ಹಣಕಾಸು ಸಚಿವಾಲಯ

ನಾಳೆ ಡಿಆರ್‌ಐ 65ನೇ ಸಂಸ್ಥಾಪನಾ ದಿನವನ್ನು ಆಚರಿಸಲಿದೆ


ಎರಡು ದಿನಗಳ 8ನೇ ಪ್ರಾದೇಶಿಕ ಕಸ್ಟಮ್ಸ್ ಜಾರಿ ಸಭೆ (ಆರ್.‌ಸಿ.ಇ.ಎಂ.) ಜರುಗಲಿದೆ.

Posted On: 04 DEC 2022 9:07AM by PIB Bengaluru

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿ.ಆರ್‌.ಐ.) ಸಂಸ್ಥೆಯು ತನ್ನ 65 ನೇ ಸಂಸ್ಥಾಪನಾ ದಿನವನ್ನು ಡಿಸೆಂಬರ್ 5-6, 2022 ರಂದು ಆಚರಿಸುತ್ತಿದೆ.  2 ದಿನಗಳ ಕಾಲ ಜರುಗುವ ಕಾರ್ಯಕ್ರಮವನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

ಡಿ.ಆರ್‌.ಐ. ಎಂಬುದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ (ಸಿ.ಬಿ.ಐ.ಸಿ.) ನ ಸಹ ಸಂಸ್ಥೆಯಾಗಿದೆ, ಇದು ದೇಶದಲ್ಲಿ ಕಳ್ಳಸಾಗಣೆ-ವಿರೋಧಿ ವಿಷಯಗಳ ಮೇಲೆ ಕಾರ್ಯನಡೆಸುವ ಭಾರತ ಸರ್ಕಾರದ ಪ್ರಧಾನ ಗುಪ್ತಚರ ಮತ್ತು ಜಾರಿ ಸಂಸ್ಥೆಯಾಗಿದೆ.  ಈ ಸಂಸ್ಥೆಯು 4ನೇ ಡಿಸೆಂಬರ್ 1957 ರಂದು ಅಸ್ತಿತ್ವಕ್ಕೆ ಬಂದಿತು. ಡಿ.ಆರ್‌.ಐ. ತನ್ನ ಪ್ರಧಾನ ಕಛೇರಿಯನ್ನು ನವದೆಹಲಿಯಲ್ಲಿ ಹೊಂದಿದೆ. 12 ವಲಯ ಘಟಕಗಳು, 35 ಪ್ರಾದೇಶಿಕ ಘಟಕಗಳು ಮತ್ತು 15 ಉಪ-ಪ್ರಾದೇಶಿಕ ಘಟಕಗಳು, ಸುಮಾರು 800 ಅಧಿಕಾರಿಗಳ ಕಾರ್ಯ ಸಾಮರ್ಥ್ಯದೊಂದಿಗೆ ಸಂಸ್ಥೆಯು ಪ್ರವರ್ತಿಸುತ್ತಿದೆ.

ಆರು ದಶಕಗಳಿಗಿಂತಲೂ ಹೆಚ್ಚು ಕಾಲ, ಭಾರತ ಮತ್ತು ವಿದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿರುವ ಡಿ.ಆರ್‌.ಐ. ಸಂಸ್ಥೆಯು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳು, ಚಿನ್ನ, ವಜ್ರಗಳು, ಅಮೂಲ್ಯವಾದ ಲೋಹಗಳು, ವನ್ಯಜೀವಿ ವಸ್ತುಗಳು, ಸಿಗರೇಟ್, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಮಗ್ಲಿಂಗ್ ಪ್ರಕರಣಗಳನ್ನು ಹಾಗೂ ಸ್ಫೋಟಕಗಳು, ನಕಲಿ ಕರೆನ್ಸಿ ನೋಟುಗಳು, ವಿದೇಶಿ ಕರೆನ್ಸಿ, ಸ್ಕೋಮೆಟ್‌ ವಸ್ತುಗಳು, ಅಪಾಯಕಾರಿ ಮತ್ತು ಪರಿಸರ ಸೂಕ್ಷ್ಮ ವಸ್ತುಗಳು, ಪ್ರಾಚೀನ ವಸ್ತುಗಳು ಇತ್ಯಾದಿಗಳನ್ನು ತಡೆಗಟ್ಟುವ ಮತ್ತು ಪತ್ತೆಹಚ್ಚುವ ತನ್ನ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇದಲ್ಲದೆ, ವಾಣಿಜ್ಯ ವಂಚನೆಗಳು ಮತ್ತು ಕಸ್ಟಮ್ಸ್ ಸುಂಕದ ವಂಚನೆಯನ್ನು ಸಹ ಪತ್ತೆಹಚ್ಚುವ ಕಾರ್ಯದಲ್ಲಿ ಡಿ.ಆರ್‌.ಐ. ಸಂಸ್ಥೆಯು ತೊಡಗಿದೆ.

ಜಾಗತಿಕವಾಗಿ ವಿವಿಧ ದೇಶಗಳೊಂದಿಗೆ ಸಹಿ ಮಾಡಲಾದ ಕಸ್ಟಮ್ಸ್ ಪರಸ್ಪರ ಸಹಾಯ ಒಪ್ಪಂದಗಳ ಅಡಿಯಲ್ಲಿ ಅಂತರರಾಷ್ಟ್ರೀಯ ಕಸ್ಟಮ್ಸ್ ಸಹಯೋಗದಲ್ಲಿ, ಕೆಲಸ ಮಾಡುವುದರಲ್ಲಿ ಡಿ.ಆರ್‌.ಐ. ಸಂಸ್ಥೆಯು ಮುಂಚೂಣಿಯಲ್ಲಿದೆ.  ಈ ಸಂದರ್ಭದಲ್ಲಿ ಪರಸ್ಪರ ಮಾಹಿತಿ ವಿನಿಮಯ ಮತ್ತು ಇತರ ಕಸ್ಟಮ್ಸ್ ಆಡಳಿತಗಳ ಉತ್ತಮ ಅಭ್ಯಾಸಗಳಿಂದ ಕಲಿಕೆಯ ಮೇಲೆ ಒತ್ತು ನೀಡಲಾಗುವ ಕಾರ್ಯಚಟುವಟಿಕೆಗಳಿಗೆ ಒತ್ತು ನೀಡಿ ಕಾರ್ಯ ನಡೆಸಲಾಗುತ್ತದೆ.

ಜಾರಿ ಸಂಬಂಧಿತ ಸಮಸ್ಯೆಗಳಿಗಾಗಿ ವರ್ಲ್ಡ್ ಕಸ್ಟಮ್ಸ್ ಆರ್ಗನೈಸೇಶನ್, ಇಂಟರ್‌ಪೋಲ್‌ನಂತಹ ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸೇರಿಕೊಂಡು ಜಾಗತಿಕವಾಗಿ ಕಾರ್ಯ ನಡೆಸುತ್ತದೆ. ಡಿ.ಆರ್‌.ಐ. ಸಂಸ್ಥೆಯು ತನ್ನ ಸಂಸ್ಥಾಪನಾ ದಿನದಂದು ಇತರ ಪಾಲುದಾರ ಕಸ್ಟಮ್ಸ್ ಸಂಸ್ಥೆಗಳೊಂದಿಗೆ ಸೇರಿಕೊಂಡು ಪ್ರಾದೇಶಿಕ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಮೀಟಿಂಗ್ (ಆರ್.ಸಿ.ಇ.ಎಂ) ಅನ್ನು ಆಯೋಜಿಸುತ್ತಿದೆ.  ವಿಶ್ವ ಕಸ್ಟಮ್ಸ್ ಆರ್ಗನೈಸೇಶನ್ (ಡಬ್ಲೂ.ಸಿ.ಒ), ಇಂಟರ್‌ಪೋಲ್, ಯು.ಎನ್. ಆಫೀಸ್ ಆನ್ ಡ್ರಗ್ಸ್ ಮತ್ತು ಕ್ರೈಮ್ (ಯು.ಎನ್.ಒ.ಡಿ.ಸಿ) ಮತ್ತು ಪ್ರಾದೇಶಿಕ ಗುಪ್ತಚರ ಸಂಪರ್ಕ ಕಚೇರಿ - ಏಷ್ಯಾ ಪೆಸಿಫಿಕ್ (ಆರ್.ಐ.ಎಲ್.ಒ.ಎ.ಪಿ) ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆಗೆ ಏಷ್ಯಾ-ಪೆಸಿಫಿಕ್ ಪ್ರದೇಶವನ್ನು ಒಳಗೊಂಡ 22 ಕಸ್ಟಮ್ಸ್ ಆಡಳಿತಗಳನ್ನು ಈ ವರ್ಷದ  ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು "ಭಾರತದಲ್ಲಿ ಕಳ್ಳಸಾಗಣೆ ವರದಿ 2021-22" ರ ಪ್ರಸ್ತುತ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ. ಕಳ್ಳಸಾಗಣೆ-ವಿರೋಧಿ ಮತ್ತು ವಾಣಿಜ್ಯ ವಂಚನೆ ಕ್ಷೇತ್ರದಲ್ಲಿನ ಪ್ರವೃತ್ತಿಗಳು ಮತ್ತು ಕಳೆದ ಹಣಕಾಸು ವರ್ಷದಲ್ಲಿ ಡಿ.ಆರ್.ಐ.ಯ ಕಾರ್ಯಕ್ಷಮತೆ ಮತ್ತು ಅನುಭವಗಳನ್ನು ವರದಿಯು ಒಳಗೊಂಡಿದೆ.

ಡಿ.ಆರ್.ಐ.ಯ ಹಿಂದಿನ ಸಾಧನೆಗಳನ್ನು ಗೌರವಿಸುವ ಮತ್ತು ಗುರುತಿಸುವ, ಹಾಗೂ ಸಿ.ಬಿ.ಐ.ಸಿ  ಮತ್ತು ಡಿ.ಆರ್.ಐ.ಯ ಯುವ ಅಧಿಕಾರಿಗಳಿಗೆ ಪ್ರೇರಣೆಯ ದಿನವಾಗಿ ಕೂಡಾ ಆಚರಿಸಲಾಗುತ್ತದೆ. ವಿವಿಧ ದೇಶಗಳ ಮತ್ತು ಪ್ರಮುಖ ಪ್ರಾದೇಶಿಕ ಕಸ್ಟಮ್ ಆಡಳಿತಗಳೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ ಹಾಗೂ ಆ ಮೂಲಕ ವಿವಿಧ ದೇಶಗಳ ಪಾಲುದಾರರು, ಸೇರಿದಂತೆ ಇತರ ದೇಶಗಳ ಕಸ್ಟಮ್ ಸಂಬಂಧಿತ ವಿಷಯಗಳಲ್ಲಿ ಭಾರತದ ಪಾತ್ರವನ್ನು ಬಲಪಡಿಸಲು ಸಾಧ್ಯವಾಗುತ್ತದೆ.

*****



(Release ID: 1880850) Visitor Counter : 114