲಿ, ನಮ್ಮ ಎಲ್ಲ ಸದಸ್ಯರು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ, ಈ ಸದನವು ದೇಶದ ನಿರ್ಣಯಗಳನ್ನು ಪೂರೈಸಲು ಪರಿಣಾಮಕಾರಿ ವೇದಿಕೆಯಾಗಲಿದೆ.
ಮಾನ್ಯ ಶ್ರೀ ಸಭಾಪತಿಗಳೇ...
ಇಂದು ನೀವು ಸಂಸತ್ತಿನ ಮೇಲ್ಮನೆಯ ಮುಖ್ಯಸ್ಥರಾಗಿ ನಿಮ್ಮ ಹೊಸ ಜವಾಬ್ದಾರಿಯನ್ನು ಔಪಚಾರಿಕವಾಗಿ ಪ್ರಾರಂಭಿಸುತ್ತಿದ್ದೀರಿ. ಈ ಮೇಲ್ಮನೆಯ ಹೆಗಲ ಮೇಲಿರುವ ಜವಾಬ್ದಾರಿಯು ಅದರ ಮೊದಲ ಕಾಳಜಿ ದೇಶದ ಅತ್ಯಂತ ಕೆಳಸ್ತರದಲ್ಲಿ ನಿಂತಿರುವ ಶ್ರೀಸಾಮಾನ್ಯನ ಹಿತಾಸಕ್ತಿಗಳಿಗೆ ಸಂಬಂಧಿಸಿದೆ. ಈ ಅವಧಿಯಲ್ಲಿ, ದೇಶವು ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಂಡಿದೆ ಮತ್ತು ಅದನ್ನು ಸಂಪೂರ್ಣ ಜವಾಬ್ದಾರಿಯಿಂದ ನಿಭಾಯಿಸುತ್ತಿದೆ.
ಇಂದು ಮೊದಲ ಬಾರಿಗೆ, ದೇಶದ ಭವ್ಯವಾದ ಬುಡಕಟ್ಟು ಪರಂಪರೆಯು ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರ ರೂಪದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಿದೆ. ಇದಕ್ಕೂ ಮುನ್ನ ಶ್ರೀ ರಾಮನಾಥ್ ಕೋವಿಂದ್ ಜಿ ಅವರು ಇಂತಹ ವಂಚಿತ ಸಮಾಜದಿಂದ ಹೊರಬಂದು ದೇಶದ ಅತ್ಯುನ್ನತ ಸ್ಥಾನವನ್ನು ತಲುಪಿದ್ದರು. ಈಗ ನೀವು ರೈತನ ಮಗನಾಗಿ ಕೋಟ್ಯಂತರ ದೇಶವಾಸಿಗಳ, ಹಳ್ಳಿ-ಬಡವರ ಮತ್ತು ರೈತರ ಶಕ್ತಿಯನ್ನು ಪ್ರತಿನಿಧಿಸುತ್ತಿದ್ದೀರಿ.
ಮಾನ್ಯ ಶ್ರೀ ಸಭಾಪತಿಗಳೇ....
ನಿಮ್ಮ ಜೀವನವು ಯಶಸ್ಸು ಸಾಧನಗಳಿಂದ ಮಾತ್ರವಲ್ಲ, ಸಾಧನೆ ಪರಿಶ್ರಮದ ಮೂಲಕವೂ ಸಾಧಿಸಲಾಗುತ್ತದೆ ಎಂಬುದಕ್ಕೆ ಪುರಾವೆಯಾಗಿದೆ. ಶಾಲೆಗೆ ಹೋಗಲು ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗುತ್ತಿದ್ದವರ ಅನುಭವವನ್ನ ನೀವೂ ನೋಡಿದ್ದೀರಿ. ಹಳ್ಳಿ, ಬಡವರು, ರೈತರಿಗಾಗಿ ನೀವು ಮಾಡಿರುವುದು ಸಾಮಾಜಿಕ ಜೀವನದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಉದಾಹರಣೆಯಾಗಿದೆ.
ಮಾನ್ಯ ಶ್ರೀ ಸಭಾಪತಿಗಳೇ...
ಹಿರಿಯ ವಕೀಲರಾಗಿ ಮೂರು ದಶಕಗಳ ಅನುಭವವನ್ನು ಹೊಂದಿರುವ ನೀವು ಸದನದಲ್ಲಿ ನ್ಯಾಯವನ್ನು ನೀಡುತ್ತೀರಿ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಏಕೆಂದರೆ ರಾಜ್ಯಸಭೆಯಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಂದ ಹೆಚ್ಚಿನ ಸಂಖ್ಯೆಯ ಸದಸ್ಯರಿದ್ದಾರೆ.ಹೀಗಾಗಿ ನೀವು ಖಂಡಿತವಾಗಿಯೂ ಸದನದಲ್ಲಿ ಅದೇ ನ್ಯಾಯಾಲಯದ ಮನಸ್ಥಿತಿಯನ್ನು ಇಲ್ಲಿ ಅನುಭವಿಸುವಿರಿ. ನಿಮಗೆ ಸದನ ನ್ಯಾಯಾಲಯವನ್ನು ನೆನಪಿಸುತ್ತದೆ.
ಶಾಸಕ ಸ್ಥಾನದಿಂದ ಹಿಡಿದು ಸಂಸದ, ಕೇಂದ್ರ ಸಚಿವ, ರಾಜ್ಯಪಾಲರಾಗಿಯೂ ನೀವು ಕೆಲಸ ನಿರ್ವಹಿಸಿದ್ದೀರಿ. ಈ ಎಲ್ಲ ಪಾತ್ರಗಳಲ್ಲಿ ಸಾಮಾನ್ಯವಾಗಿ ಉಳಿದಿರುವ ಒಂದು ವಿಷಯವೆಂದರೆ ದೇಶದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳೆಡೆಗೆ ಇರುವ ನಿಮ್ಮ ಭಕ್ತಿ. ನಿಸ್ಸಂಶಯವಾಗಿ ನಿಮ್ಮ ಅನುಭವಗಳು ದೇಶ ಮತ್ತು ಪ್ರಜಾಪ್ರಭುತ್ವಕ್ಕೆ ಬಹಳ ಮುಖ್ಯ.
ಮಾನ್ಯ ಶ್ರೀ ಸಭಾಪತಿಗಳೇ.....
ತಾವು ರಾಜಕೀಯದಲ್ಲಿದ್ದರೂ ಪಕ್ಷದ ಎಲ್ಲೆ ಮೀರಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದ್ದೀರಿ. ಉಪರಾಷ್ಟ್ರಪತಿ ಚುನಾವಣೆಯಲ್ಲೂ ನಿಮ್ಮ ಬಗ್ಗೆ ಎಲ್ಲರ ಬಾಂಧವ್ಯವನ್ನು ನಾನು ಸ್ಪಷ್ಟವಾಗಿ ಗಮನಿಸಿದ್ದೇನೆ. ಚಲಾವಣೆಯಾದ ಶೇ.75ರಷ್ಟು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿರುವುದು ಸ್ವತಃ ಪ್ರಮುಖ ಅಂಶವೇ ಆಗಿದೆ.
ಮಾನ್ಯ ಶ್ರೀ ಸಭಾಪತಿಗಳೇ....
ನಮ್ಮ ಸ್ಥಳದಲ್ಲಿ " ನಯತಿ ಇತಿ ನಾಯಕಃ" ಎಂದು ಹೇಳಲಾಗುತ್ತದೆ. ಅಂದರೆ, ನಮ್ಮನ್ನು ಮುಂದೆ ಕರೆದೊಯ್ಯುವವನು ನಾಯಕ. ಮುಂದಾಳತ್ವ ವಹಿಸುವುದೇ ನಾಯಕತ್ವದ ನಿಜವಾದ ವ್ಯಾಖ್ಯಾನ. ರಾಜ್ಯಸಭೆಯ ಸಂದರ್ಭದಲ್ಲಿ ಈ ವಿಷಯವು ಹೆಚ್ಚು ಪ್ರಾಮುಖ್ಯವನ್ನು ಪಡೆಯುತ್ತದೆ. ಏಕೆಂದರೆ ಸದನವು ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ಹೆಚ್ಚು ಸಂಸ್ಕರಿಸಿದ ರೀತಿಯಲ್ಲಿ ಮುಂದಕ್ಕೆ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ. ಅದಕ್ಕಾಗಿಯೇ ಈ ಸದನವು ನಿಮ್ಮಂತಹ ನಾಯಕತ್ವವನ್ನು ಹೊಂದಿದಾಗ, ನಾನು ಅದನ್ನು ಸದನದ ಪ್ರತಿಯೊಬ್ಬ ಸದಸ್ಯರಿಗೂ ಒಂದು ವಿಶೇಷವೆಂದು ಪರಿಗಣಿಸುತ್ತೇನೆ.
ಮಾನ್ಯ ಶ್ರೀ ಸಭಾಪತಿಗಳೇ...
ರಾಜ್ಯಸಭೆಯು ದೇಶದ ಶ್ರೇಷ್ಠ ಪ್ರಜಾಪ್ರಭುತ್ವ ಪರಂಪರೆಯ ವಾಹಕವಾಗಿದೆ ಮತ್ತು ಅದರ ಶಕ್ತಿಯೂ ಆಗಿದೆ. ಒಂದಲ್ಲ ಒಂದು ಕಾಲದಲ್ಲಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಅನೇಕ ಪ್ರಧಾನಿಗಳನ್ನು ಭಾರತ ದೇಶವು ಹೊಂದಿದೆ. ಅನೇಕ ಮಹೋನ್ನತ ನಾಯಕರ ಸಂಸದೀಯ ಪಯಣ ರಾಜ್ಯಸಭೆಯಿಂದ ಆರಂಭವಾಯಿತು. ಆದ್ದರಿಂದ, ಈ ಸದನದ ಘನತೆಯನ್ನು ಎತ್ತಿಹಿಡಿಯುವ ಮತ್ತು ಹೆಚ್ಚಿಸುವ ಬಲವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಮಾನ್ಯ ಶ್ರೀ ಸಭಾಪತಿಗಳೇ....
ನಿಮ್ಮ ಮಾರ್ಗದರ್ಶನದಲ್ಲಿ, ಈ ಮನೆಯು ತನ್ನ ಪರಂಪರೆಯನ್ನು, ಅದರ ಘನತೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಮತ್ತು ಹೊಸ ಎತ್ತರಕ್ಕೆ ಏರುತ್ತದೆ ಎಂಬ ಖಾತ್ರಿ ನನಗಿದೆ. ಸದನದಲ್ಲಿ ಗಂಭೀರ ಚರ್ಚೆಗಳು, ಪ್ರಜಾಸತ್ತಾತ್ಮಕ ಚರ್ಚೆಗಳು ಭಾರತ ದೇಶವು ಪ್ರಜಾಪ್ರಭುತ್ವದ ತಾಯಿ ಎಂಬ ನಮ್ಮ ಹೆಮ್ಮೆಗೆ ಇನ್ನಷ್ಟು ಬಲ ನೀಡುತ್ತವೆ.
ಮಾನ್ಯ ಶ್ರೀ ಸಭಾಪತಿಗಳೇ....
ಕಳೆದ ಅಧಿವೇಶನದವರೆಗೂ, ನಮ್ಮ ಮಾಜಿ ಉಪರಾಷ್ಟ್ರಪತಿಗಳು ಮತ್ತು ಮಾಜಿ ಸಭಾಪತಿಗಳು ಈ ಸದನಕ್ಕೆ ಮಾರ್ಗದರ್ಶನ ನೀಡುತ್ತಿದ್ದರು, ಅವರ ಹಾಸ್ಯ ಚಟಾಕಿಗಳು ಯಾವಾಗಲೂ ಸದನವನ್ನು ಸಂತೋಷಪಡಿಸುತ್ತಿದ್ದವು, ಸದನದಲ್ಲಿ ಚರ್ಚೆಯ ನಡುವೆ ನಗಲು ಸಾಕಷ್ಟು ಅವಕಾಶವಿತ್ತು. ನಿಮ್ಮ ಚುರುಕಾದ ಸ್ವಭಾವವು ಆ ನ್ಯೂನತೆಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಮತ್ತು ನೀವು ಸದನದ ಸದಸ್ಯರಿಗೆ ಆ ಪ್ರಯೋಜನವನ್ನು ನೀಡುವುದನ್ನು ಮುಂದುವರಿಸುತ್ತೀರಿ ಎಂಬುದು ನನಗೆ ಖಾತ್ರಿಯಿದೆ.
ಇದರೊಂದಿಗೆ, ಇಡೀ ಸದನದ ಪರವಾಗಿ, ದೇಶದ ಪರವಾಗಿ ಮತ್ತು ನನ್ನ ಪರವಾಗಿ, ನಾನು ನಿಮಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಧನ್ಯವಾದಗಳು.
*****
(Release ID: 1881620)
Visitor Counter : 193
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam